ಅಗಸ್ತ್ಯ ಮುನಿಗಳು ಕಾವೇರಿಯನ್ನು ಕಮಂಡಲದಲ್ಲಿ ಬಂಧಿಸಿದ್ದು ಯಾಕೆ? ತಿಳಿಯಿರಿ ಪವಿತ್ರ ಕಾವೇರಿ ನದಿಯ ಪುರಾಣ ಕಥೆ

| Updated By: ಆಯೇಷಾ ಬಾನು

Updated on: Jan 05, 2022 | 7:15 AM

ಪ್ರತಿ ವರ್ಷವೂ ತುಲಾ ಸಂಕ್ರಮಣದಂದು ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಸಂದರ್ಭದಲ್ಲಿ ಕಾವೇರಿಯು ತೀರ್ಥರೂಪಿಣಿಯಾಗಿ ಉಕ್ಕಿ ಹರಿದು ಭಕ್ತರಿಗೆ ಕಾಣಿಸಿಕೊಳ್ಳುತ್ತಾಳೆ. ಕಾವೇರಿಯ ಪವಿತ್ರಜಲದಲ್ಲಿ ಮಿಂದು ಭಕ್ತರು ಪಾವನರಾಗುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ನದಿಗಳಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ.

ಅಗಸ್ತ್ಯ ಮುನಿಗಳು ಕಾವೇರಿಯನ್ನು ಕಮಂಡಲದಲ್ಲಿ ಬಂಧಿಸಿದ್ದು ಯಾಕೆ? ತಿಳಿಯಿರಿ ಪವಿತ್ರ ಕಾವೇರಿ ನದಿಯ ಪುರಾಣ ಕಥೆ
ಅಗಸ್ತ್ಯ ಮುನಿಗಳು ಕಾವೇರಿಯನ್ನು ಕಮಂಡಲದಲ್ಲಿ ಬಂಧಿಸಿದ್ದು ಯಾಕೆ? ತಿಳಿಯಿರಿ ಪವಿತ್ರ ಕಾವೇರಿ ನದಿಯ ಪುರಾಣ ಕಥೆ
Follow us on

ಭಾರತದಲ್ಲಿರುವಂತಹ ಪ್ರತಿಯೊಂದು ನದಿಯ ಹಿಂದೆಯೂ ಒಂದೊಂದು ಪುರಾಣ ಕಥೆ ಇದೆ. ದಕ್ಷಿಣ ಭಾರತದಲ್ಲಿ ಹರಿಯುವಂತಹ ಪುಣ್ಯ ನದಿಗೂ ಇಂತಹುದೇ ಒಂದು ಹಿನ್ನೆಲೆ ಇದೆ. ನದಿ ರೂಪವಾಗಬೇಕೆಂದು ಪರಮೇಶ್ವರನಿಂದಲೇ ವರವನ್ನು ಪಡೆದವಳು ಕಾವೇರಿ.

ಅಗಸ್ತ್ಯ ಮುನಿಗೆ ತನ್ನ ತಪ್ಪಿನ ಅರಿವಾದಾಗ ಪತ್ನಿಯನ್ನು ಕುರಿತು ಎಲೈ ಸುಂದರಿಯೇ ಪಾವನಳೇ, ಪಾಪನಾಶಿನಿ ಕವೇರ ಕುವರಿಯೇ ನಾನು ನಿನ್ನನ್ನು ಉಪೇಕ್ಷೆ ಮಾಡಿದ ಪರಿಣಾಮವಾಗಿ ನೀನು ನಿರ್ಧರಿಸಿದಂತೆ ನದಿ ರೂಪ ತಾಳಿ ಲೋಕ ಕಲ್ಯಾಣ ಮಾಡುವಂತವಳಾಗು, ಆದರೆ ಇನ್ನೊಂದು ರೂಪದಲ್ಲಿ ನನಗೆ ಮಡದಿಯಾಗಿರುವಂತೆ ಕೇಳಿಕೊಂಡಾಗ ಕಾವೇರಿ ಸಮ್ಮತಿಸಿ ತನ್ನ ತನುವನ್ನು ಎರಡಾಗಿ ಪರಿವರ್ತಿಸಿ ಮೊದಲಿನ ಭಾಗ ಲೋಪಾಮುದ್ರೆಯಾಗಿ ಅಗಸ್ತ್ಯನ ಪತ್ನಿಯಾದಳು. ಇನ್ನೊಂದು ಭಾಗ ಕಾವೇರಿ ಎಂಬ ಹೆಸರಿನಿಂದ ನದಿರೂಪವನ್ನು ತಳೆದು ಪವಿತ್ರ ನದಿಯಾಗಿ ತನ್ನ ಸಖಿಯಾದ ಮಣಿಕರ್ಣಿಕೆಯೊಡನೆ ಸಮುದ್ರವನ್ನು ಸೇರಿದಳು.

