Datta Jayanti 2022: ದತ್ತಜಯಂತಿ ಮಹತ್ವ ಮತ್ತು ತಾತ್ವಿಕ ಹಿನ್ನೆಲೆ, ದತ್ತಾರಾಧನೆ ಮಾಡುವುದರಿಂದ ಆಗುವ ಲಾಭಗಳೇನು?

Datta Jayanti: ದತ್ತಾರಾಧನೆ ಮಾಡುವುದರಿಂದ ಸಂತಾನಪ್ರಾಪ್ತಿ, ಪಿತೃಕೋಪ, ಮನೋರೋಗ, ವಿವಾಹ ಸಂಬಂಧಿತ ಸಮಸ್ಯೆಗಳು ಶೀಘ್ರವಾಗಿ ಪರಿಹಾರವಾಗುತ್ತದೆ. ದತ್ತಾತ್ರೇಯರ ಸೇವೆಯನ್ನು ಗಾಣಗಾಪುರ, ಚಿಕ್ಕಮಗಳೂರಿನ ದತ್ತಕ್ಷೇತ್ರ, ಸಾಗರದ ವರದಹಳ್ಳಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮಾಡಬಹುದು.

Datta Jayanti 2022: ದತ್ತಜಯಂತಿ ಮಹತ್ವ ಮತ್ತು ತಾತ್ವಿಕ ಹಿನ್ನೆಲೆ, ದತ್ತಾರಾಧನೆ ಮಾಡುವುದರಿಂದ ಆಗುವ ಲಾಭಗಳೇನು?
Datta Jayanti 2022
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 06, 2022 | 7:05 AM

ಈ ವರ್ಷ ಬುಧವಾರದಂದು (7/12/22) ದತ್ತಜಯಂತಿ ದಿನವನ್ನು ಆಚರಣೆ ಮಾಡಲಾಗುತ್ತದೆ. ದತ್ತಜಯಂತಿಯಂದು ದತ್ತಾರಾಧನೆ ಮಾಡುವುದರಿಂದ ಸಂತಾನಪ್ರಾಪ್ತಿ, ಪಿತೃಕೋಪ, ಮನೋರೋಗ, ವಿವಾಹ ಸಂಬಂಧಿತ ಸಮಸ್ಯೆಗಳು ಶೀಘ್ರವಾಗಿ ಪರಿಹಾರವಾಗುತ್ತದೆ. ದತ್ತಾತ್ರೇಯರ ಸೇವೆಯನ್ನು ಗಾಣಗಾಪುರ, ಚಿಕ್ಕಮಗಳೂರಿನ ದತ್ತಕ್ಷೇತ್ರ, ಸಾಗರದ ವರದಹಳ್ಳಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಮಾಡಬಹುದು. ಅಲ್ಲದೇ ನಮ್ಮ ಮನೆಯಲ್ಲೂ ದತ್ತವ್ರತವನ್ನು ಮಾಡಬಹುದು. ಮಾರ್ಗಶೀರ್ಷ ಮಾಸದ ಹುಣ್ಣಿಮೆಯಂದು ದತ್ತಜಯಂತೀ. ದತ್ತಜಯಂತಿಯಂದು ಪ್ರಾತಃಕಾಲದಲ್ಲಿ ಬೇಗನೆ ಸ್ನಾನಾದಗಳನ್ನು ಮುಗಿಸಿ ಶುಚಿಯಾಗಿ ಮನೆಯಲ್ಲಿ ಕಲಶವನ್ನು ಸ್ಥಾಪಿಸಿ ಅದಕ್ಕೆ ದತ್ತಮಂತ್ರದಿಂದ ಪೂಜೆ ಮಾಡಿ , ಕೇಸರಿ (ತ್ಯಾಗದ ಬಣ್ಣ) ಬಣ್ಣದ ದಾರವನ್ನು ಮನೆಯವರೆಲ್ಲಾ ಹಾಗೂ ತಮ್ಮ ಆಪ್ತರಿಗೆಲ್ಲಾ ಪರಸ್ಪರ ಅನ್ಯೋನ್ಯತೆಯಿಂದ ಕಟ್ಟಿಕೊಂಡು ಪ್ರಸಾದವನ್ನು ಸ್ವೀಕರಿಸಿ. ಹಾಗೆಯೇ ಈ ದಿನದಂದು ಶ್ರೀಗುರುಚರಿತ್ರೆಯ ಪಾರಾಯಣವನ್ನು ಎಷ್ಟು ಸಾಧ್ಯವೋ ಅಷ್ಟು ಮಾಡಿರಿ. ಸಾತ್ವಿಕ ವ್ಯಕ್ತಿತ್ವವುಳ್ಳ ಉತ್ತಮರಿಗೆ ಸಾಧ್ಯವಾದಮಟ್ಟಿಗೆ ದಾನಮಾಡಿರಿ. ಅಹಂಕಾರವನ್ನು ಬಿಟ್ಟು ಏಕತಾಮನೋಭಾವ ಸಾರವುದೇ ಈ ದತ್ತಾವತಾರದ ಮಹಿಮೆ.

