ಅತ್ಯಂತ ಪ್ರಬಲ ಮಂತ್ರ ಯಾವುದು ಗೊತ್ತಾ? ಅದರ ವಿಶೇಷ ಇಲ್ಲಿದೆ ನೋಡಿ

ಮಂತ್ರರಾಜನೆಂದೇ ಪ್ರಸಿದ್ಧಿಯಾಗಿರುವ ಗಾಯತ್ರಿ ಮಂತ್ರಕ್ಕೆ ಸರಿಸಾಟಿಯಾದ ಮಹಾತ್ಮೆಯುಳ್ಳ ಬೇರೆ ಯಾವ ಮಂತ್ರವು ಇಲ್ಲ. ವಿಶ್ವಾಮಿತ್ರ ಋಷಿಗಳೇ ರಚಿಸಿರುವ ಈ ಮಂತ್ರದ ಅರ್ಥ ಹೀಗಿದೆ.

ಅತ್ಯಂತ ಪ್ರಬಲ ಮಂತ್ರ ಯಾವುದು ಗೊತ್ತಾ? ಅದರ ವಿಶೇಷ ಇಲ್ಲಿದೆ ನೋಡಿ
ಗಾಯಿತ್ರಿ ಮಂತ್ರದ ವಿಶೇಷತೆ
Follow us
TV9 Web
| Updated By: ವಿವೇಕ ಬಿರಾದಾರ

Updated on: Jun 02, 2022 | 6:30 AM

ಪ್ರೊ. ಟಿ.ವಿ ಲಕ್ಷ್ಮೀನರಸಿಂಹಯ್ಯ

ಉಪಾಧ್ಯಕ್ಷರು ಅಖಿಲ ಭಾರತ ಜ್ಯೋತಿಷಿಗಳ ಸಂಘ ನವದೆಹಲಿ

ಜ್ಯೋತಿಷಿ  ಶ್ರೀ ಅವನಿ ಶೃಂಗೇರಿ ಮಠ, ಬೆಂಗಳೂರು ಮತ್ತು ಶ್ರೀ ಚಕ್ರ ಮಹಾಮೇರು ಪೀಠ, ಬಿಲಾಸ್ಪುರ

———————–

ಮಂತ್ರರಾಜನೆಂದೇ ಪ್ರಸಿದ್ಧಿಯಾಗಿರುವ ಗಾಯತ್ರಿ ಮಂತ್ರಕ್ಕೆ (Gayatri Mantra) ಸರಿಸಾಟಿಯಾದ ಮಹಾತ್ಮೆಯುಳ್ಳ ಬೇರೆ ಯಾವ ಮಂತ್ರವು ಇಲ್ಲ. ವಿಶ್ವಾಮಿತ್ರ ಋಷಿಗಳೇ (Vishwamitra Sage) ರಚಿಸಿರುವ ಈ ಮಂತ್ರದ ಅರ್ಥ ಹೀಗಿದೆ. ನಾಲ್ಕು ವೇದಗಳನ್ನು (Veda) ಹುಡುಕಿದರು ಸರಿ ಹೊಂದುವಂತಹ ಮಂತ್ರ ಬೇರೆ ಇಲ್ಲ. ಸಮಸ್ತ ವೇದಗಳು, ಯಜ್ಞಗಳು, ದಾನಗಳು, ವಿವಿಧ ತಪಸ್ಸುಗಳು ಸೇರಿ ಋಗ್ವೇದದಲ್ಲಿನ ಈ ಗಾಯತ್ರಿ ಮಂತ್ರ 16 ನೇ ಭಾಗ ಮಹಾತ್ಮೆ ಸಮವಾಗಲಾರದು.

