AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾಚ್ ಬೆಲೆ ಬರೋಬ್ಬರಿ 4.25 ಕೋಟಿ ರೂ.! ಇದರೊಳಗಿದೆ ಶ್ರೀರಾಮ, ಹನುಮಂತನ ಸುಂದರ ಶಿಲ್ಪ

'ಜೇಕಬ್ ಆ್ಯಂಡ್ ಕೋ' ಹೊಸ 'ಶ್ರೀ ರಾಮಚಂದ್ರ' ವಾಚನ್ನು ಪರಿಚಯಿಸಿದೆ. ಇದು ಪ್ರಭು ಶ್ರೀರಾಮ, ಹನುಮಂತ, ಮತ್ತು ಅಯೋಧ್ಯೆ ರಾಮಮಂದಿರದ ವಿನ್ಯಾಸ ಹೊಂದಿದೆ. ಕೇವಲ ಮೂರು ಪೀಸ್‌ಗಳಿಗೆ ಸೀಮಿತವಾದ ಈ ಐಷಾರಾಮಿ ವಾಚಿನ ಬೆಲೆ ಸುಮಾರು 4.25 ಕೋಟಿ ರೂ. ಆಧ್ಯಾತ್ಮಿಕತೆ ಮತ್ತು ಕಲಾತ್ಮಕತೆಯನ್ನು ಸಮ್ಮಿಲನಗೊಳಿಸುವ ಇದು ವಾಚ್ ಪ್ರಿಯರ ಗಮನ ಸೆಳೆಯುತ್ತಿದೆ.

ಈ ವಾಚ್ ಬೆಲೆ ಬರೋಬ್ಬರಿ 4.25 ಕೋಟಿ ರೂ.! ಇದರೊಳಗಿದೆ ಶ್ರೀರಾಮ, ಹನುಮಂತನ ಸುಂದರ ಶಿಲ್ಪ
ಶ್ರೀ ರಾಮಚಂದ್ರ’ ವಾಚ್Image Credit source: instagram/jacobandco
ಅಕ್ಷತಾ ವರ್ಕಾಡಿ
|

Updated on:Oct 25, 2026 | 10:37 AM

Share

ವಿಶ್ವಪ್ರಸಿದ್ಧ ಐಷಾರಾಮಿ ವಾಚ್ ಬ್ರ್ಯಾಂಡ್ ಆದ ‘ಜೇಕಬ್ ಆ್ಯಂಡ್ ಕೋ’ (Jacob & Co) ತನ್ನ ಜನಪ್ರಿಯ ‘ರಾಮ್ ಜನ್ಮಭೂಮಿ’ ವಾಚಿನ ಭರ್ಜರಿ ಯಶಸ್ಸಿನ ಬಳಿಕ, ಇದೀಗ ಮತ್ತೊಂದು ಅತ್ಯಾಕರ್ಷಕ ವಾಚ್ ಅನ್ನು ಪರಿಚಯಿಸಿದೆ. ಪ್ರಭು ಶ್ರೀರಾಮ, ಹನುಮಂತ ಮತ್ತು ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮಮಂದಿರದ ವಿನ್ಯಾಸವನ್ನು ಒಳಗೊಂಡಿರುವ ಈ ಹೊಸ ವಾಚ್ ವಾಚ್ ಪ್ರಿಯರ ಗಮನ ಸೆಳೆದಿದೆ.

ಅತಿ ವಿರಳ ಆವೃತ್ತಿಯ ಅತ್ಯಾಕರ್ಷಕ ವಿನ್ಯಾಸ:

