Chanakya Niti: ಸದೃಢ ಆರೋಗ್ಯಕ್ಕಾಗಿ ಚಾಣಕ್ಯ ಹೇಳಿರುವ ಈ ಮಾತುಗಳನ್ನು ಅನುಸರಿಸಿ ಸಾಕು, ಎಂದಿಗೂ ಅನಾರೋಗ್ಯ ನಿಮ್ಮನ್ನು ಕಾಡದು

ಆರೋಗ್ಯವಾಗಿರಲು ಸಾಧ್ಯವಾದಷ್ಟೂ ಸಾಧಾರಣವಾದ ಆಹಾರವನ್ನು ಸೇವಿಸಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ.

Chanakya Niti: ಸದೃಢ ಆರೋಗ್ಯಕ್ಕಾಗಿ ಚಾಣಕ್ಯ ಹೇಳಿರುವ ಈ ಮಾತುಗಳನ್ನು ಅನುಸರಿಸಿ ಸಾಕು, ಎಂದಿಗೂ ಅನಾರೋಗ್ಯ ನಿಮ್ಮನ್ನು ಕಾಡದು
ಸದೃಢ ಆರೋಗ್ಯಕ್ಕಾಗಿ ಚಾಣಕ್ಯ ಹೇಳಿರುವ ಈ ಮಾತುಗಳನ್ನು ಅನುಸರಿಸಿ
Follow us
ಸಾಧು ಶ್ರೀನಾಥ್​
|

Updated on: Apr 29, 2023 | 6:06 AM

ಆರೋಗ್ಯಕರ ದೇಹಕ್ಕಾಗಿ ಚಾಣಕ್ಯ (chanakya) ಕೆಲವು ವಿಷಯಗಳನ್ನು ತಿಳಿಯಹೇಳಿದ್ದಾನೆ. ಅದನ್ನು ಪಾಲಿಸುವವರಿಗೆ ಯಾವುದೇ ರೋಗ ಬರುವುದಿಲ್ಲ. ಅನಾರೋಗ್ಯವು ಒಬ್ಬರ ಯಶಸ್ಸಿಗೆ ಅಡ್ಡಿಯಾಗಬಹುದು ಎಂದು ಚಾಣಕ್ಯ ನಂಬಿದ್ದರು (Chanakya Niti). ಆರೋಗ್ಯದೊಂದಿಗೆ ಆಟವಾಡುವುದು ಎಂದರೆ ಜೀವನದೊಂದಿಗೆ ಆಟವಾಡುವುದು ಎಂದೇ ಅರ್ಥ. ಚಾಣಕ್ಯನು ತನ್ನ ನೀತಿಗಳಲ್ಲಿ ಉತ್ತಮ ಆರೋಗ್ಯದ ಬಗ್ಗೆ (health tips) ಏನು ಹೇಳಿದ್ದಾನೆಂದು ತಿಳಿಯೋಣ.

ಆಚಾರ್ಯ ಚಾಣಕ್ಯ ಹೇಳುವಂತೆ ಆರೋಗ್ಯವಂತ ದೇಹವು ಜೀವನದಲ್ಲಿ ಅತ್ಯಂತ ದೊಡ್ಡ ಸಂತೋಷದ ಸಂಗತಿ. ಯಾವುದೇ ವ್ಯಕ್ತಿ ಆರೋಗ್ಯವಂತನಾಗಿರುತ್ತಾನೆ ಎಂದರೆ ಅವರು ತಮ್ಮ ಗುರಿಯತ್ತ ಹೆಚ್ಚು ಸಮರ್ಪಿತನಾಗಿರುತ್ತಾರೆ ಎಂದರ್ಥ. ಚಾಣಕ್ಯನ ಪ್ರಕಾರ ಯಾರೇ ಆಗಲಿ ತಮ್ಮ ಆರೋಗ್ಯವನ್ನು ಎಂದಿಗೂ ನಿರ್ಲಕ್ಷಿಸಬಾರದು. ಆರೋಗ್ಯವಂತ ಜನರು ತಮ್ಮ ಗಮ್ಯವನ್ನು ಸುಲಭವಾಗಿ ತಲುಪಬಹುದು. ಅಂತೆಯೇ ಅನಾರೋಗ್ಯದ ವ್ಯಕ್ತಿಯು ತನ್ನ ಗಮ್ಯಸ್ಥಾನವನ್ನು ತಲುಪಲು ಕಷ್ಟಸಾಧ್ಯ. ಆರೋಗ್ಯದ ಬಗ್ಗೆ ಚಾಣಕ್ಯ ಏನು ಹೇಳಿದ್ದಾನೆಂದು ಮತ್ತಷ್ಟು ತಿಳಿಯೋಣ.

