Garbarakshambigai Temple: ಈ ದೇವಾಲಯದಲ್ಲಿರುವ ದೇವಿ ಬಂಜೆತನ ದೂರ ಮಾಡುತ್ತಾಳೆ! ಎಲ್ಲಿದೆ ಗೊತ್ತಾ?

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 18, 2024 | 3:42 PM

ಈ ಸುಂದರವಾದ ದೇವಾಲಯದಲ್ಲಿ ಶಿವನನ್ನು ಮುಲ್ಲೈವನನಾಥರ್ ಮತ್ತು ಪತ್ನಿ ಪಾರ್ವತಿಯನ್ನು ಗರ್ಭರಕ್ಷಾಂಬಿಕಾ ಎಂದು ಪೂಜಿಸಲಾಗುತ್ತದೆ. ಇಲ್ಲಿ ಬರುವ ಅನೇಕ ಮಹಿಳೆಯರು ಬಂಜೆತನ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸಲು, ಗರ್ಭಧಾರಣೆಗೆ ಮಾತ್ರವಲ್ಲದೆ ಸುಸೂತ್ರವಾಗಿ ಹೆರಿಗೆಯಾಗುವ ಸಲುವಾಗಿಯೂ ತಾಯಿ ಗರ್ಭರಕ್ಷಾಂಬಿಕೆಯ ಮೊರೆ ಹೋಗುತ್ತಾರೆ.

Garbarakshambigai Temple: ಈ ದೇವಾಲಯದಲ್ಲಿರುವ ದೇವಿ ಬಂಜೆತನ ದೂರ ಮಾಡುತ್ತಾಳೆ! ಎಲ್ಲಿದೆ ಗೊತ್ತಾ?
Garbarakshambigai Temple
Image Credit source: Google
Follow us on

ಭಾರತದಲ್ಲಿ ಅನೇಕ ರೀತಿಯ ಜನಪ್ರಿಯ ಮತ್ತು ಪ್ರಾಚೀನ ದೇವಾಲಯಗಳಿವೆ, ಅವು ವಿಭಿನ್ನ ನಂಬಿಕೆ ಮತ್ತು ಕೆಲವು ವಿಶೇಷತೆಗಳಿಂದ ಪ್ರಸಿದ್ಧವಾಗಿರುತ್ತದೆ. ಅಂತಹ ಮಂದಿರಗಳ ಸಾಲಿನಲ್ಲಿ ತಮಿಳುನಾಡಿನ ತಿರುಕ್ಕರುಗಾವುರ್ ದೇವಾಲಯವು ಸೇರಿಕೊಳ್ಳುತ್ತದೆ. ಏನಿದರ ವಿಶೇಷತೆ ಅಂತೀರಾ? ಈ ಸುಂದರವಾದ ದೇವಾಲಯದಲ್ಲಿ ಶಿವನನ್ನು ಮುಲ್ಲೈವನನಾಥರ್ ಮತ್ತು ಪತ್ನಿ ಪಾರ್ವತಿಯನ್ನು ಗರ್ಭರಕ್ಷಾಂಬಿಕಾ ದೇವಿ (Garbarakshambigai Temple) ಎಂದು ಪೂಜಿಸಲಾಗುತ್ತದೆ. ಹಾಗಾದರೆ ಇದರ ವಿಶೇಷತೆ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿದುಕೊಳ್ಳೋಣ.

ಗರ್ಭರಕ್ಷಾಂಬಿಕಾ ದೇವಾಲಯದ ಮಹತ್ವ;

