Chanakya Niti: ವೃತ್ತಿಜೀವನದಲ್ಲಿ ಯಶಸ್ಸು ಸಿಗಬೇಕೆಂದರೆ ಈ ಗುಣಗಳನ್ನು ಬಿಟ್ಟುಬಿಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 11, 2024 | 2:40 PM

ಆಚಾರ್ಯ ಚಾಣಕ್ಯರು, ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ಕೆಲವು ವಿಷಯಗಳನ್ನು ತ್ಯಾಗ ಮಾಡುವ ಬಗ್ಗೆ ಹೇಳಿದ್ದಾರೆ. ಈ ಗುಣಗಳನ್ನು ತ್ಯಜಿಸುವ ಮೂಲಕ, ತಪ್ಪುಗಳಿಂದ ಹೊಸದನ್ನು ಕಲಿಯುತ್ತಾ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದಿದ್ದಾರೆ. ನೀವು ಈ ಸರಳ ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಯಶಸ್ಸಿನ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ.

Chanakya Niti: ವೃತ್ತಿಜೀವನದಲ್ಲಿ ಯಶಸ್ಸು ಸಿಗಬೇಕೆಂದರೆ ಈ ಗುಣಗಳನ್ನು ಬಿಟ್ಟುಬಿಡಿ
Follow us on

ವೃತ್ತಿಜೀವನದಲ್ಲಿ ಯಶಸ್ಸನ್ನು ಬಯಸುವವರು ಕೆಲವು ವಿಷಯಗಳನ್ನು ತ್ಯಾಗ ಮಾಡಬೇಕಾಗುತ್ತದೆ, ಏಕೆಂದರೆ ಆಗ ಮಾತ್ರ ನೀವು ಅಂದುಕೊಂಡ ಕಾರ್ಯ ಸಿದ್ದಿಸಲು ಸಾಧ್ಯವಾಗುತ್ತದೆ. ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಲು ಕೆಲವು ಕ್ರಮಗಳನ್ನು ಅನುಸರಿಸಲು ತಿಳಿಸಿದ್ದು ನೀವು ಈ ಸರಳ ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಯಶಸ್ಸಿನ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಚಾಣಕ್ಯರು ಕೆಲವು ಗುಣಗಳನ್ನು ತ್ಯಾಗ ಮಾಡುವ ಬಗ್ಗೆ ಹೇಳಿದ್ದು ಇಲ್ಲಿದೆ ಸಂಪೂರ್ಣ ಮಾಹಿತಿ.

ಎಂದಿಗೂ ಹೆಮ್ಮೆ ಪಟ್ಟುಕೊಳ್ಳಬೇಡಿ

ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ವೃತ್ತಿ ಜೀವನದಲ್ಲಿ ಸಣ್ಣ ಯಶಸ್ಸನ್ನು ಕಂಡಾಗ ವಿಚಲಿತರಾಗಬಾರದು ಏಕೆಂದರೆ ಇದು ನಿಮ್ಮ ಯಶಸ್ಸನ್ನು ಕುಂಠಿತಗೊಳಿಸುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ನಿಮ್ಮ ಮನಸ್ಥಿತಿಯನ್ನು ಗೆದ್ದರೂ, ಸೋತರೂ ನಿರಂತರವಾಗಿ ಒಂದೇ ರೀತಿಯಲ್ಲಿ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಹಾಗಾಗಿ ನೀವು ಮಾಡಿದ ಕೆಲಸಕ್ಕೆ ಹೆಮ್ಮೆಪಡಬಾರದು, ಏಕೆಂದರೆ ಅಹಂಕಾರವು ವ್ಯಕ್ತಿಯ ನಿಧಾನಗತಿಯ ಅವನತಿಗೆ ಕಾರಣವಾಗುತ್ತದೆ.

ತಪ್ಪುಗಳಿಂದ ಹೊಸದನ್ನು ಕಲಿಯಿರಿ

ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಬೆಳವಣಿಗೆಯತ್ತ ಗಮನ ಹರಿಸಿ. ಎಲ್ಲ ರೀತಿಯ ಪ್ರತಿಕ್ರಿಯೆಯನ್ನು ಸ್ವೀಕರಿಸಿ. ನಿಮ್ಮ ತಪ್ಪುಗಳಿಂದ ಹೊಸದನ್ನು ಕಲಿಯಲು ಪ್ರಯತ್ನಿಸಿ. ನಿಮ್ಮನ್ನು ನೀವು ಸರಿಪಡಿಸಿಕೊಳ್ಳಿ. ಇದು ವೃತ್ತಿ ಜೀವನದಲ್ಲಿ ಬೆಳೆಯಲು ಅತ್ಯುತ್ತಮ ಮಾರ್ಗವಾಗಿದೆ. ನಿಮ್ಮ ಕೆಲಸದ ಜೊತೆಗೆ ಬೇರೆ ಬೇರೆ ಕೆಲಸಗಳನ್ನು ಮಾಡಲು ಪ್ರಯತ್ನಿಸಿ.

ಸಹಾಯ ಮಾಡಲು ಹಿಂಜರಿಯಬೇಡಿ

ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ, ವೃತ್ತಿಜೀವನದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವುದು ಮುಖ್ಯ. ಅರ್ಥಪೂರ್ಣ ಗೆಳೆತನಕ್ಕೆ ಇದು ಸಹಾಯ ಮಾಡುತ್ತದೆ. ಇತರರ ಸಹಯೋಗ ಮತ್ತು ಅವರಿಂದ ಹೊಸ ಕಲಿಕೆಯು ನಿಮಗೆ ಹೆಚ್ಚಿನ ಅವಕಾಶಗಳನ್ನು ತೆರೆದಿಡುತ್ತದೆ.

ಇದನ್ನೂ ಓದಿ: ನಿಮ್ಮ ಅಮ್ಮನಲ್ಲಿ ರಾಮಾಯಣದಲ್ಲಿ ಬರುವ ತಾಯಂದಿರ ಈ ಗುಣ ಇದ್ದೆ ಇರುತ್ತೆ ಒಮ್ಮೆ ಗಮನಿಸಿ

ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿತುಕೊಳ್ಳಿ

ನಿಮ್ಮ ಕೌಶಲ, ಆಸಕ್ತಿ ಮತ್ತು ಉತ್ಸಾಹಕ್ಕೆ ಹೊಂದಿಕೆಯಾಗುವಂತಹ ವೃತ್ತಿಜೀವನವನ್ನು ಆಯ್ಕೆ ಮಾಡುವತ್ತ ಗಮನ ಹರಿಸಿ. ಚಾಣಕ್ಯರು ಹೇಳುವ ಪ್ರಕಾರ, ಮನುಷ್ಯ ಮೊದಲು ತನ್ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿತುಕೊಳ್ಳಬೇಕು. ಆಗ ಮಾತ್ರ ಯಶಸ್ಸಿನ ಹಾದಿಯಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