Darsha Amavasya: ದರ್ಶ ಅಮಾವಾಸ್ಯೆಯಂದು ಪಿತೃ ದೋಷ ನಿವಾರಣೆಗೆ ಈ ವಿಧಾನಗಳನ್ನು ಅನುಸರಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 08, 2024 | 4:53 PM

ಪೂರ್ವಜರ ಕಾರ್ಯಗಳನ್ನು ಮಾಡುವಾಗ ತಪ್ಪುಗಳಾಗುತ್ತವೆ. ಇದು ಪೂರ್ವಜರಿಗೆ ಅಸಮಾಧಾನವನ್ನುಂಟು ಮಾಡಬಹುದು. ಈ ಸಣ್ಣ ಸಣ್ಣ ತಪ್ಪುಗಳಿಂದಾಗಿ ವ್ಯಕ್ತಿಯು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಪೂರ್ವಜರನ್ನು ಮೆಚ್ಚಿಸಲು ಮತ್ತು ಅವರ ಆಶೀರ್ವಾದವನ್ನು ಪಡೆಯಲು ನೀವು ಬಯಸಿದರೆ, ಈ ದಿನ ನೀವು ಕೆಲವು ಸರಳ ವಿಧಾನಗಳನ್ನು ಅನುಸರಿಸಿ. ಇದರಿಂದ ನೀವು ಪಿತ್ರ ದೋಷದಿಂದ ಮುಕ್ತಿ ಹೊಂದಬಹುದಾಗಿದೆ.

Darsha Amavasya: ದರ್ಶ ಅಮಾವಾಸ್ಯೆಯಂದು ಪಿತೃ ದೋಷ ನಿವಾರಣೆಗೆ ಈ ವಿಧಾನಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Follow us on

ದರ್ಶ ಅಮಾವಾಸ್ಯೆಯನ್ನು ಧಾರ್ಮಿಕವಾಗಿ ಧರ್ಮ ಗ್ರಂಥಗಳಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಪುಷ್ಯ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಪುಷ್ಯ ಅಮಾವಾಸ್ಯೆ ಅಥವಾ ಮೌನಿ ಅಮಾವಾಸ್ಯೆ ಅಥವಾ ದರ್ಶ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ವರ್ಷ ಮೌನಿ ಅಮಾವಾಸ್ಯೆಯನ್ನು ಫೆ. 9 ರಂದು ಶುಕ್ರವಾರ ಆಚರಿಸಲಾಗುತ್ತದೆ. ಈ ಅಮಾವಾಸ್ಯೆಗೆ ಧಾರ್ಮಿಕ ದೃಷ್ಟಿಕೋನದಿಂದ ಹೆಚ್ಚಿನ ಮಹತ್ವವಿದೆ. ಅಲ್ಲದೆ ಈ ಅಮವಾಸ್ಯೆಯಂದು ಮೌನವಾಗಿ ಮಾಡುವ ಜಪ, ತಪಸ್ಸು ಮತ್ತು ದಾನದಿಂದ ಭಗವಾನ್ ವಿಷ್ಣುವು ತುಂಬಾ ಪ್ರಸನ್ನನಾಗುತ್ತಾನೆ ಮತ್ತು ವಿಶೇಷ ಫಲಗಳನ್ನು ನೀಡುತ್ತಾನೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಈ ದಿನದಂದು ಶನಿ ದೇವರನ್ನು ಪೂಜಿಸುವುದು ಸಹ ವಿಶೇಷ ಮಹತ್ವವನ್ನು ಹೊಂದಿದೆ. ಇನ್ನು ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ, ದಾನ, ತರ್ಪಣ ನೀಡುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಮೌನಿ ಅಮಾವಾಸ್ಯೆಯಂದು ಪೂರ್ವಜರನ್ನು ಪೂಜಿಸುವುದರಿಂದ ಆದಾಯದಲ್ಲಿ ಹೆಚ್ಚಳದೊಂದಿಗೆ ಜೀವನದಲ್ಲಿ ಸಂತೋಷ ಮತ್ತು ಅದೃಷ್ಟ ಪ್ರಾಪ್ತಿಯಾಗುತ್ತದೆ.

ಆದರೆ ಅನೇಕ ಬಾರಿ ಪೂರ್ವಜರ ಕಾರ್ಯಗಳನ್ನು ಮಾಡುವಾಗ ತಪ್ಪುಗಳಾಗುತ್ತವೆ. ಇದು ಪೂರ್ವಜರಿಗೆ ಅಸಮಾಧಾನವನ್ನುಂಟು ಮಾಡಬಹುದು. ಈ ಸಣ್ಣ ಸಣ್ಣ ತಪ್ಪುಗಳಿಂದಾಗಿ ವ್ಯಕ್ತಿಯು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಪೂರ್ವಜರನ್ನು ಮೆಚ್ಚಿಸಲು ಮತ್ತು ಅವರ ಆಶೀರ್ವಾದವನ್ನು ಪಡೆಯಲು ನೀವು ಬಯಸಿದರೆ, ಈ ದಿನ ನೀವು ಕೆಲವು ಸರಳ ವಿಧಾನಗಳನ್ನು ಅನುಸರಿಸಿ. ಇದರಿಂದ ನೀವು ಪಿತ್ರ ದೋಷದಿಂದ ಮುಕ್ತಿ ಹೊಂದಬಹುದಾಗಿದೆ.

