Zodiac signs: ಜಾತಕದ ಫಲವಾಗಿ ಈ 3 ರಾಶಿಯ ಜನ ಅಷ್ಟೊಂದು ವಿಶ್ವಾಸಾರ್ಹ ಅಲ್ಲವಂತೆ, ಸುಲಭವಾಗಿ ನಂಬಬಾರದಂತೆ!

ಯಾರಿಗೇ ಆಗಲಿ ಗುಪ್ತ ಮಾತುಗಳು ಅಂದರೆ ಅದನ್ನು ಮತ್ಯಾರಿಗಾದರೂ ಹೇಳಿಕೊಳ್ಳೋಣ ಅನ್ನಿಸುತ್ತಿರುತ್ತದೆ. ಹಾಗಾಗಿ ಜ್ಯೋತಿಷ್ಯದ ತಿಳಿವಳಿಕೆಯಲ್ಲಿ ಈ ಮೂರು ರಾಶಿಯ ಜನರ ಬಳಿ ಅಂತಹ ಗುಪ್ತ ವಿಷಯಗಳನ್ನು ಹೇಳಿಕೊಳ್ಳಬಾರದು. ಆ 3 ರಾಶಿಗಳ ಬಗ್ಗೆ ತಿಳಿಯೋಣ ಬನ್ನೀ.

Zodiac signs: ಜಾತಕದ ಫಲವಾಗಿ ಈ 3 ರಾಶಿಯ ಜನ ಅಷ್ಟೊಂದು ವಿಶ್ವಾಸಾರ್ಹ ಅಲ್ಲವಂತೆ, ಸುಲಭವಾಗಿ ನಂಬಬಾರದಂತೆ!
ಈ ಮೂರು ರಾಶಿಯ ಜನರನ್ನು ಸುಲಭವಾಗಿ ನಂಬಬೇಡಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 25, 2021 | 8:05 AM

ಇದು ಜ್ಯೋತಿಷ್ಯ ಶಾಸ್ತ್ರದ ಚಮತ್ಕಾರ. ಇರುವ 12 ರಾಶಿಗಳ ಪೈಕಿ ಜಾತಕದ ಫಲವಾಗಿ ಈ ಮೂರು ರಾಶಿಯ ಜನ ಅಷ್ಟೊಂದು ವಿಶ್ವಾಸಾರ್ಹ ಅಲ್ಲವಂತೆ, ಅವರನ್ನು ಸುಲಭವಾಗಿ ನಂಬಬಾರದಂತೆ! ಯಾರಿಗೇ ಆಗಲಿ ಜೀವನದಲ್ಲಿ ಒಂದಲ್ಲಾ ಒಂದು ಘಳಿಗೆಯಲ್ಲಿ ತಾವು ಏನಾದರೂ ಹೇಳಿದ ಮಾತುಗಳನ್ನು ರಹಸ್ಯವಾಗಿ ಕಾಪಾಡುವಂತಾಗೇಕು ಎಂದು ಬಯಸುತ್ತಾರೆ. ಆದರೆ ಯಾರನ್ನು ನಂಬಬೇಕು ಅಥವಾ ಯಾರ ಬಳಿ ತಮ್ಮ ಮಾತುಗಳನ್ನು ಹೇಳಿಕೊಳ್ಳಬೇಕು ಎಂಬುದೇ ದೊಡ್ಡ ಜಿಜ್ಞಾಸೆ. ಆದರೂ ಒಂದು ತೀರ್ಮಾನಕ್ಕೆ ಬಂದು, ಯಾರಿಗಾದರೂ ಹೇಳಿಕೊಳ್ಳಬೇಕಾಗುತ್ತದೆ. ಜೀನವದಲ್ಲಿ ಅಂತಹ ಪರಿಸ್ಥಿತಿಗಳು ಎದುರಾಗುತ್ತವೆ. ಯಾರನ್ನು ಬೇಕಾದರೂ ನಂಬಬಹುದು ಆದರೆ ಜ್ಯೋತಿಷ್ಯದ ಪ್ರಕಾರ ಈ ಮೂರು ರಾಶಿಯ ಜನರ ಮೇಲೆ ವಿಶ್ವಾಸ ಇಡಬಾರದು.

ಅದು ಪ್ರೀತಿಯ ಬಗ್ಗೆ ಹೃದಯಾಂತರಾಳದ ಮಾತು ಆಗಿರಬಹುದು, ಉದ್ಯೋಗ ಅಥವಾ ಕಚೇರಿಯಲ್ಲಿನ ವಿಷಯಗಳಾಗಿರಬಹುದು ಅದರ ರಹಸ್ಯ ಕಾಪಾಡಿಕೊಳ್ಳಬಹುದಾಗುತ್ತದೆ. ಆದರೆ ಯಾರ ಬಳಿ ಅಂತಹ ಮಾತುಗಳನ್ನು ಹೇಳಿಕೊಳ್ಳುವುದು ಎಂಬುದೇ ಜಿಜ್ಞಾಸೆ. ಯಾರಿಗೇ ಆಗಲಿ ಗುಪ್ತ ಮಾತುಗಳು ಅಂದರೆ ಅದನ್ನು ಮತ್ಯಾರಿಗಾದರೂ ಹೇಳಿಕೊಳ್ಳೋಣ ಅನ್ನಿಸುತ್ತಿರುತ್ತದೆ. ಹಾಗಾಗಿ ಜ್ಯೋತಿಷ್ಯದ ತಿಳಿವಳಿಕೆಯಲ್ಲಿ ಈ ಮೂರು ರಾಶಿಯ ಜನರ ಬಳಿ ಅಂತಹ ಗುಪ್ತ ವಿಷಯಗಳನ್ನು ಹೇಳಿಕೊಳ್ಳಬಾರದು. ಆ 3 ರಾಶಿಗಳ ಬಗ್ಗೆ ತಿಳಿಯೋಣ ಬನ್ನೀ.

