Ekadashi in February 2024: ಫೆಬ್ರವರಿಯ ಯಾವ ದಿನಗಳಲ್ಲಿ ಏಕಾದಶಿ ಬರುತ್ತೆ ಗೊತ್ತಾ? ಆಚರಣೆಗಳು ಹೇಗೆ?

ಏಕಾದಶಿ ತಿಂಗಳಲ್ಲಿ ಎರಡು ಬಾರಿ ಅಂದರೆ ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದ ಸಮಯದಲ್ಲಿ ಬರುತ್ತದೆ. ಹಾಗಾಗಿ 2024ರ ಫೆಬ್ರವರಿಯಲ್ಲಿ ಷಟ್ತಿಲಾ ಏಕಾದಶಿಯನ್ನು ಫೆ. 6 ರಂದು ಮತ್ತು ಜಯ ಏಕಾದಶಿಯನ್ನು ಫೆ. 20 ರಂದು ಆಚರಣೆ ಮಾಡಲಾಗುತ್ತದೆ. ಏಕಾದಶಿ ವ್ರತವನ್ನು ಭಕ್ತಿಯಿಂದ ಆಚರಿಸುವುದರಿಂದ ಸಂತೋಷ, ಸಂಪತ್ತು ಎಲ್ಲವೂ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಈ ದಿನದ ಆಚರಣೆ ಮತ್ತು ಮಹತ್ವದ ಬಗ್ಗೆ ತಿಳಿದುಕೊಳ್ಳಿ.

Ekadashi in February 2024: ಫೆಬ್ರವರಿಯ ಯಾವ ದಿನಗಳಲ್ಲಿ ಏಕಾದಶಿ ಬರುತ್ತೆ ಗೊತ್ತಾ? ಆಚರಣೆಗಳು ಹೇಗೆ?
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 30, 2024 | 2:29 PM

ಹಿಂದೂಗಳಿಗೆ ಏಕಾದಶಿ ವ್ರತಾಚರಣೆಯು ಅಪಾರ ಧಾರ್ಮಿಕ ಮಹತ್ವವನ್ನು ಹೊಂದಿದ್ದು, ಈ ಶುಭ ದಿನದಂದು ವಿಷ್ಣುವನ್ನು ಪೂಜಿಸಲಾಗುತ್ತದೆ. ಇನ್ನು ವೈಷ್ಣವರು ಕಟ್ಟುನಿಟ್ಟಾದ ಉಪವಾಸ ಮಾಡಿ ಮರುದಿನ ಅಂದರೆ ದ್ವಾದಶಿ ತಿಥಿಯಂದು ಅದನ್ನು ಮುರಿಯುತ್ತಾರೆ. ಏಕಾದಶಿಯು ತಿಂಗಳಲ್ಲಿ ಎರಡು ಬಾರಿ ಅಂದರೆ ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದ ಸಮಯದಲ್ಲಿ ಬರುತ್ತದೆ. ಭಕ್ತರು ಈ ಸಂದರ್ಭದಲ್ಲಿ ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸಿ ಭಗವಂತನ ಆಶೀರ್ವಾದ ಪಡೆಯಲು ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಹಾಗಾದರೆ ಈ ದಿನದ ಆಚರಣೆ ಮತ್ತು ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ.

2024ರ ಫೆಬ್ರವರಿಯಲ್ಲಿ ಬರುವ ಏಕಾದಶಿಗಳು:

ಷಟ್ತಿಲಾ ಏಕಾದಶಿಯ ದಿನಾಂಕ ಮತ್ತು ಸಮಯ: ಮಾಘ ತಿಂಗಳ (ಕೃಷ್ಣ ಪಕ್ಷ) ಫೆ. 5 ರಂದು ಸಂಜೆ 05:24ಕ್ಕೆ ಷಟ್ತಿಲಾ ಏಕಾದಶಿ ತಿಥಿ ಪ್ರಾರಂಭವಾಗುತ್ತದೆ. ಫೆ.6 ರಂದು 04:07 ರ ಸಂಜೆ ಷಟ್ತಿಲಾ ಏಕಾದಶಿಯ ತಿಥಿ ಕೊನೆಗೊಳ್ಳುತ್ತದೆ.

ಜಯ ಏಕಾದಶಿ: ಮಾಘ ತಿಂಗಳ (ಶುಕ್ಲ ಪಕ್ಷ) ಫೆ.19 ರಂದು ಬೆಳಿಗ್ಗೆ 08:49 ಕ್ಕೆ ಜಯ ಏಕಾದಶಿ ತಿಥಿ ಪ್ರಾರಂಭವಾಗುತ್ತದೆ. ಫೆ. 20 ರಂದು ಬೆಳಿಗ್ಗೆ 08:49ಕ್ಕೆ ಈ ತಿಥಿ ಕೊನೆಗೊಳ್ಳುತ್ತದೆ.