ಮಾನವ ದೇಹವು ಹೆಚ್ಚಾಗಿ ನೀರಿನಿಂದ ಮಾಡಲ್ಪಟ್ಟಿದೆ. ಅಂದರೆ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ. ದೇಹದಲ್ಲಿ ಸಾಕಷ್ಟು ನೀರು ಸಿಗದ ಜನರು ಸುಲಭವಾಗಿ ರೋಗಗಳಿಗೆ ತುತ್ತಾಗುತ್ತಾರೆ. ಅದೇ ರೀತಿ ಊಟ ಮಾಡುವಾಗ ನೀರು ಕುಡಿಯಬಾರದು ಎಂಬುದನ್ನು ಮರೆಯದಿರಿ.

ದೈಹಿಕವಾಗಿ ಸದೃಢವಾಗಿರಲು ಒಬ್ಬ ವ್ಯಕ್ತಿಯು ತನ್ನ ಆಹಾರದಲ್ಲಿ ಹೆಚ್ಚು ಸಂಪೂರ್ಣ ಆಹಾರ ಮತ್ತು ಸಣ್ಣ ಧಾನ್ಯಗಳನ್ನು ಸೇವಿಸಬೇಕು. ಕಿರುಧಾನ್ಯಗಳು ದೇಹವನ್ನು ಹೆಚ್ಚು ಆರೋಗ್ಯವಾಗಿರಿಸುತ್ತದೆ ಮತ್ತು ಅದೇ ಸಮಯದಲ್ಲಿ ರೋಗಗಳನ್ನು ಸುಲಭವಾಗಿ ತಡೆಯುತ್ತದೆ. ಆಹಾರದಲ್ಲಿ ಹಾಲಿನ ಸೇವನೆ ಇರಲಿ.

ಚಾಣಕ್ಯನು ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಹೇಳುವಾಗ ಅಮೃತಬಳ್ಳಿ ಮಹತ್ವವನ್ನು ಉಲ್ಲೇಖಿಸುತ್ತಾನೆ. ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಾ ಅಮೃತಬಳ್ಳಿಯನ್ನೂ (Heart-leaved moonseed) ಸೇವಿಸುವ ವ್ಯಕ್ತಿಯಿಂದ ರೋಗಗಳು ದೂರವಾಗುತ್ತವೆ. ಸದಾ ಶಕ್ತಿ ತುಂಬಿದ ಅನುಭವವಾಗುತ್ತದೆ.

ಆರೋಗ್ಯವಾಗಿರಲು ಸಾಧ್ಯವಾದಷ್ಟೂ ಸಾಧಾರಣವಾದ ಆಹಾರವನ್ನು ಸೇವಿಸಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ. ತಾಮಸಿಕ ಆಹಾರವನ್ನು ಸೇವಿಸುವುದರಿಂದ ದೇಹವು ಸುಲಭವಾಗಿ ರೋಗಗಳಿಗೆ ತುತ್ತಾಗುತ್ತದೆ. ಇದರಿಂದ ನಿರಂತರವಾಗಿ ಅನಾರೋಗ್ಯ ಅಥವಾ ಕೆಲವು ಕಾಯಿಲೆಗಳು ಯಾವಾಗಲೂ ನಿಮ್ಮನ್ನು ಕಾಡುತ್ತದೆ. ಆದ್ದರಿಂದ ಸಾಮಾನ್ಯ ಆಹಾರವನ್ನು ಮಾತ್ರ ತಿನ್ನಲು ಪ್ರಯತ್ನಿಸಿ.

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