ಚರ್ತುಮುಖ ಬ್ರಹ್ಮನೇ ಈ ಗಾಯತ್ರಿ ಮಂತ್ರವನ್ನು ಹೀಗೆ ವರ್ಣಿಸಿದ್ದಾನೆ. ಗಾಯತ್ರ್ಯಾ ನ ಪರಂ ಜಪ್ಯಂ ಗಾಯತ್ಯ್ರಾ ನ ಪರಂ ಧಪಃ ಗಾಯತ್ಯ್ರಾ ನ ಪರಂ ಧ್ಯೇಯಂ ಗಾಯತ್ಯ್ರಾ ಅ ನ ಪರಂ ಭುತಃ ಅಂದರೆ ಗಾಯತ್ರಿ ಮಂತ್ರಕ್ಕಿಂತ ಹೆಚ್ಚಿನ ಜಪ ಮತ್ತೊಂದಿಲ್ಲ. ಈ ಮೂರು ಪಾದಗಳಲ್ಲಿ ಅಡಕವಾಗಿರುವ 24 ಅಕ್ಷರಗಳು ಉಳ್ಳ ಈ ಗಾಯತ್ರಿ ಮಂತ್ರ ಹೀಗಿದೆ ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿಃ ಧಿಯೋಯೋನಃ ಪ್ರಚೋದಯಾತ್.

ಯಾ ಇದರ ಅರ್ಥ ಹೀಗಿದೆ ಯಾವ ಸವಿತ್ರ ರೂಪ ಪರಮೇಶ್ವರನು ನಮ್ಮ ಬುದ್ದಿ ವೃತ್ತಿಗಳನ್ನು ಒಳ್ಳೆಯ ಮಾರ್ಗದಲ್ಲಿ ಬಹಳ ಚೆನ್ನಾಗಿ ಪ್ರೇರೇಪಿಸುತ್ತಾನೋ ಅಂತಹ ಸ್ವಪ್ರಕಾಶ ರೂಪನಾದ ಸರ್ವಾಂತರಯಾಮಿಯಾದ ಸಚ್ಚಿದಾನಂದ ಪರಮಾತ್ಮನ ಒಂದು ದಿವ್ಯ ಶ್ರೇಷ್ಠ ತೇಜಸ್ಸನ್ನು ನಾವು ಧ್ಯಾನಿಸುತ್ತೇವೆ. ಇನ್ನು ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿಃ ಧಿಯೋಯೋನಃ ಪ್ರಚೋದಯಾತ್ ಈ 24 ಅಕ್ಷರಗಳಲ್ಲಿ ಒಂದೊಂದು ದೇವತೆಗಳು ಅಡಕವಾಗಿದ್ದಾರೆ. ಅಂದರೆ ಗಾಯತ್ರಿ ಮಹಾ ಮಂತ್ರದಲ್ಲಿ ಮಹಾ ಶಕ್ತಿ ಅಡಗಿದೆ ಈ ಮಂತ್ರದ ಪ್ರತಿಯೊಂದು ಅಕ್ಷರದಲ್ಲಿ ಒಂದೊಂದು ದೇವತೆಯ ಬೀಜಾಕ್ಷರವಾಗಿದೆ. 24 ಅಕ್ಷರಗಳ ಸಮಷ್ಟಿ ಗಾಯತ್ರಿ ಮಂತ್ರದಲ್ಲಿ ಗಾಯತ್ರಿ, ಸಾವಿತ್ರಿ, ಸರಸ್ವತಿ ಮತ್ತು ಸಂಧ್ಯಾದೇವತೆಗಳಲ್ಲದೇ ಗಣಪತಿಯಿಂದ ಆರಂಭಿಸಿ ತುಳಸಿವರೆಗೆ 24 ಪ್ರಮುಖ ದೇವರ ಮತ್ತು ಅವರ ದೈವ ಶಕ್ತಿ ಉಪಾಸನೆ ಇದೆ.