– ಓಂ ತ್ರಯಂಬಕಂ ಯಜಾಮಹೇ, ಸುಗಂಧಿಂ ಪುಷ್ಟಿವರ್ಧನಂ,

ಉರ್ವ ರುಕಮಿವ ಬಂಧನಾನ್, ಮೃತ್ಯೋರ್ ಮೋಕ್ಷಿಯೇ ಮಾಮೃತಾತ್

ಈ ಮಹಾ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವ ಮೂಲಕ ನೀವು ಪಿತ್ರ ದೋಷದಿಂದ ಪರಿಹಾರ ಕಾಣಬಹುದಾಗಿದೆ. ಅಮವಾಸ್ಯೆಯ ಆಚರಣೆಯ ಪ್ರಕಾರ ಶಿವನನ್ನು ಪೂಜಿಸಿ ಮತ್ತು ಉಪವಾಸ ಮಾಡುವ ಮೂಲಕ, ವ್ಯಕ್ತಿಯು ಪಿತ್ರ ದೋಷದಿಂದ ಮುಕ್ತಿ ಪಡೆಯುತ್ತಾನೆ. ನಿಮ್ಮ ಜಾತಕದಲ್ಲಿ ಪಿತೃದೋಷವಿದ್ದರೆ ಮೌನಿ ಅಮಾವಾಸ್ಯೆಯಂದು ಮಹಾಮೃತ್ಯುಂಜಯ ಮಂತ್ರವನ್ನು 108 ಬಾರಿ ಪಠಿಸಿ.

– ಇದರ ಹೊರತಾಗಿ ಪ್ರತಿದಿನ ಇಷ್ಟ ದೇವತಾ ಮತ್ತು ಕುಲದೇವರನ್ನು ಪೂಜಿಸುವುದನ್ನು ಮರೆಯಬೇಡಿ. ಇದನ್ನು ಮಾಡುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ.

– ಅಮವಾಸ್ಯೆಯಂದು ವಿಷ್ಣುವಿನ ಮಂತ್ರಗಳನ್ನು ಪಠಿಸಿ, ಶ್ರೀಮದ್ಭಗವದ್ಗೀತೆಯನ್ನು ಪಠಿಸಿ. ಇದರಿಂದ ಪಿತೃಗಳಿಗೆ ಶಾಂತಿ ಸಿಗುತ್ತದೆ ಮತ್ತು ದೋಷಗಳು ಕಡಿಮೆಯಾಗುತ್ತವೆ.

-ನಿತ್ಯವೂ ಹನುಮಾನ್ ಚಾಲೀಸಾವನ್ನು ಪಠಿಸಿ. ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಹನುಮಂತನ ವಿಶೇಷ ಅನುಗ್ರಹ ಪಡೆಯಬಹುದು ಜೊತೆಗೆ ಜಾತಕದಲ್ಲಿ ಪಿತೃ ದೋಷ ಇರುವವರು ಇದರಿಂದ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ: ಶಮಿ ಗಿಡ ಮನೆಯ ಯಾವ ಭಾಗದಲ್ಲಿರಬೇಕು? ಅದರಿಂದ ಆಗುವ ಲಾಭವೇನು?

ಮೌನಿ ಅಮಾವಾಸ್ಯೆಯ ಆಚರಣೆ ಹೇಗಿರಬೇಕು?

ಹಿಂದೂ ಧರ್ಮದಲ್ಲಿ, ಮೌನಿ ಅಮಾವಾಸ್ಯೆಯನ್ನು ಎಲ್ಲಾ ಅಮಾವಾಸ್ಯೆಗಳಿಗಿಂತಲೂ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನ ಮೌನ ಉಪವಾಸವನ್ನು ಸಹ ಆಚರಿಸಲಾಗುತ್ತದೆ. ಇದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಮೌನಿ ಅಮಾವಾಸ್ಯೆಯ ದಿನದಂದು ನದಿಯಲ್ಲಿ ಸ್ನಾನ ಮಾಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇದನ್ನು ಮಾಡುವುದರಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಇದಲ್ಲದೆ, ಶಿವ ಮತ್ತು ವಿಷ್ಣುವನ್ನು ಮೆಚ್ಚಿಸಲು ಈ ದಿನ ಉಪವಾಸವನ್ನು ಸಹ ಆಚರಿಸಲಾಗುತ್ತದೆ. ಮೌನಿ ಅಮಾವಾಸ್ಯೆಯಂದು ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡಿ ಬಡವರಿಗೆ ಎಳ್ಳಿನ ಬೀಜಗಳನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಮಾಡಿದ ಪಾಪ ಪರಿಹಾರವಾಗಿ, ಇಷ್ಟಾರ್ಥ ಸಿದ್ಧಿಯಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