Garuda Purana: ಗಂಡ ಹೆಂಡತಿ ಮಧ್ಯೆ ವಿಶ್ವಾಸ ಕೊನೆಗೊಂಡರೆ ಗರುಡ ಪುರಾಣದಲ್ಲಿ ಹೇಳುವಂತೆ ಆ ದಾಂಪತ್ಯ ಅಂತ್ಯ ಕಾಣುತ್ತದೆ
ಗರುಡ ಪುರಾಣದಲ್ಲಿ 19 ಸಾವಿರ ಶ್ಲೋಕಗಳು ಇವೆ. ಅದರಲ್ಲಿ ಕೇವಲ 7 ಸಾವಿರ ಶ್ಲೋಕಗಳ ಮೂಲಕ ಧರ್ಮಪೂರಕ ಮತ್ತು ಸಮತೋಲನದಿಂದ ಜೀವನ ನಡೆಸುವುದರ ಬಗ್ಗೆ ತಿಳಿಯಹೇಳಲಾಗಿದೆ. ಗರುಡ ಪುರಾಣದಲ್ಲಿ ಉಲ್ಲೇಖಿಸಿರುವ ಈ ಕೆಳಗಿನ 5 ಶ್ಲೋಕಗಳನ್ನು ವಿನಯಪೂರ್ವಕವಾಗಿ ಅನುಸರಿಸುವುದರಿಂದ ಜೀವನವನ್ನು ಸುಲಲಿತವಾಗಿ ಮುನ್ನಡೆಸಿಕೊಂಡು ಹೋಗಬಹುದು.
ಜನ ಜೀವನದ ಮಟ್ಟ ಸುಧಾರಿಸಲು ಗರುಡ ಪುರಾಣದಲ್ಲಿ ಬರುವ 7 ಸಾವಿರ ಶ್ಲೋಕಗಳು ದಾರಿದೀಪವಾಗಿವೆ. ಮಹಾಪುರಾಣದಲ್ಲಿ ಉಲ್ಲೇಖವಾಗಿರುವ ಈ ಶ್ಲೋಕಗಳನ್ನು ಅರಿತು ಪಾಲಿಸುತ್ತಾ ಜೀವನ ಕಳೆದರೆ ಅನೇಕ ಕಷ್ಟಗಳು ದೂರವಾಗುತ್ತವೆ. ಗರುಡ ಪುರಾಣವನ್ನು ಯಾರದೇ ಸಾವು ಸಂಭವಿಸಿದಾಗ ಕೇಳಿಸಲ್ಪಡುತ್ತದೆ. ಇದರಿಂದ ಇಹಲೋಕ ತ್ಯಜಿಸಿದ ವ್ಯಕ್ತಿಯ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗುತ್ತದೆ. ಏಕೆಂದರೆ ಗರುಡ ಪುರಾಣ ಆಲಿಸುತ್ತಾ ಆಲಿಸುತ್ತಾ ಆತ್ಮಕ್ಕೆ ಮುಕ್ತಿ ಮಾರ್ಗದ ದಾರಿ ಕಾಣುತ್ತದೆ. ಇದರಿಂದ ಭೂಮಿಯ ಮೇಲಿನ ಭೋಗ, ಮೋಹವನ್ನು ಸಲೀಸಾಗಿ ತ್ಯಜಿಸಲು ಸಾಧ್ಯವಾಗುತ್ತದೆ. ಆದರೆ ಗರುಡ ಪುರಾಣ ಕೇವಲ ಆತ್ಮ ಮುಕ್ತಿಗಾಗಿರುವ ಮಾರ್ಗವಷ್ಟೇ ಅಂತಲ್ಲ. ಈ ಮಹಾ ಪುರಾಣವು ಜೀವಂತ ಜನರಿಗೂ ಜೀವನ ನಡೆಸುವ ಕಲೆಯನ್ನು ಹೇಳಿಕೊಡುತ್ತದೆ.
ಗರುಡ ಪುರಾಣದಲ್ಲಿ 19 ಸಾವಿರ ಶ್ಲೋಕಗಳು ಇವೆ. ಅದರಲ್ಲಿ ಕೇವಲ 7 ಸಾವಿರ ಶ್ಲೋಕಗಳ ಮೂಲಕ ಧರ್ಮಪೂರಕ ಮತ್ತು ಸಮತೋಲನದಿಂದ ಜೀವನ ನಡೆಸುವುದರ ಬಗ್ಗೆ ತಿಳಿಯಹೇಳಲಾಗಿದೆ. ಗರುಡ ಪುರಾಣದಲ್ಲಿ ಉಲ್ಲೇಖಿಸಿರುವ ಈ ಕೆಳಗಿನ 5 ಶ್ಲೋಕಗಳನ್ನು ವಿನಯಪೂರ್ವಕವಾಗಿ ಅನುಸರಿಸುವುದರಿಂದ ಜೀವನವನ್ನು ಸುಲಲಿತವಾಗಿ ಮುನ್ನಡೆಸಿಕೊಂಡು ಹೋಗಬಹುದು.
1. ಒಂದು ವೇಳೆ ಗಂಡ ಹೆಂಡತಿ ಮಧ್ಯೆ ಭರವಸೆ, ವಿಶ್ವಾಸಗಳು ಕೊನೆಗೊಂಡರೆ ಗರುಡ ಪುರಾಣದಲ್ಲಿ ಹೇಳುವಂತೆ ಆ ದಾಂಪತ್ಯ ಅಂತ್ಯ ಕಾಣುತ್ತದೆ. ಹಾಗಾಗಿ ಸತಿ ಪತಿ ಮಧ್ಯೆ ವಿಶ್ವಾಸಕ್ಕೆ ಕೊರತೆ ಎದುರಾಗುವಂತೆ ಯಾವುದೇ ನಡುವಳಿಕೆ ತೋರಿಸಬಾರದು. ಪ್ರತಿ ಹಂತವನ್ನು ಧೈರ್ಯದಿಂದ ವಿಶ್ವಾಸಪೂರ್ವಕವಾಗಿ ಎದುರಿಸಬೇಕು.
