Interesting Facts: ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದ ಇದ್ದರೆ ನಿಮ್ಮ ಭವಿಷ್ಯ ಹೇಗಿರುತ್ತೆ ನೋಡಿ
Finger Astrology: ಸಾಮಾನ್ಯವಾಗಿ ಮಹಿಳೆಯರಾಗಿರಲಿ ಅಥವಾ ಪುರುಷರಾಗಿರಲಿ ಕಾಲ್ಬೆರಳುಗಳು ಕೆಲವರಲ್ಲಿ ಒಂದೇ ಸಮವಾಗಿರುತ್ತದೆ, ಇನ್ನು ಕೆಲವರಲ್ಲಿ ಮೊದಲ ಎರಡು ಅಥವಾ ಮೂರು ಬೆರಳು ಸಮಾನವಾಗಿರುತ್ತದೆ ಕೊನೆಯ ಬೆರಳು ಚಿಕ್ಕದಾಗಿರುತ್ತವೆ. ಆದರೆ ಕೆಲವರಲ್ಲಿ ತೋರುಬೆರಳು ಹೆಬ್ಬೆರಳಿಗಿಂತ ದೊಡ್ಡದಾಗಿರುತ್ತದೆ ಅಂತವರು ಎಲ್ಲದರಲ್ಲೂ ಪ್ರಾಬಲ್ಯ ಸಾಧಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಇದು ನಿಜವೇ? ತಿಳಿದುಕೊಳ್ಳಿ.
ನಿಮ್ಮ ಪಾದದ ಬೆರಳುಗಳನ್ನು ನೀವು ಎಂದಾದರೂ ಸರಿಯಾಗಿ ಗಮನಿಸಿದ್ದೀರಾ? ಸಾಮಾನ್ಯವಾಗಿ ಮಹಿಳೆಯರಾಗಿರಲಿ ಅಥವಾ ಪುರುಷರಾಗಿರಲಿ ಕಾಲ್ಬೆರಳುಗಳು ಕೆಲವರಲ್ಲಿ ಒಂದೇ ಸಮವಾಗಿರುತ್ತದೆ, ಇನ್ನು ಕೆಲವರಲ್ಲಿ ಮೊದಲ ಎರಡು ಅಥವಾ ಮೂರು ಬೆರಳು ಸಮಾನವಾಗಿರುತ್ತದೆ ಕೊನೆಯ ಬೆರಳು ಚಿಕ್ಕದಾಗಿರುತ್ತವೆ. ಆದರೆ ಕೆಲವರಲ್ಲಿ ತೋರುಬೆರಳು ಹೆಬ್ಬೆರಳಿಗಿಂತ ದೊಡ್ಡದಾಗಿರುತ್ತದೆ ಅಂತವರು ಎಲ್ಲದರಲ್ಲೂ ಪ್ರಾಬಲ್ಯ ಸಾಧಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಇದು ನಿಜವೇ? ಸಾಮುದ್ರಿಕಾ ಶಾಸ್ತ್ರದಲ್ಲಿ ಈ ಬಗ್ಗೆ ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ.
ಎಲ್ಲಾ ಬೆರಳುಗಳು ಸಮಾನವಾಗಿದ್ದರೆ ಅದರ ಅರ್ಥವೇನು?
ನಿಮ್ಮ ಕಾಲ್ಬೆರಳುಗಳೆಲ್ಲವೂ ಉದ್ದದಲ್ಲಿ ಒಂದೇ ಸಮನಾಗಿದ್ದರೆ. ಇದರರ್ಥ ನೀವು ತುಂಬಾ ವಿಶ್ವಾಸಾರ್ಹ ವ್ಯಕ್ತಿ. ನಿಮ್ಮಲ್ಲಿರುವ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳುತ್ತೀರಿ. ಇದರರ್ಥ ಜೀವನದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿ. ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುತ್ತೀರಿ.
ಮೊದಲ ಮೂರು ಬೆರಳುಗಳು ಸಮಾನವಾಗಿದ್ದರೆ!
ಕಾಲ್ಬೆರಳುಗಳ ಮೊದಲ ಮೂರು ಬೆರಳುಗಳು ಸಮನಾಗಿದ್ದು ಉಳಿದ ಎರಡು ಬೆರಳು ಚಿಕ್ಕದಾಗಿದ್ದರೆ. ನಿಮ್ಮದನ್ನು ರೋಮನ್ ಪಾದ ಎಂದು ಕರೆಯಲಾಗುತ್ತದೆ. ಇಂತಹ ಬೆರಳಿನ ಆಕಾರವನ್ನು ಹೊಂದಿರುವವರು ಎಲ್ಲರೊಂದಿಗೂ ಸ್ನೇಹಪರರಾಗಿರುತ್ತಾರೆ. ಇತರರಿಗೆ ದಯೆ ತೋರಿಸುತ್ತಾರೆ. ಎಲ್ಲರೊಂದಿಗೂ ತುಂಬಾ ಚೆನ್ನಾಗಿ ಸಂವಹನ ನಡೆಸುತ್ತಾರೆ.
ಇದನ್ನೂ ಓದಿ: ಮನೆಯಲ್ಲಿ ಆಹಾರ, ಹಣದ ಕೊರತೆ ಬರಬಾರದು ಎಂದರೆ ಈ ನಿಯಮಗಳನ್ನು ಪಾಲನೆ ಮಾಡಿ!
ಹೆಬ್ಬೆರಳು ಮಾತ್ರ ಉದ್ದವಾಗಿದ್ದರೆ!
ಹೆಬ್ಬೆರಳು ಉದ್ದವಾಗಿ ಉಳಿದ ಬೆರಳುಗಳು ಚಿಕ್ಕದಾಗಿದ್ದರೆ ಇದನ್ನು ಈಜಿಪ್ಟಿನ ಪಾದ ಎಂದು ಕರೆಯಲಾಗುತ್ತದೆ. ಅಂತವರು ಸ್ವತಂತ್ರ ಆಲೋಚನೆಗಳನ್ನು ಹೊಂದಿರುತ್ತಾರೆ. ಹಾಗೆಯೇ ನಿಷ್ಠಾವಂತರಾಗಿರುತ್ತಾರೆ. ಆದರೆ ತುಂಬಾ ಹಠಮಾರಿಗಳಾಗಿರುತ್ತಾರೆ.
ತೋರುಬೆರಳು ಹೆಬ್ಬೆರಳಿಗಿಂತ ಉದ್ದವಾಗಿದ್ದರೆ!
ಎರಡನೇಯ ಬೆರಳು ಹೆಬ್ಬೆರಳಿಗಿಂತ ಉದ್ದವಾಗಿದ್ದರೆ ಇದರರ್ಥ ನಿಮ್ಮದು ಗ್ರೀಕ್ ಪಾದ. ಇವರು ತುಂಬಾ ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ. ಎಲ್ಲರೊಂದಿಗೂ ಬೇಗ ಸ್ನೇಹ ಬೆಳಸಿಕೊಳ್ಳುತ್ತಾರೆ. ಅವರು ಜೀವನದಲ್ಲಿ ದೊಡ್ಡ ಸ್ಥಾನವನ್ನು ತಲುಪುತ್ತಾರೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