  1. ತಕಾರ ಇದು ಅಜ್ಞಾನ ಅಂದಕಾರವನ್ನು ತೊಲಗಿಸುತ್ತದೆ ಇದು ಗಣೇಶ ಗಾಯತ್ರಿ. ಗಣೇಶ್ವರ ಸಭಲತ್ವ ಶಕ್ತಿಗೆ ಅಧಿಷ್ಟಾತೃ ಆದ್ದರಿಂದಲೇ ಪ್ರತಿಯೊಂದು ಶುಭಕಾರ್ಯ ಪ್ರಾರಂಭದಲ್ಲಿ ಗಣಪತಿ ಪೂಜೆ ಮಾಡಬೇಕಾಗುತ್ತದೆ ಇದರಿಂದ ಸತ್ಕಾರ್ಯವು ಸಾಪಲ್ಯವನ್ನು ನೀಡುತ್ತದೆ. ಗಜಾನನ ಬುದ್ದಿ ಮತ್ತು ಶ್ರೇಷ್ಟ ಪ್ರಿತಿಪಾದವನ್ನು ಪ್ರಧಾನಿಸುತ್ತಾನೆ.
  2. ಸಕಾರ ಉಪಪಾತಗಳನ್ನು ಹೋಗಲಾಡಿಸುತ್ತದೆ ಇದು ನರಸಿಂಹ ಗಾಯತ್ರಿ. ನರಸಿಂಹ ದೇವರು ಪರಾಕ್ರಮ ಶಕ್ತಿಗೆ ಅಧಿಕಾರಿ. ಪುರುಷಾರ್ಥ, ಪರಾಕ್ರಮ, ವೀರತ್ವ ಮತ್ತು ವಿಜಯವನ್ನು ಇವನು ಪ್ರತಿಪಾದಿಸುತ್ತಾನೆ. ಪರಿಕಿತನ ಮತ್ತು ಆತಂಕಗಳನ್ನು ದೂರಮಾಡಿ ಸಾಧಕಗಳನ್ನು ಅಪಜಯ ಮತ್ತು ದುರಾಕ್ರಮಗಳಿಂದ ರಕ್ಷಿಸುವುದ ಮಾತ್ರವಲ್ಲದೇ ಸರ್ವ ಶತೃಗಳನ್ನು ಸಂಹರಿಸುತ್ತಾನೆ.
  3. ವಿ ವಕಾರ ಮಹಾ ಪಾತಗಳನ್ನು ಹೋಗಲಾಡಿಸುತ್ತದೆ ಇದು ವಿಷ್ಣುಗಾಯತ್ರಿ. ವಿಷ್ಣು ಪಾರಣಾಶಕ್ತಿಯ ಅಧಿಷ್ಟಾತೃ ಸರ್ವ ಪ್ರಾಣಿಗಳನ್ನು ಪೋಷಿಸುವ ಮಾಯೆಯನ್ನು ದೂರ ಮಾಡಿ ಭಕ್ತರನ್ನು ಸಂಸಾರ ಬಂಧನದಿಂದ ಬಿಡಿಸುವುದರಿಂದ ಇವನಿಗೆ ವಿಷ್ಣು ಎಂಬ ನಾಮ ಸಲ್ಲಿಸುತ್ತದೆ. ವಿಷ್ಣು ಎಂದರೆ ಎಲ್ಲಡೆ ಪ್ರವೇಶಿಸುವ ವ್ಯಾಪಿಸುವ ಎಂದರ್ಥ.
  4. ತುತುಕಾರ ದುಷ್ಟಗಣ ದೋಷಗಳನ್ನು ಹೋಗಲಾಡಿಸುತ್ತದೆ ಇದು ಶಿವ ಗಾಯತ್ರಿ. ಶಿವನು ಕಲ್ಯಾಣ ಶಕ್ತಾಧಿಕಾರಕ ಎಲ್ಲ ಜೀವರಿಗು ಆತ್ಮ ಪರಾಯಣತ್ವವನ್ನು ಸರ್ವ ವಿದ್ಯಾ ಕಲ್ಯಾಣ ಲಕ್ಷಣಗಳನ್ನು ಪ್ರಸಾದಿಸಿ ಅನಿಷ್ಟ ಪತಗಳಿಂದ ರಕ್ಷಣೆ ನೀಡುತ್ತಾನೆ.