ಇತ್ತ ಸುಯಜ್ಞನೆಂಬ ಮಕ್ಕಳಿಲ್ಲದ ವಿಷ್ಣು ಭಕ್ತ ತಪಸ್ಸನ್ನು ಆಚರಿಸಿ ವಿಷ್ಣುವನ್ನು ಒಲಿಸಿಕೊಂಡು ತನ್ನ ಕೋರಿಕೆಯಂತೆ ವರವಾಗಿ ಸುಜ್ಯೋತಿ ಎಂಬ ಕನ್ನಿಕೆಯನ್ನು ಮಗಳಾಗಿ ಪಡೆದು ನೆಲೆಸಿದ್ದನು. ಆ ಸಂದರ್ಭದಲ್ಲಿ ಇಂದ್ರನು ಆಶ್ರಮಕ್ಕೆ ಬಂದು ಸುಜ್ಯೋತಿಯನ್ನು ಕಂಡು ಮೋಹಿತನಾಗಿ ತನ್ನನ್ನು ವರಿಸುವಂತೆ ಕೇಳಿಕೊಂಡನು. ಇದನ್ನು ಒಪ್ಪದ ಸುಜ್ಯೋತಿ ತನಗೆ ನದಿ ರೂಪ ತಾಳುವ ಶಕ್ತಿಯನ್ನು ಪಡೆದಿದ್ದರೂ ಇಂದ್ರನ ಶಾಪಕ್ಕೆ ಗುರಿಯಾಗಿ ಜಲಶೂನ್ಯಳಾಗಿದ್ದಳು. ಶಾಪಕ್ಕೆ ಪರಿಹಾರವಾಗಿ ಕಾವೇರಿಯನ್ನು ದರ್ಶನ ಮಾಡಿದರೆ ಶಾಪ ವಿಮೋಚನೆಯಾಗುವುದು ಎಂದು ಅರಿತ ಸುಜ್ಯೋತಿ ತನ್ನ ಸಖಿಯಾದ ಕನ್ನಿಕೆಯೊಡನೆ ಬ್ರಹ್ಮಗಿರಿಯಿಂದ ಕಾವೇರಿ ನದಿರೂಪವಾಗಿ ಬರುತ್ತಿರುವಾಗ ಆಕೆಯನ್ನು ದರ್ಶನ ಮಾಡಿ ತನ್ನ ಮನದ ಬಯಕೆಯನ್ನು ಹೇಳಿಕೊಂಡು ಬಳಿಕ ಕಾವೇರಿಯ ಜೊತೆ ಹರಿದು ಸಮುದ್ರವನ್ನು ಸೇರುತ್ತಾಳೆ.