ಪ್ರತಿಷ್ಠಿತ ‘ಜೇಕಬ್ ಆ್ಯಂಡ್ ಕೋ ಆಸ್ಟ್ರೋನಾಮಿಯಾ ಸೋಲಾರ್’ (Astronomia Solar) ಮಾದರಿಯನ್ನು ಆಧರಿಸಿರುವ ಈ ‘ಶ್ರೀ ರಾಮಚಂದ್ರ’ (Shri Ramchandra) ಎಡಿಷನ್ ವಾಚ್, ಜಗತ್ತಿನಲ್ಲಿ ಕೇವಲ ಮೂರು ಪೀಸ್‌ಗಳಿಗೆ ಮಾತ್ರ ಸೀಮಿತವಾಗಿದೆ. ಅತ್ಯಂತ ಸೀಮಿತ ಸಂಖ್ಯೆಯಲ್ಲಿ ತಯಾರಾಗಿರುವ ಈ ವಾಚ್, ಆಧ್ಯಾತ್ಮಿಕ ಮೌಲ್ಯ ಮತ್ತು ಉನ್ನತ ವಾಚ್‌ಮೇಕಿಂಗ್ ಕಲೆಯ ವಿಶಿಷ್ಟ ಸಂಗಮವಾಗಿದೆ.

ದೇವತೆಗಳು ಮತ್ತು ಪ್ರಕೃತಿಯ ಶಕ್ತಿಯ ಅಪರೂಪದ ಸಂಯೋಜನೆ:

ಈ ವಾಚ್‌ನಲ್ಲಿ ದೇವತೆಗಳನ್ನು ಸುಂದರವಾದ ಶಿಲ್ಪಗಳ (figurines) ರೂಪದಲ್ಲಿ ಅಳವಡಿಸಲಾಗಿದೆ. ವಾಚ್‌ನ 6 ಗಂಟೆಯ ಸ್ಥಾನದಲ್ಲಿ ಭಗವಾನ್ ಶ್ರೀರಾಮ ಹಾಗೂ 9 ಗಂಟೆಯ ಸ್ಥಾನದಲ್ಲಿ ಹನುಮಂತನು ಆಸೀನನಾಗಿದ್ದಾನೆ. ಇವರಿಬ್ಬರ ಮಧ್ಯೆ ತನ್ನದೇ ಅಕ್ಷದ ಮೇಲೆ ತಿರುಗುವ ನೀಲಿ ಬಣ್ಣದ ಲೇಪಿತ ಭೂಮಿ (Earth) ಇದೆ. ಇದು ಪ್ರತಿ ನಿಮಿಷಕ್ಕೆ ಒಂದು ಸುತ್ತು ಪೂರ್ಣಗೊಳಿಸುವ ಮೂಲಕ ರನ್ನಿಂಗ್ ಸೆಕೆಂಡ್‌ಗಳಂತೆ ಕಾರ್ಯನಿರ್ವಹಿಸುತ್ತದೆ.

View this post on Instagram

A post shared by JACOB & CO. (@jacobandco)

ಕೇಸರಿ ವರ್ಣ ಹಾಗೂ ರಾಮಮಂದಿರದ ಅದ್ಭುತ ಹಿನ್ನೆಲೆ:

ಹಿಂದೂ ಧರ್ಮದ ಪವಿತ್ರ ಸಂಕೇತವಾದ ಕೇಸರಿ ಬಣ್ಣಕ್ಕೆ ಇಲ್ಲಿ ವಿಶೇಷ ಗೌರವ ನೀಡಲಾಗಿದೆ. ಗಂಟೆ ಮತ್ತು ನಿಮಿಷಗಳನ್ನು ಪ್ರದರ್ಶಿಸಲು ರೋಸ್ ಗೋಲ್ಡ್ ಮುಳ್ಳುಗಳು, ಇವು ಕಿತ್ತಳೆ ಬಣ್ಣದ ಫೈರ್ ಓಪಾಲ್ ಡಯಲ್ ಮೇಲೆ ಇರುತ್ತವೆ. ಡಿಸ್ಪ್ಲೇಯ ಮಧ್ಯಭಾಗದಲ್ಲಿ ಸೂರ್ಯನನ್ನು ಪ್ರತಿನಿಧಿಸುವ ಜೇಕಬ್-ಕಟ್ ಕಿತ್ತಳೆ ಬಣ್ಣದ ಕ್ಯೂಬಿಕ್ ಜಿರೋಕಾನ್ ಕಲ್ಲನ್ನು ಅಳವಡಿಸಲಾಗಿದೆ. ಅಯೋಧ್ಯೆ ರಾಮಮಂದಿರದ ಪ್ರತಿಕೃತಿಯೊಂದಿಗೆ ಈ ಎಲ್ಲಾ ಅಂಶಗಳನ್ನು ಮಂಡಲ ಮಾದರಿಯನ್ನು ಹೊಂದಿರುವ ನೀಲಿ ನಿಯೋಲೈಟ್ (neoralithe) ಬೇಸ್ ಮೇಲೆ ಸುಂದರವಾಗಿ ಜೋಡಿಸಲಾಗಿದೆ.