ಮೀನ ರಾಶಿ (Pisces): ಮೀನ ರಾಶಿಯ ಜನ ತುಂಬಾ ಬುದ್ಧಿವಂತರಾಗಿರುತ್ತಾರೆ. ತಮ್ಮ ಕೆಲಸವನ್ನು ಹೇಗೆ ಮತ್ತು ಯಾವಾಗ ಮಾಡಬೇಕು ಎಂಬುದನ್ನು ಅರಿತಿರುತ್ತಾರೆ. ಇವರು ತುಂಬಾ ಒಳ್ಳೆಯ ಸ್ನೇಹಿತರಾಗಬಲ್ಲರು. ಆದರೆ ಮೀನ ರಾಶಿಯ ಜನರ ಮೇಲೆ ಸದಾ ಭರವಸೆ ಇಡುವುದು ಒಳ್ಳೆಯದಲ್ಲ. ಇವರು ಗೆಳೆತನದ ಆಪ್ತತೆಗೆ ಅರ್ಹರಲ್ಲ. ಇವರು ಸದಾ ತಮ್ಮ ತುತ್ತೂರಿ ತಾವೇ ಬಾರಿಸುತ್ತಾರೆ. ಸಮಯ ಅಂತಂದರೆ ಇವರು ಯಾರ ನಂಬಿಕೆಯನ್ನೂ ಉಳಿಸಿಕೊಳ್ಳುವುದಿಲ್ಲ. ಹಾಗಾಗಿ ಇಂತಹವರ ಬಗ್ಗೆ ಹುಷಾರಾಗಿರಬೇಕು.

ಧನು ರಾಶಿ (Sagitarrus) ಧನು ರಾಶಿಯ ಜನ ಮೋಜು ಮಸ್ತಿ ಮಾಡುವಂತಹವರು. ಜೀವನೋತ್ಸಾದಲ್ಲಿ ತೇಲುತ್ತಿರುತ್ತಾರೆ. ಇವರಿಗೆ ಮೋಜು ಮಸ್ತಿ ಮಾಡುವುದೇ ಆದ್ಯತೆಯಾಗಿರುತ್ತದೆ. ಅವರು ನಿಮ್ಮ ಜೊತೆ ಒಳ್ಳೆಯ ಸಮಯ ಕಳೆಯುವವರೆಗೂ ಎಲ್ಲವೂ ಸರಿಯಾಗಿರುತ್ತದೆ. ಆದರೆ ಅವರ ಜೊತೆ ಸ್ವಲ್ಪವೇ ವಿರೋಧಗಳು ಎದುರಾದರೆ ನೀವು ಜಾಗ್ರತೆ ವಹಿಸಬೇಕಾಗುತ್ತದೆ. ನೀವು ಒಳ್ಳೆಯದು ಮಾಡಿದರಷ್ಟೇ ಅವರೂ ನಿಮಗೆ ಒಳ್ಳೆಯದ್ದನ್ನು ಮಾಡಲು ಸಿದ್ಧವಿರುತ್ತಾರೆ. ಇಲ್ಲವಾದರೆ ಅವರ ಮೇಲೆ ಭರವಸೆಯಿಡುವುದು ಕಷ್ಟ ನಷ್ಟವೇ ಸರಿ.

ಸಿಂಹ ರಾಶಿ (Leo) ಸಿಂಹ ರಾಶಿಯವರು ಹಸನ್ಮುಖಿಗಳು ಮತ್ತು ಸಂತೋಷದಾಯಕ ವ್ಯಕ್ತಿಗಳಾಗಿರುತ್ತಾರೆ. ಅವರು ಒಳ್ಳೆಯ ಸ್ನೇಹಿತರೂ ಆಗಿರುತ್ತಾರೆ. ನಿಮ್ಮ ಮಾತುಗಳನ್ನು ಗೌಪ್ಯವಾಗಿ ಇಟ್ಟುಕೊಂಡಿರುತ್ತಾರೆ. ಅವರು ಎಲ್ಲಿಯವರೆಗೆ ವಿಶ್ವಾಸವನ್ನು ಕಾಪಿಡುತ್ತಾರೆ ಅಂದರೆ ಅವರ ಬಗ್ಗೆಯಾಗಲಿ ಅಥವಾಅವರ ಪರಿವಾರದವರ ಬಗ್ಗೆ ಯಾವುದೇ ಮಾತನ್ನು ಅಡಬಾರದು. ಒಂದು ವೇಳೆ ಅವರಿಗೆ ಉಲ್ಟಾ ಹೇಳಿದರೆ ಅವರು ನಿಮಗೆ ತೊಂದರೆ ಕೊಡುತ್ತಾ, ನೀವು ಹೇಳಿದ ರಹಸ್ಯ ಮಾತುಗಳಿಗೆ ಭಾದೆಯೊಡ್ಡುತ್ತಾರೆ.

(people with these 3 zodiac signs are not trustworthy)

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