Kannada News Spiritual Do this on Monday, Tuesday and Friday in the month of Shravan that will bring good luck
ಶ್ರಾವಣ ಮಾಸದಲ್ಲಿ ಸೋಮವಾರ, ಮಂಗಳವಾರ ಮತ್ತು ಶುಕ್ರವಾರ ಹೀಗೆ ಮಾಡಿದರೆ ಅದೃಷ್ಟ ಖುಲಾಯಿಸುತ್ತದೆ
Shravana Masa 2024: ಶ್ರಾವಣ ಮಾಸವೆಂದರೆ ಅನೇಕ ಜನರು ಲಕ್ಷ್ಮಿ ದೇವಿಯನ್ನು ಬಹಳ ನಿಷ್ಠೆಯಿಂದ ಪೂಜಿಸುತ್ತಾರೆ. ಅದರಲ್ಲೂ ಶ್ರಾವಣ ಮಾಸದ ಎರಡನೇ ವಾರದಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸಿ ವರಗಳನ್ನು ಪಡೆಯುತ್ತಾರೆ. ಈ ವರ್ಷ ಆಗಸ್ಟ್ 5 ರಂದು ಶ್ರಾವಣ ಮಾಸ ಆರಂಭವಾಗಿದೆ. ಶ್ರಾವಣ ಮಾಸದಲ್ಲಿ ಸೋಮವಾರ, ಮಂಗಳವಾರ ಮತ್ತು ಶುಕ್ರವಾರ ಅತ್ಯಂತ ಪವಿತ್ರವಾದ ಪೂಜೆಯ ದಿನಗಳು. ಈ ಮಾಸದಲ್ಲಿ ಸೋಮವಾರ, ಮಂಗಳವಾರ ಮತ್ತು ಶುಕ್ರವಾರದಂದು ಮಾಡುವ ಪೂಜೆಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ. ಗ್ರಹದೋಷಗಳನ್ನೂ ದೂರಮಾಡುತ್ತದೆ.