ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡಲು ಇಲ್ಲಿದೆ ದುರ್ಗಾ ಮಂತ್ರ
ದುರ್ಗಾ ದೇವಿಯು ಪ್ರಕೃತಿ ಮಾತೆ. ಎಲ್ಲಾ ದೇವಾನು ದೇವತೆಗಳು ಮತ್ತು ರಾಕ್ಷಸರು ದುರ್ಗಾ ದೇವಿಯನ್ನು ಪೂಜಿಸುತ್ತಾರೆ. ಏಕೆಂದರೆ ಆಕೆ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಶಕ್ತಿಯಿಂದ ಸೃಷ್ಟಿಸಲ್ಪಟ್ಟವಳು. ಹಾಗಾಗಿ ಆಕೆ ಇಡೀ ಲೋಕದ ರಕ್ಷಣೆ ಮಾಡುತ್ತಾಳೆ. ದೇವಿಯನ್ನು ಯಾವ ವ್ಯಕ್ತಿ ಭಕ್ತಿಯಿಂದ ಪೂಜಿಸುತ್ತಾನೋ ಅವನಿಗೆ ಒಲಿಯುತ್ತಾಳೆ. ಆದ್ದರಿಂದ ಮನೆಯಲ್ಲಿಯೇ ಪೂಜೆ ಮಾಡುವ ಮತ್ತು ಪ್ರತಿನಿತ್ಯ ಮಂತ್ರ ಪಠಣೆ ಮಾಡುವ ಮೂಲಕ ದೇವಿಯ ಅನುಗ್ರಹ ಪಡೆಯಿರಿ.
ಹಿಂದೂ ದೇವತೆಯರಲ್ಲೇ ಅತ್ಯಂತ ಪ್ರಭಾವಶಾಲಿಯಾಗಿರುವ ದುರ್ಗಾ ದೇವಿಯನ್ನು ಪ್ರತಿಯೊಂದು ಮನೆಯಲ್ಲಿಯೂ ಪೂಜಿಸಲಾಗುತ್ತದೆ. ಏಕೆಂದರೆ ಅವಳು ಒಂದು ರೀತಿಯ ಶಕ್ತಿ ಆಕೆಯ ಹೆಸರು ಕೇಳಿದರೆ ಮೈಯಲ್ಲಿ ನಡುಕ ಹುಟ್ಟುತ್ತದೆ. ದುರ್ಗಾ ಎಂದಾಗ ಮೊದಲು ನೆನಪಾಗುವುದು ಆಕೆಯ ಕೋಪ, ವಿವಿಧ ರೀತಿಯ ಅಸ್ತ್ರಗಳನ್ನು ಹಿಡಿದು ಹುಲಿಯ ಮೇಲೇರಿ ಬರುವ ದೃಶ್ಯ. ಹಾಗಾಗಿಯೇ ದುರ್ಗಾ ಮಾತೆಯನ್ನು ಶಕ್ತಿ ಮತ್ತು ಧೈರ್ಯದ ಮೂಲವೆಂದು, ಬ್ರಹ್ಮಾಂಡದ ತಾಯಿ ಮತ್ತು ರಕ್ಷಕಿ ಎಂದು ಪರಿಗಣಿಸಲಾಗುತ್ತದೆ. ಅವಳು ಶಕ್ತಿಯ ನಿಜವಾದ ರೂಪ. ಹಾಗಾಗಿ ಅವಳನ್ನು ಅನೇಕ ರೂಪಗಳಲ್ಲಿ ಪೂಜಿಸಲಾಗುತ್ತದೆ.
ದುರ್ಗಾ ಮಾತೆ ಪ್ರಪಂಚದ ಒಳಿತಿಗಾಗಿ ಅಗತ್ಯವಿರುವಾಗಲೆಲ್ಲಾ ಅವತಾರಗಳನ್ನು ಎತ್ತುವ ಮೂಲಕ, ಬ್ರಹ್ಮಾಂಡಕ್ಕೆ ಹಾನಿ ಮಾಡಲು ಬಯಸಿದ ರಾಕ್ಷಸರನ್ನು ಕೊಂದಿದ್ದಾಳೆ. ದುರ್ಗಾ ದೇವಿಯು ಪ್ರಕೃತಿ ಮಾತೆ. ಎಲ್ಲಾ ದೇವಾನು ದೇವತೆಗಳು ಮತ್ತು ರಾಕ್ಷಸರು ದುರ್ಗಾ ದೇವಿಯನ್ನು ಪೂಜಿಸುತ್ತಾರೆ. ಏಕೆಂದರೆ ಆಕೆ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಶಕ್ತಿಯಿಂದ ಸೃಷ್ಟಿಸಲ್ಪಟ್ಟವಳು. ಹಾಗಾಗಿ ಆಕೆ ಇಡೀ ಲೋಕದ ರಕ್ಷಣೆ ಮಾಡುತ್ತಾಳೆ. ದೇವಿಯನ್ನು ಯಾವ ವ್ಯಕ್ತಿ ಭಕ್ತಿಯಿಂದ ಪೂಜಿಸುತ್ತಾನೋ ಅವನಿಗೆ ಒಲಿಯುತ್ತಾಳೆ. ಆದ್ದರಿಂದ ಮನೆಯಲ್ಲಿಯೇ ಪೂಜೆ ಮಾಡುವ ಮತ್ತು ಪ್ರತಿನಿತ್ಯ ಮಂತ್ರ ಪಠಣೆ ಮಾಡುವ ಮೂಲಕ ದೇವಿಯ ಅನುಗ್ರಹ ಪಡೆಯಿರಿ.