ಪ್ರತಿ ವರ್ಷವೂ ತುಲಾ ಸಂಕ್ರಮಣದಂದು ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಸಂದರ್ಭದಲ್ಲಿ ಕಾವೇರಿಯು ತೀರ್ಥರೂಪಿಣಿಯಾಗಿ ಉಕ್ಕಿ ಹರಿದು ಭಕ್ತರಿಗೆ ಕಾಣಿಸಿಕೊಳ್ಳುತ್ತಾಳೆ. ಕಾವೇರಿಯ ಪವಿತ್ರಜಲದಲ್ಲಿ ಮಿಂದು ಭಕ್ತರು ಪಾವನರಾಗುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ನದಿಗಳಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಏಳು ಪುಣ್ಯ ನದಿಗಳಾದ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ ನದಿಗಳಿಗೆ ಹಿಂದೂ ಧರ್ಮದಲ್ಲಿ ಬಹಳ ಪವಿತ್ರವಾದ ಸ್ಥಾನವಿದೆ. ದಕ್ಷಿಣ ಭಾರತದಲ್ಲಿ ಹುಟ್ಟಿ ಜನರ ಜೀವನದಿಯಾಗಿ ಹರಿಯುವ ಕಾವೇರಿಯ ಉಗಮ ಸ್ಥಾನವಿರುವುದು ಕಾವೇರಿಯಲ್ಲಿ. ವರ್ಷಕ್ಕೊಮ್ಮೆ ನಡೆಯುವ ತುಲಾ ಸಂಕ್ರಮಣದಂದು ತಲಕಾವೇರಿಯ ಪವಿತ್ರ ತೀರ್ಥಕುಂಡಿಕೆಯಲ್ಲಿ ಉದ್ಭವವಾಗುತ್ತಾಳೆ ಕಾವೇರಿ.

ಪುರಾಣ ಕಥೆ
ಸ್ಕಂದ ಪುರಾಣದ ಉಲ್ಲೇಖದಂತೆ, ಬ್ರಹ್ಮಗಿರಿಯಲ್ಲಿ ಕವೇರ ಮುನಿಯು ಏಕಾಗ್ರತೆಯಿಂದ ಸಾವಿರ ವರ್ಷಗಳವರೆಗೆ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಿದ್ದನು. ತಪಸ್ಸನ್ನು ಆಚರಿಸುವಾಗ ಆತನ ದೇಹದಿಂದ ಅದ್ಭುತವಾದ ಅಗ್ನಿಯು ಉತ್ಪನ್ನವಾಗಿ, ಆ ತಪೋಜ್ವಾಲೆಯು ಮೂರೂ ಲೋಕಗಳನ್ನು ತಲ್ಲಣಗೊಳಿಸಿತ್ತು. ಮುನಿಗಳೂ ಪಿತೃದೇವತೆಗಳೂ ಬ್ರಹ್ಮದೇವನಲ್ಲಿ ಜ್ವಾಲೆಯಿಂದ ಪಾರು ಮಾಡುವಂತೆ ಬೇಡಿಕೊಂಡರು.

ಬ್ರಹ್ಮನು ಕವೇರ ಮುನಿಯ ಬಳಿಗೆ ಬಂದು ತನ್ನ ಕೈನೀರಿನಿಂದ ಸಂಪ್ರೋಕ್ಷಣೆ ಮಾಡಿದ ನಂತರ ತಪೋಜ್ವಾಲೆಯು ಶಮನಗೊಂಡಿತು. ಬಳಿಕ ಬ್ರಹ್ಮನು ತಪಸ್ಸಿನ ಉದ್ದೇಶವೇನೆಂದು ಕೇಳಿದಾಗ ‘ಮಕ್ಕಳಿಲ್ಲದ ನನಗೆ ಸಂತಾನ ಭಾಗ್ಯವನ್ನು ಕರುಣಿಸು’ ಎಂದು ಕೇಳುತ್ತಾನೆ. ಬ್ರಹ್ಮ ದೇವನು ಕವೇರ ಮುನಿಯನ್ನು ಕುರಿತು ‘ ಹಿಂದಿನ ಜನ್ಮದಲ್ಲಿ ನೀನು ಮಾಡಿರುವ ತಪ್ಪಿನಿಂದ ನಿನಗೆ ಮಕ್ಕಳ ಭಾಗ್ಯವಿಲ್ಲ, ಚಿಂತಿಸಬೇಡ ನಿನಗೆ ಲೋಪಾಮುದ್ರೆಯೆಂಬ ಕುಲೋದ್ಧಾರಕಳಾದ ಕನ್ನಿಕೆಯನ್ನು ದಯಪಾಲಿಸುತ್ತೇನೆ’ ಎಂದು ಅನುಗ್ರಹಿಸುತ್ತಾನೆ. ಸಂತುಷ್ಟನಾದ ಕವೇರನು ಪತ್ನಿಯೊಡಗೂಡಿ ಲೋಪಮುದ್ರೆಯನ್ನು ಸ್ವೀಕರಿಸುತ್ತಾನೆ.

