Taking blessings of elders: ಆಶೀರ್ವಾದದ ಮಹತ್ವ: ಹಿರಿಯರ ಪಾದಕ್ಕೆ ನಮನ.. ಹಿರಿಯರಿಂದ ಆಶೀರ್ವಾದ ಬೇಡುವುದಕ್ಕೆ ಇದೇ ರೀಸನ್
Importance of Blessings in hindu dharma: ಮದುವೆಯ ನಂತರ ನವದಂಪತಿಗಳು ಹಿರಿಯರ ಆಶೀರ್ವಾದ ಪಡೆದಾಗ ಹಿರಿಯರು ದೀರ್ಘ ಸುಮಂಗಲಿಭವ, ಸಂತಾನ ಪ್ರಾಪ್ತಿರಸ್ತು, ಪುತ್ರಪೌತ್ರಾಭಿವೃದ್ಧಿರಸ್ತು ಎಂದು ಆಶೀರ್ವದಿಸುತ್ತಾರೆ. ಈ ಆಶೀರ್ವಾದವು ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾರೆ ಎಂಬ ಭರವಸೆಯಾಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ಅದರಲ್ಲೂ ಹಿಂದೂ ಸಂಸ್ಕೃತಿಯಲ್ಲಿ ಕುಟುಂಬದ ಯಜಮಾನರ ಪಾದಗಳಿಗೆ ನಮಸ್ಕರಿಸಿ, ಹಿರಿಯರು ಕಂಡರೆ ಅವರ ಕಾಲಿಗೆ ನಮಸ್ಕರಿಸುವುದು ಅನಾದಿಕಾಲದಿಂದಲೂ ನಡೆದುಬಂದ ಆಚರಣೆ/ ಸಂಪ್ರದಾಯ/ಪದ್ಧತಿಯಾಗಿದೆ. ಆದರೆ ಕಾಲಿಗೆ ಎರಗುವುದು/ ಕೈಮುಗಿದು ನಮಸ್ಕರಿಸುವುದು.. ಹಿರಿಯರು ಮತ್ತು ಗುರುಗಳಿಗೆ ಮಾತ್ರ. ದೈವ ಸಮಾನವೆಂದು ಪರಿಗಣಿಸಲ್ಪಟ್ಟವರ ಪಾದಗಳಿಗೆ ನಮಸ್ಕರಿಸುವುದು ಸಾಂಪ್ರದಾಯಿಕ ಹಿಂದೂ ಧರ್ಮದ ಸಂಪ್ರದಾಯಗಳು ಮತ್ತು ನಂಬಿಕೆಗಳ ಸಂಕೇತವಾಗಿದೆ. ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪದ್ಧತಿಗಳು ಮತ್ತು ಸಂಪ್ರದಾಯಗಳು ವಿಶೇಷ ಆಯಾಮವನ್ನು ಕಲ್ಪಿಸುತ್ತವೆ. ಹಿರಿಯರನ್ನು ಗೌರವಿಸಲು ಕಾಲಿಗೆ ನಮಸ್ಕರಿಸುವ ಪದ್ಧತಿ ಇದೆ.
ಹಿಂದೂ ಧರ್ಮದಲ್ಲಿ ದೇವತೆಗಳಿಗೆ ನಮಸ್ಕರಿಸಿದರೆ ಪುಣ್ಯ ಸಿಗುತ್ತದೆ ಎಂಬ ನಂಬಿಕೆ ಇದೆ. ಹಿರಿಯರು, ಪಾಲಕರು, ಗುರುಗಳ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಹೀಗೆ ಮಾಡುವುದರಿಂದ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ. ಪ್ರತಿನಿತ್ಯ ಪೋಷಕರಿಗೆ ನಮಸ್ಕರಿಸುವುದರಿಂದ ಕೆಟ್ಟ ಪರಿಣಾಮಗಳು ದೂರವಾಗುತ್ತವೆ. ಇದನ್ನು ಮಾಡುವುದು ಕೇವಲ ಧಾರ್ಮಿಕ ಸಂಪ್ರದಾಯವಲ್ಲ, ಆದರೆ ಮನೆಯ ಮುಖ್ಯಸ್ಥರಿಗೆ ನಮಸ್ಕರಿಸುವುದರ ಹಿಂದೆ ವೈಜ್ಞಾನಿಕ ಕಾರಣಗಳು ಮತ್ತು ಪ್ರಯೋಜನಗಳಿವೆ.
