ನಿಮ್ಮ ದುಃಖಕ್ಕೆ ಆರು ಕಾರಣಗಳು ಯಾವುವು ಗೊತ್ತಾ? ಗರುಡ ಪುರಾಣದಲ್ಲಿ ಅದರ ವಿವರಣೆ ಹೀಗಿದೆ

ಗ್ರಂಥ ಮತ್ತು ಧರ್ಮಶಾಸ್ತ್ರಗಳು ವ್ಯಕ್ತಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತದೆ. ಆದರೆ ನಮ್ಮಲ್ಲಿ ಅನೇಕರು ಅದರಲ್ಲಿ ತಿಳಿಯಹೇಳಿರುವ ಸಂಗತಿಗಳನ್ನು ಅನುಸರಿಸುವುದೇ ಇಲ್ಲ.

ನಿಮ್ಮ ದುಃಖಕ್ಕೆ ಆರು ಕಾರಣಗಳು ಯಾವುವು ಗೊತ್ತಾ? ಗರುಡ ಪುರಾಣದಲ್ಲಿ ಅದರ ವಿವರಣೆ ಹೀಗಿದೆ
ನಿಮ್ಮ ದುಃಖಕ್ಕೆ ಆರು ಕಾರಣಗಳು ಇಲ್ಲಿವೆ; ಗರುಡ ಪುರಾಣದಲ್ಲಿ ಅದರ ವಿವರಣೆ ಹೀಗಿದೆ
Follow us
TV9 Web
| Updated By: preethi shettigar

Updated on: Sep 26, 2021 | 7:54 AM

ಗರುಡ ಪುರಾಣದಲ್ಲಿ ಜೀವನವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವುದಕ್ಕೆ ಅನೇಕ ಸಂಗತಿಗಳನ್ನು ತಿಳಿಯ ಹೇಳಲಾಗಿದೆ. ಇದನ್ನು ಅನುಸರಿಸುತ್ತಾ ಹೋದರೆ ಸಾಕು ಎಲ್ಲ ಕಷ್ಟಗಳಿಂದಲೂ ದೂರವಾಗಿ ನಿಮ್ಮ ಜೀವನ ದಡ ತಲುಪುತ್ತದೆ. ಗ್ರಂಥ ಮತ್ತು ಧರ್ಮಶಾಸ್ತ್ರಗಳು ವ್ಯಕ್ತಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತದೆ. ಆದರೆ ನಮ್ಮಲ್ಲಿ ಅನೇಕರು ಅದರಲ್ಲಿ ತಿಳಿಯಹೇಳಿರುವ ಸಂಗತಿಗಳನ್ನು ಅನುಸರಿಸುವುದೇ ಇಲ್ಲ. ಅವುಗಳನ್ನು ಕೇಳಿದಾಗ ಪಾಲಿಸುವುದಾಗಿ ತಲೆದೂಗುತ್ತೇವೆ, ಆದರೆ ಮರುಕ್ಷಣವೇ ಅದನ್ನು ಅಲ್ಲಿಯೇ ಬಿಟ್ಟುಬಿಡುತ್ತೇವೆ. ಅದನ್ನು ಆಚರಣೆಗೆ ತರುವುದಿಲ್ಲ. ಈ ಶಾಸ್ತ್ರಗಳನ್ನು ಆಲಿಸಿ, ಅರಿತು, ಅಳವಡಿಸಿಕೊಂಡಿದ್ದೇ ಆದರೆ ಜೀವನದ ಎಲ್ಲ ಸಂಕಷ್ಟಗಳನ್ನೂ ದೂರ ಮಾಡಿಕೊಳ್ಳಬಹುದು.

