
ಹಿಂದೂ ಧರ್ಮದಲ್ಲಿ, ಗಂಗಾ ಜಲ ಮತ್ತು ತುಳಸಿಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಗಂಗಾ ಜಲವನ್ನು ಸಿಂಪಡಿಸಿರುವ ಪ್ರದೇಶವು ಪವಿತ್ರವಾಗಿರುತ್ತದೆ. ಅಷ್ಟೇ ಅಲ್ಲ, ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ತೊಳೆದು ಹೋಗುತ್ತದೆ ಎಂಬ ನಂಬಿಕೆಯಿದೆ. ಪುರಾಣಗಳಲ್ಲಿ ಗಂಗಾ ನದಿಯ ಮಹತ್ವವನ್ನು ವಿವರಿಸಲಾಗಿದೆ. ಸಾವಿನ ಸಮಯದಲ್ಲಿ ಗಂಗಾ ಜಲವನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ, ಆತ್ಮವು ದೇಹವನ್ನು ಬಿಡುವಾಗ ಹೆಚ್ಚು ನೋವು ಅನುಭವಿಸುವುದಿಲ್ಲ ಎಂದು ಹೇಳಲಾಗುತ್ತದೆ.
ಗಂಗಾ ಜಲ ಬಾಯಿಯಲ್ಲಿದ್ದರೆ ಆತ್ಮದ ಮುಂದಿನ ಪ್ರಯಾಣ ಸುಲಭವಾಗುತ್ತದೆ ಎಂದು ನಂಬಿಕೆಯಿದ್ದರೆ, ಮತ್ತೊದೆಡೆ ವೈಜ್ಞಾನಿಕ ಹೇಳುವುದಾದರೆ ಗಂಗಾ ಜಲ ಶವದ ಮೇಲೆ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಸಹ ತಡೆಯುತ್ತದೆ. ಗಂಗಾ ನೀರಿನ ಜೊತೆಗೆ ತುಳಸಿ ಎಲೆಗಳು ಅಷ್ಟೇ ಮುಖ್ಯ.
ಧಾರ್ಮಿಕ ದೃಷ್ಟಿಕೋನದಿಂದ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ತುಳಸಿ ಯಾವಾಗಲೂ ವಿಷ್ಣುವಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಸಾವಿನ ಸಮಯದಲ್ಲಿ ತುಳಸಿ ಎಲೆಗಳನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಆತ್ಮವು ಶುದ್ಧವಾಗುತ್ತದೆ ಎಂದು ನಂಬಲಾಗಿದೆ. ಮೃತರು ಮೋಕ್ಷವನ್ನು ಪಡೆಯುತ್ತಾರೆ.
ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನಕ್ಕೆ ಅವಿವಾಹಿತ ಜೋಡಿ ಏಕೆ ಭೇಟಿ ನೀಡಬಾರದು?
ಧರ್ಮದ ಜೊತೆಗೆ, ತುಳಸಿಯನ್ನು ವೈಜ್ಞಾನಿಕ ದೃಷ್ಟಿಕೋನದಿಂದಲೂ ನೋಡಲಾಗುತ್ತದೆ. ತುಳಸಿಯನ್ನು ಗಿಡಮೂಲಿಕೆ ಪ್ರತಿಜೀವಕವೆಂದು ಪರಿಗಣಿಸಲಾಗುತ್ತದೆ. ತುಳಸಿ ಅನೇಕ ರೋಗಗಳಿಗೆ ಪರಿಣಾಮಕಾರಿ ಔಷಧವಾಗಿದೆ. ತುಳಸಿ ಎಲೆಯನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಸಾತ್ವಿಕ ಭಾವನೆಗಳು ಜಾಗೃತಗೊಳ್ಳುತ್ತವೆ ಎಂದು ನಂಬಲಾಗಿದೆ.
ಸಾವಿನ ಸಮಯದಲ್ಲಿ ತುಳಸಿ ಮತ್ತು ಗಂಗಾ ಜಲವನ್ನು ಕುಡಿದರೆ, ಸಾವಿನ ದೇವರು ಯಮನು ಆ ವ್ಯಕ್ತಿಯನ್ನು ನೇರವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತಾನೆ. ಮೃತರ ಹಣೆಯ ಮೇಲೆ ತುಳಸಿ ಎಲೆಯನ್ನು ಇಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಗಂಗಾ ಜಲ ಕುಡಿದು ಸಾಯುವವರು ಎಂದಿಗೂ ನರಕಕ್ಕೆ ಹೋಗುವುದಿಲ್ಲ ಎಂಬ ಅಪಾರ ನಂಬಿಕೆಯಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:58 am, Thu, 12 June 25