ಪಕ್ಷಿರಾಜ ಗರುಡ ಮಂತ್ರ ಮತ್ತು ಶ್ರೀ ಗರುಡ ದೇವರ ಅಷ್ಟೋತ್ತರ ಪಠಣ ಮಾಡಿದರೆ ಈ 15 ಫಲಗಳು ಸಿದ್ಧಿಸುತ್ತವೆ; ವಿವರ ಇಲ್ಲಿದೆ
Garuda Ashtottara Shatanaama Stotram: ಶ್ರದ್ಧಾ ಭಕ್ತಿಯಿಂದ ಕೆಳಗಿನ ಗರುಡ ಮಂತ್ರ ಮತ್ತು ಗರುಡ ಅಷ್ಟೋತ್ತರ ಶತನಾಮ ಸ್ತೋತ್ರಂ ಅನ್ನು ಪಠಿಸಿದರೆ ಎಲ್ಲ ತರಹದ ಗ್ರಹ ದೋಷಗಳು ಪರಿಹಾರ ಆಗುತ್ತವೆ. ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮಾಡಿಸಿದವರಿಗೂ ದೋಷ ಪರಿಹಾರ ಆಗದೆ ಇದ್ದರೆ ಈ ಮಂತ್ರ ಅಷ್ಟೋತ್ತರ ಭಕ್ತಿ ಶ್ರದ್ಧೆಯಿಂದ ಪಾರಾಯಣ ಮಾಡಿದರೆ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಪಡೆಯಬಹುದು.
ಹಿಂದೂಗಳು ಪ್ರತಿ ಪ್ರಾಣಿ ಪಕ್ಷಿಗಳಲ್ಲಿ ಅಂತರ್ಯಾಮಿಯಾಗಿರುವ ಭಗವಂತನನ್ನು ಕಾಣುತ್ತಾರೆ. ಅದರಲ್ಲಿ ಗರುಡ ರಾಜ ಎಲ್ಲ ಪಕ್ಷಿಗಳಲ್ಲಿ ಅತ್ಯಂತ ದೊಡ್ಡ ಪಕ್ಷಿ ಮತ್ತು ಶ್ರೇಷ್ಠ ಪಕ್ಷಿ. ಗರುಡ ರಾಜ ಸದಾ ಶ್ರೀ ವೈಕುಂಠ ಲೋಕದಲ್ಲಿ ತನ್ನ ಭಕ್ತಿಯನ್ನು ಸ್ವಯಂ ಶ್ರೀ ಮಹಾ ವಿಷ್ಣುವಿನ ಕಡೆಗೆ ತೋರಿಸುತ್ತಿರುತ್ತದೆ. ಶ್ಋಈ ಮನ್ನಾರಯಣ ಈ ಅದ್ಭುತವಾದ ಪಕ್ಷಿಯ ಮೇಲೆ ಮೇಲೆ ಅನಂತಾದಿ ಬ್ರಹ್ಮಾಂಡದಲ್ಲಿ ಸಂಚರಿಸುವ ಪಕ್ಷಿ ಇದಾಗಿದೆ. ಗರುಡ ಪಂಚಮಿ ಹಬ್ಬವೂ ಸಹ ಒಂದು.
ಇನ್ನು ಶ್ರದ್ಧಾ ಭಕ್ತಿಯಿಂದ ಕೆಳಗಿನ ಗರುಡ ಮಂತ್ರ ಮತ್ತು ಗರುಡ ಅಷ್ಟೋತ್ತರ ಶತನಾಮ ಸ್ತೋತ್ರಂ ಅನ್ನು (ಕೊನೆಯಲ್ಲಿ ನೀಡಲಾಗಿದೆ) ಪಠಿಸಿದರೆ ಎಲ್ಲ ತರಹದ ಗ್ರಹ ದೋಷಗಳು ಪರಿಹಾರ ಆಗುತ್ತವೆ. ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮಾಡಿಸಿದವರಿಗೂ ದೋಷ ಪರಿಹಾರ ಆಗದೆ ಇದ್ದರೆ ಈ ಮಂತ್ರ ಅಷ್ಟೋತ್ತರ ಭಕ್ತಿ ಶ್ರದ್ಧೆಯಿಂದ ಪಾರಾಯಣ ಮಾಡಿದರೆ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಪಡೆಯಬಹುದು. ಶ್ರೀ ಗರುಡ ದೇವರ ಅಷ್ಟೋತ್ತರ ಪಠಣದಿಂದ ಆಗುವ ಪ್ರಯೋಜನಗಳ ವಿವರ ಇಲ್ಲಿದೆ:
ಗರುಡ ಮಂತ್ರ: ಕುಂಕುಮಾಂಕಿತ ವರ್ಣಾಯ ಕುದೆಂದು ಧವಲಾಯಚ | ವಿಷ್ಣುವಾಹನ ನಮಸ್ತುಭ್ಯಂ ಪಕ್ಷಿರಾಜಾಯ ತೇ ನಮಃ ||
ಶ್ರೀ ಗರುಡ ದೇವರ ಅಷ್ಟೋತ್ತರ ಫಲ! ಗರುಡನ ಅಷ್ಟೋತ್ತರ ಓದಿದರೆ ಏನು ಫಲ? ಇಲ್ಲಿದೆ 15 ಫಲಗಳ ವಿವರ
1. ಕಣ್ಣಿಗೆ ಸಂಬಂಧಪಟ್ಟ ಸಮೀಪ ದೃಷ್ಟಿ ದೋಷ, ದೂರ ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಕಣ್ಣು ಕೆಂಪಗಾಗುವುದು, ನೋವು, ಉರಿ ನಿವಾರಣೆಯಾಗುತ್ತದೆ. 2. ದ್ವಿತೀಯ ರಾಹು, ಪಂಚಮ ರಾಹು, ಸಪ್ತಮ ರಾಹು, ದ್ವಾದಶ ರಾಹು ದೋಷಗಳು, ಸರ್ವರೀತಿಯ ಸರ್ಪದೋಷಗಳೂ ನಿವಾರಣೆಯಾಗುತ್ತವೆ. 3. ಮನಸ್ಸಿನಲ್ಲಿ ನೋವು, ಅಸಮಾಧಾನ, ಬೇಸರ ಇಟ್ಟುಕೊಂಡು ಮನದಲ್ಲೇ ಕೊರಗುವವರು ಮೇಲಿನ ಮಂತ್ರವನ್ನು ಪಠಿಸಿದರೆ ಮನಸ್ಸು ನಿರ್ಮಲವಾಗುತ್ತದೆ, ಅಂತಹವರು ಶಾಂತವಾಗಿರುತ್ತಾರೆ. 4. ಸರ್ಪದೋಷ, ಕಾಳ ಸರ್ಪದೋಷ… ಇತ್ಯಾದಿ ಸರ್ಪದೋಷಗಳು ಪೂರ್ಣವಾಗಿ ನಿವಾರಣೆಯಾಗುತ್ತವೆ. 5. ಸಮಸ್ತ ಕುಜದೋಷಗಳು ನಿವಾರಣೆಯಾಗುತ್ತದೆ. 6. ಸರ್ಪಸುತ್ತು ವಾಸಿಯಾಗುತ್ತದೆ. 7. ರಾಹು ನಕ್ಷತ್ರಗಳಲ್ಲಿ ಜನಿಸಿದ್ದರೆ ಆರಿದ್ರಾ, ಸ್ವಾತಿ, ಶತಭಿಷ.. ಕೇತು ನಕ್ಷತ್ರಗಳಲ್ಲಿ ಜನಿಸಿದ್ದರೆ ಅಶ್ವಿನಿ, ಮಖಾ, ಮೂಲಾ .. ಕುಜನ ನಕ್ಷತ್ರಗಳಲ್ಲಿ ಜನಿಸಿದ್ದರೆ ಮೃಗಶಿರ, ಚಿತ್ತ, ಧನಿಷ್ಟ.. ಆದವರ ನಕ್ಷತ್ರಗಳ ದೋಷ ನಿವಾರಣೆಯಾಗುತ್ತದೆ. 