Chanakya Niti: ಆಲಸ್ಯ ಸ್ವಭಾವದವರು ಎಂದಿಗೂ ಹಣ ಸಂಪಾದಿಸಲು ಸಾಧ್ಯವಿಲ್ಲ- ಚಾಣಕ್ಯ ನೀತಿ

| Updated By: shruti hegde

Updated on: Aug 08, 2021 | 11:28 AM

ಚಾಣಕ್ಯ ನೀತಿ: ಕೆಲವರು ಸೂರ್ಯ ಉದಯವಾದ ನಂತರವೂ ಮಲಗುತ್ತಾರೆ. ಇದು ಅವರ ಶ್ರೇಯಸ್ಸಿಗೆ ಒಳ್ಳೆಯದಲ್ಲ ಎಂದು ಚಾಣಕ್ಯರು ಹೇಳಿದ್ದಾರೆ.

Chanakya Niti: ಆಲಸ್ಯ ಸ್ವಭಾವದವರು ಎಂದಿಗೂ ಹಣ ಸಂಪಾದಿಸಲು ಸಾಧ್ಯವಿಲ್ಲ- ಚಾಣಕ್ಯ ನೀತಿ
ಚಾಣಕ್ಯ
Follow us on

ಆಚಾರ್ಯ ಚಾಣಕ್ಯರು ತಮ್ಮ ಅನುಭವದ ಮೂಲಕ ಇಂದಿಗೂ ಅಳವಡಿಕೆಯಾಗುವ ಕೆಲವು ವಿಷಯಗಳನ್ನು ತಿಳಿಸಿದ್ದಾರೆ. ಚಾಣಕ್ಯರು ಹೇಳುವ ನೀತಿ (Chanakya Niti) ಪಾಠವನ್ನು ಜನರು ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಸಂತೋಷವನ್ನು ಕಾಣಬಹುದು. ವ್ಯಕ್ತಿಯು ಹಣಗಳಿಸುವುದು ಮುಖ್ಯ ಎಂದು ಚಾಣಕ್ಯರು (Acharya Chanakya) ಹೇಳುತ್ತಾರೆ. ಹಣದ ಕುರಿತಾದ ನಿರ್ಲಕ್ಷ್ಯ ಹಾಗೂ ಆಲಸ್ಯ ಸ್ವಭಾವದವರು ಎಂದಿಗೂ ಹಣ (Money) ಗಳಿಸುವುದಿಲ್ಲ. ಜತೆಗೆ ಅವರಲ್ಲಿ ಹಣ ಉಳಿಯುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಮುಂಜಾನೆ ಮಲಗುವುದು
ಕೆಲವರು ಸೂರ್ಯ ಉದಯವಾದ ನಂತರವೂ ಮಲಗುತ್ತಾರೆ. ಇದು ಅವರ ಶ್ರೇಯಸ್ಸಿಗೆ ಒಳ್ಳೆಯದಲ್ಲ ಎಂದು ಚಾಣಕ್ಯರು ಹೇಳಿದ್ದಾರೆ. ಬೆಳಿಗ್ಗೆ ಬೇಗ ಏಳುವ ಅಭ್ಯಾಸದಿಂದ ಶ್ರೇಯಸ್ಸು ತಾನಾಗಿಯೇ ಆಗುತ್ತದೆ. ಜತೆಗೆ ಲಕ್ಷ್ಮಿ ಅಂಥವರ ಮನೆಗೆ ಆಶೀರ್ವದಿಸುತ್ತಾಳೆ ಎಂದು ಚಾಣಕ್ಯರು ಹೇಳುತ್ತಾರೆ.

ಶುಚಿತ್ವ ಕೊರತೆ
ಎಲ್ಲಿ ಸ್ವಚ್ಛತೆ ಇಲ್ಲವೋ ಅಲ್ಲಿ ಮಾತಾ ಲಕ್ಷ್ಮೀ ನೆಲೆಸುವುದಿಲ್ಲ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ ದೈಹಿಕ ಶುಚಿತ್ವವನ್ನು ಕಾಪಾಡಿಕೊಳ್ಳದವರು ಅಥವಾ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳದವರ ಮೇಲೆ ಲಕ್ಷ್ಮಿ ದೇವಿಯ ಕೃಪೆ ಎಂದಿಗೂ ಇರುವುದಿಲ್ಲ.

ಅತಿಯಾಗಿ ತಿನ್ನುವುದು
ಚಾಣಕ್ಯರ ಪ್ರಕಾರ ಅತಿಯಾಗಿ ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಅವರಲ್ಲಿ ಎಂದಿಗೂ ಹಣ ಉಳಿಯುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಕೆಟ್ಟ ಪದಗಳನ್ನು ಮಾತನಾಡುವುದು
ಯಾವಾಗಲೂ ಒಳ್ಳೆಯ ಮಾತುಗಳನ್ನಾಡಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಪ್ರಿಯವಾಗಿ ಮಾತನಾಡುವವರು ಹೆಚ್ಚು ಸ್ನೇಹವನ್ನು ಗಿಟ್ಟಿಸಿಕೊಳ್ಳುತ್ತಾರೆ ಮತ್ತು ಜನರ ಪ್ರೀತಿಯನ್ನು ಗಳಿಸುತ್ತಾರೆ. ಕಠಿಣವಾಗಿ ಮಾತನಾಡುವುದರಿಂದ ಸಂಬಂಧಗಳು ಹಾಳುಗುತ್ತವೆ. ಅಂಥವರ ಮನೆಗೆ ಎಂದಿಗೂ ಲಕ್ಷ್ಮಿ ದೇವಿ ಆಶೀರ್ವದಿಸುವುದಿಲ್ಲ.

ಇದನ್ನೂ ಓದಿ:

Chanakya Niti: ಆರೋಗ್ಯವಾಗಿರಲು ಈ ವಿಷಯಗಳನ್ನು ನೆನಪಿನಲ್ಲಿಡಿ – ಚಾಣಕ್ಯ ನೀತಿ

Chanakya Niti: ಈ ರೀತಿಯ ನಡವಳಿಕೆಯ ಜನರ ಬಡತನಕ್ಕೆ ಅವರೇ ಜವಾಬ್ದಾರರು- ಚಾಣಕ್ಯ ನೀತಿ

(Chanakya niti those people are not get money check in kannada)

Published On - 11:28 am, Sun, 8 August 21