  5. ರ್ವರ್ವಕಾರ ಇದು ಭ್ರೂಣ ಹತ್ಯಾ ದೋಷಗಳನ್ನು ಹೋಗಲಾಡಿಸುವುದು ಇದು ಕೃಷ್ಣ ಗಾಯತ್ರಿ. ಶ್ರೀ ಕೃಷ್ಣ ಭಗವಾನನು ಯೋಗ ಶಕ್ತಿ ಅಧಿಷ್ಟಾತೃ. ಎಲ್ಲರಿಗು ಕರ್ಮಯೋಗ, ಆತ್ಮನಿಷ್ಟೆ, ವೈರಾಗ್ಯ, ಸುಜ್ಞಾನ ಮತ್ತು ಸರಸ್ವತ್ಯಾಧಿಗಳನ್ನು ಅನುಗ್ರಹಿಸುತ್ತಾನೆ.
  6. ರೇರೇಕಾರ ಅಧಮ್ಯಾಗಮನ ದೋಷಗಳನ್ನು ಹೋಗಲಾಡಿಸಿತ್ತದೆ ಇದು ರಾಧಾ ಗಾಯತ್ರಿ. ರಾಧಾ ದೇವಿ ಪ್ರೇಮ ಶಕ್ತಿಗೆ ಅಧಿಷ್ಟಾತ್ರಿ ಭಕ್ತರಿಗೆ ಅಪಾರವಾದ ಪ್ರೇಮಾ ಭಾವವನ್ನು ಉಂಟು ಮಾಡಿ ಅಸೂಯೆ ಮತ್ತು ದ್ವೇಷ ಭಾವಾದಿಗಳನ್ನು ದೂರ ಮಾಡಿಸುತ್ತಾಳೆ.
  7. ಣಿಣಿಕಾರ ಅಭಕ್ಷಾಭಕ್ಷ ದೋಷಗಳನ್ನು ಹೋಗಲಾಡಿಸಿ ಇದು ಲಕ್ಷ್ಮಿ ಗಾಯತ್ರಿ. ಶ್ರೀ ಲಕ್ಷ್ಮಿ ದೇವಿ ಧನ ಮತ್ತು ವೈಭವೋಷ್ಟಗಳಿಗೆ ಅಧಿಷ್ಟಾತ್ರಿ. ಉಪಾಸಿಕರಿಗೆ ಈ ದೇವಿ ಧನ, ಐಶ್ವರ್ಯ, ಸಂಪದ, ಪದ ಮತ್ತು ಯಶಾಧಿಗಳನ್ನು ಭೌಕ್ಯಸಾದು ಸಕಾರಗಳನ್ನು ಪ್ರಸಾದಿಸುತ್ತಾಳೆ.
  8. ಯಂಯಂಕಾರ ಬ್ರಹ್ಮ ಹತ್ಯಾಪಾಸಗಳನ್ನು ಹೋಗಲಾಡಿಸಲು ಇದು ಅಗ್ನಿ ಗಾಯತ್ರಿ. ಅಗ್ನಿ ದೇವ ತೆಜೋ ಶಕ್ತಿಗೆ ಅಧಿಷ್ಟಾತೃ. ಉಷ್ಣತ್ವ, ತೇಜಸ್ಸು, ಪ್ರಕಾಶ ಮತ್ತು ಶಕ್ತಿ ಸಾಮರ್ಥ್ಯಗಳನ್ನು ಈ ದೇವ ಪ್ರಸಾದಿಸುತ್ತಾನೆ.
