ಏಕಾದಶಿ ವರ್ಷದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದ್ದು, ಈ ದಿನ ವಿಷ್ಣುವನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ ಜೊತೆಗೆ ವಿಷ್ಣು ಭಕ್ತರು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ. ಈ ಉಪವಾಸವು ಸೂರ್ಯೋದಯದಿಂದ ಪ್ರಾರಂಭ ಮಾಡಿ ಮರುದಿನ ಅಂದರೆ ದ್ವಾದಶಿಯಂದು ತಮ್ಮ ಉಪವಾಸವನ್ನು ಅಂತ್ಯಗೊಳಿಸುತ್ತಾರೆ. ಏಕಾದಶಿ ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದ ಸಮಯದಲ್ಲಿ ಅಂದರೆ ತಿಂಗಳಿಗೆ ಎರಡು ಬಾರಿ ಬರುತ್ತದೆ. ಹಾಗಾಗಿ ಮಾರ್ಚ್ ತಿಂಗಳಲ್ಲಿ ಆಚರಿಸುವ ಏಕಾದಶಿ ವ್ರತದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಸಮಯ? ಮಹತ್ವ ಮತ್ತು ಆಚರಣೆಯ ವಿಧಾನಗಳ ಬಗ್ಗೆ ತಿಳಿಯಿರಿ.
2024 ಮಾರ್ಚ್ ತಿಂಗಳ ಮೊದಲ ಏಕಾದಶಿ: ವಿಜಯ ಏಕಾದಶಿ (ಕೃಷ್ಣ ಪಕ್ಷ) ತಿಥಿಯು ಮಾ. 6 ರಂದು ಬೆಳಿಗ್ಗೆ 06:30 ಕ್ಕೆ ಪ್ರಾರಂಭವಾಗಿ, ಮಾ. 7 ರಂದು ಬೆಳಿಗ್ಗೆ 04:13ಕ್ಕೆ ತಿಥಿ ಮುಕ್ತಾಯವಾಗುತ್ತದೆ. ಹಾಗಾಗಿ ಮಾರ್ಚ್ 6 ಬುಧವಾರ ದಂದು ವಿಜಯ ಏಕಾದಶಿಯನ್ನು ಆಚರಣೆ ಮಾಡಲಾಗುತ್ತದೆ.
ಅಮಲಕಿ ಏಕಾದಶಿ (ಶುಕ್ಲ ಪಕ್ಷ) ತಿಥಿಯು ಮಾ. 20 ರಂದು ಬೆಳಿಗ್ಗೆ 12:21 ಕ್ಕೆ ಪ್ರಾರಂಭವಾಗುತ್ತದೆ. ಮಾ. 21 ರಂದು ಬೆಳಿಗ್ಗೆ 02:22 ಕ್ಕೆ ತಿಥಿ ಮುಕ್ತಾಯವಾಗುತ್ತದೆ. ಹಾಗಾಗಿ ಮಾರ್ಚ್ 20 ರಂದು ಬುಧವಾರ ಅಮಲಕಿ ಏಕಾದಶಿಯನ್ನು ಆಚರಿಸಲಾಗುತ್ತದೆ.
ಏಕಾದಶಿ ಹಿಂದೂಗಳಲ್ಲಿ ಹೆಚ್ಚಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ವಿಷ್ಣು ಭಕ್ತರು ಈ ಉಪವಾಸವನ್ನು ಆಚರಿಸಿಸುತ್ತಾರೆ. ಈ ದಿನ ವಿಷ್ಣು ದೇವರ ಮಂತ್ರಗಳನ್ನು ಪಠಿಸುವ ಮೂಲಕ, ದೇವರಿಗೆ ನೈವೇದ್ಯವನ್ನು ಅರ್ಪಿಸಿ, ಏಕಾದಶಿ ವ್ರತ ಕಥೆಯನ್ನು ಕೇಳುವ ಮೂಲಕ ಭಗವಂತನ ಆಶೀರ್ವಾದವನ್ನು ಪಡೆಯುತ್ತಾರೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