Chanakya Niti: ನಿಮ್ಮ ಈ ತಪ್ಪು ಜೀವನಪೂರ್ತಿ ಪಾಪದಲ್ಲಿ ಕೈ ತೊಳೆಯುವಂತೆ ಮಾಡಬಹುದು ಎಚ್ಚರ!- ಚಾಣಕ್ಯ ನೀತಿ

| Updated By: shruti hegde

Updated on: Jul 21, 2021 | 1:00 PM

ಆಚಾರ್ಯ ಚಾಣಕ್ಯರು ಕೆಲವು ವಿಷಯಗಳ ಬಗ್ಗೆ ಹೆಚ್ಚು ಜಾಗರೂಕರಾಗಿರುವಂತೆ ಹೇಳಿದ್ದಾರೆ. ಮಾಡುವ ಕೆಲವು ತಪ್ಪುಗಳು ನಿಮ್ಮನ್ನು ಪಾಪದಲ್ಲಿ ಕೈ ತೊಳೆಯುವಂತೆ ಮಾಡಬಹುದು ಎಂದು ಹೇಳಿದ್ದಾರೆ.

Chanakya Niti: ನಿಮ್ಮ ಈ ತಪ್ಪು ಜೀವನಪೂರ್ತಿ ಪಾಪದಲ್ಲಿ ಕೈ ತೊಳೆಯುವಂತೆ ಮಾಡಬಹುದು ಎಚ್ಚರ!- ಚಾಣಕ್ಯ ನೀತಿ
ಚಾಣಕ್ಯ ನೀತಿ
Follow us on

ಬಾಲ್ಯದಿಂದಲೂ ಸಹ ಪೋಷಕರು ಕೆಲವು ನೀತಿ ಪಾಠಗಳನ್ನು ಹೇಳುತ್ತಾರೆ. ಹಿರಿಯರನ್ನು ಗೌರವಿಸುವುದು, ಆಪತ್ತಿಗೆ ಕಾರಣವಾಗುವ ಕೆಲವು ಅಂಶಗಳ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು, ಇವುಗಳು ನಿಮ್ಮ ಬದುಕನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತದೆ. ಹಾಗಿರುವಾಗ ಕೆಲವು ಬಾರಿ ಇವುಗಳನ್ನೆಲ್ಲಾ ಮರೆತು ತಪ್ಪಾಗಿ ಹೆಜ್ಜೆ ಇಟ್ಟರೆ ಅದು ನಮ್ಮ ಜೀವನಕ್ಕೆ ಕುತ್ತು ತರಬಹುದು. ಹಾಗಾಗಿ ಆಚಾರ್ಯ ಚಾಣಕ್ಯರು ಕೆಲವು ವಿಷಯಗಳ ಬಗ್ಗೆ ಹೆಚ್ಚು ಜಾಗರೂಕರಾಗಿರುವಂತೆ ಹೇಳಿದ್ದಾರೆ. ಮಾಡುವ ಕೆಲವು ತಪ್ಪುಗಳು ನಿಮ್ಮನ್ನು ಪಾಪದಲ್ಲಿ ಕೈ ತೊಳೆಯುವಂತೆ ಮಾಡಬಹುದು ಎಂದು ಹೇಳಿದ್ದಾರೆ.

ಯಾವುದನ್ನೂ ಸಹ ಕಾಲಿನಲ್ಲಿ ತೋರಿಸಬಾರದು ಅದು ಅಗೌರವ ತರುವಂತಹ ವಿಷಯ ಎಂದು ಹಿರಿಯರು ಹೇಳಿದ್ದನ್ನು ಕೇಳಿರಬಹುದು. ಅದೇ ರೀತಿ ದೇವರ ಸ್ಥಾನದಲ್ಲಿರುವ ಬೆಂಕಿ, ಬ್ರಾಹ್ಮಣ, ಹಸು, ವೃದ್ಧರು, ಮಗುವನ್ನು ಎಂದಿಗೂ ಪಾದಗಳಿಂದ ತೋರಿಸಬಾರದು ಅಥವಾ ಒದೆಯಬಾರದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಈ ಕುರಿತಾಗಿ ಜನರು ಹೆಚ್ಚು ಗಮನವಹಿಸಲೇಬೇಕು. ದೇವರಿಗೆ ಅಗೌರವ ತಂದರೆ ಜೀವನವಿಡೀ ಪಾಪದಲ್ಲಿಯೇ ಕೈತೊಳೆಯಬೇಕಾಗುತ್ತದೆ.

