Chaturvimsati Namas: ಕೇಶವನ 24 ರೂಪಗಳನ್ನು ಅವನ ಆಯುಧಗಳಿಂದ ಗುರುತಿಸಲಾಗುವುದು, ಹೇಗೆ ಗೊತ್ತಾ?

| Updated By: ಆಯೇಷಾ ಬಾನು

Updated on: Jan 06, 2022 | 7:15 AM

ವಿಷ್ಣುವಿನ 24 ಹೆಸರುಗಳು ವೈಷ್ಣವರಿಗೆ ಅತ್ಯಂತ ಪವಿತ್ರವಾದ ಕೇಶವ ನಾಮಗಳಾಗಿವೆ. ವೈಷ್ಣವ ವೈದಿಕ ಪೂಜೆಗಳ ಆರಂಭದಲ್ಲಿ ಈ 24 ಹೆಸರುಗಳನ್ನು ಪಠಿಸಲಾಗುತ್ತೆ.

Chaturvimsati Namas: ಕೇಶವನ 24 ರೂಪಗಳನ್ನು ಅವನ ಆಯುಧಗಳಿಂದ ಗುರುತಿಸಲಾಗುವುದು, ಹೇಗೆ ಗೊತ್ತಾ?
ವಿಷ್ಣು
Follow us on

ಭಗವಾನ್ ವಿಷ್ಣುವಿಗೆ(Lord Vishnu) ಅನೇಕ ಹೆಸರುಗಳಿಂದ ಕರೆಯಲಾಗುತ್ತೆ. ಈ ಪೈಕಿ ಚತುರ್ವಿಂಶತಿ ನಮಸ್ ವಿಷ್ಣುವಿನ 24 ಹೆಸರುಗಳನ್ನು ಬಳಗೊಂಡಿದೆ. ವಿಷ್ಣುವಿನ 24 ಹೆಸರುಗಳು ವೈಷ್ಣವರಿಗೆ ಅತ್ಯಂತ ಪವಿತ್ರವಾದ ಕೇಶವ ನಾಮಗಳಾಗಿವೆ. ವೈಷ್ಣವ ವೈದಿಕ ಪೂಜೆಗಳ ಆರಂಭದಲ್ಲಿ ಈ 24 ಹೆಸರುಗಳನ್ನು ಪಠಿಸಲಾಗುತ್ತೆ. ಇನ್ನು ಕೇಶವನ 24 ರೂಪಗಳನ್ನು ಅವನ ಆಯುಧಗಳಿಂದ ಗುರುತಿಸಲಾಗುತ್ತೆ. ಕೆಳಗೆ ಕೊಟ್ಟಿರುವ ಅವನ ಆಯುಧಗಳನ್ನು ಮೊದಲು ಹಿಂಬದಿಯ ಬಲಗೈ ನಂತರ ಹಿಂಬದಿಯ ಎಡಗೈ ನಂತರ ಮುಂಬದಿಯ ಎಡಗೈ ನಂತರ ಮುಂಬದಿಯ ಬಲಗೈ ನಲ್ಲಿ ಇರುವಂತೆ ನೀಡಲಾಗಿದೆ.

1.ಕೇಶವ (ಶಂಕು, ಚಕ್ರ, ಗಧ, ಪದ್ಮ)
2.ನಾರಾಯಣ (ಪದ್ಮ, ಗಧ, ಚಕ್ರ, ಶಂಕು)
3.ಮಾಧವ (ಚಕ್ರ, ಶಂಕು, ಪದ್ಮ, ಗಧ)
4.ಗೋವಿಂದ (ಗಧ, ಪದ್ಮ, ಶಂಕು, ಚಕ್ರ)
5.ವಿಷ್ಣು (ಪದ್ಮ, ಶಂಕು, ಚಕ್ರ, ಗಧ)
6.ಮಧುಸೂದನ (ಶಂಕು, ಪದ್ಮ, ಗಧ, ಚಕ್ರ)
7.ತ್ರಿವಿಕ್ರಮ (ಗಧ, ಚಕ್ರ, ಶಂಕು, ಪದ್ಮ)
8.ವಾಮನ (ಚಕ್ರ, ಗಧ, ಪದ್ಮ, ಶಂಕು)
9.ಶ್ರೀಧರ (ಚಕ್ರ, ಗಧ, ಶಂಕು, ಪದ್ಮ)
10.ಹೃಶೀಕೇಶ (ಚಕ್ರ, ಪದ್ಮ, ಶಂಕು, ಗಧ)
11.ಪದ್ಮನಾಭ (ಪದ್ಮ, ಚಕ್ರ, ಗಧ, ಶಂಕು)
12.ದಾಮೋದರ (ಶಂಕು, ಗಧ, ಚಕ್ರ, ಪದ್ಮ)
13.ಸಂಕರ್ಷಣ (ಶಂಕು, ಪದ್ಮ, ಚಕ್ರ, ಗಧ)
14.ವಾಸುದೇವ (ಶಂಕು, ಚಕ್ರ, ಪದ್ಮ, ಗಧ)
15.ಪ್ರದ್ಯುಮ್ನ (ಶಂಕು, ಗಧ, ಪದ್ಮ, ಚಕ್ರ)
16.ಅನಿರುದ್ಧ (ಗಧ, ಶಂಕು, ಪದ್ಮ, ಚಕ್ರ)
17.ಪುರುಷೋತ್ತಮ (ಪದ್ಮ, ಶಂಕು, ಗಧ, ಚಕ್ರ)
18.ಅಧೋಕ್ಷಜ (ಗಧ, ಶಂಕು, ಚಕ್ರ, ಪದ್ಮ)
19.ನರಸಿಂಹ (ಪದ್ಮ, ಗಧ, ಶಂಕು, ಚಕ್ರ)
20.ಅಚ್ಯುತ (ಪದ್ಮ, ಚಕ್ರ, ಶಂಕು, ಗಧ)
21.ಜನಾರ್ಧನ (ಚಕ್ರ, ಶಂಕು, ಗಧ, ಪದ್ಮ)
22.ಉಪೇಂದ್ರ (ಗಧ, ಚಕ್ರ, ಪದ್ಮ, ಶಂಕು)
23.ಹರಿ (ಚಕ್ರ, ಪದ್ಮ, ಗಧ, ಶಂಕು)
24.ಶ್ರೀಕೃಷ್ಣ (ಗಧ, ಪದ್ಮ, ಚಕ್ರ, ಶಂಕು)