ಜಗತ್ತಿಗೆ ಕ್ಷೇಮವಾಗುವಂತೆ ಸರ್ವ ಪ್ರಾಣಿ ಪಕ್ಷಿಗಳು ಮಾನವ ಕುಲಕ್ಕೆ ಕಲ್ಯಾಣ ಉಂಟುಮಾಡುವ ವಿಶೇಷ ತಪಃಶಕ್ತಿಯಿಂದ ನದಿಯಾಗುವಂತೆ ಬ್ರಹ್ಮದೇವನಿಂದ ಅನುಗ್ರಹಿತಳಾದ ಲೋಪಾಮುದ್ರೆ ಕವೇರಮುನಿಯ ಆಶ್ರಮದಲ್ಲಿ ‘ಕಾವೇರಿ’ ಯಾಗಿ ಬೆಳೆಯುತ್ತಿದ್ದಳು ಕವೇರ ಮುನಿಯ ಅಂತ್ಯಕಾಲ ಸಮೀಪಿಸಿ ತನ್ನ ಪತ್ನಿ ಸಮೇತ ದೇಹ ತ್ಯಾಗ ಮಾಡಿ ಬ್ರಹ್ಮಲೋಕಕ್ಕೆ ತೆರಳುತ್ತಾನೆ. ಲೋಪಾಮುದ್ರೆ ತನ್ನ ತಪಸ್ಸಿನಿಂದ ಪರಮೇಶ್ವರನನ್ನು ಮೆಚ್ಚಿಸಿ ನಿರ್ಮಲವಾದ ನದಿರೂಪವನ್ನು ಹೊಂದುವಂತಹ ವರವನ್ನು ಪಡೆದುಕೊಂಡಳು.

ಒಂದು ದಿನ ಅಗಸ್ತ್ಯ ಮುನಿಯು ತನ್ನ ಶಿಷ್ಯನೊಂದಿಗೆ ಋಷಿ ಆಶ್ರಮಗಳಿಂದ ಕಂಗೊಳಿಸುತ್ತಿರುವ ಬ್ರಹ್ಮಗಿರಿಗೆ ಬಂದು ಆತಿಥ್ಯವನ್ನು ಸ್ವೀಕರಿಸುತ್ತಾನೆ. ಆಶ್ರಮದಲ್ಲಿ ಕಾವೇರಿಯನ್ನು ಕಂಡು ಸಂತತಿ ಗೋಸ್ಕರ ಕಾವೇರಿಯನ್ನು ವಿವಾಹವಾಗುವ ತನ್ನಮನದ ಇಚ್ಚೆಯನ್ನು ಕಾವೇರಿಯಲ್ಲಿ ಕೇಳಿಕೊಂಡಾಗ ಋಷಿವಚನವನ್ನು ಉಲ್ಲಂಘಿಸಬಾರದೆಂದು ನಿರ್ಧರಿಸಿ ಮುನಿಯ ಕೋರಿಕೆಯನ್ನು ಒಪ್ಪಿ ಮುನಿಯನ್ನು ವಿವಾಹವಾಗಿ ಬ್ರಹ್ಮಗಿರಿ ಯಲ್ಲಿ ವಾಸವಾಗಿದ್ದಳು