ಗರುಡ ಮಹಾಪುರಾಣದಲ್ಲಿ ಜೀವನವನ್ನು ಚೆನ್ನಾಗಿ ಮುನ್ನಡೆಸಿಕೊಂಡು ಹೋಗುವುದರ ಜೊತೆಗೆ ಸಾವು ಮತ್ತು ಆ ನಂತರದ ಸ್ಥಿತಿಗಳ ವರ್ಣನೆ ನೀಡಲಾಗಿದೆ. ಈ ಪುರಾಣವನ್ನೆಲ್ಲಾ ವಿಷ್ಣು ಭಗವಾನ್ ತನ್ನ ವಾಹನವಾದ ಗರುಡನಿಗೆ ಸ್ವಯಂ ಹೇಳಿರುವುದಾಗಿ ಗ್ರಂಥಗಳು ಹೇಳುತ್ತವೆ. ಇನ್ನು ಆಚಾರಕಾಂಡದಲ್ಲಿ ಕೆಲವು ಸಂಗತಿಗಳನ್ನು ಉಲ್ಲೇಖಿಸಲಾಗಿದೆ. ಕೆಟ್ಟ ಆಚಾರ ವಿಚಾರಗಳ ಬಗ್ಗೆ ಇದರಲ್ಲಿ ಹೇಳಲಾಗಿದೆ. ಇದರಿಂದಲೇ ಜೀವನದಲ್ಲಿ ದುಃಖ ಸೃಷ್ಟಿಯಾಗುವುದು. ಆರು ಆಚಾರ ಸಂಹಿತೆಗಳನ್ನು ಇಲ್ಲಿ ನೀಡಲಾಗಿದೆ.

1. ಚಿಂತೆ ಚಿಂತೆ ಅಂದರೆ ಅದು ಚಿತೆಗೆ ಸಮಾನ ಎಂದು ಪರಿಗಣಿಸಲಾಗಿದೆ. ಚಿಂತೆ ಜೀವನವನ್ನು ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ. ಚಿಂತೆಯಿದ್ದೆಡೆ ಚಿಂತನೆ ಮಾಡುವ, ಆಲೋಚಿಸುವ ಶಕ್ತಿಯನ್ನೇ ಕಳೆದುಕೊಂಡುಬಿಡುತ್ತೇವೆ. ಆಗಲೇ ಆಗಬಾರದ್ದು ಆಗುವುದು, ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಕಷ್ಟಗಳನ್ನು ಮತ್ತಷ್ಟು ಹೆಚ್ಚಾಗುವುದಕ್ಕೆ ಇದೇ ಕಾರಣವಾಗಿಬಿಡುತ್ತದೆ.

2. ಭಯ ಭೀತಿ ಎಂಬೋದು ಸಾವಿಗೆ ಸಮಾನ ಅನ್ನುತ್ತಾರೆ. ಭಯ ಯಾವುದೇ ಸಮಸ್ಯೆಗೆ ಪರಿಹಾರ ಅಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಅಂದ್ರೆ ಅದನ್ನು ಎದುರಿಸುವುದು ಅತ್ಯಗತ್ಯ. ನಿಮ್ಮ ಮನದಲ್ಲಿ ಯಾವುದರ ಬಗ್ಗೆಯಾದರೂ ಭಯ ಇದೆ ಎಂದಾದರೆ ಅದುವೇ ನಿಮಗೆ ಮುಳುವಾಗುತ್ತದೆ. ಹಾಗಾಇ ಅದನ್ನು ದೂರ ಮಾಡಿಕೊಳ್ಳಬೇಕು. ಭಯಮುಕ್ತರಾಗಿ ಜೀವನ ನಡೆಸಬೇಕಿದೆ.