ಪ್ರತಿದಿನ ಪಠಿಸಬೇಕಾದ ದುರ್ಗಾ ದೇವಿಯ ಮಂತ್ರಗಳು;
1. ಓಂ ಜಯಂತಿ ಮಂಗಳ ಕಾಳಿ ಭದ್ರಾ ಕಾಳಿ ಕಪಾಲಿನಿ। ದುರ್ಗಾ ಕ್ಷಮಾ ಶಿವಾ ಧಾತ್ರಿ ಸ್ವಾಹ ಸ್ವಧ ನಮೋಸ್ತುತೇ।।
2. ಸರ್ವಬಧ ವಿನಿರ್ಮುಕ್ತೋ ಧನ್ ಧಾನ್ಯಾಯೆ ಸುತನ್ವಿತಾಹ। ಮನುಷ್ಯೋ ಮತ್ಪ್ರಸಾಡೆನ್ ಭವಿಶ್ಯತಿ ನಾ ಸಂಶಯಾಹ।।
3. ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿ ಸಮನ್ವಿತೇ । ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೆ ದೇವಿ ನಮೋಸ್ತುತೇ।।
4. ದೇಹಿ ಸೌಭಾಗ್ಯಮಾರೋಗ್ಯಂ ದೇಹಿ ದೇವೀ ಪರಂ ಸುಖಂ। ರೂಪಂ ಧೇಹಿ ಜಯಂ ದೇಹಿ ಯಶೋ ಧೇಹಿ ದ್ವಿಷೋ ಜಹಿ।।
5. ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ| ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ||
ಇದನ್ನೂ ಓದಿ: “ಓಂ” ಪಠಣೆ ಎಷ್ಟೆಲ್ಲಾ ಪ್ರಯೋಜನಗಳನ್ನು ನೀಡುತ್ತೆ ಗೊತ್ತಾ?
ಈ ಮಂತ್ರಗಳನ್ನು ಪಠಿಸುವುದರಿಂದ ಸಿಗುವ ಪ್ರಯೋಜನಗಳೇನು?
1. ದುರ್ಗಾ ದೇವಿಯ ಮಂತ್ರಗಳನ್ನು ಅತ್ಯಂತ ಭಕ್ತಿಯಿಂದ ಪಠಣೆ ಮಾಡುವುದರಿಂದ ದೇವಿಯು ರಕ್ಷಣೆ ನೀಡುತ್ತಾಳೆ.
2. ಮಕ್ಕಳು ದಿನನಿತ್ಯ ಈ ಮಂತ್ರಗಳನ್ನು ಪಠಿಸುವುದರಿಂದ ಉತ್ತಮ ಜ್ಞಾನ, ಬುದ್ಧಿವಂತಿಕೆ ಎಲ್ಲವನ್ನು ಪಡೆದುಕೊಳ್ಳಬಹುದು.
3. ಮಾನಸಿಕ ಒತ್ತಡ, ಆತಂಕ, ಖಿನ್ನತೆಯಿಂದ ಬಳಲುತ್ತಿರುವವರು ಇದೆಲ್ಲದರಿಂದ ಮುಕ್ತಿ ಪಡೆಯಲು ಈ ಮಂತ್ರಗಳನ್ನು ಪಠಿಸಿ.
4. ದುರ್ಗಾ ದೇವಿಯ ಮಂತ್ರ ಪಠಣೆ ಎಲ್ಲಾ ರೀತಿಯ ಕಾಯಿಲೆಗಳಿಂದ ನಿಮ್ಮನ್ನು ದೂರವಿರಿಸಲು ಸಹಾಯ ಮಾಡುತ್ತದೆ.
5. ದುರ್ಗಾ ಮಂತ್ರಗಳನ್ನು ನಿಯಮಿತವಾಗಿ ಪಠಿಸುವವರ ಜೀವನದಲ್ಲಿ ಅವರು ಬಯಸಿದ ಎಲ್ಲಾ ಆಸೆಗಳು ಈಡೇರುತ್ತವೆ.
6. ಈ ಮಂತ್ರ ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.
7. ಭಕ್ತರು ತಮ್ಮ ಏಕಾಗ್ರತೆಯ ಶಕ್ತಿಯನ್ನು ಸುಧಾರಿಸಲು ದುರ್ಗಾ ದೇವಿಯ ಮಂತ್ರ ಸಹಾಯ ಮಾಡುತ್ತದೆ.
8. ಶತ್ರುಗಳ ಉಪಟಳದಿಂದ ಬಳಲುತ್ತಿರುವವರು ಈ ದುರ್ಗಾ ಮಂತ್ರ ಪಠಿಸಿ. ಇದು ನಕಾರಾತ್ಮಕ ಶಕ್ತಿ, ದುಷ್ಟ ಶಕ್ತಿಗಳಿಂದ ಯಾವುದೇ ಅಪಾಯವಾಗದಂತೆ ತಡೆಯತ್ತದೆ.
ದುರ್ಗಾ ಮಂತ್ರಗಳನ್ನು ಪ್ರತಿನಿತ್ಯ ಪಠಿಸುವುದರಿಂದ ಜೀವನದಲ್ಲಿ ನಾವು ಯಶಸ್ಸನ್ನು ಪಡೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲ, ಈ ಮಂತ್ರಗಳ ಪಠಣೆಯಿಂದ ನಮ್ಮಲ್ಲಿನ ಭಯವು ದೂರಾಗುವುದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