ಜಗತ್ತಿನಲ್ಲಿ ಅಂತಸ್ಸತ್ವ ಹೆಚ್ಚು ಮಾಡುವ ಸಲುವಾಗಿ ಭಗವಂತ ಬೇರೆ ಬೇರೆ ಕಾರಣಗಳಿಂದ ವಿಶಿಷ್ಟ ರೀತಿಯಲ್ಲಿ ಅವತಾರವನ್ನು ಎತ್ತುತ್ತಾನೆ ಎಂದು ನಾವು ಕೇಳಿದ್ದೇವೆ ಮತ್ತು ಓದಿದ್ದೇವೆ. ಮಹಾ ಸಂಕಲ್ಪದೊಂದಿಗೆ ಅಥವಾ ಮಹತ್ತರ ಸಾಧನೆ ಮಾಡಿದ ವ್ಯಕ್ತಿಗಳ ಅಥವಾ ಶಕ್ತಿಗಳ ಜನ್ಮಕಾಲವನ್ನು ನಾವು ಜಯಂತೀ ಎಂಬ ಹೆಸರನ್ನಿಟ್ಟು ಆಚರಿಸುತ್ತೇವೆ. ಭಗವಂತ ಭಗವದ್ಗೀತೆಯಲ್ಲಿ ಮಾಸಾನಾಂ ಮಾರ್ಗಶೀರ್ಷೋಸ್ಮಿ” ಎಂದಿದ್ದಾನೆ. ಅದರಿಂದಲೇ ನಾವು ತಿಳಿಯಬೇಕು ಈ ಮಾಸ ಅತ್ಯಂತ ಶ್ರೇಷ್ಠ ಎಂದು. ಭಗವಂತ ಈ ಮಾಸದಲ್ಲಿ ತಾತ್ವಿಕ ಚಿಂತನೆಗೆ ಮತ್ತು ಆತ್ಮೋದ್ಧಾರಕ್ಕೆ ಬೇಕಾದ ತತ್ವವನ್ನು ಮತ್ತು ಅದನ್ನು ಜನರಿಗೆ ತಲುಪಿಸುವ ಸಲುವಾಗಿ ಅವತಾರವನ್ನು ಎತ್ತಿದ್ದಾನೆ. ಅದೇ ದತ್ತನ ಅವತಾರ.

