Holy Ganga Bath: ಗಂಗಾ ಸ್ನಾನ ಮಾಡುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತಾ? ಶಿವ-ಪಾರ್ವತಿ ನಡುವಿನ ಈ ಪ್ರಸಂಗ ನೀಡುತ್ತೆ ಇದಕ್ಕೆ ಉತ್ತರ
ಸೋಮವತಿ ಹಬ್ಬದಂದು ಗಂಗಾ ಘಾಟ್ ಬಳಿ ಗಂಗಾ ಸ್ನಾನಕ್ಕಾಗಿ ಭಕ್ತರ ಗುಂಪು ಸೇರಿತ್ತು. ಇದೇ ದಿನ ಶಿವ ಮತ್ತು ಪಾರ್ವತಿ ದೇವಿ ಪ್ರವಾಸಕ್ಕೆ ಹೊರಟಿದ್ದರು. ಆಕಾಶದಲ್ಲಿ ಹಾದುಹೋಗುವಾಗ ತಾಯಿ ಪಾರ್ವತಿಯ ಕಣ್ಣುಗಳು ಗುಂಪಿನ ಮೇಲೆ ಬಿತ್ತು ಆಗ ದೇವಿ ಶಿವನ ಬಳಿ ಇಷ್ಟು ದೊಡ್ಡ ಭಕ್ತ ಗಣ ಒಂದು ಕಡೆ ಸೇರಲು ಕಾರಣವೇನೆಂದು ಕೇಳಿದರು.
ಭಾರತವು ಒಂದು ಆಧ್ಯಾತ್ಮಿಕ ಸ್ಥಳವಾಗಿದೆ. ಭಾರತದ ಆರ್ಥಿಕತೆ, ಇತಿಹಾಸ ಮತ್ತು ಸಂಸ್ಕೃತಿ ಗಂಗಾನದಿಯೊಂದಿಗೆ ಬೇರ್ಪಡಿಸಲಾಗದಂತೆ ಸಂಬಂಧ ಹೊಂದಿವೆ. ಇದಲ್ಲದೆ, ಹಿಂದೂ ಧರ್ಮದಲ್ಲಿ ಗಂಗೆಯ ಪ್ರಾಮುಖ್ಯತೆಯು ಅತ್ಯಂತ ಮಹತ್ವ ಹೊಂದಿದೆ. ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಜನನ ಮತ್ತು ಮರಣದ ಪಾಪಗಳಿಂದ ಮುಕ್ತಿ ಸಿಗುತ್ತದೆ ಮತ್ತು ಸಾಯುವ ಮುನ್ನ ಗಂಗೆಯ ನೀರನ್ನು ಕುಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಹಿಂದೂಗಳು ನಂಬುತ್ತಾರೆ. ಇದಲ್ಲದೆ, ಮೃತರ ಚಿತಾಭಸ್ಮವನ್ನು ಗಂಗಾನದಿಯಲ್ಲಿ ಮುಳುಗಿಸಿದರೆ ಸ್ವರ್ಗಕ್ಕೆ ಹೋಗುತ್ತಾರೆ. ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಅದಕ್ಕಾಗಿಯೇ ದೇಶ ಮತ್ತು ವಿದೇಶದಲ್ಲಿರುವ ಹಿಂದೂಗಳು ವಾರಣಾಸಿ ಮತ್ತು ಗಾಯಾಕ್ಕೆ ಹೋಗಿ ತಮ್ಮ ಕುಟುಂಬದ ಸದಸ್ಯರ ಶವವನ್ನು ಗಂಗೆಯಲ್ಲಿ ತೇಲಿ ಬಿಡುತ್ತಾರೆ. ಗಂಗೆಯಲ್ಲಿ ಚಿತಾಭಸ್ಮ ಹಾಕುತ್ತಾರೆ.
