Temple Tour: ತ್ರಿಮೂರ್ತಿಗಳಿಂದ ಸ್ಥಾಪನೆಯಾದ ಕುರುಡು ಮಲೆ ಸಾಲಿಗ್ರಾಮ ಗಣಪನ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ
ಕೋಲಾರದಿಂದ 45 ಕಿ.ಮೀ. ದೂರದಲ್ಲಿದೆ ಕುರುಡುಮಲೆ. ಕಲಿಯುಗದಲ್ಲಿ ಗಣೇಶನ ದರ್ಶನ ಪಡೆದ ಶ್ರೀ ಕೃಷ್ಣ ದೇವರಾಯರಿಂದ ಕುರುಡು ಮಲೆ ಗಣಪತಿಗೆ ದೇವಾಲಯ ನಿರ್ಮಾಣ ಮಾಡಿದ್ದಾರಂತೆ.
ಭಾದ್ರಪದ ಅಂದ್ರೆ ಕೂಡಲೇ ನೆನಪಾಗುವವನೇ ವಿಘ್ನ ನಿವಾರಕ, ಗಣಗಳ ಒಡೆಯನಾದ ವಿನಾಯಕ. ಕೋಲಾರದ ಕುರುಡುಮಲೆ ದೇವಾಲಯ ಪೌರಾಣಿಕ ಹಿನ್ನೆಲೆ ಇರುವಂತ ಗಣೇಶ ಮಂದಿರ. ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಂದ ಪ್ರತಿಷ್ಠಾಪನೆಯಾದ ಆದಿಪೂಜಿತನ ಆಲಯವಿದು. ಕೌಂಡಿನ್ಯ ಮಹರ್ಷಿಗಳಿಂದ ಈ ವೇದ ವಂದಿತ ಪೂಜಿಸಲ್ಪಟ್ಟಿದ್ದಾನೆ. ರಾಮ, ಕೃಷ್ಣ, ಕೌರವರು ಈ ಮಹಾಮಹಿಮ ಗಣಪನ ದರ್ಶನ ಮಾಡಿದ ಐತಿಹ್ಯ ಈ ಮಂದಿರಕ್ಕಿದೆ. ಅಷ್ಟೇ ಅಲ್ಲ ಮುನ್ನೂರ ಮುವತ್ತಮೂರು ಕೋಟಿ ದೇವಾನುದೇವತೆಗಳು ಈ ಕ್ಷೇತ್ರಕ್ಕೆ ಬಂದಿದ್ದರು ಅನ್ನುತ್ತೆ ಇಲ್ಲಿನ ಸ್ಥಳ ಪುರಾಣ. ಅದೇ ಕಾರಣಕ್ಕೆ ಕುರುಡು ಮಲೆ ದೇವಾಲಯವನ್ನ ಕೂಟಾದ್ರಿ ಎಂದು ಕರೆಯುತ್ತಾರೆ. ಕೋಲಾರದಿಂದ 45 ಕಿ.ಮೀ. ದೂರದಲ್ಲಿದೆ ಕುರುಡುಮಲೆ. ಕಲಿಯುಗದಲ್ಲಿ ಗಣೇಶನ ದರ್ಶನ ಪಡೆದ ಶ್ರೀ ಕೃಷ್ಣ ದೇವರಾಯರಿಂದ ಕುರುಡು ಮಲೆ ಗಣಪತಿಗೆ ದೇವಾಲಯ ನಿರ್ಮಾಣ ಮಾಡಿದ್ದಾರಂತೆ.