ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ನಂತರ ಭಕ್ತರು ಹೊರಗಡೆ ಕಟ್ಟೆ ಮೇಲೆ ಕೆಲ ಹೊತ್ತು ಕುಳಿತುಕೊಳ್ಳಬೇಕು, ಏಕೆ?

| Updated By: shruti hegde

Updated on: Sep 30, 2021 | 8:17 AM

ನಿಮ್ಮ ಕಣ್ಣುಗಳನ್ನು ದೇವರ ಸ್ವರೂಪದಿಂದ ತುಂಬಿಸಿಕೊಳೀ. ನೀವು ದರ್ಶನದ ನಂತರ ಹೊರಗೆ ಬಂದು ಕುಳಿತಾಗ ಕಣ್ಣು ಮುಚ್ಚಿಕೊಂಡು ನೀವು ನೋಡಿದ ದೇವರ ಆ ಸ್ವರೂಪವನ್ನು ಸ್ಮರಿಸಿ, ಧ್ಯಾನಿಸಿ.

ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ನಂತರ ಭಕ್ತರು ಹೊರಗಡೆ ಕಟ್ಟೆ ಮೇಲೆ ಕೆಲ ಹೊತ್ತು ಕುಳಿತುಕೊಳ್ಳಬೇಕು, ಏಕೆ?
ದೇವಸ್ಥಾನದಲ್ಲಿ ದೇವರ ದರ್ಶನದ ನಂತರ, ಹೊರಗಡೆ ಕಟ್ಟೆ ಮೇಲೆ ಭಕ್ತರು ಕೆಲ ಹೊತ್ತು ಕುಳಿತುಕೊಳ್ಳಬೇಕು, ಏಕೆ?
Follow us on

ದೇವಸ್ಥಾನಗಳಿಗೆ ಹೋದಾಗ ದೇವರ ದರುಶನ ಮುಗಿಸಿ ನಮಸ್ಕಾರ ಹಾಕಿದ ನಂತರ ದೇಗುಲದ ಹೊರಗೆ ಬಂದು ಸ್ವಲ್ಪಹೊತ್ತು ಹೊರಗಡೆ ಕಟ್ಟೆಯ ಮೇಲೋ ಅಥವಾ ದೇಗಿಲದ ಮೆಟ್ಟಿಲುಗಳ ಮೇಲೆಯೋ ಕುಳಿತು ಕೊಳ್ಳುವುದು ವಾಡಿಕೆ. ಆದರೆ ಕುಳಿತಾಗ ನಾವು ದರ್ಶನ ಮಾಡಿದ ದೇವರನ್ನು ನೆನಸಿಕೊಂಡು ಈ ಕೆಳಗಿನ ಶ್ಲೋಕ ಹೇಳಿಕೊಂಡು ಪ್ರಾರ್ಥಿಸಬೇಕು. ಇದನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಮಾಡಲಾಗಿದೆ.

ಶ್ಲೋಕ:
1. ಅನಾಯಾಸೇನ ಮರಣಂ
2. ವಿನಾ ದೈನೇನ ಜೀವನಂ
3. ದೇಹಾಂತ ತವ ಸಾನಿಧ್ಯಂ
4. ದೇಹಿಮೇ ಪರಮೇಶ್ವರಂ

ಈ ಶ್ಲೋಕದ ಅರ್ಥ:
1. ಅನಾಯಾಸೇನ ಮರಣಂ – ಅಂದರೆ ನಮ್ಮ ಜೀವನದ ಅಂತ್ಯ ಕಾಲದಲ್ಲಿ ಯಾವುದೇ ತೊಂದರೆಯಿಲ್ಲದೆ, ಅನಾಯಾಸವಾಗಿ ಸಾಯಬೇಕು. ಯಾವುದೇ ರೋಗರುಜಿನಗಳಿಂದ ನರಳದೆ, ಹಾಸಿಗೆಯ ಹಿಡಿಯುವಂತೆ ಆಗಬಾರದು. ದುಃಖದಿಂದ ಸಾಯಬಾರದು. ನಾವು ನಡೆದಾಡುವಾಗಲೇ ನಮ್ಮ ಜೀವನದ ಅಂತ್ಯ ಆಗಬೇಕು ಎಂಬ ಪ್ರಾರ್ಥನೆ ಇದಾಗಿದೆ.

2. ವಿನಾ ದೈನೇನ ಜೀವನಂ – ಅಂದರೆ ಎಂದಿಗೂ ಯಾರೊಂದಿಗೂ ಪರಾವಲಂಬಿಯಾಗಿ ಜೀವನ ನಡೆಸುವಂತಾಗಬಾರದು. ಒಬ್ಬ ವ್ಯಕ್ತಿಯು ಪಾರ್ಶ್ವವಾಯುವಿಗೆ ಒಳಗಾದಾಗ ಇತರರ ಮೇಲೆ ಅವಲಂಬಿತನಾಗುವಂತೆ ಅಸಹಾಯಕನಾಗಿರಬಾರದು. ದೇವರ ಕೃಪೆಯಿಂದ ಭಿಕ್ಷೆ ಬೇಡದೆ ಜೀವನ ನಡೆಸಬೇಕು ಎಂಬ ಪ್ರಾರ್ಥನೆ ಇದಾಗಿದೆ.