ಅನುಸೂಯಾ ಮತ್ತು ಅತ್ರಿ ಮಹರ್ಷಿಗಳ ಮಗನೇ ಈ ದತ್ತ. ಅತ್ರಿಯ ಮಗನಾದ್ದರಿಂದ ದತ್ತಾತ್ರೇಯ ಎಂಬ ಅಭಿಧಾನ. ಅನುಸೂಯಾದೇವಿ ಅತ್ಯಂತ ಸಾಧ್ವಿ. ದೇವಭಕ್ತಳಾದ ಇವಳನ್ನು ಪರೀಕ್ಷಿಸುವ ಸಲುವಾಗಿ ತ್ರಿಮೂರ್ತಿಯರ ಪತ್ನಿಯರಾದ ಸರಸ್ವತೀ, ಲಕ್ಷ್ಮೀ, ಪಾರ್ವತೀಯು ತ್ರಿಮೂರ್ತಿಗಳಲ್ಲಿ ಪ್ರಾರ್ಥಿಸುತ್ತಾರೆ. ಅವರ ಭಕ್ತಿಗೆ ಮಣಿದು ಬ್ರಹ್ಮ, ವಿಷ್ಣು, ಮಹೇಶ್ವರರು ಅತ್ಯಂತ ದಾನಶೀಲರಾದ ಈ ಮಹರ್ಷಿಗಳ ಆಶ್ರಮಕ್ಕೆ ಬರುತ್ತಾರೆ.

ಇವರು ಒಂದು ಸಂಪ್ರದಾಯವನ್ನು ಬೆಳೆಸಿಕೊಂಡವರು, ಯಾಚಕರಾಗಿ ಬಂದವರನ್ನು ಬರಿಗೈಯಲ್ಲಿ ಹಿಂದಿರುಗಿಸಬಾರದು ಎಂಬುದು. ಅಂತೆಯೇ ನಿಜರೂಪ ಮರೆಸಿ ತ್ರಿಮೂರ್ತಿಗಳು ಅತ್ರಿ ಅನುಸೂಯಾ ದಂಪತಿಗಳ ಬಳಿ ಬಂದು ಪಾಪ ನಿವಾರಣೆಗಾಗಿ ಪತಿವ್ರತೆಯಾದ ತಾವು ಎದೆಹಾಲು ಉಣಿಸಬೇಕು ಎಂದು ಕೇಳುತ್ತಾರೆ. ತನ್ನ ತಪೋಬಲದಿಂದ ನಿಜಾಂಶವನ್ನು ಅರಿತ ದಂಪತಿಗಳು ಒಂದಿನಿತೂ ಯೋಚಿಸದೇ ಒಪ್ಪಿಗೆ ನೀಡುತ್ತಾರೆ. ಹಾಗೆಯೇ ತಮ್ಮ ಅನುಷ್ಠಾನ ಬಲದಿಂದ ತಪೋಜಲವನ್ನು ಪ್ರೋಕ್ಷಿಸಿ ಅವರನ್ನು ಮಕ್ಕಳನ್ನಾಗಿಸಿ ತಾಯಿ ಅನುಸೂಯಾಳು ಅವರಿಗೆ ಎದೆಹಾಲು ಉಣಿಸುತ್ತಾರೆ.

ಇದನ್ನು ಓದಿ: ತ್ರಿಮೂರ್ತ ಸ್ವರೂಪಿ ದತ್ತಾತ್ರೇಯ ಜಯಂತಿ ಮಹತ್ವ, ಕಥೆ, ಪೂಜೆ ವಿಧಾನ ತಿಳಿಯಿರಿ

ಕಾಲ ಸಾಗುತ್ತಿರಲು ತಮ್ಮ ತಪ್ಪಿನ ಅರಿವಾದ ತ್ರಿಮೂರ್ತಿಯರ ಪತ್ನಿಯರು ತಾಯಿ ಅನುಸೂಯಾಳನ್ನು ಕೇಳಿಕೊಳ್ಳುತ್ತಾರೆ. ಆಗ ತ್ರಿಮೂರ್ತಿಗಳು ದತ್ತಾವತಾರದ ಉದ್ದೇಶವನ್ನು ವಿವರವಾಗಿ ತಿಳಿಸಿ ಅವರನ್ನು ಸಮಾಧಾನಿಸಿ ಕಳುಹಿಸುತ್ತಾರೆ. ಹೀಗೆ ಅವತಾರವಾದ ದತ್ತಾವತಾರವೇನಿದೆ ಇದು ಅತ್ಯಂತ ಮಹತ್ತರವಾದ ಸ್ಥಾನವನ್ನು ಮತ್ತು ಜನರಿಗೆ ಉಪಯೋಗವನ್ನು ನೀಡಿದೆ.