ಇದನ್ನೂ ಓದಿ: ಮನೆಯ ಮುಂಭಾಗದಲ್ಲಿ ನಿಂಬೆ ಗಿಡವಿದ್ದರೆ ಅಶುಭವೇ? ವಾಸ್ತು ಶಾಸ್ತ್ರ ಹೇಳುವುದೇನು?

ಈ ಐಷಾರಾಮಿ ವಾಚ್ನ ವೈಶಿಷ್ಟ್ಯಗಳು:

ಈ ಐಷಾರಾಮಿ ವಾಚ್ ಜೇಕಬ್ ಅಂಡ್ ಕೋ, ನ ವಿಶಿಷ್ಟ ಇನ್-ಹೌಸ್ ಮ್ಯಾನುಯಲ್-ವೈಂಡಿಂಗ್ ಕ್ಯಾಲಿಬರ್ JCAM42 ಯಂತ್ರದಿಂದ ಚಲಿಸುತ್ತದೆ. ಇದು ಒಟ್ಟು 295 ಬಿಡಿಭಾಗಗಳನ್ನು ಹೊಂದಿದ್ದು, 48 ಗಂಟೆಗಳ ಪವರ್ ರಿಸರ್ವ್ ನೀಡುತ್ತದೆ. ರೋಸ್ ಗೋಲ್ಡ್ ಕೇಸ್‌ಬ್ಯಾಕ್‌ನಲ್ಲಿರುವ ಎರಡು ಬೌ (bows) ಗಳ ಸಹಾಯದಿಂದ ಇದನ್ನು ವೈಂಡ್ ಮತ್ತು ಸೆಟ್ ಮಾಡಬಹುದು. ಅಲ್ಲದೆ, ಇದರ ಹಿಂಭಾಗದಲ್ಲಿ ವಿಶೇಷವಾಗಿ ತಯಾರಿಸಿದ ‘ಜೈ ಶ್ರೀ ರಾಮ’ ಪ್ಲೇಟ್ ಅನ್ನು ಕೂಡ ಅಳವಡಿಸಲಾಗಿದೆ.

ವಾಚಿನ ಬೆಲೆ:

‘ಜೇಕಬ್ ಅಂಡ್ ಕೋ’ (Jacob & Co) ಸಂಸ್ಥೆಯ ಅತ್ಯಂತ ಅಪರೂಪದ ‘ಶ್ರೀ ರಾಮಚಂದ್ರ’ (Shri Ramchandra Edition) ವಾಚಿನ ಅಧಿಕೃತ ಬೆಲೆ ಅಂದಾಜು 4.25 ಕೋಟಿ ರೂ. ($510,000) ಆಗಿದ್ದು, ಇದು ಜಗತ್ತಿನಾದ್ಯಂತ ಕೇವಲ ಮೂರು ಪೀಸ್‌ಗಳಿಗೆ (3 Pieces) ಮಾತ್ರ ಸೀಮಿತವಾಗಿದೆ. ಇನ್ನು ಇದರ ಹಿಂದಿನ ಯಶಸ್ವಿ ಆವೃತ್ತಿಯಾದ ‘ರಾಮ್ ಜನ್ಮಭೂಮಿ’ (Epic X Ram Janmabhoomi) ಸರಣಿಯ ವಾಚ್‌ಗಳ ಬೆಲೆಯು ಅವುಗಳ ಮೆಟೀರಿಯಲ್‌ಗೆ ಅನುಗುಣವಾಗಿ 35.88 ಲಕ್ಷಗಳಿಂದ (ಟೈಟೇನಿಯಮ್ ಮಾದರಿ) 01.08 ಕೋಟಿವರೆಗೆ (18K ರೋಸ್ ಗೋಲ್ಡ್ ಮಾದರಿ) ಇರುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:36 am, Sun, 25 October 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ಬಿಗ್ ಬಾಸ್: ಸುದೀಪ್ ಎದುರಲ್ಲೇ ಬಗೆಬಗೆಯ ಶಿಕ್ಷೆ ಅನುಭವಿಸಿದ ಪ್ರಶಾಂತ್
ಬಿಗ್ ಬಾಸ್: ಸುದೀಪ್ ಎದುರಲ್ಲೇ ಬಗೆಬಗೆಯ ಶಿಕ್ಷೆ ಅನುಭವಿಸಿದ ಪ್ರಶಾಂತ್
ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ಸಿಸಿಬಿ ನೋಟಿಸ್​ಗೂ ಮೊದಲೇ ವಿಚಾರಣೆಗೆ ಹಾಜರಾದ ಕೃಪಾ ಆಳ್ವಾ
ರಾಜ್ಯದಾದ್ಯಂತ ಹಿಂಗಾರು ಮಳೆ ಆರ್ಭಟ: ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ
ರಾಜ್ಯದಾದ್ಯಂತ ಹಿಂಗಾರು ಮಳೆ ಆರ್ಭಟ: ಬೆಂಗಳೂರಲ್ಲಿ ಜಿಟಿ ಜಿಟಿ ಮಳೆ
ಕಮ್ಮಗೊಂಡನಹಳ್ಳಿಯ ಅಂಗಡಿಯಲ್ಲಿ ಏಕಕಾಲಕ್ಕೆ 23 ಸಿಲಿಂಡರ್ ಸ್ಫೋಟ
ಕಮ್ಮಗೊಂಡನಹಳ್ಳಿಯ ಅಂಗಡಿಯಲ್ಲಿ ಏಕಕಾಲಕ್ಕೆ 23 ಸಿಲಿಂಡರ್ ಸ್ಫೋಟ
ಇಂದು ಈ ರಾಶಿಯವರು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ!
ಇಂದು ಈ ರಾಶಿಯವರು ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ!
ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರಲ್ಲಿ ಕುಡಿಯುವ ನೀರಿಗಾಗಿ ಪರದಾಟ
ಭೀಕರ ಜಲ ಸಂಕಷ್ಟ: ರಾಯಚೂರು, ಕಲಬುರಗಿ, ಬೀದರಲ್ಲಿ ಕುಡಿಯುವ ನೀರಿಗಾಗಿ ಪರದಾಟ
ವಿಜಯಲಕ್ಷ್ಮಿ-ಧನ್ವೀರ್ ವಿವಾದದ ಬಗ್ಗೆ ದರ್ಶನ್​​ಗೆ ತಿಳಿಸುತ್ತೇವೆಂದ ವಕೀಲ
ವಿಜಯಲಕ್ಷ್ಮಿ-ಧನ್ವೀರ್ ವಿವಾದದ ಬಗ್ಗೆ ದರ್ಶನ್​​ಗೆ ತಿಳಿಸುತ್ತೇವೆಂದ ವಕೀಲ
RSS ಪಥಸಂಚಲನಕ್ಕೆ ಸಿದ್ಧತೆ: ಕೆಲವೆಡೆ ಷರತ್ತುಬದ್ಧ ಅನುಮತಿ; ಕೆಲವೆಡೆ ನಕಾರ
RSS ಪಥಸಂಚಲನಕ್ಕೆ ಸಿದ್ಧತೆ: ಕೆಲವೆಡೆ ಷರತ್ತುಬದ್ಧ ಅನುಮತಿ; ಕೆಲವೆಡೆ ನಕಾರ