  9. ಭಕಾರ ಪುರುಷ ಹತ್ಯಾ ಪಾತಕಗಳನ್ನು ಹೋಗಲಾಡಿಸುವ ಇಂದ್ರ ಗಾಯತ್ರಿ. ಇಂದ್ರನು ರಕ್ಷಾ ಶಕ್ತಿಗೆ ಅಧಿಷ್ಟಾತೃ. ಈ ಸಾಧಕರನ್ನು ರೋಗ ಅನಿಷ್ಟ, ಆಕ್ರಮಣ, ಹಿಂಸೆ, ಚೋರ, ಶತೃ, ಭೂತ ಪ್ರೇತಾದಿಗಳಿಂದ ರಕ್ಷಿಸುತ್ತಾನೆ.
  10. ರ್ಗೋರ್ಗೋಕಾರ ಗೋ ಹತ್ಯಾ ದೋಷಗಳನ್ನು ವಿಮುಕ್ತಿಗೊಳಿಸುತ್ತದೆ ಇದು ಸರಸ್ವತಿ ಗಾಯತ್ರಿ. ಸರಸ್ವತಿ ದೇವಿ ಜ್ಞಾನ ಶಕ್ತಿಗೆ ಅಧಿಷ್ಟಾತ್ರಿ. ಜ್ಞಾನ, ವಿವೇಕ, ದೂರದರ್ಷಿತ್ವ, ಬುದ್ದಿ ಮತ್ತು ವಿಚಾರಶೀಲತ್ಯಾದಿಗಳನ್ನು ಉಪಾಸಿಗರಿಗೆ ಈಕೆ ದಯಪಾಲಿಸುತ್ತಾಳೆ.
  11. ದೇದೇಕಾರ ಸ್ತ್ರೀ ಹತ್ಯಾ ದೋಷಗಳನ್ನು ನಿವಾರಿಸುತ್ತದೆ ಇದು ದುರ್ಗಾ ಗಾಯತ್ರಿ. ದುರ್ಗಾ ದೇವಿ ಮನನ ಶಕ್ತಿಗೆ ಅಧಿಷ್ಟಾತ್ರಿ. ಎಲ್ಲ ವಿಗ್ನ ಭಾದೆಗಳ ಮೇಲೆ ವಿಜಯವನ್ನು ಪ್ರಸಾದಿಸುತ್ತಾಳೆ ದುಷ್ಟರನ್ನು ಮತ್ತು ಶತೃಗಳನ್ನು ನಾಶ ಮಾಡಿ ಭಕ್ತಾದಿಗಳಿಗೆ ಎಲ್ಲ ಪ್ರಕಾರದ ಶಕ್ತಿ ಸಾಮರ್ಥಗಳನ್ನು ಪ್ರಸಾದಿಸುತ್ತಾಳೆ.
  12. ವಕಾರ ಇದು ಹನುಮ ಗಾಯತ್ರಿ ಹನುಮಂತನು ನಿಷ್ಠಾ ಶಕ್ತಿಗೆ ಅಧಿಕಾರಿ. ತನ್ನ ಉಪಾಸಕರಿಗೆ ಭಕ್ತಿ ನಿಷ್ಠೆ, ಕರ್ತವ್ಯ ಪರಾಯಣತ್ವ ವಿಶ್ವಾಸ, ನಿರ್ಭಿತಿ, ಬ್ರಹ್ಮಚರ್ಯ ಮತ್ತು ಪಾಲನಾ ಶಕ್ತಿಯನ್ನು ನೀಡುತ್ತಾನೆ.
  13. ಸ್ಯಸ್ಯಕಾರ ಗುರು ಹತ್ಯಾ ದೋಷಗಳಿಂದ ಪಾರು ಮಾಡುತ್ತದೆ ಇದು ಪೃತ್ವಿ ಗಾಯತ್ರಿ. ಶ್ರೀ ಭೂದೇವಿ ದಾರಣಾ ಶಕ್ತಿ ದೇವತೆ. ಎಲ್ಲ ದೇವಗಳಿಗೆ ಗಂಭೀರತ್ವ, ಕ್ರಮಾಶೀತ್ವ, ಧೈರ್ಯ, ದೃಡತ್ವ, ಸಹಿಷ್ಣುತೆ ಮತ್ತು ನಿರತರತ್ವವನ್ನು ಈ ದೇವಿ ಅನುಗ್ರಹಿಸುತ್ತಾಳೆ.
