Temple Tour: ಕಲಬುರಗಿ ಶರಣಬಸವೇಶ್ವರ ದೇವಾಲಯದಲ್ಲಿದೆ ಆರದ ನಂದಾದೀಪ

Temple Tour: ಕಲಬುರಗಿ ಶರಣಬಸವೇಶ್ವರ ದೇವಾಲಯದಲ್ಲಿದೆ ಆರದ ನಂದಾದೀಪ

TV9 Web
| Updated By: Digi Tech Desk

Updated on:Sep 17, 2021 | 10:37 AM

ದಾಸೋಹ ತತ್ವವನ್ನು ಜಗತ್ತಿಗೆ ಸಾರುವ ಚಿಂತನೆ ಅಲ್ಲಿರುತ್ತೆ. ನಾಡಿನ ದಾಸೋಹ ಸಂಸ್ಕೃತಿಯ ಭಾಗವಾದ ಮಹಾ ಮಂದಿರ ಒಂದು ಉತ್ತರ ಕರ್ನಾಟಕದ ಕಲಬುರಗಿಯಲ್ಲಿದೆ.

ಉತ್ತರ ಕರ್ನಾಟಕ ಅಂದ್ರೆ ಶರಣ ಸಂಸ್ಕೃತಿಯ ನೆಲೆ ಬೀಡು. ಉತ್ತರ ಕರ್ನಾಟಕದ ಸಾಕಷ್ಟು ಕ್ಷೇತ್ರಗಳು ದಾಸೋಹಕ್ಕೆ ಹೆಸರುವಾಸಿ. ಈ ಕ್ಷೇತ್ರ ಕೂಡ ಅಂತಾ ಒಂದು ಅದ್ಬುತ ಪರಂಪರೆಯನ್ನ ಹೊಂದಿದೆ. ಶರಣರ ಬಾಳು ಮರಣದಲ್ಲಿ ನೋಡು ಅನ್ನೊ ಮಾತಿದೆ. ಯಾಕಂದ್ರೆ ಶರಣ ಸಂಸ್ಕೃತಿ ಅಂದ್ರೇನೆ ಹಾಗೆ. ಅಲ್ಲಿ ಇಹ ಪರದ ನಡುವಿನ ಅರಿವಿನ ಸಾರ ಇರುತ್ತದೆ. ದಾಸೋಹ ತತ್ವವನ್ನು ಜಗತ್ತಿಗೆ ಸಾರುವ ಚಿಂತನೆ ಅಲ್ಲಿರುತ್ತೆ. ನಾಡಿನ ದಾಸೋಹ ಸಂಸ್ಕೃತಿಯ ಭಾಗವಾದ ಮಹಾ ಮಂದಿರ ಒಂದು ಉತ್ತರ ಕರ್ನಾಟಕದ ಕಲಬುರಗಿಯಲ್ಲಿದೆ. ಆ ದೇವಾಲಯ ಮತ್ತಾವುದು ಅಲ್ಲ ಕಲಬುರಗಿಯ ಶರಣಬಸವೇಶ್ವರ ದೇವಾಲಯ. ಕಲಬುರಗಿ ನಗರದಲ್ಲಿರುವ ಶರಣ ಬಸವೇಶ್ವರ ದೇವಾಲಯ ಕರ್ನಾಟಕದ ಸುಪ್ರಸಿದ್ಧ ಯಾತ್ರಾ ಕ್ಷೇತ್ರಗಳಲ್ಲಿ ಒಂದು. ನಮ್ಮ ನಾಡಿನ ಭಕ್ತರು ಮಾತ್ರವಲ್ಲ. ಮಹಾರಾಷ್ಟ್ರ, ಆಂಧ್ರ, ತೆಲಂಗಾಣದ ಭಕ್ತಾದಿಗಳು ಈ ಕ್ಷೇತ್ರಕ್ಕೆ ಆಗಮಿಸ್ತಾರೆ. 

Published on: Sep 17, 2021 07:22 AM