ಕಾವೇರಿ ತಾನು ನದಿಯಾಗಿ ಹರಿದು ಲೋಕಕಲ್ಯಾಣ ಮಾಡಬೇಕೆಂಬ ತನ್ನ ಮನದ ಬಯಕೆಯನ್ನು ಅಗಸ್ತ್ಯನ ಮುಂದೆ ಇಟ್ಟು ತನಗೆ ಜಲರೂಪಿಯಾಗಲು ವರವನ್ನು ನೀಡಿ ಅನುಗ್ರಹಿಸಲು ಕೇಳಿಕೊಂಡಳು. ಆದರೆ ಲೋಪಾಮುದ್ರೆ ಕೋರಿಕೆಯನ್ನು ಅಗಸ್ತ್ಯ ಮುನಿ ಪುರಸ್ಕರಿಸಲಿಲ್ಲ. ನಿನಗೆ ವರವನ್ನು ಈಗ ನೀಡಲಾರೆ. ಮುಂದೊಂದು ದಿನ ನೀಡುತ್ತೇನೆ ಎಂದು ಹೇಳಿದನು. ಇದರಿಂದ ಕೋಪಗೊಂಡ ಕಾವೇರಿಯು ‘ಎಲೆ ಅಗಸ್ತ್ಯನೇ ನೀನು ನನ್ನನ್ನು ಉಪೇಕ್ಷೆ ಮಾಡಿದ ಕ್ಷಣವೇ ನಾನು ನದಿಯಾಗಿ ಹರಿಯುತ್ತೇನೆ’ ಎಂದು ಎಚ್ಚರಿಸಿದಳು. ಇದರಿಂದ ಆತಂಕಿತನಾದ ಅಗಸ್ತ್ಯ ಮುನಿಯ ತನ್ನ ತಪಸ್ಸಿನ ಶಕ್ತಿಯಿಂದ ಕಾವೇರಿಯನ್ನು ತನ್ನ ಕಮಂಡಲುವಿನ ಒಳಗೆ ಬಂಧಿಸಿಡುತ್ತಾನೆ.

ಅಗಸ್ತ್ಯಮುನಿಯ ಕನಕಧಾರಕ್ಕೆ ಸಂಧ್ಯಾವಂದನೆಗೆ ತೆರಳುವ ಸಂದರ್ಭದಲ್ಲಿ ಕಮಂಡಲುವನ್ನು ತನ್ನ ಶಿಷ್ಯರ ಕೈಯಲ್ಲಿ ಕೊಟ್ಟು ಹೊರಟು ಹೋದನು .ಇದೆ ಸಂದರ್ಭವನ್ನು ಉಪಯೋಗಿಸಿಕೊಂಡು ಕಾವೇರಿಯು ಕೋಪದಿಂದ ಕಣ್ಣನ್ನು ಕೆರಳಿಸುತ್ತಾ ಜಲ ರೂಪಿಯಾಗಿ ಕಮಂಡಲುವಿನಿಂದ ಜಾರಿ ಬಿದ್ದು ಜಲರೂಪಿಯಾಗಿ ಹರಿಯತೊಡಗಿದಳು ಇದನ್ನು ಕಂಡ ಶಿಷ್ಯರು ಬೆಚ್ಚಿ ಬಿದ್ದು ಆಕೆಯನ್ನು ತಡೆಯಲು ಯತ್ನಿಸಿದಾಗ ಕಾವೇರಿಯು ಕಣ್ಮರೆಯಾಗಿ ಗುಪ್ತಗಾಮಿನಿಯಾಗಿ ಹರಿಯತೊಡಗಿದಳು ಇದನ್ನು ಅರಿತ ಅಗಸ್ತ್ಯಮುನಿ ಆಗಮಿಸಿ ಕಂಡಾಗ ಕಾವೇರಿಯು ಜಲರೂಪಿಯಾಗಿ ಮೂರು ಯೋಜನ ದೂರ ಹರಿದು ದಾಟಿ ಹೋಗಿಯಾಗಿತ್ತು.

ಇದನ್ನೂ ಓದಿ: ಗಂಗಾನದಿಯಲ್ಲಿ ಏಕಾಂಗಿಯಾಗಿ ಪವಿತ್ರ ಸ್ನಾನ ಮಾಡುವವರು ಹಿಂದುತ್ವವಾದಿ; ರಾಹುಲ್ ಗಾಂಧಿ ಹೊಸ ವ್ಯಾಖ್ಯಾನ