ಏಕಾದಶಿ ದಿನದ ಮಹತ್ವ:

ವರ್ಷದಲ್ಲಿ 24 ಏಕಾದಶಿ ಆಚರಣೆಗಳು ಇರುವುದರಿಂದ ಭಕ್ತರು ಪ್ರತಿ ತಿಂಗಳು ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದ ಸಮಯದಲ್ಲಿ ಈ ಉಪವಾಸವನ್ನು ಆಚರಿಸುತ್ತಾರೆ. ಹಿಂದೂ ಧರ್ಮದಲ್ಲಿ ಏಕಾದಶಿಗೆ ತನ್ನದೇ ಆದ ಮಹತ್ವವಿರುವುದರಿಂದ ಈ ಉಪವಾಸವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಏಕಾದಶಿ ಉಪವಾಸವನ್ನು ಅಪಾರ ಭಕ್ತಿ ಮತ್ತು ಸಮರ್ಪಣೆಯಿಂದ ಆಚರಿಸುವವನಿಗೆ ಸಂಪತ್ತು, ಆರೋಗ್ಯ ಮತ್ತು ಎಲ್ಲಾ ಲೌಕಿಕ ಸಂತೋಷ ಸಿಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಅಯೊಧ್ಯೆಯ ರಾಮ ಮಂದಿರದಲ್ಲಿ 48 ದಿನಗಳ ಮಂಡಲೋತ್ಸವ ಸೇವೆ, ಹೇಗಿರುತ್ತದೆ ಈ ಆಚರಣೆ ಗೊತ್ತಾ?

ಏಕಾದಶಿ: ಆಚರಣೆಗಳು

1. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ.

2. ಮನೆ ಮತ್ತು ಪೂಜಾ ಕೋಣೆಯನ್ನು ಸ್ವಚ್ಛಗೊಳಿಸಿಕೊಳ್ಳಿ.

3. ವಿಷ್ಣು ಮೂರ್ತಿ ಅಥವಾ ಫೋಟೋ ಇದ್ದಲ್ಲಿ ಅದನ್ನು ಮರದ ಮಣೆ ಅಥವಾ ಹಲಗೆಯ ಮೇಲೆ ಇಟ್ಟು ಅದಕ್ಕೆ ಅಲಂಕಾರ ಮಾಡಿ.

4. ತುಳಸಿ ಮಾಲೆ ಮತ್ತು ಹೂ ಮಾಲೆಗಳನ್ನು ದೇವರಿಗೆ ಅರ್ಪಿಸಿ.

5. ವಿಗ್ರಹದ ಮುಂದೆ ತುಪ್ಪದ ದೀಪವನ್ನು ತಪ್ಪದೇ ಹಚ್ಚಿ.

6. “ಓಂ ನಮೋ ಭಗವತೇ ವಾಸುದೇವಾಯ” ಎಂಬ ಮಂತ್ರವನ್ನು 108 ಬಾರಿ ಪಠಿಸಿ ಮತ್ತು ಶ್ರೀ ಕೃಷ್ಣ ಮಹಾ ಮಂತ್ರವನ್ನು 108 ಬಾರಿ ಪಠಿಸಿ.

7. ಭಗವಂತನಿಗೆ ಪಂಚಾಮೃತ ಮತ್ತು ನೈವೇದ್ಯವನ್ನು ಅರ್ಪಿಸಿ.

8. ಸಂಜೆ ಕೂಡ ವಿಷ್ಣುವಿಗೆ ಪ್ರಾರ್ಥನೆ ಸಲ್ಲಿಸಿ ಆರತಿ ಮಾಡಬೇಕು.

9. ಹಸಿವನ್ನು ತಡೆದುಕೊಳ್ಳಲು ಆಗದವರು ಸಂಜೆ ಹಣ್ಣು ಮತ್ತು ಹಾಲಿನ ಉತ್ಪನ್ನಗಳನ್ನು ಬಳಕೆ ಮಾಡಬಹುದು.

10. ಅಂತಿಮವಾಗಿ ಮರುದಿನ ದ್ವಾದಶಿ ಸಮಯದಲ್ಲಿ ಉಪವಾಸವನ್ನು ಮುರಿಯಬೇಕು.

ಈ ದಿನ ಯಾವ ಮಂತ್ರವನ್ನು ಪಠಣ ಮಾಡಬೇಕು?

1. ಓಂ ನಮೋ ಭಗವತೇ ವಾಸುದೇವಾಯ

2. ಶ್ರೀ ಕೃಷ್ಣ ಗೋವಿಂದ ಹರೇ ಮುರಾರಿ ಹೇ ನಾಥ್ ನಾರಾಯಣ ವಾಸುದೇವ

3. ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ

4. ಓಂ ನಾರಾಯಣಾಯ ವಿದ್ಮಹೇ, ವಾಸುದೇವಾಯ ಧೀಮಹೀ ತನ್ನೋ ವಿಷ್ಣು ಪ್ರಚೋದಯಾತ್

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