3. ದೇಹಾಂತ ತವ ಸಾನಿಧ್ಯಂ – ಅಂದರೆ ಸಾವು ಬಂದಾಗ ದೇವರು ಮುಂದೆ ಇರಬೇಕು. ಭೀಷ್ಮ ಪಿತಾಮಹ ಮರಣಶಯ್ಯೆಯಲ್ಲಿದ್ದಾಗ ಅಂದರೆ ತನ್ನ ಮರಣದ ಸಮಯದಲ್ಲಿ ದೇವರು (ಶ್ರೀಕೃಷ್ಣ) ಅವರ ಮುಂದೆ ನಿಂತಿದ್ದರು.  ಕೃಷ್ಣನನ್ನು ನೋಡಿಯೇ ಭೀಷ್ಮ ಪ್ರಾಣ ಬಿಟ್ಟರು.

4. ದೇಹಿಮೇ ಪರಮೇಶ್ವರಂ – ಅಂದರೆ ಓ ದೇವರೇ ನಮಗೆ ಇಂತಹ ವರವನ್ನು ಕರುಣಿಸು. ಹೀಗೆ ದೇಗುಲದ ಮುಂದೆ ಕುಳಿತು ದೇವರನ್ನು ಪ್ರಾರ್ಥಿಸುವಾಗ ನಾಲ್ಕು ಸಾಲಿನ ಮೇಲಿನ ಶ್ಲೋಕವನ್ನು ಪಠಿಸಬೇಕು.

ಕಾರು, ಬಂಗಲೆ, ಹುಡುಗ, ಹುಡುಗಿ, ಗಂಡ, ಹೆಂಡತಿ, ಮನೆ, ಹಣ ಇತ್ಯಾದಿಗಳನ್ನು ಕೇಳಬೇಡಿ (ಸಾಂಸಾರಿಕ ವಿಷಯಗಳು). ಇದನ್ನೆಲ್ಲ ನಿಮ್ಮ ಅರ್ಹತೆಗೆ ಅನುಗುಣವಾಗಿ ಈ ದೇವರು ನಿಮಗೆ ನೀಡುತ್ತಾನೆ. ಅದಕ್ಕಾಗಿಯೇ ದರ್ಶನ ಮಾಡಿದ ನಂತರ ಪ್ರತಿಯೊಬ್ಬರು ದೇಗುಲದ ಹೊರಗೆ ಕುಳಿತುಕೊಂಡು ಪ್ರಾರ್ಥಿಸಬೇಕು.

ಇದು ಪ್ರಾರ್ಥನೆ, ವಿಜ್ಞಾಪನೆ ಅಲ್ಲ. ವಿಜ್ಞಾಪನೆ ಅಂದರೆ ಅದು ಲೌಕಿಕ ವಿಷಯಗಳಿಗಾಗಿ ಇರುವುದು.  ಉದಾಹರಣೆಗೆ ಮನೆ, ವ್ಯವಹಾರ, ಉದ್ಯೋಗ, ಮಗ, ಮಗಳು, ಲೌಕಿಕ ಸುಖ, ಸಂಪತ್ತು ಅಥವಾ ಇತರ ವಿಷಯಗಳಿಗಾಗಿ ಮೊರೆಯಿಡುವುದು.

ಪ್ರಾರ್ಥನೆ ಎಂಬ ಪದದ ಅರ್ಥ ಬಿಡಿಸಿ ಹೇಳುವುದಾದರೆ ‘ಪ್ರಾ’ ಎಂದರೆ ‘ವಿಶೇಷ’, ವಿಶಿಷ್ಟ, ಉತ್ತಮ ಎಂದರ್ಥ. ಇನ್ನು ‘ಆರ್ಥನಾ’ ಎಂದರೆ ವಿನಂತಿ ಮಾಡುವುದು.  ಪ್ರಾರ್ಥನೆ ಎಂದರೆ ವಿಶೇಷ ವಿನಂತಿ.

ದೇವಾಲಯದಲ್ಲಿ ದೇವರ ದರ್ಶನವನ್ನು ಯಾವಾಗಲೂ ತೆರೆದ ಕಣ್ಣುಗಳಿಂದ ಮಾಡಬೇಕು. ಕೆಲವರು ಕಣ್ಣು ಮುಚ್ಚಿಕೊಂಡು ಅಲ್ಲಿ ನಿಲ್ಲುತ್ತಾರೆ.  ಏಕೆ ನಮ್ಮ ಕಣ್ಣುಗಳನ್ನು ಮುಚ್ಚಬೇಕು? ನಾವು ದೇವರ ದರ್ಶನಕ್ಕೆ ಬಂದಿದ್ದೇವೆ.  ದೇವರ ಸ್ವರೂಪವನ್ನು, ಪಾದಗಳಿಂದ ಮುಖದವರೆಗಿನ ಸೌಂದರ್ಯದ ಪೂರ್ಣ ಆನಂದವನ್ನು ಪಡೆಯಿರಿ.

ನಿಮ್ಮ ಕಣ್ಣುಗಳನ್ನು ದೇವರ ಸ್ವರೂಪದಿಂದ ತುಂಬಿಸಿಕೊಳೀ. ನೀವು ದರ್ಶನದ ನಂತರ ಹೊರಗೆ ಬಂದು ಕುಳಿತಾಗ ಕಣ್ಣು ಮುಚ್ಚಿಕೊಂಡು ನೀವು ನೋಡಿದ ದೇವರ ಆ ಸ್ವರೂಪವನ್ನು ಸ್ಮರಿಸಿ, ಧ್ಯಾನಿಸಿ.

(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ಶ್ರದ್ಧಾಭಕ್ತಿಗೆ ಅನುಗುಣವಾಗಿ ಲೋಕಮಾನ್ಯ ರೀತಿಯಲ್ಲಿ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಪಡಿಸಲಾಗಿದೆ)