ಆಚಾರ್ಯ ಚಾಣಕ್ಯನ ನೀತಿಗಳನ್ನು ಪಾಲಿಸುವುದು ಕಷ್ಟಸಾಧ್ಯವೇ ಆದರೂ ವಾಸ್ತವವಾಗಿ ಆ ನೀತಿಗಳನ್ನು ಅನುಸರಿಸಿದರೆ ಅದು ಮನುಷ್ಯನ ಜೀವನ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಚಾಣಕ್ಯನ ನೀತಿಗಳ ಪಾಲಿಸುವುದು ಕಷ್ಟಸಾಧ್ಯವೇ ಆದರೂ ಯಾರು ಅದನ್ನು ಅನುಸರಿಸುತ್ತಾರೋ ಅವರು ಜೀವನದಲ್ಲಿ ಹಂತಹಂತವಾಗಿ ಮೇಲಕ್ಕೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಚಾಣಕ್ಯ ನೀತಿಯ ಪ್ರಕಾರ ಈ ಮೂರು ನೀತಿಗಳನ್ನು ಅಳವಡಿಸಿಕೊಂಡರೆ ಬಡತನ ಶೀಘ್ರವೇ ದೂರವಾಗುತ್ತದೆ.
ಚಾಣಕ್ಯನ ವಿತ್ತ ನೀತಿ ಪ್ರಕಾರ ಇರುವುದೆಲ್ಲವ ಖರ್ಚು ಮಾಡಿಕೊಂಡು, ಬರಿಗೈ ದಾಸನಾಗಬಾರದು!
ಕೆಲವರು ಇರುತ್ತಾರೆ… ಅವರು ಜೀವನದಲ್ಲಿ ಪರಿಶ್ರಮ ಪಡುತ್ತಾರೆ, ಮತ್ತು ಅದರ ಫಲವೂ ಸಿಗುತ್ತದೆ. ಆದರೆ ಅವರು ಖಾಲಿ ಕೈನವರಾಗುತ್ತಾರೆ. ಇದಕ್ಕೆ ಮೂಲ ಕಾರಣೀಭೂತವಾಗವ ಸಂಗತಿಗಳೆಂದರೆ ಆ ವ್ಯಕ್ತಿಯ ಕೆಟ್ಟ ಹವ್ಯಾಸಗಳು. ಈ ಕೆಟ್ಟ ಚಟಗಳಿಂದಲೇ ಮನುಷ್ಯ ಶೀಘ್ರ ಅವಸಾನದತ್ತ ಸಾಗುತ್ತಾನೆ.
ಆಚಾರ್ಯ ಚಾಣಕ್ಯ ಹಣದ ವಿಷಯದಲ್ಲಿ ಈ ಸಂಗತಿಗಳನ್ನು ಹೇಳಿದ್ದಾನೆ. ಆಚಾರ್ಯ ಚಾಣಕ್ಯನ ಪ್ರಕಾರ ಜೀವನದಲ್ಲಿ ಹಣ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಮನುಷ್ಯ ಹಣದ ಮೌಲ್ಯ ಅರಿಯದೇ ಹೋದರೆ ಧನರಾಶಿ ಆ ವ್ಯಕ್ತಿಯ ಬಳಿ ಸುಳಿಯುವುದಿಲ್ಲ. ವ್ಯಕ್ತಿ ಎಷ್ಟೇ ಧನಿಕನಾಗಿದ್ದರೂ ಹಣದ ಮೌಲ್ಯ ತಿಳಿಯದಿದ್ದರೆ ಶೀಘ್ರವೇ ಪತನದ ಅಂಚನ್ನು ತಲುಪುತ್ತಾನೆ. ಹಾಗಾದರೆ ಬನ್ನೀ ಹಣದ ಬಗ್ಗೆ ಆಚಾರ್ಯ ಚಾಣಕ್ಯ ಏನು ಹೇಳಿದ್ದಾರೆ, ಕೇಳಿ ತಿಳಿದುಕೊಳ್ಳೋಣ.