8. ಮಿಥುನ ಲಗ್ನದಲ್ಲಿ ಜನಿಸಿದ ಎಲ್ಲರೂ, ವಿವಾಹದ ನಂತರ ಜೀವನದಲ್ಲಿ ನೆಮ್ಮದಿ ಇಲ್ಲದವರು.. ಇದನ್ನು ಪಠಿಸಿದರೆ ನೆಮ್ಮದಿ ಹಾಗೂ ಶಾಂತಿಯಿಂದ ಜೀವನ ಮಾಡುತ್ತಾರೆ. 9. ದೈವ ದೋಷವಿರುವವರು, ದೈವ ಶಾಪವಿರುವವರು, ಆಶ್ಲೇಷ ಬಲಿ ಮಾಡಿಸಿದ್ದರೂ ದೋಷ ಹೋಗದೇ ಕಷ್ಟ ಅನುಭವಿಸುತ್ತಿದ್ದರೆ ಅಂತಹವರು ಗರುಡ ಅಷ್ಟೋತ್ತರ ಪಠಿಸಿದರೆ ಸರ್ವ ದೋಷಗಳು ನಿವಾರಣೆಯಾಗುತ್ತವೆ. 10. ಸರ್ಪ ಸಂಸ್ಕಾರ ಮಾಡಿಸಿಯೂ ದೋಷ ಹೋಗದಿದ್ದರೆ, ನೆನೆದ ಕಾರ್ಯಗಳು ಆಗದೇ ಇದ್ದರೆ ಅಂತಹವರು ಪಠಿಸಿದರೆ ಶುಭವಾಗುತ್ತದೆ. 11. ಸತಿಪತಿಗಳ ಜಗಳ ನಿವಾರಣೆಯಾಗುತ್ತದೆ.. ರಾಹು-ಕೇತು ದೋಷಗಳು ನಿವಾರಣೆಯಾಗುತ್ತವೆ. 12. ಅನುಮಾನ, ಒಳಜಗಳ, ಪರದಾಟಗಳು ನಿವಾರಣೆಯಾಗುತ್ತವೆ. 13. ಪ್ರಸವ ಕಾಲದಲ್ಲಿ ಶಿಶುವು ಮಾಲೆಯನ್ನು ಹಾಕಿಕೊಂಡು ಜನಿಸಿದ್ದರೆ, ಕರುಳಬಳ್ಳಿ ಸುತ್ತಿ ಹುಟ್ಟಿದೆ ಅನ್ನುವ ದೋಷಗಳೆಲ್ಲವೂ ನಿವಾರಣೆಯಾಗುತ್ತದೆ. 14. ಮಕ್ಕಳು ತುಂಬಾ ಅನಾರೋಗ್ಯದಿಂದ ಇದ್ದು, ಜ್ವರ ಬಂದು ವಾಸಿಯಾಗದೇ ಇದ್ದರೆ, ಮಗುವಿನ ಕತ್ತು ಮತ್ತು ಸೊಂಟ ಸರಿಯಾಗಿ ನಿಲ್ಲದಿದ್ದರೆ, ಅಂತಹವರ ಪೋಷಕರು ಶಾಸ್ತ್ರೋಕ್ತವಾಗಿ ಗರುಡದೇವರನ್ನು ಪೂಜಿಸಿ, ಯಾವುದಾದರೂ ಎಣ್ಣೆಯಲ್ಲಿ ಅಭಿಮಂತ್ರಿಸಿ ಹಚ್ಚಿದರೆ ಬಹಳ ಬೇಗ ಮಗು ಆರೋಗ್ಯವಂತವಾಗುತ್ತದೆ. 15. ಕಣ್ಣಿನಲ್ಲಿ ಪೊರೆ ಬರುತ್ತಿರುವವರು, ಕಣ್ಣು ಕೆಂಪಗೆ ಆಗುತ್ತಿದ್ದರೆ, ಉರಿ ಬರುತ್ತಿದ್ದರೆ, ಗರುಡ ಮಂತ್ರವನ್ನು ನೀರಿನಲ್ಲಿ ಅಭಿಮಂತ್ರಿಸಿ, ಆ ನೀರನ್ನುಕಣ್ಣಿನ ಮೇಲೆ ಹಾಕಿ ನೀರಿನಿಂದ ಕಣ್ಣು ಶುದ್ಧ ಮಾಡಿಕೊಂಡರೆ, ಸಮಸ್ತ ನೇತ್ರದೋಷ ಪೂರ್ಣವಾಗಿ ನಿವಾರಣೆಯಾಗುತ್ತದೆ.