ಹಿಂದೂ ಧರ್ಮದ ಪ್ರಕಾರ, ಹಿರಿಯರ ಆಶೀರ್ವಾದವು ಜೀವನದಲ್ಲಿ ಹೆಚ್ಚಿನ ಸಂತೋಷವನ್ನು ತರುತ್ತದೆ ಮತ್ತು ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ. ಹಿರಿಯರು ಸಾಮಾನ್ಯವಾಗಿ ತಮ್ಮ ಪಾದಗಳಿಗೆ ನಮಸ್ಕರಿಸುವವರನ್ನು ಆಶೀರ್ವದಿಸುತ್ತಾರೆ. ವಿಶೇಷವಾಗಿ ಮದುವೆಯ ನಂತರ ನವದಂಪತಿಗಳು ಹಿರಿಯರ ಆಶೀರ್ವಾದ ಪಡೆದಾಗ ಹಿರಿಯರು ದೀರ್ಘ ಸುಮಂಗಲಿಭವ, ಸಂತಾನ ಪ್ರಾಪ್ತಿರಸ್ತು, ಪುತ್ರಪೌತ್ರಾಭಿವೃದ್ಧಿರಸ್ತು ಎಂದು ಆಶೀರ್ವದಿಸುತ್ತಾರೆ.
ಮಕ್ಕಳು ಸುಖ-ಸಮೃದ್ಧಿಯಿಂದ ಬಾಳಲಿ ಎಂದು ಮನೆಯ ಹಿರಿಯರು ಹಾರೈಸಿ ಆಶೀರ್ವದಿಸುತ್ತಾರೆ. ಆದರೆ ದೀರ್ಘ ಸುಮಂಗಲೀಭವ ಮತ್ತು ಸಂತಾನ ಪ್ರಾಪ್ತಿರಸ್ತುಗಳಂತಹ ಆಶೀರ್ವಾದಗಳನ್ನು ಮಹಿಳೆಯರಿಗೆ ಅಥವಾ ವಧುಗಳಿಗೆ ಮಾತ್ರ ಏಕೆ ನೀಡಲಾಗುತ್ತದೆ? ಅದೇನೆಂದರೆ ಅಳಿಯ ಮದುವೆಯಾದ ನಂತರ ವಂಶವನ್ನು ಬೆಳೆಸುವ ಜವಾಬ್ದಾರಿ ಮನೆಯ ಸೊಸೆಯ ಮೇಲಿದೆ, ಆದ್ದರಿಂದ ಹಿರಿಯರು ವಧುವಿಗೆ ಈ ಆಶೀರ್ವಾದವನ್ನು ನೀಡುತ್ತಾರೆ, ಇದರಿಂದ ಸೊಸೆ ಶೀಘ್ರದಲ್ಲೇ ಗರ್ಭವತಿಯಾಗುತ್ತಾರೆ. ಹಿರಿಯರ ಆಶೀರ್ವಾದದ ಬಲದಿಂದ ನವವಿವಾಹಿತರು ಮಕ್ಕಳೊಂದಿಗೆ ನೂರ್ಕಾಲ ನಗುನಗುತಾ ಸಂತೋಷ ನೆಮ್ಮದಿಯಿಂದ ಬದುಕುತ್ತಾರೆ ಎಂದು ಹಿಂದೂ ಸಂಪ್ರದಾಯದಲ್ಲಿ ನಂಬಲಾಗಿದೆ.
ಮತ್ತೊಂದೆಡೆ, ಮಹಿಳೆಯ ಮಡಿಲಲ್ಲಿ ಹಣ್ಣುಗಳನ್ನು ತುಂಬಿ ಆಶೀರ್ವಾದ ಮಾಡುವುದು ಮಹಿಳೆಯರಿಗೆ ಬಹಳ ವಿಶೇಷವಾಗಿದೆ. ಕೆಲವರು ನವ ವಧುವಿಗೆ ಅರಿಶಿನ ಹಾಕಿ ಸ್ನಾನ ಮಾಡುತ್ತಾರೆ. ಹೀಗೆ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಮಹಿಳೆಯರ ಚರ್ಮಕ್ಕೂ ಮುಖ್ಯವಾಗಿದೆ. ಅಷ್ಟೇ ಅಲ್ಲ, ಹುಟ್ಟುವ ಮಗು ಆರೋಗ್ಯವಾಗಿರುತ್ತದೆ ಎಂಬ ನಂಬಿಕೆಯೂ ಇದೆ. ಈ ಆಶೀರ್ವಾದವು ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾರೆ ಎಂಬ ಭರವಸೆಯಾಗಿದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