ಗಂಗಾ ನದಿಯ ನೀರನ್ನು ಮನೆಯಲ್ಲಿ ಒಂದು ಸಣ್ಣ ಪಾತ್ರೆಯಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಕುಂಭಮೇಳ ಮತ್ತು ಛತ್ರಪೂಜೆಯಂತಹ ಹಬ್ಬಗಳು ಗಂಗಾ ನದಿಯ ತೀರದಲ್ಲಿ ನಡೆಯುತ್ತವೆ. ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಹೇಗೆ ಪಾಪಗಳು ದೂರವಾಗುತ್ತವೆ. ಈ ಬಗೆಗಿನ ಗಂಗಾ ದೇವಿಯ ಕಥೆಯನ್ನು ನಾವಿಂದು ಇಲ್ಲಿ ವಿವರಿಸುತ್ತಿದ್ದೇವೆ.
ಸೋಮವತಿ ಹಬ್ಬದಂದು ಗಂಗಾ ಘಾಟ್ ಬಳಿ ಗಂಗಾ ಸ್ನಾನಕ್ಕಾಗಿ ಭಕ್ತರ ಗುಂಪು ಸೇರಿತ್ತು. ಇದೇ ದಿನ ಶಿವ ಮತ್ತು ಪಾರ್ವತಿ ದೇವಿ ಪ್ರವಾಸಕ್ಕೆ ಹೊರಟಿದ್ದರು. ಆಕಾಶದಲ್ಲಿ ಹಾದುಹೋಗುವಾಗ ತಾಯಿ ಪಾರ್ವತಿಯ ಕಣ್ಣುಗಳು ಗುಂಪಿನ ಮೇಲೆ ಬಿತ್ತು ಆಗ ದೇವಿ ಶಿವನ ಬಳಿ ಇಷ್ಟು ದೊಡ್ಡ ಭಕ್ತ ಗಣ ಒಂದು ಕಡೆ ಸೇರಲು ಕಾರಣವೇನೆಂದು ಕೇಳಿದರು. ಆಗ ಶಿವನು ಇದು ಸೋಮವತಿ ಹಬ್ಬವೆಂದು ಹೇಳುತ್ತಾನೆ. ಈ ದಿನ ಗಂಗಾ ಸ್ನಾನ ಮಾಡುವ ಜನರು ಸ್ವರ್ಗಕ್ಕೆ ಹೋಗುತ್ತಾರೆ ಎಂದು ಉತ್ತರಿಸುತ್ತಾರೆ.
ಸ್ವರ್ಗಕ್ಕೆ ಹೋಗಲು ಮನಸ್ಸಿನ ಕೊಳೆಯನ್ನು ತೊಳೆಯಬೇಕು ಉತ್ತರ ಸಿಕ್ಕಂತೆ ಮತ್ತೊಂದು ಪ್ರಶ್ನೆ ಕೇಳಿದ ಪಾರ್ವತಿ ದೇವಿ ಗಂಗೆಯಲ್ಲಿ ಸ್ನಾನ ಮಾಡಿದ ಈ ಜನರೆಲ್ಲರೂ ಸ್ವರ್ಗಕ್ಕೆ ಹೋದರೆ ಏನಾಗಬಹುದು ಎಂದು ಕೇಳಿದರು. ಸ್ವರ್ಗದಲ್ಲಿ ಇಷ್ಟು ಸ್ಥಳ ಎಲ್ಲಿದೆ? ಈ ಮೊದಲು ಗಂಗೆಯಲ್ಲಿ ಸ್ನಾನ ಮಾಡಿದ ಲಕ್ಷಾಂತರ ಜನರು ಸ್ವರ್ಗದಲ್ಲೇ ಇದ್ದಾರೆಯೇ? ಅವರು ಸ್ವರ್ಗದಲ್ಲಿ ಎಲ್ಲಿ ಸ್ಥಳವನ್ನು ಕಂಡುಕೊಂಡಿದ್ದಾರೆ? ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿದ ಭೋಲೆನಾಥನು ದೇಹವನ್ನು ಒದ್ದೆ ಮಾಡುವುದು ಕೇವಲ ಒಂದು ವಿಷಯವಾಗಿದೆ. ಆದರೆ ಸ್ವರ್ಗಕ್ಕೆ ಹೋಗಲು, ಮನಸ್ಸಿನ ಕೊಳೆಯನ್ನು ತೊಳೆಯಲು ಸ್ನಾನ ಮಾಡುವುದು ಅಗತ್ಯ ಎಂದು ಪಾರ್ವತಿ ದೇವಿಗೆ ಉತ್ತರಿಸುತ್ತಾರೆ. ಆಗ ಪಾರ್ವತಿಯ ತಲೆಯಲ್ಲಿ ಮತ್ತಷ್ಟು ಪ್ರಶ್ನೆಗಳೆದ್ದು ಆಕೆ ಗೊಂದಲಕ್ಕೆ ಸಿಲುಕಿಕೊಳ್ಳುತ್ತಾರೆ. ಆಗ ಶಿವನು ಕೊಳಕು ಕುಷ್ಠರೋಗಿಯ ರೂಪವನ್ನು ತಾಳಿ ರಸ್ತೆಯ ಒಂದು ಸ್ಥಳದಲ್ಲಿ ಮಲಗುತ್ತಾರೆ. ಪಾರ್ವತಿ ದೇವಿಯೂ ಸುಂದರ ಹುಡುಗಿಯರ ರೂಪವನ್ನು ತಾಳಿ ಕುಷ್ಠರೋಗಿ ವೇಷವನ್ನು ಧರಿಸಿದ ಶಿವನೊಂದಿಗೆ ಭಕ್ತರು ಸ್ನಾನಕ್ಕೆ ಬರುವ ದಾರಿಯಲ್ಲಿ ಕುಳಿತುಕೊಳ್ಳುತ್ತಾರೆ. ಇವರಿಬ್ಬರ ಜೋಡಿಯನ್ನು ನೋಡಿದ ಭಕ್ತರು ಆಶ್ಚರ್ಯಚಕಿತರಾಗುತ್ತಾರೆ. ಇದೇನಿದು ಇಷ್ಟೊಂದು ಸುಂದರ ಹುಡುಗಿ ಕುಷ್ಠರೋಗಿಯೊಂದಿಗೆ ಇದ್ದಾಳಲ್ಲ ಎಂದು ಮಾತನಾಡಿಕೊಳ್ಳುತ್ತಾರೆ. ಜನರ ಮಾತುಗಳನ್ನು ಶಿವ ಪಾರ್ವತಿ ಆಲಿಸುತ್ತಾರೆ.
ಆಗ ಪಾರ್ವತಿ ದೇವಿ ಅಲ್ಲಿದ್ದ ಜನರಿಗೆ ನಾವು ದಂಪತಿಗಳು ನಾವೂ ಕೂಡ ಗಂಗಾ ಸ್ನಾನ ಮಾಡಿ ಪಾಪದಿಂದ ಮುಕ್ತರಾಗಲು ಬಂದಿದ್ದೇವೆ. ಆದ್ರೆ ನಮಗೆ ಆಯಾಸವಾಗಿ ಇಲ್ಲಿ ಕುಳಿತ್ತಿದ್ದೇವೆ ಎಂದು ಹೇಳುತ್ತಾರೆ. ಆಗ ಅಲ್ಲಿದ್ದ ಕೆಲವರು ನೀವು ತುಂಬಾ ಸುಂದರವಾಗಿದ್ದೀರಾ ನೀವು ನಮ್ಮ ಜೊತೆ ಬನ್ನಿ ಈ ಕುಷ್ಠರೋಗಿಯ ಜೊತೆ ಏಕೆ ಇದ್ದೀರಾ ಎಂದು ಕರೆಯುತ್ತಾರೆ. ಆಗ ಪಾರ್ವತಿ ದೇವಿಗೆ ಅವರ ಮೇಲೆ ಕೋಪ ಬರುತ್ತದೆ. ಇಂತಹ ಕೆಟ್ಟ ಮನಸ್ಸಿನ ಜನರು ಕೂಡ ಇಲ್ಲಿ ಬರುತ್ತಾರ ಎಂದು ಪಾರ್ವತಿ ಚಕಿತಳಾಗುತ್ತಾಳೆ. ಅದರೂ ಏನು ಹೇಳದೆ ಸಂಜೆಯ ವರೆಗೂ ಅದೇ ರೂಪದಲ್ಲೇ ಜನರ ಜೊತೆ ಶಿವ-ಪಾರ್ವತಿ ಕಾಲ ಕಳೆಯುತ್ತಾರೆ.
