AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2.51 ಲಕ್ಷ ಕನ್ನಡಿ ಚೂರುಗಳಿಂದ ರೂಪುಗೊಂಡ 20 ಅಡಿ ಎತ್ತರದ ಹನುಮಂತನ ಕಲಾಕೃತಿ; ವಿಡಿಯೋ ವೈರಲ್​

ದೀಪಾವಳಿ ಹಬ್ಬ ಸಮೀಸುತ್ತಿರುವ ಬೆನ್ನಲ್ಲೇ ಗುರುಗ್ರಾಮ್‌ನ ಅಂಬಿಯನ್ಸ್ ಮಾಲ್‌ನಲ್ಲಿ 20 ಅಡಿ ಎತ್ತರದ ಹನುಮಂತನ ಭವ್ಯ ಕಲಾಕೃತಿ ಎಲ್ಲರ ಗಮನ ಸೆಳೆದಿದೆ. 2.51 ಲಕ್ಷ ಕನ್ನಡಿ ಚೂರುಗಳನ್ನು ಬಳಸಿ ಮಿರರ್ ಮೊಸಾಯಿಕ್ ಶೈಲಿಯಲ್ಲಿ 360 ಗಂಟೆಗಳ ಪರಿಶ್ರಮದಿಂದ ಇದನ್ನು ನಿರ್ಮಿಸಲಾಗಿದೆ. ಬೆಳಕಿನಲ್ಲಿ ಕಂಗೊಳಿಸುವ ಈ ವಿಗ್ರಹವು ಭಕ್ತಿ ಮತ್ತು ಭಾರತೀಯ ಕರಕುಶಲತೆಯ ಸಂಗಮವಾಗಿದೆ, ಸದ್ಯ ವಿಡಿಯೋ ಸೋಶಿಯಲ್​ ಮಿಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

2.51 ಲಕ್ಷ ಕನ್ನಡಿ ಚೂರುಗಳಿಂದ ರೂಪುಗೊಂಡ 20 ಅಡಿ ಎತ್ತರದ ಹನುಮಂತನ ಕಲಾಕೃತಿ; ವಿಡಿಯೋ ವೈರಲ್​
ಹನುಮಾನ್ ವಿಗ್ರಹImage Credit source: instagram/whatshappeningingurugram
ಅಕ್ಷತಾ ವರ್ಕಾಡಿ
|

Updated on: Oct 29, 2026 | 3:35 PM

Share

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ನಡುವೆ, ಹರಿಯಾಣದ ಗುರುಗ್ರಾಮ್‌ನಲ್ಲಿರುವ ಅಂಬಿಯನ್ಸ್ ಮಾಲ್‌ನಲ್ಲಿ ನಿರ್ಮಿಸಲಾಗಿರುವ 20 ಅಡಿ ಎತ್ತರದ ಭವ್ಯ ಹನುಮಂತನ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ಭಾರತೀಯ ಸಾಂಪ್ರದಾಯಿಕ ಕರಕುಶಲತೆಯ ಸೊಬಗು ಮತ್ತು ಭಗವಾನ್ ಹನುಮಂತನ ಮೇಲಿನ ಭಕ್ತಿಯನ್ನು ಪ್ರತಿಬಿಂಬಿಸುವ ಈ ವಿಶಿಷ್ಟ ಕಲಾಕೃತಿಯನ್ನು ಮಿರರ್ ಮೊಸಾಯಿಕ್ ಕಲಾ ಶೈಲಿಯಲ್ಲಿ ರೂಪಿಸಲಾಗಿದೆ. ಸಾವಿರಾರು ಕನ್ನಡಿಗಳಲ್ಲಿ ಪ್ರತಿಫಲಿಸುವ ಬೆಳಕು ವಿಗ್ರಹಕ್ಕೆ ವಿಶಿಷ್ಟ ಮೆರುಗು ನೀಡುತ್ತಿದ್ದು, ಮಾಲ್‌ಗೆ ಭೇಟಿ ನೀಡುವವರನ್ನು ಆಕರ್ಷಿಸುತ್ತಿದೆ.

