ರಾಮನನ್ನು ಕಣ್ಣು ತುಂಬಿಕೊಳ್ಳುವ ಆಸೆ ಯಾರಿಗಿಲ್ಲಾ ಹೇಳಿ! ಪ್ರತಿಯೊಬ್ಬ ಹಿಂದೂವಿನ ಕನಸದು. ರಾಮ ಲಲ್ಲಾನ ದರ್ಶನ ಮಾಡುವ ಭಾಗ್ಯ ಒಮ್ಮೆ ಸಿಗಲಿ ಎಂದು ಬಯಸುತ್ತಾರೆ. ಇನ್ನು ಕೆಲವರಿಗೆ ಅಷ್ಟು ದೂರ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲ ಅಂಥವರು ಮೊಬೈಲ್, ಅಥವಾ ಟಿವಿಗಳಲ್ಲಿ ರಾಮನ ದರ್ಶನ ಪಡೆಯುತ್ತಾರೆ. ಅದು ಕೂಡ ನಮಗೆ ಪ್ರತಿದಿನ ನೋಡಲು ಸಾಧ್ಯವಾಗುವುದಿಲ್ಲ. ಅಲ್ಲಿ ರಾಮನ ಪೂಜೆ ಹೇಗೆ ನಡೆಯುತ್ತದೆ? ಯಾರು ಮಾಡುತ್ತಾರೆ? ಇನ್ನು ಅನೇಕ ರೀತಿಯ ಪ್ರಶ್ನೆಗಳನ್ನು ಹೊತ್ತು ಕುಳಿತ ಅದೆಷ್ಟೋ ಜನರಿದ್ದಾರೆ. ಯುವಕ, ಯುವತಿಯರಿಗೆ ಅಲ್ಲಿಯ ವರೆಗೆ ಪ್ರಯಾಣ ಮಾಡಿ ಬರಬಹುದು. ಆದರೆ ಕೆಲವರಿಗೆ ಅಲ್ಲಿಯವರೆಗೆ ಹೋಗಲು ದೇಹ ಒಪ್ಪುವುದಿಲ್ಲ, ಇನ್ನು ಕೆಲವರಿಗೆ ಅಷ್ಟು ಅವಕಾಶವೂ ಇರುವುದಿಲ್ಲ. ಬಹುಷಃ ಇದೆಲ್ಲಾ ಗಮನದಲ್ಲಿಟ್ಟುಕೊಂಡ ಡಿಡಿ ನ್ಯಾಷನಲ್ ಇದಕ್ಕೆಲ್ಲಾ ಪರಿಹಾರ ಎಂಬಂತೆ ಒಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದೆ. ಏನಿರಬಹುದು ಎಂಬ ಪ್ರಶ್ನೆ ಮೂಡುತ್ತಿದೆಯಾ? ಇಲ್ಲಿದೆ ಉತ್ತರ.
ನಿಮಗೆಲ್ಲಾ ತಿಳಿದ ಹಾಗೇ ಡಿಡಿ ನ್ಯಾಷನಲ್ ನೀಡುವ ಕೆಲವು ಕಾರ್ಯಕ್ರಮಗಳಿಂದ ಮತ್ತು ಅದರ ವಿಭಿನ್ನ ಶೈಲಿಯಿಂದಾಗಿ ಮನೆಮಾತಾಗಿದೆ. ಇದು ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದು ವಿಷಯ ಏನೆಂದರೆ, ಅಯೋಧ್ಯೆಯಲ್ಲಿ ಇತ್ತೀಚೆಗೆ ರಾಮ ಮಂದಿರವನ್ನು ಉದ್ಘಾಟಿಸಿದ ಬಗ್ಗೆ ನಿಮೆಗೆಲ್ಲಾ ತಿಳಿದಿದೆ. ಈಗಗಾಲೇ ಲಕ್ಷಾಂತರ ಮಂದಿ ರಾಮನ ದರ್ಶನ ಪಡೆದಿದ್ದಾರೆ. ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ರಾಮನನ್ನು ನೋಡಿ ಖುಷಿ ಪಟ್ಟಿದ್ದಾರೆ. ಆದರೆ ರಾಮನ ಪ್ರತಿದಿನದ ಪೂಜೆ ನೋಡುವುದಕ್ಕೆ ಸಾಧ್ಯವಿರಲಿಲ್ಲ. ಆದರೆ ಇದೀಗ ದೇವರ ಆರತಿಯು ಡಿಡಿ ನ್ಯಾಷನಲ್ ನಲ್ಲಿ ಪ್ರತಿದಿನ ಬೆಳಿಗ್ಗೆ 6.30 ಕ್ಕೆ ನೇರ ಪ್ರಸಾರವಾಗಲಿದೆ ಎಂದು ಇದರ ಪ್ರಸಾರಕರು ತಿಳಿಸಿದ್ದಾರೆ.
ಇದನ್ನೂ ಓದಿ: 350 ವರ್ಷಗಳಿಂದ ಇಲ್ಲಿನ ಜನರು ಹೋಳಿ ಹಬ್ಬ ಆಚರಿಸಿಲ್ಲ! ಇದರ ಹಿಂದಿರುವ ಕಥೆಯೇನು?
ಇನ್ನು ಮುಂದೆ ಕುಳಿತಲ್ಲಿಯೇ ಭಗವಾನ್ ಶ್ರೀ ರಾಮ್ ಲಲ್ಲಾನ ದರ್ಶನವಾಗಲಿದ್ದು, ಅಯೋಧ್ಯೆಯ ದೇವಸ್ಥಾನದಿಂದ ಪ್ರತಿದಿನ ಬೆಳಿಗ್ಗೆ 6:30 ಕ್ಕೆ ಡಿಡಿ ನ್ಯಾಷನಲ್ (DDNational) ನಲ್ಲಿ ಮಾತ್ರ, ಆರತಿಯ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ” ಎಂದು ಸಾರ್ವಜನಿಕ ಪ್ರಸಾರಕರು ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.
ಭಗವಾನ್ ರಾಮನ ಪ್ರತಿಷ್ಠಾಪನೆಯ ನಂತರ, ಬೆಳಿಗ್ಗೆ ನೆರವೇರುವ ದೈನಂದಿನ ಆರತಿಯ ನೇರ ಪ್ರಸಾರಕ್ಕೆ ಅನುಮತಿ ಪಡೆಯಲು ಪ್ರಯತ್ನಿಸುತ್ತಿದ್ದೆವು. ಈಗ ಅನುಮೋದನೆ ಸಿಕ್ಕಿದ್ದು, ವಿವಿಧ ಕಾರಣಗಳಿಂದಾಗಿ ಅಯೋಧ್ಯೆಗೆ ಭೇಟಿ ನೀಡಲು ಸಾಧ್ಯವಾಗದ ಎಲ್ಲಾ ಭಕ್ತರು ಡಿಡಿ ನ್ಯಾಷನಲ್ ಮೂಲಕ ಭಗವಾನ್ ರಾಮನ ದರ್ಶನವನ್ನು ಪಡೆಯಬಹುದು” ಎಂದು ಪ್ರಸಾರಕ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ಪ್ರತಿಯೊಬ್ಬ ರಾಮ ಭಕ್ತನಿಗೂ ಖುಷಿಯ ವಿಚಾರವಾಗಿದ್ದು, ಪ್ರತಿದಿನ ಮನೆಯಲ್ಲಿಯೇ ಕುಳಿತು ರಾಮನ ದರ್ಶನ ಪಡೆಯುವ ಸೌಭಾಗ್ಯ ಸಿಗಲಿದೆ.