*ಧರ್ಮಗ್ರಂಥಗಳಲ್ಲಿ ಬೆಂಕಿಗೆ ದೇವರ ಸ್ಥಾನವಿದೆ. ಮನೆಯಲ್ಲಿ ವಿಶೇಷವಾಗಿ ಯಾವುದೇ ಪೂಜೆ ನಡೆದರೆ ದೀಪ ಬೆಳಗುವ ಮೂಲಕ ಅಥವಾ ಅಗ್ನಿ ಪೂಜೆಯನ್ನು ಕೈಗೊಳ್ಳಲಾಗುತ್ತದೆ. ಅಗ್ನಿಗೆ ಅಗೌರವ ತೋರಿದರೆ ದೇವರಿಗೇ ಅಗೌರವ ತೋರಿದಂತೆ. ಅದು ನಮ್ಮನ್ನು ಸುಡುತ್ತದೆ.

*ಗುರು, ಹಿರಿಯರನ್ನು ಪೂಜಿಸಬೇಕು ಎಂದು ಗ್ರಂಥಗಳಲ್ಲಿ ಹೇಳಿದ್ದಾರೆ. ಹಿರಿಯರು ಎಂದೂ ದೇವರ ಸ್ಥಾನದಲ್ಲಿರುತ್ತಾರೆ. ಅವರಿಗೆ ಪಾದಗಳನ್ನು ತೋರಿಸುವುದು ಅಗೌರವವನ್ನು ತೋರಿಸುತ್ತದೆ. ಹಾಗಾಗಿ ಆಶೀರ್ವಾದ ಪಡೆದುಕೊಳ್ಳುವ ಗುರು- ಹಿರಿಯರಿಗೆ ಎಂದೂ ಗೌರವ ತೋರಿಸಬೇಕು.

*ಮಗುವನ್ನು ದೇವರ ಸಮಾನ ಎಂದು ಮುಗುವನ್ನು ಪೂಜಿಸುತ್ತಾರೆ. ಹಾಗಿದ್ದಾಗ ಮಗುವಿನ ಮೇಲೆ ಕಾಲಿಡುವುದು ಅಥವಾ ಮಗುವಿಗೆ ಕಾಲಿನಿಂದ ಎಂದಿಗೂ ಒದೆಯುವ ತಪ್ಪನ್ನು ಮಾಡಬಾರದು. ಇದರಿಂದ ಎದುರಾಗುವ ಶಿಕ್ಷೆ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡುತ್ತದೆ.

ಇದನ್ನೂ ಓದಿ:

Chanakya Niti: ಯಾವ ವಿಷಯಗಳಲ್ಲಿ ಪುರುಷರಿಗಿಂತ ಮಹಿಳೆಯರು ಮುಂದಿದ್ದಾರೆ ಎಂಬುದು ಗೊತ್ತಾ? – ಚಾಣಕ್ಯ ನೀತಿ

Chanakya Niti: ಈ ಕೆಲವು ವಿಷಯಗಳು ನಿಮಗೆ ಲಭಿಸುತ್ತಿದ್ದರೆ ನೀವು ನಿಜವಾಗಿಯೂ ಅದೃಷ್ಟವಂತರು- ಚಾಣಕ್ಯ ನೀತಿ

Published On - 1:00 pm, Wed, 21 July 21