ಗರುಡ ಅಷ್ಟೋತ್ತರ ಶತನಾಮ ಸ್ತೋತ್ರಂ (Garuda Ashtottara Shatanaama Stotram in Kannada)
ಓಂ ಗರುಡಾಯ ನಮಃ ಓಂ ವೈನತೇಯಾಯ ನಮಃ ಓಂ ಖಗಪತಯೇ ನಮಃ ಓಂ ಕಾಶ್ಯಪಾಯ ನಮಃ ಓಂ ಅಗ್ನಯೇ ನಮಃ ಓಂ ಮಹಾಬಲಾಯ ನಮಃ ಓಂ ತಪ್ತಕಾನ್ಚನವರ್ಣಾಭಾಯ ನಮಃ ಓಂ ಸುಪರ್ಣಾಯ ನಮಃ ಓಂ ಹರಿವಾಹನಾಯ ನಮಃ ಓಂ ಛಂದೋಮಯಾಯ ನಮಃ || 10 ||
ಓಂ ಮಹಾತೇಜಸೇ ನಮಃ ಓಂ ಮಹೋತ್ಸಹಾಯ ನಮಃ ಓಂ ಮಹಾಬಲಾಯ ನಮಃ ಓಂ ಬ್ರಹ್ಮಣ್ಯಾಯ ನಮಃ ಓಂ ವಿಷ್ಣುಭಕ್ತಾಯ ನಮಃ ಓಂ ಕುಂದೇಂದುಧವಳಾನನಾಯ ನಮಃ ಓಂ ಚಕ್ರಪಾಣಿಧರಾಯ ನಮಃ ಓಂ ಶ್ರೀಮತೇ ನಮಃ ಓಂ ನಾಗಾರಯೇ ನಮಃ ಓಂ ನಾಗಭೂಶಣಾಯ ನಮಃ || 20 ||
ಓಂ ವಿಜ್ಞಾನದಾಯ ನಮಃ ಓಂ ವಿಶೇಷ ಜ್ಞಾನ ಯ ನಮಃ ಓಂ ವಿದ್ಯಾನಿಧಯೇ ನಮಃ ಓಂ ಅನಾಮಯಾಯ ನಮಃ ಓಂ ಭೂತಿದಾಯ ನಮಃ ಓಂ ಭುವನದಾತ್ರೇ ನಮಃ ಓಂ ಭೂಶಯಾಯ ನಮಃ ಓಂ ಭಕ್ತವತ್ಸಲಾಯ ನಮಃ ಓಂ ಸಪ್ತಛಂದೋಮಯಾಯ ನಮಃ ಓಂ ಪಕ್ಷಿಣೇ ನಮಃ || 30 ||
ಓಂ ಸುರಾಸುರಪೂಜಿತಾಯ ನಮಃ ಓಂ ಗಜಭುಜೇ ನಮಃ ಓಂ ಕಚ್ಛಪಾಶಿನೇ ನಮಃ ಓಂ ದೈತ್ಯಹಂತ್ರೇ ನಮಃ ಓಂ ಅರುಣಾನುಜಾಯ ನಮಃ ಓಂ ಅಮೃತಾಂಶಾಯ ನಮಃ ಓಂ ಅಮೃತವಪುಶೇ ನಮಃ ಓಂ ಆನಂದನಿಧಯೇ ನಮಃ ಓಂ ಅವ್ಯಯಾಯ ನಮಃ ಓಂ ನಿಗಮಾತ್ಮನೇ ನಮಃ || 40 ||
ಓಂ ನಿರಾಹಾರಾಯ ನಮಃ ಓಂ ನಿಸ್ತ್ರೈಗುಣ್ಯಾಯ ನಮಃ ಓಂ ನಿರವ್ಯಾಯ ನಮಃ ಓಂ ನಿರ್ವಿಕಲ್ಪಾಯ ನಮಃ ಓಂ ಪರಸ್ಮೈಜ್ಯೋತಿಶೇ ನಮಃ ಓಂ ಪರಾತ್ಪರತರಾಯ ನಮಃ ಓಂ ಪರಸ್ಮೈ ನಮಃ ಓಂ ಶುಭಾನ್ಗಾಯ ನಮಃ ಓಂ ಶುಭದಾಯ ನಮಃ ಓಂ ಶೂರಾಯ ನಮಃ || 50 ||
ಓಂ ಸೂಕ್ಷ್ಮರೂಪಿಣೇ ನಮಃ ಓಂ ಬೃಹತ್ತನವೇ ನಮಃ ಓಂ ವಿಶಾಶಿನೇ ನಮಃ ಓಂ ವಿದಿತಾತ್ಮನೇ ನಮಃ ಓಂ ವಿದಿತಾಯ ನಮಃ ಓಂ ಜಯವರ್ಧನಾಯ ನಮಃ ಓಂ ಧಾರ್ಡ್ಯಾನ್ಗಾಯ ನಮಃ ಓಂ ಜಗದೀಶಾಯ ನಮಃ ಓಂ ಜನಾರ್ದನಾಯನಮಃ ಓಂ ಧ್ವಜಾಯ ನಮಃ ಓಂ ಸತಾಂಸಂತಾಪವಿಚ್ಛೇತ್ರೇ ನಮಃ || 60 ||
