‘ಧನಾ’ತ್ಮಕತೆ ವೃದ್ಧಿ – ಮನೆಯ ತಿಜೋರಿಯಲ್ಲಿ ಈ ವಸ್ತುಗಳನ್ನಿಟ್ಟು ಪೂಜಿಸಿದರೆ ಧನ ಸಂಪತ್ತು ವೃದ್ಧಿಸುತ್ತದೆ

| Updated By: ಸಾಧು ಶ್ರೀನಾಥ್​

Updated on: Jan 08, 2022 | 6:26 AM

Astro Tips: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ನಿಯಮಗಳನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿ ಧನ ಸಂಪತ್ತು ವೃದ್ಧಿಸುತ್ತಿದೆ. ಲಕ್ಷ್ಮಿದೇವಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ. ಜೊತೆಗೆ ಲಕ್ಷ್ಮಿ ಪೂಜೆಯ ವೇಳೆ ಕರ್ಪೂರವನ್ನು ತಿಜೋರಿ ಇರುವ ಕೋಣೆಯಲ್ಲಿ ಹಚ್ಚುತ್ತಿದ್ದರೆ ನಕಾರಾತ್ಮಕತೆ ದೂರವಾಗಿ ‘ಧನಾ’ತ್ಮಕತೆ ವೃದ್ಧಿಸುತ್ತದೆ.

1 / 5
ಲಕ್ಷ್ಮಿ ಪೂಜೆಯಲ್ಲಿ  ವೀಳ್ಯದೆಲೆ -ಅಡಿಕೆ (Betel Nut):
ತಿಜೋರಿಯಲ್ಲಿ ಒಂದು ಚಿಕ್ಕ ಅಡಿಕೆ ಇಟ್ಟಿರಿ. ಇದನ್ನು ಆಗಾಗ ಬದಲಾಯಿಸುತ್ತಿರಿ. ಇದರ ಜೊತೆಗೆ ಎರಡು ವೀಳ್ಯದೆಲೆಗಳನ್ನು ಗಣೇಶ ಮತ್ತು ಗೌರಿಯ ರೂಪವೆಂದು ಭಾವಿಸಿ, ತಿಜೋರಿಯಲ್ಲಿ ಇಡಿ. ಅಡಿಕೆಯನ್ನು ಇಡುವ ಮೊದಲು ಈ ಎರಡು ವೀಳ್ಯದೆಲೆಗಳಿಗೆ ಪೂಜೆ ಮಾಡಿ. ಇದರಿಂದ ಲಕ್ಷ್ಮಿ ದೇವಿ ಮನೆಯಲ್ಲಿ ಕಾಯಂ ಆಗಿ ನೆಲೆಯೂರುತ್ತಾಳೆ.

ಲಕ್ಷ್ಮಿ ಪೂಜೆಯಲ್ಲಿ ವೀಳ್ಯದೆಲೆ -ಅಡಿಕೆ (Betel Nut): ತಿಜೋರಿಯಲ್ಲಿ ಒಂದು ಚಿಕ್ಕ ಅಡಿಕೆ ಇಟ್ಟಿರಿ. ಇದನ್ನು ಆಗಾಗ ಬದಲಾಯಿಸುತ್ತಿರಿ. ಇದರ ಜೊತೆಗೆ ಎರಡು ವೀಳ್ಯದೆಲೆಗಳನ್ನು ಗಣೇಶ ಮತ್ತು ಗೌರಿಯ ರೂಪವೆಂದು ಭಾವಿಸಿ, ತಿಜೋರಿಯಲ್ಲಿ ಇಡಿ. ಅಡಿಕೆಯನ್ನು ಇಡುವ ಮೊದಲು ಈ ಎರಡು ವೀಳ್ಯದೆಲೆಗಳಿಗೆ ಪೂಜೆ ಮಾಡಿ. ಇದರಿಂದ ಲಕ್ಷ್ಮಿ ದೇವಿ ಮನೆಯಲ್ಲಿ ಕಾಯಂ ಆಗಿ ನೆಲೆಯೂರುತ್ತಾಳೆ.

2 / 5
ಲಕ್ಷ್ಮಿ ಪೂಜೆಯಲ್ಲಿ ಗೋಮತಿ ಚಕ್ರ (Gomti Chakra):
ಸಿದ್ದ ಗೋಮತಿ ಚಕ್ರವನ್ನು ಶುಕ್ರವಾರದಂದು ಕೆಂಪು ಬಟ್ಟೆಯಲ್ಲಿ ಸುತ್ತಿಟ್ಟು ತಿಜೋರಿಯಲ್ಲಿಡಬೇಕು. ಇದರಿಂದ ನಿಮಗೆ ಎಂದಿಗೂ ಹಣದ ಕೊರತೆ ಎದುರಾಗದು. ವ್ಯಾಪಾರದಲ್ಲಿ ಸದಾ ಲಕ್ಷ್ಮಿ ಕಟಾಕ್ಷ ಲಭಿಸುತ್ತಿರುತ್ತದೆ.