ಇಲ್ಲಿ ತ್ರಿಮೂರ್ತಿಗಳು ಒಂದಾಗಿದ್ದಾರೆ ಅಂದರೆ ಮನುಷ್ಯ ತನ್ನ ಕಾಯಿಕ, ವಾಚಿಕ, ಮಾನಸಿಕ (ದೇಹ, ಮಾತು, ಮನಸ್ಸು) ಈ ಮೂರೂ ತ್ರಿಕರಣಗಳನ್ನು ಏಕಮುಖವಾಗಿಸಿ ಧರ್ಮಕಾರ್ಯ ಮಾಡಿದರೆ ಮಾತ್ರ ಅದರ ಸಫಲತೆ. ಕೇವಲ ಧರ್ಮ ಮಾತ್ರವಲ್ಲ. ಅಭ್ಯಾಸ, ಸಾಧನೆ, ಕರ್ತವ್ಯ ಇತ್ಯಾದಿ ಎಲ್ಲಾ ಕಾರ್ಯಗಳಲ್ಲೂ ಮಾನವನು ಏಕಮುಖವಾಗಿಲ್ಲದಿದ್ದರೆ ಕಾರ್ಯದ ಸಾಫಲ್ಯ ಪೂರ್ಣವಾಗುವುದಿಲ್ಲ ಎಂಬುದನ್ನು ಈ ಅವತಾರ ಸಾರುತ್ತದೆ.

ಹಾಗೆಯೇ ದತ್ತ ಎಂಬ ಪದದ ಅರ್ಥವೇ ಕೊಡುವುದು ಎಂದು. ಅಂದರೆ ನಾವು ಜೀವನದಲ್ಲಿ ಸ್ವಾರ್ಥಿಗಳಾಗದೇ ಪರರ ಕಷ್ಟಗಳಿಗೆ ಸ್ಪಂದಿಸುತ್ತಾ ಮತ್ತು ನಮ್ಮ ಆತ್ಮೋದ್ಧಾರಕ್ಕಾಗಿ (ಆನಂದ ಭರಿತ ಜೀವನಕ್ಕಾಗಿ) ಭಗವದರ್ಪಣ ಭಾವದಿಂದ ಕಾರ್ಯವನ್ನು / ಕೆಲಸವನ್ನು / ಜೀವನವನ್ನು ಮಾಡಬೇಕು. ನಮ್ಮ ಸ್ವಾರ್ಥದ ಕಡಿಮೆಯಾದರೆ ಆನಂದದ ಉದಯವಾಗುತ್ತದೆ. ಅಂತಹ ತ್ಯಾಗವನ್ನು ಈ ದತ್ತಾವತಾರ ಸಾರಿದೆ. ಈ ಕಾರಣದಿಂದಲೇ ಗಾಣಗಾಪುರದಲ್ಲಿ ಪ್ರತಿಯೊಬ್ಬರೂ ಯಾಚಿಸಿ ಭಕ್ಷಿಸುತ್ತಾರೆ. ಕಾರಣವೇನೆಂದರೆ ಯಾಚಿಸಿವುದರಿಂದ ಅಹಂಕಾರ ನಾಶವಾಗುತ್ತದೆ. ಮನುಷ್ಯನಲ್ಲಿ ಅಹಂಕಾರ ನಾಶವಾದರೆ ಇನ್ನೇನು ಬೇಕು ಅಲ್ಲವೇ? ಅದು ಎಲ್ಲಾ ಸಾಧನೆಗೂ ನಾಂದಿ.

ಡಾ.ಕೇಶವಕಿರಣ ಬಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

kkmanasvi@gamail.com

ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