  14. ಧೀಧೀಕಾರ ಪಿತೃ ಮತ್ತು ಮಅತೃ ವಧಾ ಪಾಪಗಳನ್ನು ಹೋಗಲಾಡಿಸುತ್ತದೆ ಇದು ಸೂರ್ಯ ಗಾಯತ್ರಿ. ಸೂರ್ಯ ಭಗವಾನನು ಪ್ರಾಣ ಶಕ್ತಿಗೆ ಅಧಿಷ್ಟಾತೃ. ಈ ಭಗವಾನನು ತನ್ನ ಉಪಾಸಕರಿಗೆ ಆರೋಗ್ಯ, ದೀರ್ಘಾಯಸ್ಸು, ಪ್ರಾಣಶಕ್ತಿ, ವಿವೇಕ, ತೇಜಸ್ಸು ಮತ್ತು ಉಷ್ಣತ್ವವನ್ನು ಪ್ರತಿಪಾದಿಸುತ್ತಾನೆ.
  15. ಮಕಾರ ಪೂರ್ವ ಜನ್ಮಾದಿಗಳ ಪಾಪಗಳನ್ನು ಹೋಗಲಾಡಿಸುತ್ತದೆ ಇದು ರಾಮ ಗಾಯತ್ರಿ. ಮರ್ಯಾದಾ ಪುರುಷೋತ್ತಮನಾದ ಪ್ರಭು ಶ್ರೀ ರಾಮಚಂದ್ರನು ಮರ್ಯಾದಾ ಶಕ್ತಿಗೆ ಅದಿಷ್ಟಾತೃ. ಈತ ಧರ್ಮ, ಮರ್ಯಾದೆ, ಶೀಲ, ಸೌಮ್ಯತೆ, ಸಯ್ಯಮ, ಮೈತ್ರಿ, ಪ್ರೇಮ, ಭಾವದೀರತ್ವ, ತೇತೆಕ್ಷ ಮುಂತಾದ ಗುಣಗಳನ್ನು ಕರಣಿಸುತ್ತಾನೆ.
  16. ಹಿಹಿಕಾರ ಅಶೇಶ ಪಾಪ ಸಮೂಹಗಳನ್ನು ಹೋಗಲಾಡಸುತ್ತದೆ ಇದು ಸೀತಾ ಗಾಯತ್ರಿ. ಸೀತಾ ಮಾತೆ ತಪಸ್ಸ ಶಕ್ತಿಗೆ ಅಧಿಷ್ಟಾತ್ರಿ ದೇವಿ. ತನ್ನ ಭಕ್ತರಿಗೆ ಈಕೆ ನಿರ್ವಿಕಾರ, ಪವಿತ್ರ ಭಾವದ ಸಾತ್ವಿಕ ವೃತ್ತಿ ಅನನ್ಯ ಭಾವದಿಂದ ಕೂಡಿದ ತಪೋ ನಿಷ್ಟೆಯನ್ನು ಕರುಣಿಸುತ್ತಾಳೆ. ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯುವಂತೆ ಈಕೆ ಭಕ್ತರನ್ನು ಪ್ರೆರೇಪಿಸುತ್ತಾಳೆ.
  17. ಧೀಧೀಕಾರ ಪ್ರಾಣಿ ವದಾ ಪಾಪಗಳನ್ನು ಹೋಗಲಾಡಿಸುತ್ತದೆ ಇದು ಚಂದ್ರ ಗಾಯತ್ರಿ. ಚಂದ್ರ ದೇವ ಶಾಂತಿ, ಶಕ್ತಿಗೆ ಅಧಿಷ್ಟಾತೃ. ಚಿಂತೆ, ನಿರಾಸೆ, ಕ್ಷೋಭ, ಮೋಹ, ಲೋಭ ಮತ್ತು ವಿಷ್ಣಾದಿ ಮಾನಸಿಕ ವೇದನೆಗಳನ್ನು ಶಾಂತಿಗೊಳಸಿ ಆಸೆ ಮತ್ತು ಶಾಂತಿಗಳನ್ನು ಪ್ರದಾನ ಮಾಡುತ್ತಾನೆ.
