ತಿರುಮಲ: ಗರುಡ ವಾಹನದಲ್ಲಿ ತಿರುಪತಿ ತಿಪ್ಪಮ್ಮನ ದಿವ್ಯದರ್ಶನ! ಆಗಸ್ಟ್​ ತಿಂಗಳಲ್ಲಿ ಎರಡು ಬಾರಿ, ಯಾವಾಗ?

|

Updated on: Aug 06, 2024 | 6:06 AM

Divine Darshan of Tirumala Venkateshwara swamy: ಆಗಸ್ಟ್ ತಿಂಗಳಲ್ಲಿ ಏಳುಬೆಟ್ಟದ ತಿಮ್ಮಪ್ಪ ಸ್ವಾಮಿಯು ಎರಡು ಬಾರಿ ಗರುಡವಾಹನದ ಮೇಲೆ ಸವಾರಿ ಮಾಡುತ್ತಾರೆ. ತಿರುಮಲದ ಮಹಡಿ ಬೀದಿಗಳಲ್ಲಿ ತನ್ನಿಷ್ಟದ ವಾಹನವಾದ ಗರುಡನನ್ನು ಏರಿ ಭಕ್ತಾದಿಗಳಿಗೆ ಆಶೀರ್ವಾದ ನೀಡುತ್ತಾರೆ. ಈ ನಿಟ್ಟಿನಲ್ಲಿ ಟಿಟಿಡಿ ಸಕಲ ವ್ಯವಸ್ಥೆ ಮಾಡಲಿದೆ.

ತಿರುಮಲ: ಗರುಡ ವಾಹನದಲ್ಲಿ ತಿರುಪತಿ ತಿಪ್ಪಮ್ಮನ ದಿವ್ಯದರ್ಶನ! ಆಗಸ್ಟ್​ ತಿಂಗಳಲ್ಲಿ ಎರಡು ಬಾರಿ, ಯಾವಾಗ?
ತಿರುಮಲ: ಗರುಡ ವಾಹನದಲ್ಲಿ ತಿರುಪತಿ ತಿಪ್ಪಮ್ಮನ ದಿವ್ಯದರ್ಶನ!
Follow us on

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ಈ ತಿಂಗಳು ಎರಡು ಬಾರಿ ಗರುಡ ವಾಹನದಲ್ಲಿ ತನ್ನ ಭಕ್ತರಿಗೆ ದಿವ್ಯದರ್ಶನ ನೀಡಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಏಳುಬೆಟ್ಟದ ತಿಮ್ಮಪ್ಪ ಸ್ವಾಮಿಯು ಎರಡು ಬಾರಿ ಗರುಡವಾಹನದ ಮೇಲೆ ಸವಾರಿ ಮಾಡುತ್ತಾರೆ. ಆಗಸ್ಟ್ 9 ಗರುಡ ಪಂಚಮಿ ಮತ್ತು ಆಗಸ್ಟ್ 19 ಶ್ರಾವಣ ಪೌರ್ಣಮಿಯಂದು ಗರುಡ ಸೇವೆ ನಡೆಯಲಿದೆ. ಗರುಡ ಪಂಚಮಿ ಮತ್ತು ಶ್ರಾವಣಿ ಪೌರ್ಣಮಿಯ ದಿನದಂದು ತಿಮ್ಮಪ್ಪ ಸ್ವಾಮಿ ಗರುಡವಾಹನದ ಮೇಲೆ ನಾಲ್ಕು ಮಹಡಿ ಬೀದಿಗಳಲ್ಲಿ ಸಂಚರಿಸಿ ಭಕ್ತರನ್ನು ಆಶೀರ್ವದಿಸಲಿದ್ದಾರೆ.

ಆಗಸ್ಟ್ 9 ರಂದು ಗರುಡ ಪಂಚಮಿಯ ದಿನದಂದು ಸಂಜೆ 7 ರಿಂದ 9 ರವರೆಗೆ ತಿರುಮಲದ ಮಹಡಿ ಬೀದಿಗಳಲ್ಲಿ ತನ್ನಿಷ್ಟದ ವಾಹನವಾದ ಗರುಡನನ್ನು ಏರಿ ಭಕ್ತಾದಿಗಳಿಗೆ ಆಶೀರ್ವಾದ ನೀಡುತ್ತಾರೆ. ಗರುಡಾತ್ಮನು ಶ್ರೀವಾರಿಯ ವಾಹನಗಳಲ್ಲಿ ಅಗ್ರಗಣ್ಯನು. ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ) ವತಿಯಿಂದ ಪ್ರತಿ ವರ್ಷ ಗರುಡ ಪಂಚಮಿಯನ್ನು ಶ್ರಾವಣ ಶುಕ್ಲ ಪಕ್ಷದ 5 ನೇ ದಿನದಂದು ಆಚರಿಸಲಾಗುತ್ತದೆ.

Also Read: Monsoon Love Predictions – ಮುಂಗಾರು ಮಳೆಯಲ್ಲಿ ಪ್ರೀತಿಯ ಅಲೆಗಳು.. ಯಾವ ರಾಶಿಯವರೆಲ್ಲಾ ಪ್ರೀತಿ-ಪ್ರೇಮದಲ್ಲಿ ನೆನೆಯುತ್ತಾರೆ ನೋಡಿ!

ನವವಿವಾಹಿತರು ತಮ್ಮ ವೈವಾಹಿಕ ಜೀವನ ಸುಖಮಯವಾಗಿರಲು ಗರುಡಪಂಚಮಿ ಪೂಜೆಯನ್ನು ಮಾಡುತ್ತಾರೆ ಮತ್ತು ಮಹಿಳೆಯರು ತಮ್ಮ ಮಗುವನ್ನು ಗರುಡನಂತೆ ಬಲಶಾಲಿ ಮತ್ತು ಒಳ್ಳೆಯ ಸ್ವಭಾವವನ್ನು ಹೊಂದಲು ಪೂಜಿಸುತ್ತಾರೆ ಎಂದು ನಂಬಲಾಗಿದೆ. ಆಗಸ್ಟ್ 19 ರಂದು ಶ್ರಾವಣ ಪೌರ್ಣಮಿ ಬರುತ್ತದೆ ಮತ್ತು ಟಿಟಿಡಿ ವತಿಯಿಂದ ಗರುಡ ವಾಹನ ಸೇವೆಯು ಪ್ರತಿ ತಿಂಗಳ ಹುಣ್ಣಿಮೆಯಂದು ನಡೆಸಲಾಗುತ್ತದೆ.

ಆಗಸ್ಟ್ 19 ರಂದು ಶ್ರಾವಣ ಪೌರ್ಣಮಿಯಂದು ಪೂರ್ಣಮಿ ಗರುಡಸೇವೆ ವಿಜೃಂಭಣೆಯಿಂದ ನಡೆಯಲಿದೆ. ಇದರ ಅಂಗವಾಗಿ ಸಂಜೆ 7ರಿಂದ 9ರವರೆಗೆ ತಿಮ್ಮಪ್ಪ ಸ್ವಾಮಿಯು ಗರುಡ ವಾಹನವೇರಿ ದೇವಸ್ಥಾನದ ನಾಲ್ಕು ಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಟಿಟಿಡಿ ಸಕಲ ವ್ಯವಸ್ಥೆ ಮಾಡಲಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ – ಟಿಟಿಡಿ ಸಕಲ ವ್ಯವಸ್ಥೆ

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