ಈ ದೇವಾಲಯ ತಮಿಳುನಾಡಿನ ತಿರುಕ್ಕರುಗಾವುರ್ ನಲ್ಲಿದೆ. ಇಲ್ಲಿರುವ ಗರ್ಭರಕ್ಷಾಂಬಿಕಾ ದೇವತೆ ಪಾರ್ವತಿ ಮಾತೆಯ ಅವತಾರ ಎಂದು ನಂಬಲಾಗಿದೆ. ಈ ದೇವಾಲಯದ ಹೆಸರೇ ಅದರ ಮಹತ್ವವನ್ನು ಬಹಿರಂಗಪಡಿಸುತ್ತದೆ. ಗರ್ಭರಕ್ಷಾಂಬಿಕಾ ಎಂದರೆ ಗರ್ಭದ ರಕ್ಷಣೆ ಎಂಬ ಅರ್ಥ ಕೊಡುತ್ತದೆ. ಜೊತೆಗೆ ಈ ದೇವಾಲಯ ಗರ್ಭಿಣಿಯರಿಗೆ ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ಏಕೆಂದರೆ ಇಲ್ಲಿ ಗರ್ಭಿಣಿಯರು, ಹುಟ್ಟುವ ಮಕ್ಕಳ ರಕ್ಷಣೆಗಾಗಿ, ಇಲ್ಲದವರು ಸಂತಾನ ಭಾಗ್ಯಕ್ಕಾಗಿ, ಈ ದೇವಾಲಯಕ್ಕೆ ಬಂದು ತಾಯಿಯ ಆಶೀರ್ವಾದವನ್ನು ಬೇಡುತ್ತಾರೆ. ಜೊತೆಗೆ ಈ ದೇವಾಲಯದಲ್ಲಿರುವ ಮುಲ್ಲೈವನನಾಥರ್ ದೇವರನ್ನು ಪೂಜಿಸುವ ಮೂಲಕ, ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಕಾಯಿಲೆಗಳು ಸಹ ಗುಣವಾಗುತ್ತವೆ. ಹಾಗಾಗಿ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಶ್ರೀ ಮುಲ್ಲೈವನನಾಥರ್ ಸ್ವಾಮಿಯನ್ನು ಪೂಜಿಸುತ್ತಾರೆ.

ಇದನ್ನೂ ಓದಿ: ಕಷ್ಟಗಳಿಂದ ಮುಕ್ತಿ ಪಡೆಯಲು ಕಾಮದ ಏಕಾದಶಿಯಂದು ವಿಷ್ಣುವನ್ನು ಈ ರೀತಿ ಪೂಜಿಸಿ

ಗರ್ಭರಕ್ಷಾಂಬಿಕಾ ದೇವಿ;

ಈ ದೇವಾಲಯದ ಗರ್ಭಗುಡಿಯಲ್ಲಿ 7 ಅಡಿ ಎತ್ತರದ ದೇವಿಯ ಸುಂದರವಾದ ವಿಗ್ರಹವಿದೆ. ಈ ಅವತಾರದಲ್ಲಿರುವ ದೇವಿಯು ಗರ್ಭಾಶಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯರನ್ನು ಮತ್ತು ಗರ್ಭ ಧರಿಸಿದ ಮಹಿಳೆಯರನ್ನು ರಕ್ಷಿಸುತ್ತಾಳೆ. ಮಕ್ಕಳಿಲ್ಲದ ಜನರು ಇಲ್ಲಿಗೆ ಬಂದು ಭಕ್ತಿಯಿಂದ ಪೂಜಿಸುತ್ತಾರೆ. ಗರ್ಭಿಣಿಯರು ಸುರಕ್ಷಿತ ಹೆರಿಗೆಯಾಗಲು ದೇವಿಯ ಆಶೀರ್ವಾದ ಬೇಡುತ್ತಾರೆ. ದೇವಾಲಯಕ್ಕೆ ನೇರ ಭೇಟಿ ಕೊಟ್ಟು ಪೂಜೆ, ಸಲ್ಲಿಸಲು, ದೇಣಿಗೆ ನೀಡಲು ಸಾಧ್ಯವಾಗದ ಭಕ್ತರು ಆನ್‌ಲೈನ್ ಪೋರ್ಟಲ್‌ಗಳ ಮೂಲಕವೂ ದೇಣಿಗೆ ನೀಡಲು ಅವಕಾಶ ಕಲ್ಪಿಸಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