  18. ಯೋಯೋಕಾರ ಪ್ರತಿಗ್ರಹ ಶಾಪಗಳನ್ನು ಹೋಗಲಾಡಿಸುತ್ತದೆ. ಇದು ಯಮ ಗಾಯತ್ರಿ. ಯಮದೇವ ಕಾಲ ಶಕ್ತಿಯಾದಿತ್ಯಾ ಅಧಿಷ್ಟಾತೃ. ಕಾಲ ಶಕ್ತಿ ಸಮಯವನ್ನು ಸದುಪಯೋಗ ಮಾಡಿ ಮೃತ್ಯುವಿಗೆ ಭಯ ಪಡದಂತೆ ಮಾಡುತ್ತಾನೆ. ಸ್ಪೂರ್ತಿ ಮತ್ತು ಜಾಗರೂಕತ್ವಾದಿಗಳನ್ನು ಪ್ರಸಾದಿಸುತ್ತಾನೆ.
  19. ಯೋಯೋಕಾರ ಸರ್ವ ಪಾಪಗಳ ನಿವಾರಕ ಇದು ಬ್ರಹ್ಮ ಗಾಯತ್ರಿ. ಬ್ರಹ್ಮ ದೇವ ಸೃಷ್ಟಿ ಶಕ್ತಿಗೆ ಅಧಿಷ್ಟಾತೃ. ಸೃಷ್ಟಿ ರಚನೆ ಇವನ ಕಾರ್ಯ. ಪ್ರತ್ಯೇಕವಾಗಿ ಜಡ ಮತ್ತು ಚೇತನ ಪದಾರ್ಥಗಳನ್ನು ಸೃಷ್ಟಿ ಮಾಡಿ ಅವು ವರ್ದಿಸುವಂತೆ ಶಕ್ತಿಯನ್ನು ಪ್ರತಿಪಾದಿಸುತ್ತಾನೆ.
  20. ನಕಾರ ಇದರಿಂದ ಈಶ್ವರ ಪ್ರಾಪ್ತಿ ಇದು ವರುಣ ಗಾಯತ್ರಿ. ವರುಣ ದೇವ ರಸಶಕ್ತಾದಿಕಾರಿ. ಭಾವುಕತ್ವ, ಸರಸತ್ವ, ದಯಾಳುತ್ವ ಪ್ರಸನ್ನತೆ, ಮದುರತ್ವ, ಕಲಾಪ್ರಿಯತ್ಯಾದಿ ಭಾವಗಳನ್ನು ಹೃದಯದಲ್ಲಿ ಉದ್ಬವಿಸುವಂತೆ ಮಾಡಿ ಆನಂಧಾನುಭೂತಿಯನ್ನು ಅನುಗ್ಹಿಸುತ್ತಾನೆ.
  21. ಪ್ರಪ್ರ ಕಾರ ವಿಷ್ಣುಲೋಕ ಪ್ರಾಪ್ತಿಯಾಗುವಂತೆ ಮಾಡುತ್ತದೆ ಇದು ನಾರಾಯಣ ಗಾಯತ್ರಿ. ಶ್ರೀಮನ್ ನಾರಾಯಣ ಆದರ್ಶ ಶಕ್ತಿಗೆ ಅಧಿಷ್ಟಾತೃ. ಶ್ರೇಷ್ಠತ್ವ ಮಹತ್ವಾಕಾಂಶೆ, ಉತ್ಕೃಷ್ಟತೆ, ದಿವ್ಯಗುಣ, ಧರ್ಮ ಸ್ವಭಾವ, ನಿರ್ಮಲಚಿತ್ತ, ಸತ್ಯಾದಿ ಚಾರಿತ್ರ್ಯ, ಶುಭಕರ್ಮ ಮತ್ತು ಶೀಲತ್ವಾದಿಗಳನ್ನು ಪ್ರಸಾದಿಸುತ್ತಾನೆ.