2. ರೋಗವಿಲ್ಲದ ಜೀವ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿರುತ್ತದೆ. ಜೀವದಲ್ಲಿ ಸ್ವಾಸ್ಥ್ಯವಿದ್ದರೆ ಏನು ಬೇಕಾದರೂ ಸಾಧಿಸುವ ಮನಸ್ಸು ಮೂಡುತ್ತದೆ. ಆದರೆ ಅದೇ ಜೀವ ಅಸ್ವಸ್ಥಗೊಂಡರೆ ಅದರಿಂದ ಕಾರ್ಯಕ್ಷಮತೆ ನಿರೀಕ್ಷಿಸಲಾಗದು. ಹಾಗಾಗಿ ನಿಮ್ಮಮ ಜೀವನಸಾಥಿಯಲ್ಲಿ ಯಾರೊಬ್ಬರಿಗೇ ಆದರೂ ಅನಾರೋಗ್ಯ ಕಾಡತೊಡಗಿದರೆ ಧೈರ್ಯ- ವಿಶ್ವಾಸಗಳಿಂದ ಆ ದುರ್ಭರ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿ. ತನ್ಮೂಲಕ ಅವರನ್ನು ಮತ್ತೆ ಆರೋಗ್ಯದಿಂದ ಪುಟಿಯುವಂತೆ ಮಾಡಿ. ಈ ವಿಷಯದಲ್ಲಿ ನಿಮ್ಮ ಸಂಗಾತಿಯ ಜೊತೆ ಉತ್ತಮ ಬಾಂಧವ್ಯವಿದ್ದರೆ ಅವರು ಅನಾರೋಗ್ಯಗೊಂಡಾಗ ಸಲೀಸಾಗಿ ಅವರನ್ನು ಮತ್ತೆ ಸುಸ್ಥಿತಿಗೆ ತರಬಹುದು.
3. ಯಾವುದೇ ವ್ಯಕ್ತಿಯು ತನ್ನ ಮಗ-ಮಗಳು ತನ್ನ ಮಾತನ್ನು ಕೇಳುತ್ತಿಲ್ಲ ಎನ್ನುವಂತಾದರೆ ಸಮಾಜದಲ್ಲಿ ತನ್ನ ಸಂತಾನದಿಂದ ಅಪಮಾನ ಅನುಭವಿಸಬೇಕಾಗುತ್ತದೆ. ಹಾಗಾಗಿ ನೀವು ಸುಖೀ ಜೀವನಬಯಸುವುದೇ ಆದರೆ ನಿಮ್ಮ ಮಕ್ಕಳು ನಿಮ್ಮ ಮಾತನ್ನು ಕೇಳುವಂತೆ ಮಾಡಿ. ಅದಕ್ಕಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ. ಹಿರಿಯರನ್ನು ಗೌರವಿಸುವಂತೆ ತಿಳಿಯಹೇಳಿ.
4. ನಿಮಗಿಂತ ಕಿರಿಯರು ಅಥವಾ ಕಿರಿಯ ಸ್ಥಾನಮಾನದ ವ್ಯಕ್ತಿ ನಿಮಗೆ ಅಪಮಾನ ಮಾಡುತ್ತಿದ್ದಾರೆ ಅಂತಾದರೆ ಆ ಪರಿಸ್ಥಿತಿ ನಿಜಕ್ಕೂ ದುಃಖಕರವೇ ಸರಿ. ಹಾಗಾಗಿ ಅಂತಹ ಪರಿಸ್ಥಿತಿ ಎದುರಾಗುವಂತೆ ಮಾಡಿಕೊಳ್ಳಬೇಡಿ. ಹಾಗಾಗಿ, ಕಿರಿಯರ ಜೊತೆ ಕಿರಿಕಿರಿ ಮಾಡಿಕೊಳ್ಳಬೇಡಿ.
5. ಯಾವುದೇ ಕೆಲಸದಲ್ಲಿ ಮತ್ತೆ ಮತ್ತೆ ಸಾಕಷ್ಟು ಪರಿಶ್ರಮ ಹಾಕತೊಡಗಿದರೂ ಸಫಲತೆ ಸಿಗಲಿಲ್ಲವೆಂದರೆ ತುಂಬಾ ಚಿಂತೆಗೀಡಾಗುತ್ತೇವೆ. ಹಾಗಿದ್ದಾಗ ನಿಮ್ಮ ಸ್ವಭಾವ ತುಂಬಾ ಸಕಾರಾತ್ಮಕವಾಗಿರಬೇಕಾಗುತ್ತದೆ. ನೀವು ಮಾಡಿರಬಹುದಾದ ತಪ್ಪುಗಳಿಗೆ ಏನು ಕಾರಣ ಎಂಬುದನ್ನು ತಿಳಿದುಕೊಳ್ಳಿ. ಅದರ ಅನುಸಾರ ಹೊಸ ಪ್ರಯತ್ನ ಹಾಕಿ. ನಿಮ್ಮ ವ್ಯವಹಾರದಲ್ಲಿ ಸಕಾರಾತ್ಮಕತೆ ಬಂದಿದ್ದೇ ಆದಲ್ಲಿ ವಿಜಯ ಸಾಧಿಸಲು ನಿಮ್ಮನ್ನು ಯಾರೂ, ಯಾವುದೆ ಸಂಗತಿ ತಡೆಯದು.
(spiritual garuda purana if you want a happy life remember these 5 mantras from garuda purana)