ಬಳಿಕ ಸಂಜೆ ಭೋಲೆನಾಥ ಮತ್ತು ಮಾತಾ ಪಾರ್ವತಿಯ ಬಳಿ ಬಂದ ಸಂಭಾವಿತ ವ್ಯಕ್ತಿ ಪಾರ್ವತಿ ದೇವಿಯ ಬಳಿ ಅವರ ಕಣ್ಣಿರಿನ ಕಥೆಯನ್ನು ಕೇಳಿಕೊಳ್ಳುತ್ತಾನೆ. ತನ್ನ ಬಳಿ ಇದ್ದ ಆಹಾರವನ್ನು ನೀಡುತ್ತಾನೆ. ಹಾಗೂ ವೇಷಧಾರಿ ಶಿವ-ಪಾರ್ವತಿಗೆ ಗಂಗಾ ತೀರಕ್ಕೆ ಹೋಗಲು ಸಹಾಯ ಮಾಡುತ್ತಾನೆ. “ನಿಮ್ಮಂತಹ ದೇವತೆಗಳು ಈ ಭೂಮಿಯ ಆಧಾರ ಸ್ತಂಭಗಳು” ನೀವು ನಿಮ್ಮ ಪತಿ ಧರ್ಮವನ್ನು ಆಚರಿಸುತ್ತಿರುವ ನೀವು ಧನ್ಯರು ಎಂದು ಹೇಳಿ ಹೊರಟು ಹೋಗುತ್ತಾರೆ. ನಂತರ ಶಿವ-ಪಾರ್ವತಿ ಕೂಡ ಕೈಲಾಸಕ್ಕೆ ಹೊರಟು ಹೋಗುತ್ತಾರೆ.
ಆಗ ಶಿವನು ಪಾರ್ವತಿಗೆ ಕೇಳುತ್ತಾನೆ ಈಗ ನಿನ್ನೆಲ್ಲಾ ಅನುಮಾನಗಳಿಗೂ ಉತ್ತರ ಸಿಕ್ಕಿತೇ ಎಂದು. ಗಂಗಾ ನದಿಯಲ್ಲಿ ಲಕ್ಷಾಂತರ ಜನ ಬಂದು ಸ್ನಾನ ಮಾಡಿದರೂ ಆ ಒಬ್ಬ ವ್ಯಕ್ತಿಗೆ ಮಾತ್ರ ಸ್ವರ್ಗ ಪ್ರಾಪ್ತಿಯಾಗುತ್ತದೆ. ಕೇವಲ ಗಂಗಾ ಸ್ನಾನ ಮಾಡುವುದರಿಂದ ಸ್ವರ್ಗ ಸಿಗಲ್ಲ. ಮನಸ್ಸು ಕೂಡ ಶುದ್ಧವಿರಬೇಕು ಎಂದು ಶಿವ ಹೇಳುತ್ತಾರೆ.
ಇದನ್ನೂ ಓದಿ: Maha Shivaratri 2021: ಶಿವ ಪಾರ್ವತಿಯ ವಿವಾಹ ಮಹೋತ್ಸವದ ಪವಿತ್ರ ದಿನವೇ ಶಿವರಾತ್ರಿ