ಚಾಣಕ್ಯ ನೀತಿ: ಈ ಐದು ವಿಷಯಗಳಲ್ಲಿ ಬಹಳ ಜಾಗರೂಕರಾಗಿರಿ, ಇಲ್ಲದಿದ್ದರೆ ನೀವು ಎಲ್ಲವನ್ನೂ ಕಳೆದುಕೊಳ್ಳುತ್ತೀರಿ!

| Updated By: ಸಾಧು ಶ್ರೀನಾಥ್​

Updated on: Jun 28, 2022 | 4:59 PM

Chanakya Niti: ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ವಿಯಾಗಲು ಅನುಸರಿಸಬೇಕಾದ ತತ್ವಗಳು ಯಾವುವು ಎಂಥಹವು ಎಂಬುದನ್ನು ಆಚಾರ್ಯ ಚಾಣಕ್ಯ ಅಂದೇ ಗುರುತಿಸಿ, ನಿರ್ದಿಷ್ಟವಾಗಿ ಹೇಳಿದ್ದಾರೆ.

ಚಾಣಕ್ಯ ನೀತಿ: ಈ ಐದು ವಿಷಯಗಳಲ್ಲಿ ಬಹಳ ಜಾಗರೂಕರಾಗಿರಿ, ಇಲ್ಲದಿದ್ದರೆ ನೀವು ಎಲ್ಲವನ್ನೂ ಕಳೆದುಕೊಳ್ಳುತ್ತೀರಿ!
ಚಾಣಕ್ಯ ನೀತಿ: ಈ ಐದು ವಿಷಯಗಳಲ್ಲಿ ಬಹಳ ಜಾಗರೂಕರಾಗಿರಿ, ಇಲ್ಲದಿದ್ದರೆ ನೀವು ಎಲ್ಲವನ್ನೂ ಕಳೆದುಕೊಳ್ಳುತ್ತೀರಿ!
Follow us on

ಆಚಾರ್ಯ ಚಾಣಕ್ಯ – ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಯಶಸ್ವಿಯಾಗಲು ಅನುಸರಿಸಬೇಕಾದ ತತ್ತ್ವಗಳು ಮತ್ತು ಅನುಸರಿಸಬೇಕಾದ ಮಾರ್ಗವನ್ನು ಕಲಿಸಿದ ಮಹಾನ್ ಶಿಕ್ಷಕ. ನಿಜಕ್ಕೂ ಅಪಾರ ಚಾಣಕ್ಯನೇ ಸರಿ ಆತ. ಬದುಕಿನ ಎಲ್ಲ ಮಾಹಿತಿಗಳನ್ನು ಮಾರ್ಗದರ್ಶನ ಮಾಡಿದ ಮೇಧಾವಿ. ಜೀವನದಲ್ಲಿ ಸಂಕಟವಿಲ್ಲದೆ.. ಯಾರೊಂದಿಗಾದರೂ ಹೇಗೆ ಬೆರೆಯುವುದು? ಯಾರನ್ನು ನಂಬಬೇಕು? ಯಾರನ್ನು ನಂಬಬಾರದು? ನಿಸರ್ಗದ ಜೊತೆಗೆ ಹೇಗೆ ಇರಬೇಕು? ಈ ಎಲ್ಲ ಅಂಶಗಳನ್ನು ಸವಿಸ್ತಾರವಾಗಿ ತಿಳಿಯಹೇಳಿದ ಮೇಧಾವಿ ಚಾಣಕ್ಯ.

ಅವರು ಬರೆದ ನೀತಿಸಂಹಿತೆ ಇಂದು ಮತ್ತು ಎಂದೆಂದಿಗೂ ಉಪಯುಕ್ತವಾಗಿರುವುದರಲ್ಲಿ ಸಂದೇಹವಿಲ್ಲ. ಇದೇ ಚಾಣಕ್ಯ ನೀತಿಯಲ್ಲಿಯೇ ಮನುಷ್ಯ 5 ವಿಷಯಗಳ ಬಗ್ಗೆ ಬಹಳ ಜಾಗರೂಕರಾಗಿರಲು ಅಥವಾ ಜೀವವನ್ನು ನಾಶ ಮಾಡಿಕೊಳ್ಳುವ ಅಪಾಯದ ಬಗ್ಗೆಯೂ ಎಚ್ಚರಿಸಲಾಗಿದೆ. ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಯಶಸ್ವಿಯಾಗಲು ಅನುಸರಿಸಬೇಕಾದ ತತ್ವಗಳು ಯಾವುವು, ಎಂಥಹವು ಎಂಬುದನ್ನು ಆಚಾರ್ಯ ಚಾಣಕ್ಯ ಅಂದೇ ಗುರುತಿಸಿ, ನಿರ್ದಿಷ್ಟವಾಗಿ ಹೇಳಿದ್ದಾರೆ. ಈ ಐದು ಅಂಶಗಳನ್ನು ಈಗ ತಿಳಿಯೋಣ.

