- Kannada News Photo gallery Follow these 4 Vastu Tips related to Water will change your Misfortune into Good Luck
Vastu Tips: ನೀರಿಗೆ ಸಂಬಂಧಿಸಿ ಈ ವಾಸ್ತು ಸಲಹೆಗಳನ್ನು ಅಳವಡಿಸಿ; ನಿಮ್ಮ ಜೀವನ ಇನ್ನಷ್ಟು ಉತ್ತಮ ಆಗುವುದು
ವಾಸ್ತು ಸಲಹೆಗಳನ್ನು ಅಳವಡಿಸಿಕೊಳ್ಳುವುದರಿಂದ ಜೀವನದಲ್ಲಿ ಹಲವು ಉತ್ತಮ ಬದಲಾವಣೆಗಳು ಆಗುತ್ತವೆ ಎಂಬುದು ನಂಬಿಕೆ. ಧಾರ್ಮಿಕ ನಂಬಿಕೆಗಳಿಗೆ ಒಳಪಟ್ಟಂತೆ ಹಲವು ವಾಸ್ತು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
Updated on: Oct 01, 2021 | 8:04 AM

ಒಂದು ಬಾಟಲಿ ಅಥವಾ ಲೋಟದಲ್ಲಿ ನೀರು ತುಂಬಿಸಿ ಅದನ್ನು ಮಲಗುವಾಗ ನಿಮ್ಮ ತಲೆಯ ಸಮೀಪದಲ್ಲಿ ಇಡಿ. ಹಾಗೂ ಆ ನೀರನ್ನು ಬೆಳಗ್ಗೆ ಏದ್ದು ಹೊರಗೆ ಎಸೆಯಿರಿ. ಇದರಿಂದ ನಿಮ್ಮ ಕೆಟ್ಟ ಕನಸುಗಳು, ಕೆಟ್ಟ ಯೋಚನೆ, ಬದುಕಿನ ತೊಂದರೆಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ.

ದಿನನಿತ್ಯವೂ ಸ್ನಾನ ಮಾಡುವ ವೇಳೆಗೆ ಸ್ನಾನ ಮಾಡಲು ಬಳಸುವ ನೀರಿಗೆ ಸ್ವಲ್ಪವೇ ಅರಿಶಿನ, ಗಂಗಾಜಲ, ಉಪ್ಪು, ಜೇನು ಅಥವಾ ಬೆಲ್ಲವನ್ನು ಬೆರೆಸಿಕೊಳ್ಳಿ. ಇದರಿಂದ ಬದುಕಿನಲ್ಲಿ ಒಳ್ಳೆಯ ದಿನಗಳು ಬರುತ್ತದೆ. ನಿಮ್ಮ ಗೌರವ ಹೆಚ್ಚುತ್ತದೆ. ಸಮಾಜದಲ್ಲಿ ಸ್ಥಾನಮಾನ ಮತ್ತು ನಿಮ್ಮ ಬಗ್ಗೆ ನಿಮಗಿರುವ ನಂಬಿಕೆಯೂ ಅಧಿಕವಾಗುತ್ತದೆ.

Follow these 4 Vastu Tips related to Water will change your Misfortune into Good Luck

ಪ್ರಾಣಿ ಮತ್ತು ಪಕ್ಷಿಗಳಿಗೂ ದಿನವೂ ನೀರು ನೀಡಿ. ಈ ಅಭ್ಯಾಸ ಇಟ್ಟುಕೊಂಡವರಿಗೆ ಒಳಿತಾಗುತ್ತದೆ. ಮತ್ತು ರಾಶಿಯ ದೋಷಗಳು ದೂರವಾಗುತ್ತದೆ. ಜೀವನದ ತೊಂದರೆ ಇಲ್ಲವಾಗಿ ಆರೋಗ್ಯ ಹೆಚ್ಚುತ್ತದೆ. ಇದಕ್ಕಾಗಿ ಪ್ರಾಣಿ ಹಾಗೂ ಪಕ್ಷಿಗಳಿಗೆ ಪ್ರತ್ಯೇಕ ಪಾತ್ರೆಗಳನ್ನು ಇಡಿ. ಅದರಲ್ಲಿ ಸಮರ್ಪಕ ಪ್ರಮಾಣದ ನೀರನ್ನು ತುಂಬಿ ಇಡಿ.