ಓಂ ಜರಾಮರಣವರ್ಜಿತಾಯ ನಮಃ ಓಂ ಕಲ್ಯಾಣದಾಯ ನಮಃ ಓಂ ಕಾಲಾತೀತಾಯ ನಮಃ ಓಂ ಕಲಾಧರಸಮಪ್ರಭಾಯ ನಮಃ ಓಂ ಸೋಮಪಾಯ ನಮಃ ಓಂ ಸುರಸನ್ಘೇಶಾಯ ನಮಃ ಓಂ ಯಗ್ಯಾನ್ಗಾಯ ನಮಃ ಓಂ ಯಗ್ಯಭೂಶಣಾಯ ನಮಃ ಓಂ ಮಹಾಜವಾಯ ನಮಃ ಓಂ ಜಿತಾಮಿತ್ರಾಯ ನಮಃ || 70 ||
ಓಂ ಮನ್ಮಥಪ್ರಿಯಬಾಂಧವಾಯ ನಮಃ ಓಂ ಶನ್ಖಭ್ಱುತೇ ನಮಃ ಓಂ ಚಕ್ರಧಾರಿಣೇ ನಮಃ ಓಂ ಬಾಲಾಯ ನಮಃ ಓಂ ಬಹುಪರಾಕ್ರಮಾಯ ನಮಃ ಓಂ ಸುಧಾಕುಂಭಧರಾಯ ನಮಃ ಓಂ ಧೀಮತೇ ನಮಃ ಓಂ ದುರಾಧರ್ಶಾಯ ನಮಃ ಓಂ ದುರಾರಿಘ್ನೇ ನಮಃ ಓಂ ವಜ್ರಾನ್ಗಾಯ ನಮಃ || 80 ||
ಓಂ ವರದಾಯ ನಮಃ ಓಂ ವಂದ್ಯಾಯ ನಮಃ ಓಂ ವಾಯುವೇಗಾಯ ನಮಃ ಓಂ ವರಪ್ರದಾಯ ನಮಃ ಓಂ ವಿನುತಾನಂದನಾಯ ನಮಃ ಓಂ ಶ್ರೀದಾಯ ನಮಃ ಓಂ ವಿಜಿತಾರಾತಿಸನ್ಕುಲಾಯ ನಮಃ ಓಂ ಪತದ್ವರಿಶ್ಠರಾಯ ನಮಃ ಓಂ ಸರ್ವೇಶಾಯ ನಮಃ ಓಂ ಪಾಪಘ್ನೇ ನಮಃ || 90 ||
ಓಂ ಪಾಪನಾಶನಾಯ ನಮಃ ಓಂ ಅಗ್ನಿಜಿತೇ ನಮಃ ಓಂ ಜಯಘೋಶಾಯ ನಮಃ ಓಂ ಜಗದಾಹ್ಲಾದಕಾರಕಾಯ ನಮಃ ಓಂ ವಜ್ರನಾಸಾಯ ನಮಃ ಓಂ ಸುವಕ್ತ್ರಾಯ ನಮಃ ಓಂ ಶತ್ರುಘ್ನಾಯ ನಮಃ ಓಂ ಮದಭನ್ಜನಾಯ ನಮಃ ಓಂ ಕಾಲಗ್ಯಾಯ ನಮಃ ಓಂ ಕಮಲೇಷ್ಟಾಯ ನಮಃ || 100 ||
ಓಂ ಕಲಿದೋಶನಿವಾರಣಾಯ ನಮಃ ಓಂ ವಿದ್ಯುನ್ನಿಭಾಯ ನಮಃ ಓಂ ವಿಶಾಲಾನ್ಗಾಯ ನಮಃ ಓಂ ವಿನುತಾದಾಸ್ಯವಿಮೋಚನಾಯ ನಮಃ ಓಂ ಸ್ತೋಮಾತ್ಮನೇ ನಮಃ ಓಂ ತ್ರಯೀಮೂರ್ಧ್ನೇ ನಮಃ ಓಂ ಭೂಮ್ನೇ ನಮಃ ಓಂ ಗಾಯತ್ರಲೋಚನಾಯ ನಮಃ ಓಂ ಸಾಮಗಾನರತಾಯ ನಮಃ ಓಂ ಸ್ರಗ್ವಿನೇ ನಮಃ || 110 ||
ಓಂ ಸ್ವಚ್ಛಂದಗತಯೇ ನಮಃ ಓಂ ಅಗ್ರಣ್ಯೇ ನಮಃ ಓಂ ಶ್ರೀ ಪಕ್ಷಿರಾಜ ಪರಬ್ರಹ್ಮಣೇ ನಮಃ || 113 ||
(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ಶ್ರದ್ಧಾಭಕ್ತಿಗೆ ಅನುಗುಣವಾಗಿ ಲೋಕಮಾನ್ಯ ರೀತಿಯಲ್ಲಿ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಪಡಿಸಲಾಗಿದೆ)