ಲಕ್ಷ್ಮಿ ಪೂಜೆಯಲ್ಲಿ ಗೋಮತಿ ಚಕ್ರ (Gomti Chakra): ಸಿದ್ದ ಗೋಮತಿ ಚಕ್ರವನ್ನು ಶುಕ್ರವಾರದಂದು ಕೆಂಪು ಬಟ್ಟೆಯಲ್ಲಿ ಸುತ್ತಿಟ್ಟು ತಿಜೋರಿಯಲ್ಲಿಡಬೇಕು. ಇದರಿಂದ ನಿಮಗೆ ಎಂದಿಗೂ ಹಣದ ಕೊರತೆ ಎದುರಾಗದು. ವ್ಯಾಪಾರದಲ್ಲಿ ಸದಾ ಲಕ್ಷ್ಮಿ ಕಟಾಕ್ಷ ಲಭಿಸುತ್ತಿರುತ್ತದೆ.

3 / 5
ಲಕ್ಷ್ಮಿ ಪೂಜೆಯಲ್ಲಿ ಕುಬೇರ ಯಂತ್ರ (Kuber Yantra):
ನಿಮ್ಮ ಮನೆಯಲ್ಲಿ ತಿಜೋರಿ ತುಂಬಬೇಕು ಅಂದರೆ ಕುಬೇರ ಯಂತ್ರ ಬಳಸಿ. ಕುಬೇರ ಯಂತ್ರ ಅಥವಾ ಶ್ರೀ ಯಂತ್ರವನ್ನು ತಿಜೋರಿ ಇಡಬೇಕು. ವಾರಕ್ಕೊಮ್ಮೆ ಯಂತ್ರಕ್ಕೆ ನಿಯಮಿತವಾಗಿ ಪೂಜೆ ಸಲ್ಲಿಸುತ್ತಿರಬೇಕು.

ಲಕ್ಷ್ಮಿ ಪೂಜೆಯಲ್ಲಿ ಕುಬೇರ ಯಂತ್ರ (Kuber Yantra): ನಿಮ್ಮ ಮನೆಯಲ್ಲಿ ತಿಜೋರಿ ತುಂಬಬೇಕು ಅಂದರೆ ಕುಬೇರ ಯಂತ್ರ ಬಳಸಿ. ಕುಬೇರ ಯಂತ್ರ ಅಥವಾ ಶ್ರೀ ಯಂತ್ರವನ್ನು ತಿಜೋರಿ ಇಡಬೇಕು. ವಾರಕ್ಕೊಮ್ಮೆ ಯಂತ್ರಕ್ಕೆ ನಿಯಮಿತವಾಗಿ ಪೂಜೆ ಸಲ್ಲಿಸುತ್ತಿರಬೇಕು.

4 / 5
ಅರಿಶಿನ ಕೊಂಬು (Turmeric Root):
ಕುಟುಂಬದವರ ಮೇಲೆ ಲಕ್ಷ್ಮಿ ದೇವಿ ಕೃಪಾಕಟಾಕ್ಷ ಬೀರಬೇಕು ಅಂತಾದರೆ ತಿಜೋರಿ ಅಥವಾ ಹಣವನ್ನು ಒಡುವ ಕೊಠಡಿಯಲ್ಲಿ ಅರಿಶಿನದ ಕೊಂಬನ್ನು ಇಟ್ಟಿರಬೇಕು. ಇದರಿಂದ ಧನ ಲಕ್ಷ್ಮಿ ಹೇರಳವಾಗಿ ಪ್ರಾಪ್ತಿಯಾಗುತ್ತದೆ.

ಅರಿಶಿನ ಕೊಂಬು (Turmeric Root): ಕುಟುಂಬದವರ ಮೇಲೆ ಲಕ್ಷ್ಮಿ ದೇವಿ ಕೃಪಾಕಟಾಕ್ಷ ಬೀರಬೇಕು ಅಂತಾದರೆ ತಿಜೋರಿ ಅಥವಾ ಹಣವನ್ನು ಒಡುವ ಕೊಠಡಿಯಲ್ಲಿ ಅರಿಶಿನದ ಕೊಂಬನ್ನು ಇಟ್ಟಿರಬೇಕು. ಇದರಿಂದ ಧನ ಲಕ್ಷ್ಮಿ ಹೇರಳವಾಗಿ ಪ್ರಾಪ್ತಿಯಾಗುತ್ತದೆ.

5 / 5
ಪ್ರದಕ್ಷಿಣಾಕಾರ ಶಂಖ (Clockwise Conch):
ಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕಾಗಿ ಪ್ರದಕ್ಷಿಣಾಕಾರ ಶಂಖವನ್ನು ತಿಜೋರಿಯಲ್ಲಿ ಇಡಬೇಕು. ಇದರಿಂದ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

ಪ್ರದಕ್ಷಿಣಾಕಾರ ಶಂಖ (Clockwise Conch): ಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕಾಗಿ ಪ್ರದಕ್ಷಿಣಾಕಾರ ಶಂಖವನ್ನು ತಿಜೋರಿಯಲ್ಲಿ ಇಡಬೇಕು. ಇದರಿಂದ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

Published On - 6:06 am, Sat, 8 January 22