Vastu Tips: ಧನ ಲಕ್ಷ್ಮೀ ಖುಲಾಯಿಸಬೇಕು ಅಂದರೆ ಮನೆಯಲ್ಲಿ ತಿಜೋರಿ ಇಡುವುದು ಎಲ್ಲಿ ಎಂಬುದನ್ನು ತಿಳಿದುಕೊಳ್ಳೀ

| Updated By: ಆಯೇಷಾ ಬಾನು

Updated on: Sep 26, 2021 | 8:48 AM

ಅಪ್ಪಿತಪ್ಪಿಯೂ ಕೋರ್ಟ್​ ವಿಚಾರಣೆಯಲ್ಲಿರುವ, ವಿವಾದಿತ ಕಾಗದ ಪತ್ರಗಳನ್ನು ತಿಜೋರಿಯಲ್ಲಿ ತಂದಿಡಬೇಡಿ. ಕಾನೂನು ಮಾನ್ಯ ಭೂ ದಾಖಲೆಗಳನ್ನು ಇಡಬಹುದು. ಇಲ್ಲವಾದಲ್ಲಿ ಸಮಸ್ಯೆಗಳು ಹೆಚ್ಚಾಗಿಬಿಡುತ್ತವೆ. ಧನ ಸಂಪತ್ತು ಕ್ಷೀಣಿಸುತ್ತಾ ಹೋಗುತ್ತದೆ.

Vastu Tips: ಧನ ಲಕ್ಷ್ಮೀ ಖುಲಾಯಿಸಬೇಕು ಅಂದರೆ ಮನೆಯಲ್ಲಿ ತಿಜೋರಿ ಇಡುವುದು ಎಲ್ಲಿ ಎಂಬುದನ್ನು ತಿಳಿದುಕೊಳ್ಳೀ
ಅದೃಷ್ಟ ಖುಲಾಯಿಸಬೇಕು ಅಂದರೆ ತಿಜೋರಿಯನ್ನು ಎಲ್ಲಿಡಬೇಕು ಎಂಬುದನ್ನು ತಿಳಿದುಕೊಳ್ಳೀ
Follow us on

ವಾಸ್ತು ನಿಯಮಗಳ ಪ್ರಕಾರ ಮನೆಯಲ್ಲಿ ತಿಜೋರಿ, ಲಾಕರ್ ಅಥವಾ ಹಣದ ಪೆಟ್ಟಿಗೆಯನ್ನು ಎಲ್ಲಿಟ್ಟರೆ ಅದೃಷ್ಟ ಖುಲಾಯಿಸುತ್ತದೆ ಎಂಬುದನ್ನು ತಿಳಿದುಕೊಳ್ಳೀ. ತಿಜೋರಿಯಲ್ಲಿ ಲಕ್ಷ್ಮಿ ಮತ್ತು ಕುಬೇರ ವಾಸವಾಗಿರುತ್ತಾರೆ. ಹಾಗಾಗಿ ಮಹತ್ವದ ತಿಜೋರಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವಾಗ ಯಾವ ಜಾಗದಲ್ಲಿ ಇಡಬೇಕು, ಅದನ್ನು ಹೇಗೆ ಬಳಸಬೇಕು ಎಂಬುದನ್ನು ವಾಸ್ತು ಶಾಸ್ತ್ರದ ಪ್ರಕಾರ ತಿಳಿದುಕೊಳ್ಳೋಣ ಬನ್ನೀ.

ತಿಜೋರಿ ಇಡುವುದಕ್ಕೆ ಅತ್ಯಂತ ಸೂಕ್ತ ಜಾಗವೆಂದರೆ
ವಾಸ್ತುವಿನ ನಿಯಮಗಳ ಪ್ರಕಾರ ಲಾಕರ್ ಅಥವಾ ತಿಜೋರಿಯನ್ನು ಅಥವಾ ಹಣ ಇಡುವ ಇತರೆ ಯಾವುದೇ ಜಾಗವನ್ನು ಅಂದರೆ ಅಲ್ಮೇರಾದಂತಹ ಜಾಗಗಳಲ್ಲಿ ಇಡುವಾಗ ದಕ್ಷಿಣ ಭಾಗದಲ್ಲಿ ಸುರಕ್ಷಿತವಾಗಿ ಇಡಬೇಕು. ತಿಜೋರಿಯ ಬಾಗಿಲು ಉತ್ತರ ಅಥವಾ ಪಶ್ಚಿಮದ ಕಡೆಗೆ ತೆರೆದುಕೊಳ್ಳಬೇಕು. ಇಲ್ಲವಾದರೆ ಪೂರ್ವದ ಕಡೆ ತಿಜೋರಿ ಬಾಗಿಲು ತೆರೆದುಕೊಳ್ಳುವಂತಿರಬೇಕು. ಇದರಿಂದ ಮನೆಯಲ್ಲಿ ಹಣ ಸಮೃದ್ಧಿಯಾಗುತ್ತದೆ. ಅದರೆ ಗಮನಿಸಿ ತಿಜೋರಿಯ ಬಾಗಿಲು ಎಂದಿಗೂ ದಕ್ಷಿಣಕ್ಕೆ ತೆರೆದುಕೊಳ್ಳಬಾರದು. ಹಾಗೆ ದಕ್ಷಿಣಕ್ಕೆ ಬಾಗಿಲು ತೆರೆದುಕೊಳ್ಳುವಂತಿದ್ದರೆ ದುರಾದೃಷ್ಟದ ಬಾಗಿಲು ತೆರೆದಂತಾಗಿ ಮನೆಯಲ್ಲಿ ಧನ ಸಂಪತ್ತು ಉಳಿಯುವುದಿಲ್ಲ. ಇದರ ಜೊತೆಗೆ ವಾಸ್ತು ಪ್ರಕಾರ ಈ ನಿಮಯಗಳನ್ನೂ ಪಾಲಿಸಬೇಕು:

1. ತಿಜೋರಿಯ ಬಾಗಿಲು ಎಂದಿಗೂ ಟಾಯ್ಲೆಟ್​ ಅಥವಾ ಬಾತ್​ ರೂಮ್​ ಕಡೆಗೆ ತೆರೆದುಕೊಳ್ಳುವಂತೆ ಇರಬಾರದು. ಇದರಿಂದ ಹಣದ ಉಳಿತಾಯ ಆಗದು. ಮನೆಯಲ್ಲಿ ಧನ ಸಂಪತ್ತು ವೃದ್ಧಿಸಬೇಕು ಎಂತಾದರೆ ಅದನ್ನು ಎಂದಿಗೂ ಖಾಲಿ ಇಡಬಾರದು. ಜೇಬಲ್ಲಿಡುವ ಪರ್ಸ್​​​ ಸಹ ಎಂದಿಗೂ ಖಾಲಿ ಇರಬಾರದು.

2. ತುಂಬಾ ಪ್ರಯತ್ನದ ಬಳಿಕವೂ ಮನೆಯಲ್ಲಿ ಧನ ರಾಶಿ ನಿಲ್ಲುವುದಿಲ್ಲ ಎಂತಾದರೆ ಶುಕ್ರವಾರದಂದು 5 ಕವಡೆಗಳನ್ನು ತಂದು ತಿಜೋರಿಯಲ್ಲಿ ಇಡಬೇಕು. ಕಮಲದ ಹೂವನ್ನು ಸಹ ಯಾವುದಾದರೂ ಒಂದು ಶುಕ್ರವಾರದಂದು ತಿಜೋರಿಯಲ್ಲಿ ತಂದಿಡಿ. ಪ್ರತಿ ತಿಂಗಳೂ ಈ ಹೂವನ್ನು ಬದಲಿಸುತ್ತಿರಬೇಕು. ಕವಡೆ ಮತ್ತು ಕಮಲದ ಹೂವು ಧನ ಲಕ್ಷ್ಮಿಗೆ ಅತ್ಯಂತ ಪ್ರಿಯವಾದುದು. ಇದರಿಂದ ಲಕ್ಷ್ಮಿ ಸುಪ್ರಸನ್ನಳಾಗಿ ಸದಾ ನಿಮ್ಮ ಮನೆಯಲ್ಲಿಯೇ ನೆಲೆಸುತ್ತಾಳೆ.

3. ತಿಜೋತಿ ಅಂದರೆ ಅದು ಲಕ್ಷ್ಮಿ ಮತ್ತು ಕುಬೇರನ ವಾಸ ಸ್ಥಳ. ಹಾಗಾಗಿ ಇದರೊಳಗೆ ಸದಾ ಕೆಂಪು ಬಟ್ಟೆಯನ್ನು ಸುತ್ತಿಡಬೇಕು. ತಿಜೋರಿಯನ್ನು ಯವಾಗಂದರೆ ಆವಾಗ, ಯಾವ ಕೈಯಲ್ಲಿ ಅಂದರೆ ಆ ಕೈಯಲ್ಲಿ ತೆಗೆಯಬಾರದು. ಸ್ವಚ್ಛ ಕೈಯಲ್ಲಿ ತಿಜೋರಿ ತೆಗೆಯಬೇಕು. ಇನ್ನು ತಿಜೋರಿ ತೆಗೆಯುವ ವೇಳೆ ಚಪ್ಪಲಿ, ಶೂಗಳನ್ನು ದೂರ ಬಿಟ್ಟು ಬಂದು ತೆರೆಯಬೇಕು.

4. ಅಪ್ಪಿತಪ್ಪಿಯೂ ಕೋರ್ಟ್​ ವಿಚಾರಣೆಯಲ್ಲಿರುವ, ವಿವಾದಿತ ಕಾಗದ ಪತ್ರಗಳನ್ನು ತಿಜೋರಿಯಲ್ಲಿ ತಂದಿಡಬೇಡಿ. ಕಾನೂನು ಮಾನ್ಯ ಭೂ ದಾಖಲೆಗಳನ್ನು ಇಡಬಹುದು. ಇಲ್ಲವಾದಲ್ಲಿ ಸಮಸ್ಯೆಗಳು ಹೆಚ್ಚಾಗಿಬಿಡುತ್ತವೆ. ಧನ ಸಂಪತ್ತು ಕ್ಷೀಣಿಸುತ್ತಾ ಹೋಗುತ್ತದೆ.

(follow the vastu tips to place tijori or vault to gain money and good luck)