2.51 ಲಕ್ಷ ಕನ್ನಡಿ ಚೂರುಗಳಿಂದ ನಿರ್ಮಾಣ:

ಈ ಭವ್ಯ ಕಲಾಕೃತಿಯ ಪ್ರಮುಖ ವಿಶೇಷವೆಂದರೆ ಇದರ ನಿರ್ಮಾಣಕ್ಕೆ ಬಳಸಿರುವ ಕನ್ನಡಿ ಚೂರುಗಳು. ಲಭ್ಯವಿರುವ ಮಾಹಿತಿಯ ಪ್ರಕಾರ, ಸುಮಾರು 2,51,000 ಕನ್ನಡಿ ಚೂರುಗಳನ್ನು ಬಳಸಿ ಹನುಮಂತನ ವಿಗ್ರಹವನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿಯೊಂದು ಕನ್ನಡಿ ಚೂರನ್ನೂ ಸೂಕ್ಷ್ಮವಾಗಿ ಜೋಡಿಸುವ ಮೂಲಕ ಕಲಾವಿದರು ಈ ಅದ್ಭುತ ಕಲಾಕೃತಿಗೆ ಅಂತಿಮ ರೂಪ ನೀಡಿದ್ದಾರೆ. ಭಾರತೀಯ ಸಾಂಪ್ರದಾಯಿಕ ಕಲಾ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಮಿರರ್ ಮೊಸಾಯಿಕ್ ತಂತ್ರದ ಸೊಬಗು ಇಲ್ಲಿ ಅನಾವರಣಗೊಂಡಿದೆ.

360 ಗಂಟೆಗಳ ಪರಿಶ್ರಮದ ಪ್ರತಿಫಲ:

ಈ ಕಲಾಕೃತಿಯ ಹಿಂದಿರುವ ಕಲಾವಿದರ ಪರಿಶ್ರಮವೂ ಗಮನಾರ್ಹವಾಗಿದೆ. ಸುಮಾರು 360 ಗಂಟೆಗಳ ಕಾಲ ಶ್ರಮಿಸಿ, ಕನ್ನಡಿಯ ಪ್ರತಿಯೊಂದು ತುಣುಕನ್ನೂ ಎಚ್ಚರಿಕೆಯಿಂದ ಜೋಡಿಸಿ ಈ ಕಲಾಕೃತಿಯನ್ನು ರೂಪಿಸಲಾಗಿದೆ ಎಂದು ತಿಳಿದುಬಂದಿದೆ. 20 ಅಡಿ ಎತ್ತರದ ಈ ವಿಗ್ರಹವು ಕಲಾವಿದರ ತಾಳ್ಮೆ, ಕೌಶಲ ಮತ್ತು ಸೃಜನಶೀಲತೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಈ ವಾಚ್ ಬೆಲೆ ಬರೋಬ್ಬರಿ 4.25 ಕೋಟಿ ರೂ.! ಇದರೊಳಗಿದೆ ಶ್ರೀರಾಮ, ಹನುಮಂತನ ಸುಂದರ ಶಿಲ್ಪ

ಬೆಳಕಿನಲ್ಲಿ ಕಂಗೊಳಿಸುವ ಹನುಮಂತನ ವಿಗ್ರಹ:

ವಿಗ್ರಹದ ಮೇಲ್ಮೈಯಲ್ಲಿರುವ ಕನ್ನಡಿಗಳ ಮೇಲೆ ಬೆಳಕು ಬಿದ್ದಾಗ ಮೂಡುವ ಪ್ರತಿಫಲನಗಳು ಇಡೀ ಕಲಾಕೃತಿಗೆ ವಿಭಿನ್ನ ಆಕರ್ಷಣೆ ನೀಡುತ್ತವೆ. ಬೆಳಕಿನ ವಿವಿಧ ಕೋನಗಳಲ್ಲಿ ಮಿನುಗುವ ಕನ್ನಡಿಗಳು ಹನುಮಂತನ ವಿಗ್ರಹದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಹೀಗಾಗಿ, ಈ ಕಲಾಕೃತಿ ಧಾರ್ಮಿಕ ಭಾವನೆಗಳ ಜೊತೆಗೆ ಕಲಾತ್ಮಕ ಅಭಿವ್ಯಕ್ತಿಯ ದೃಷ್ಟಿಯಿಂದಲೂ ಗಮನ ಸೆಳೆಯುತ್ತಿದೆ.

ಭಕ್ತಿ ಮತ್ತು ಭಾರತೀಯ ಕಲೆಯ ಸಂಗಮ:

ಭಗವಾನ್ ಹನುಮಂತನು ಶಕ್ತಿ, ಧೈರ್ಯ, ನಿಷ್ಠೆ ಮತ್ತು ನಿಸ್ವಾರ್ಥ ಸೇವೆಯ ಸಂಕೇತವಾಗಿದ್ದಾನೆ. ಶ್ರೀರಾಮನ ಪರಮಭಕ್ತನಾದ ಆಂಜನೇಯನ ಈ ವಿಶಿಷ್ಟ ಕಲಾಕೃತಿಯು ಭಕ್ತಿಯ ಮಹತ್ವವನ್ನು ಸಾರುವುದರ ಜೊತೆಗೆ ಭಾರತೀಯ ಕರಕುಶಲತೆಯ ಶ್ರೀಮಂತ ಪರಂಪರೆಯನ್ನೂ ಪ್ರತಿಬಿಂಬಿಸುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More