ಗಾಯಿತ್ರಿ ಮಂತ್ರದ 24 ಅಕ್ಷರಗಳೇ ಈ 24 ಕೇಶವನಾಮಗಳು
ಗಾಯಿತ್ರಿಯ ಮಂತ್ರದ ಪ್ರಕಾರ:
ತತ್ = ಕೇಶವ – ಸ್ಯ = ವಾಸುದೇವ
ಸ = ನಾರಾಯಣ – ಧೀ = ಸಂಕರ್ಷಣ
ವಿ = ಮಾಧವ – ಮ = ಪ್ರದ್ಯುಮ್ನ
ತು: = ಗೋವಿಂದ – ಹಿ = ಅನಿರುದ್ಧ
ವ = ವಿಷ್ಣು – ಧಿ = ಪುರುಷೋತ್ತಮ
ರೇ = ಮಧುಸೂಧನ – ಯೊ = ಅಧೋಕ್ಷಜ
ಣಿ = ತ್ರಿವಿಕ್ರಮ – ಯೋ= ನಾರಸಿಂಹ
ಯಮ್= ವಾಮನ – ನ: = ಅಚ್ಯುತ
ಭರ್ = ಶ್ರೀಧರ – ಪ್ರ = ಜನಾರ್ಧನ
ಗ: = ಹೃಶೀಕೇಶ – ಚೋ = ಉಪೇಂದ್ರ
ದೇ = ಪದ್ಮನಾಭ – ದ = ಹರಿ
ವ = ದಾಮೋಧರ – ಯಾತ್ = ಕೃಷ್ಣ

ತ್ರಿವಿಕ್ರಮ ಹಾಗೂ ವಾಮನ ರೂಪ ಒಂದೇ ಆಗಿರುವುದರಿಂದ ಉಚ್ಚಾರಣೆ ಮಾಡುವಾಗ ಣ್ಯಿಮ್ ೨೪ ಅಕ್ಷರಗಳು ಬರುವ ಹಾಗೆ ಉಚ್ಚಾರಣೆ ಮಾಡಬೇಕು ಭಗವಂತನದು 77 ಅಂತರ್ಯಾಮಿ ರೂಪಗಳು, ಅಕ್ಷರಗಳಿಂದ ಕರೆಯಿಸಿಕೊಳ್ಳುವ 51 ನಾಮಾತ್ಮಕ ರೂಪಗಳು, ಹಾಗೂ ಮೇಲೆ ಹೇಳಿರುವ 24 ರೂಪಾತ್ಮಕ ರೂಪಗಳು ಮತ್ತು ಇವೆಲ್ಲಕ್ಕಿಂತಲೂ, ಲಕ್ಷ್ಮಿಯಲ್ಲಿರುವ ರೂಪ, ಮತ್ತು ನಾರಾಯಣನಲ್ಲಿ ಲಕ್ಷ್ಮಿ ಇರುವ ರೂಪ.

ಇದನ್ನೂ ಓದಿ: Lord Vishnu: ಗುರುವಾರ ವಿಷ್ಣು ಪೂಜೆ ಮಾಡುವುದರಿಂದ ಸಿಗುವ ಫಲಗಳೇನು?