3. ಈರ್ಷ್ಯೆ ಹೊಟ್ಟೆಕಿಚ್ಚು ಎಂಬುದು ಉದರಾಗ್ನಿ, ಅದು ನಮ್ಮನ್ನೇ ಒಳಗೊಳಗೇ ಜ್ವಲಿಸಿಬಿಡುತ್ತದೆ. ಈರ್ಷ್ಯೆಯಿಂದ ಬೇಯುತ್ತಿರುವ ವ್ಯಕ್ತಿ ಸ್ವತಃ ಸಂತೋಷದಿಂದ ಇರಲಾರ. ಈ ಉದರಾಗ್ನಿಯಿಂದಾಗಿ ತಾನೂ ಉದ್ಧಾರ ಆಗಲಾರ. ಅವರ ಮನದಲ್ಲಿ ಸದಾ ಬೇರೊಬ್ಬರನ್ನು ಮುಂದಕ್ಕೆ ಬಿಡದಂತೆ ಅಡ್ಡಗಾಲು ಹಾಕುವ ಬಗ್ಗೆ ಯೋಚಿಸುವುದೇ ಆಗುತ್ತದೆ. ಇದರಿಂದ ಸ್ವತಃ ತನಗೆ ತಾನೇ ನಷ್ಟ ಮಾಡಿಕೊಂಡು, ನಾಶವಾಗಿಬಿಡುತ್ತಾನೆ.

4. ಕ್ರೋಧ ಕೋಪ ಎಂಬುದು ನುಷ್ಯನ ಆಲೋಚನಾ ಲಹರಿಯನ್ನೇ ನಾಶಮಾಡಿಬಿಡುತ್ತದೆ. ಕೋಪವಿದ್ದೆಡೆ ಮನುಷ್ಯ ಸರಿಯಾದ ನಿರ್ಣಯ ತೆಗೆದುಕೊಳ್ಳಲಾರ. ಅಂತಹುದರಲ್ಲಿ ಮನುಷ್ಯ ದುಃಖದ ಹೊರತಾಗಿ ಬೇರೆ ಏನನ್ನೂ ಸಂಪಾದಿಸಲಾರ. ಹಾಗಾಗಿಯೇ ವ್ಯಕ್ತಿಯ ಮನಸ್ಸು ಶಾಂತವಾಗಿದ್ದು, ಸದಾ ಪ್ರಸನ್ನವಾಗಿರಬೇಕು.

5. ಆಲಸ್ಯ ಆಲಸ್ಯ ವಿಷಕ್ಕೆ ಸಮಾನ ಎನ್ನುತ್ತಾರೆ. ಆಲಸ್ಯ ಮಾಡಿದರೆ ಕ್ಷಣಾರ್ಧದಲ್ಲಿ ಎಲ್ಲವನ್ನೂ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. ವ್ಯಕ್ತಿ ಎಷ್ಟೇ ಬುದ್ಧಿವಂತನಿದ್ದರೂ ಸ್ವಲ್ಪವೇ ಆಲಸ್ಯ ಪಟ್ಟರೆ ಅನಾಯಾಸವಾಗಿ ಬಂದಿರುವ ಅವಕಾಶ ಕೈತಪ್ಪುತ್ತದೆ. ಅದರಿಂದ ಕೊನೆಯಲ್ಲಿ ದುಃಖವಷ್ಟೇ ಉಳಿಯುತ್ತದೆ.

6. ನಕಾರಾತ್ಮಕ ಚಿಂತನೆ ಮನುಷ್ಯ ಸದಾ ಸಕಾರಾತ್ಮಕ ಚಿಂತನೆಯಲ್ಲಿ ತೊಡಗಬೇಕು. ನಕಾರಾತ್ಮಕ ಚಿಂತನೆ ಹಚ್ಚಿಕೊಂಡ ವ್ಯಕ್ತಿ ಜೀವನದಲ್ಲಿ ಉತ್ತಮ ಸಂಗತಿಗಳನ್ನೇ ನೋಡಲಾರ. ಇದರಿಂದ ಮಾನಸಿಕವಾಗಿ ಕುಗ್ಗುತ್ತಾನೆ. ಹಾಗಾಗಿಯೇ ಜನ ತಮ್ಮ ಚಿಂಗತನೆಯನ್ನು ಸಕಾರಾತ್ಮಕವಾಗಿಟ್ಟುಕೊಳ್ಳಬೇಕು.

(six habits mentioned in garuda purana root cause of the sorrow)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