Chanakya Niti: ಗಂಡ-ಹೆಂಡತಿ ಬಾಂಧವ್ಯದಲ್ಲಿ ಈ ಕೊರತೆಗಳು ಸಂಬಂಧವನ್ನು ಹದಗೆಡಿಸುತ್ತವೆ – ಚಾಣಕ್ಯ ನೀತಿ

ಚಾಣಕ್ಯ ನೀತಿ: ಗಂಡ- ಹೆಂಡತಿ ನಡುವೆ ಯಾವ ಕೊರತೆಯು ಜೀವನದ ಅತ್ಯಮೂಲ್ಯ ಸಂಬಂಧವನ್ನು ಕೆಡಿಸಬಹುದು ಎಂಬುದಕ್ಕೆ ಚಾಣುಕ್ಯರು ಕೆಲವು ವಿಷಯಗಳನ್ನು ಹೇಳಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ.

Chanakya Niti: ಗಂಡ-ಹೆಂಡತಿ ಬಾಂಧವ್ಯದಲ್ಲಿ ಈ ಕೊರತೆಗಳು ಸಂಬಂಧವನ್ನು ಹದಗೆಡಿಸುತ್ತವೆ - ಚಾಣಕ್ಯ ನೀತಿ
ಚಾಣಕ್ಯ ನೀತಿ
Edited By:

Updated on: Jul 14, 2021 | 12:27 PM

ಆಚಾರ್ಯ ಚಾಣಕ್ಯರು ಜೀವನದ ಪ್ರತಿಯೊಂದು ಆಯಾಮಗಳನ್ನೂ ಚಾಣಕ್ಯ ನೀತಿಯಲ್ಲಿ(Chanakya Niti) ವಿವರಿಸಿದ್ದಾರೆ. ಚಾಣಕ್ಯರು ಹೇಳಿದಂತೆ ಗಂಡ-ಹೆಂಡತಿ (Husband-Wife) ಎಂಬ ಬಾಂಧವ್ಯ ಅತ್ಯಂತ ಪವಿತ್ರವಾಗಿದೆ. ಈ ಸಂಬಂಧವು ನಂಬಿಕೆ ಮತ್ತು ಪ್ರೀತಿಯಿಂದ ಬಲಗೊಳ್ಳುತ್ತದೆ. ಗಂಡ-ಹೆಂಡತಿ ನಡುವೆ ಸುಳ್ಳು ಮತ್ತು ವಂಚನೆಯು ಬಾಂಧವ್ಯವನ್ನು ಹಡಗೆಡಿಸುತ್ತದೆ. ಹಾಗಾಗಿ ಗಂಡ- ಹೆಂಡತಿ ನಡುವೆ ಯಾವ ಕೊರತೆಯು ಜೀವನದ ಅತ್ಯಮೂಲ್ಯ ಸಂಬಂಧವನ್ನು ಕೆಡಿಸಬಹುದು ಎಂಬುದಕ್ಕೆ ಚಾಣುಕ್ಯರು ಕೆಲವು ವಿಷಯಗಳನ್ನು ಹೇಳಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಇಬ್ಬರು ಸೇರಿ ಯಾವುದೇ ಒಂದು ಸಮಸ್ಯೆಯನ್ನು ನಿರ್ವಹಿಸಿದರೆ ಅವರು ಖಂಡಿತವಾಗಿಯೂ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ಚಾಣುಕ್ಯರು ಹೇಳಿದ್ದಾರೆ. ಅಂಥವರ ಮನೆಯಲ್ಲಿ ಸಂತೋಷ, ಶಾಂತಿ ಸಮೃದ್ಧಿಸುತ್ತದೆ. ಅದಕ್ಕಾಗಿಯೇ ಈ ಸಂಬಂಧದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಜತೆಗೆ ಈ ಸಂಬಂಧವನ್ನು ಹೆಚ್ಚು ಗಟಿಯಾಗಿರಿಸಿಕೊಳ್ಳಬೇಕು ಎಂದು ಚಾಣಕ್ಯುರು ಹೇಳಿದ್ದಾರೆ. ಕೆಲವು ವಿಷಯಗಳಲ್ಲಿ ಗಂಡ ಹೆಂಡತಿ ನಡುವೆ ಬಿರುಕು ಮೂಡುತ್ತದೆ. ಅದನ್ನು ಹೇಗೆ ನಿಭಾಯಿಸಬೇಕು ಮತ್ತು ಯಾವ ಯಾವ ಕಾರಣದಿಂದಾಗಿ ಗಂಡ-ಹೆಂಡತಿ ನಡುವೆ ಬಿರುಕು ಬಿಡುತ್ತದೆ ಎಂಬುದರ ಕುರಿತಾಗಿ ಚಾಣಕ್ಯ ನೀತಿ ಸಾರಿದೆ.