ಹಣವನ್ನು ವ್ಯರ್ಥವಾಗಿ ಖರ್ಚು ಮಾಡಬಾರದು:
ಆಚಾರ್ಯ ಚಾಣಕ್ಯ ಹೇಳುವಂತೆ ಹಣವನ್ನು ಹೆಚ್ಚಿಸುವುದರತ್ತ ಸದಾ ಪ್ರಯತ್ನಶೀಲರಾಗಿರಬೇಕು. ಮುಖ್ಯವಾಗಿ ಹಣವನ್ನು ಹೂಡಿಕೆಯ್ಲಿ ತೊಡಗಿಸಬೇಕು. ಆದರೆ ಕೆಲವರಿಗೆ ಹಣದ ಮೌಲ್ಯವೇ ತಿಳಿದಿರುವುದಿಲ್ಲ. ಸದಾ ನೀರಿನಂತೆ ಖರ್ಚು ಮಾಡುತ್ತಾ ಇರುತ್ತಾರೆ. ಅದರ ಜರೂರತ್ತು ಇಲ್ಲವಾದರೂ ಹಣವನ್ನು ಖರ್ಚು ಮಾಡಿ, ಹಾಳು ಮಾಡುತ್ತಿರುತ್ತಾರೆ. ಲಕ್ಷ್ಮೀ ಇಂತಹವರ ಬಗ್ಗೆ ಸದಾ ಮುನಿಸಿಕೊಂಡಿರುತ್ತಾಳೆ. ಇಂತಹವರಿಗೆ ಲಕ್ಷ್ಮಿ ಒಲಿಯುವುದಿಲ್ಲ. ಹೆಚ್ಚು ಕಾಲ ಇಂತಹವರ ಬಳಿ ಹಣ ಉಳಿಯುವುದಿಲ್ಲ. ಇಂತಹವರ ಬಳಿ ಧನ ಲಕ್ಷ್ಮಿ ಶಿಖರದಿಂದ ಕರಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ಧನರಾಶಿಯ ತಪ್ಪು ಬಳಕೆ
ಸಂಸಾರದ ಪಾಲನೆ ಪೋಷಣೆ ಮಾಡುವುದರ ಜೊತೆಗೆ ಹಣವನ್ನು ಸದಾ ಸತ್ಕಾರ್ಯಗಳಲ್ಲಿ ವಿನಿಯೋಗಿಸಬೇಕು. ಇದರಲ್ಲಿ ದಾನ ತುಂಬಾ ಪುಣ್ಯದ ಕೆಲಸವಾಗಿದೆ. ಯಾರು ಹೆಚ್ಚು ಹೆಚ್ಚು ದಾನ ಧರ್ಮದಲ್ಲಿ ತೊಡಗುತ್ತಾರೋ ಅವರ ಪರಿವಾರದಲ್ಲಿ ಸುಖ ಸಮೃದ್ಧಿಯಾಗುತ್ತದೆ. ಸಂಪತ್ಭರಿತವಾಗಿರುತ್ತದೆ. ಆದರೆ ಯಾರು ಹಣವನ್ನು ತಪ್ಪು ಮಾರ್ಗದಲ್ಲಿ ಉಪಯೋಗಿಸುತ್ತಾರೋ ಅಂತಹವರ ಬಳಿ ಹಣ ಎಷ್ಟೇ ಇದ್ದರೂ ಅವರು ಜೀವನದಲ್ಲಿ ವೇಗವಾಗಿ ಪತನ ಕಾಣುತ್ತಾರೆ. ಅಂತಹವರು ಆರ್ಥಿಕವಾಗಿ ತಕ್ಷಣ ಬಿಗಿ ಹಿಡಿತ ಸಾಧಿಸಬೇಕು.
ಹಣವನ್ನು ಯಾರು ಉಳಿತಾಯ ಮಾಡುವುದಿಲ್ಲವೋ…
ಆಚಾರ್ಯ ಚಾಣಕ್ಯನ ಪ್ರಕಾರ ಯಾರು ಹಣವನ್ನು ಉಳಿತಾಯ ಮಾಡುವುದಿಲ್ಲವೋ, ಅವರ ಬಳಿ ಎಷ್ಟೇ ವರಮಾನವಿದ್ದರೂ ಅವರ ಬಳಿ ಖರ್ಚು ಹೆಚ್ಚಾಗಿ ಉಳಿತಾಯ ಆಗುವುದಿಲ್ಲ. ಚಾಣಕ್ಯನ ಪ್ರಕಾರ ಹಣ ಗಳಿಸುವುದಕ್ಕಿಂತ ಅದನ್ನು ಖರ್ಚು ಮಾಡುವುದೆ ಹೆಚ್ಚು ಶ್ರಮದಾಯಕ, ಕಠಿಣ ಕೆಲಸ. ಇಂತಹವರು ವ್ಯವಸ್ಥಿತವಾಗಿ ಯೋಜಿಸಿ, ಯೋಚಿಸಿ ಹಣ ಖರ್ಚು ಮಾಡಬೇಕಾಗುತ್ತದೆ. ಹಾಸಿಗೆ ಇದ್ದಷ್ಟು ಮಾತ್ರವೇ ಕಾಲು ಚಾಚಬೇಕು ಅನ್ನುತ್ತದೆ ವಿತ್ತ ನೀತಿ. ಚಾಣಕ್ಯನ ವಿತ್ತ ನೀತಿ ಪ್ರಕಾರ ಇರುವುದೆಲ್ಲವ ಖರ್ಚು ಮಾಡಿಕೊಂಡು ಬರಿಗೈ ದಾಸನಾಗಬಾರದು! ಅವಶ್ಯಕತೆಗೆ ಅನುಗುಣವಾಗಿ ಹಣ ಖರ್ಚು ಮಾಡಿ, ಅದರಲ್ಲಿಯೇ ಉಳಿತಾಯ ಮಾಡುತ್ತಾ ಕೂಡಿಡಬೇಕು. ಏಕೆಂದರೆ ಆಪತ್ಕಾಲದಲ್ಲಿ ಕೈಹಿಡಿಯುವುದು ಆ ಉಳಿತಾಯದ ಹಣವೇ.
(chanakya niti change these 3 habits soon otherwise poverty will follow you immediately)
Published On - 6:46 am, Sat, 18 September 21