
ಜನವರಿ ಮಾಸ ಕಳೆದು, ನಾವೀಗ ವರ್ಷದ ಎರಡನೇ ತಿಂಗಳಿಗೆ ಕಾಲಿಡುತ್ತಿದ್ದೇವೆ. ಹಿಂದೂ ಪಂಚಾಂಗದಲ್ಲಿ ಈ ಫೆಬ್ರವರಿ ತಿಂಗಳು ಮಾಘ ಮಾಸವೆಂದು ಜನಪ್ರಿಯವಾಗಿದೆ. ಅಷ್ಟೇ ಅಲ್ಲದೆ ಹಿಂದೂ ಧರ್ಮದಲ್ಲಿ ಈ ಮಾಘ ಮಾಸವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. 2025 ರ ಮಾಘ ಮಾಸವು ಜನವರಿ 30 ಅಂದರೆ ಇಂದಿನಿಂದ ಆರಂಭವಾಗಿ ಫೆಬ್ರವರಿ 28 ರ ವರೆಗೆ ಇರಲಿದೆ. ಈ ಅವಧಿಯಲ್ಲಿ ಪೂಜೆ ಪುನಸ್ಕಾರ, ದಾನ ಧರ್ಮ ಮತ್ತು ಗಂಗಾಸ್ನಾನ ಮಾಡುವುದರಿಂದ ದೀರ್ಘಕಾಲದ ಶುಭಫಲವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಹೀಗಿರುವಾಗ ಈ ಪವಿತ್ರ ಮಾಸದಲ್ಲಿ ಯಾವೆಲ್ಲಾ ಹಬ್ಬ ಹರಿದಿನಗಳನ್ನು, ವ್ರತಾಚರಣೆಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.
• 1 ಫೆಬ್ರವರಿ 2025 – ವಿನಾಯಕ ಚತುರ್ಥಿ
• 2 ಫೆಬ್ರವರಿ 2025 – ವಸಂತ ಪಂಚಮಿ
• 4 ಫೆಬ್ರವರಿ 2025 – ರಥ ಸಪ್ತಮಿ
• 4 ಫೆಬ್ರವರಿ 2025- ನರ್ಮದಾ ಜಯಂತಿ
• 5 ಫೆಬ್ರವರಿ 2025- ಭೀಷ್ಮಾಷ್ಟಮಿ
• 8 ಫೆಬ್ರವರಿ 2025 – ಜಯ ಏಕಾದಶಿ
• 9 ಫೆಬ್ರವರಿ 2025 – ಪ್ರದೋಷ ವ್ರತ
• 12 ಫೆಬ್ರವರಿ 2025 – ಮಾಘ ಪೂರ್ಣಿಮಾ ವ್ರತ
• 12 ಫೆಬ್ರವರಿ 2025 – ಕುಂಭ ಸಂಕ್ರಾಂತಿ
• 12 ಫೆಬ್ರವರಿ 2025 – ಗುರು ರವಿದಾಸ್ ಜಯಂತಿ
• 13 ಫೆಬ್ರವರಿ 2025 – ಫಾಲ್ಗುಣ ಮಾಸ ಆರಂಭ
• 16 ಫೆಬ್ರವರಿ 2025 – ದ್ವಿಜಪ್ರಿಯ ಸಂಕಷ್ಟ ಚತುರ್ಥಿ
• 20 ಫೆಬ್ರವರಿ 2025 – ಶಬರಿ ಜಯಂತಿ
• 21 ಫೆಬ್ರವರಿ 2025 – ಜಾನಕಿ ಜಯಂತಿ
• 24 ಫೆಬ್ರವರಿ 2025 – ಸರ್ವೈಕಾದಶಿ
• 25 ಫೆಬ್ರವರಿ 2025 – ಪ್ರದೋಷ ವ್ರತ
• 26 ಫೆಬ್ರವರಿ 2025 – ಮಹಾಶಿವರಾತ್ರಿ
• 27 ಫೆಬ್ರವರಿ 2025 – ಫಾಲ್ಗುಣ ಅಮವಾಸ್ಯೆ
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