  22. ಚೋಚೋಕಾರ ರುದ್ರಪದ ಪ್ರಾಪ್ತಿಯಾಗುತ್ತದೆ ಹೈಯಗ್ರೀವ ಗಾಯತ್ರಿ. ಹೈಯಗ್ರಿದೇವ ಸಾಹಸ ಶಕ್ತಿಗೆ ಅಧಿಷ್ಟಾತೃ. ಉತ್ಸಾಹ, ನಿರ್ಭಯತ್ವ, ಸಾಹಸ ಪ್ರವೃತ್ತಿ, ವೀರತ್ವ, ಶೌರ್ಯ, ದೈರ್ಯ ಪರುಷಾರ್ಥ ಮತ್ತು ಸಂಘರ್ಕ ಶಕ್ತಿಯನ್ನು ಭಕ್ತರಿಗೆ ಅನುಗ್ರಹಿಸುತ್ತಾನೆ.
  23. ದಕಾರ ಬ್ರಹ್ಮಪದ ಸಾಹಿತ್ಯ ಸಹಾಯಕ ಇದು ಹಂಸ ಗಾಯತ್ರಿ. ಹಂಸ ದೇವ ವಿವೇಕ ಶಕ್ತಿಗೆ ಅಧಿಷ್ಟಾತೃ. ಹಂಸ ಒಂದು ಪಕ್ಷಿ ಇದರ ವಿವೇಕ ಜಗತ್ ಪ್ರಸಿದ್ದಿಯಾಗಿದೆ. ಇದು ವಿವೇಕವನ್ನು, ದೂರದರ್ಶಿತ್ವವನ್ನು, ಸತ್​ಸಂಗತಿಯನ್ನು, ಉತ್ಕೃಷ್ಟ ಆಹರವನ್ನು, ಉಜ್ವಲ ಯಶಸಸ್ಉ ಮತ್ತು ಸಂತೋಷಗಳನ್ನು ಮತ್ತು ಮತ್ತೀತರ ಗುಣಗಳನ್ನು ಈ ದೇವ ದಯಪಾಲಿಸುತ್ತಾನೆ.
  24. ಯಾತ್ಯಾತ್​ಕಾರ ತ್ರೀಮೂರ್ತಿಗಳ ಪ್ರಸಾದ ಸಿದ್ದಿಯಾಗಲು ಇದು ಉಪಯುಕ್ತ ಇದು ತುಳಸಿ ಗಾಯತ್ರಿ. ಶ್ರೀ ತುಳಸಿ ದೇವಿ ಸೇವಾ ಶಕ್ತಿಗೆ ಅಧಿಷ್ಟಾತ್ರಿ. ಸತ್ಕಾರ್ಯಗಳಲ್ಲಿ ಸಾಧಕ ಶಕ್ತಿಗಳನ್ನು ಪ್ರೇರೇಪಿಸುತ್ತಾಳೆ. ಪ್ರಾಣಿ ಮಾತ್ರಗಳ ಸೇವೆಯನ್ನು ಮಾಡುವ ಪ್ರೇರಣೆಯನ್ನು ಉಂಟು ಮಾಡುತ್ತದೆ. ಆತ್ಮ ಶಾಂತಿ ಪರ ದುಖಃ ನಿವಾರಣೆ, ಪವಿತ್ರತೆ ಮತ್ತು ನಿಷ್ಠ ಎಂಬ ಫಲಗಳನ್ನು ಪ್ರಸಾದಿಸುತ್ತಾಳೆ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