  1. * ಆಚಾರ್ಯ ಚಾಣಕ್ಯರ ಪ್ರಕಾರ .. ಸಾಂದರ್ಭಿಕ ಪ್ರವಾಹಕ್ಕೆ ಗುರಿಯಾಗುವ ನದಿಗಳು ಮತ್ತು ಅದಕ್ಕೆ ಅಡ್ಡಲಾಗಿ ಕಟ್ಟುವ ಸೇತುವೆಗಳನ್ನು ಯಾರೂ ನಂಬಬಾರದು. ಅಂತಹ ನದಿಗಳ ಮೇಲಿನ ಸೇತುವೆಗಳ ಬಗ್ಗೆ ಜಾಗ್ರತೆ, ಎಚ್ಚರಾ ವಹಿಸಬೇಕು. ನದಿಯ ಹರಿವು ಯಾವಾಗ ವೇಗವಾಗಿ ಬದಲಾಗುತ್ತದೆ ಎಂಬುದು ತಿಳಿದುಬರುವುದಿಲ್ಲ. ಹಾಗಾಗಿ ಆ ಸೇತು ಬಂಧನದಲ್ಲಿ ಈಜುವ ಸಾಹಸ ಮಾಡಬಾರದು. ಅವುಗಳನ್ನು ನಂಬಿಕೊಂಡು ಪ್ರಯಾಣಿಸಿದರೆ.. ಜೀವನ ಬಿಕ್ಕಟ್ಟಿಗೆ ಸಿಲುಕುವ ಅಪಾಯವಿದೆ.
  2. * ಶಸ್ತ್ರಾಸ್ತ್ರಗಳನ್ನು ಹೊಂದಿರುವ ಜನರನ್ನು ನಂಬಬೇಡಿ. ಅಂಥವರಿಗೆ ಸಿಟ್ಟು ಬಂದರೆ.. ಏನು ಮಾಡುತ್ತಾರೆ ಎಂದು ಊಹಿಸುವುದೂ ಕಷ್ಟ. ಆಯುಧ ಹಿಡಿದವರ ಮುಂದೆ ನೀವು ನಿಂತರೆ.. ಅವರಿಗೆ ಸಿಟ್ಟು ಬಂದರೆ ನೀವು ದಾಳಿಗೆ ತುತ್ತಾಗುವ ಅಪಾಯವಿರುತ್ತದೆ. ಸ್ವಲ್ಪವೇ ವ್ಯತ್ಯಾಸವಾದರೂ… ನೀವು ಬದುಕುಳಿಯುವ ಸಾಧ್ಯತೆ ಸಹ ಕಳೆದುಹೋಗಬಹುದು. ಆದುದರಿಂದ ಆಯುಧಗಳನ್ನು ಹೊತ್ತವರಿಂದ ದೂರವಿರುವುದು ಉತ್ತಮ. ಅಂಥವರನ್ನು ಕುರುಡಾಗಿ ನಂಬುವುದೂ ಶುದ್ಧ ತಪ್ಪು.
  3. * ದೊಡ್ಡ ಉಗುರುಗಳು ಅಥವಾ ಕೊಂಬುಗಳನ್ನು ಹೊಂದಿರುವ ಪ್ರಾಣಿಗಳನ್ನು ಸಹ ನಂಬಬೇಡಿ. ಅವು ಯಾವಾಗ ದಾಳಿ ಮಾಡಿಬಿಡುತ್ತವೆ ಎಂದೂ ಹೇಳಲು ಸಾಧ್ಯವಿಲ್ಲ. ಅವು ದಾಳಿ ಮಾಡಿದರೆ ಗಂಭೀರ ಗಾಯಗಳ ಅಪಾಯವಿರುತ್ತದೆ. ವ್ಯತ್ಯಾಸವಾದರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ, ಅಂತಹ ಪ್ರಾಣಿಗಳಿಂದ ದೂರವಿರಬೇಕು.
  4.  * ಚಂಚಲ ಸ್ವಭಾವದ ಮಹಿಳೆಯರನ್ನು ನಂಬುವುದು ಕೂಡ ಮೂರ್ಖತನ. ಅವರ ಆಲೋಚನೆಗಳು ಕಾಲಕಾಲಕ್ಕೆ ಬದಲಾಗುತ್ತವೆ. ಇದು ಅವರು ನಿಮ್ಮ ವಿರುದ್ಧವೇ ವರ್ತಿಸುವ, ಮಾತನಾಡುವ ಸಂದರ್ಭಗಳಿಗೆ ಕಾರಣವಾಗಬಹುದು. ಇದು ನಿಮ್ಮನ್ನು ದುಃಖಿತರನ್ನಾಗಿ ಮಾಡಬಹುದು.
  5. * ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಮೇಲ್ಜಾತಿಗಳನ್ನು (ರಾಜವಂಶಗಳನ್ನು) ಕುರುಡಾಗಿ ನಂಬಬಾರದು ಎಂದು ಹೇಳಿದ್ದಾರೆ. ಇಲ್ಲಿ ಕೆಲವರು ತಮ್ಮ ಅಧಿಕಾರ ಉಳಿಸಿಕೊರ್ಳಳುವುದಕ್ಕಾಗಿ ಯಾರನ್ನು ಬೇಕಾದರೂ ಬಳಸಿಕೊಳ್ಳಲು ಸಿದ್ಧರಿರುತ್ತಾರೆ. ತಮ್ಮ ಅಗತ್ಯಕ್ಕೆ ಯಾರನ್ನು ಬೇಕಾದರೂ ಸೇರಿಸಿಕೊಳಳುತ್ತಾರೆ. ಬಿಡಿ. ಅಂತಹವರನ್ನು ನಂಬಿ ಮುಜುಗರಪಡಬೇಡಿ, ಅಪಾಯಕ್ಕೆ ಸಿಲುಕಬೇಡಿ ಎಂಬುದೇ ಚಾಣಕ್ಯನ ಹಿತವಚನ.  (To read in telugu click here) 

 

Published On - 4:56 pm, Tue, 28 June 22