ಗೌರವದ ಕೊರತೆ
ಗಂಡ ಹೆಂಡತಿ ಸಂಬಂಧ ಅತ್ಯಂತ ಪವಿತ್ರವಾದದ್ದು. ಇಬ್ಬರೂ ಸಹ ಗೌರವವನ್ನು ಕೊಡಬೇಕು ಜತೆಗೆ ಗೌರವವನ್ನು ಸಂಪಾದಿಸಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಇಬ್ಬರಿಗೂ ಪರಸ್ಪರ ಗೌರವವಿರಬೇಕು. ಗೌರವದ ಕೊರತೆಯು ಇಬ್ಬರ ನಡುವಿನ ಜಗಳ, ಉದ್ವಿಗ್ನತೆ ಮತ್ತು ಸಂಬಂಧವನ್ನು ಕೆಡಿಸುತ್ತದೆ. ಹಾಗಾಗಿ ಈ ಸಂಬಂಧವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಒಬ್ಬರಿಗೊಬ್ಬರು ಗೌರವವನ್ನು ನೀಡಬೇಕು ಎಂದು ಚಾಣಕ್ಯ ನೀತಿ ಹೇಳುತ್ತದೆ.

ಪರಸ್ಪರ ಸಂವಹನದ ಕೊರತೆ
ಪರಸ್ಪರ ಒಬ್ಬರಿಗೊಬ್ಬರು ಮಾತನಾಡುವ ಮೂಲಕ ಯಾವುದೇ ಒಂದು ಸಮಸ್ಯೆಯನ್ನೂ ಸುಲಭದಲ್ಲಿ ನಿಭಾಯಿಸಬಹುದು. ಪರಿಸ್ಥಿತಿ ಏನೇ ಇರಲಿ ಮಾತನ್ನು ಮುಂದುವರೆಸಬೇಕು. ಮಾತು ಬಿಡುವ ಒಂದು ತಪ್ಪು ಸಂಬಂಧವನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ಚಾಣಕ್ಯ ನೀತಿ ಹೇಳುತ್ತದೆ.

ಪ್ರೀತಿಯ ಕೊರತೆ
ಗಂಡ- ಹೆಂಡತಿ ನಡುವಿನ ಸಂಬಂಧದಲ್ಲಿ ಪ್ರೀತಿ ವಿಶೇಷ ಸ್ಥಾನವಿದೆ. ಪರಸ್ಪರ ಪ್ರೀತಿಯ ಕೊರತೆ ಇದ್ದಾಗ ಅಶಾಂತಿ ಉಂಟಾಗುತ್ತದೆ. ಇದು ಸಂಬಂಧವನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ ಒಬ್ಬರಿಗೊಬ್ಬರು ಗೌರವ, ವಿಶ್ವಾಸದ ಜತೆಗೆ ಪ್ರೀತಿಯನ್ನು ನೀಡುವುದು ಉತ್ತಮ ಎಂಬುದು ಚಾಣಕ್ಯರ ನೀತಿ ಸಾರ ಹೇಳುತ್ತದೆ.

ಇದನ್ನೂ ಓದಿ:

Chanakya Niti: ಮಕ್ಕಳ ಈ ಕೆಲವು ಅಭ್ಯಾಸಗಳನ್ನು ನಿರ್ಲಕ್ಷಿಸುವುದು ಭವಿಷ್ಯವನ್ನೇ ಕಿತ್ತುಕೊಳ್ಳಬಹುದು – ಚಾಣಕ್ಯ ನೀತಿ

Chanakya Niti: ಸಂಬಂಧಗಳನ್ನು ಬಲಪಡಿಸಿಕೊಳ್ಳಲು ಇವುಗಳನ್ನು ಪಾಲಿಸಲೇಬೇಕು- ಚಾಣಕ್ಯ ನೀತಿ