Shani dosh: ಜಾತಕದಲ್ಲಿ ಶನಿ ದೋಷ ನಿವಾರಣೆಗೆ ಈ ಕೆಲಸ ಮಾಡಿ

ಶನಿಯ ವಕ್ರ ದೃಷ್ಟಿ ಬಿದ್ದಾಗ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಜಾತಕದಲ್ಲಿ ಶನಿ ದೋಷವಿದ್ದಾಗ ಅದನ್ನು ಕಡಿಮೆ ಮಾಡಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಇದನ್ನು ಅನುಸರಿಸುವುದರಿಂದ ಶನಿ ಮಹಾರಾಜ ಸಂತೋಷಪಡುತ್ತಾನೆ. ಹಾಗಾದರೆ ಶನಿ ದೋಷ ನಿವಾರಣೆಗೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ.

Shani dosh: ಜಾತಕದಲ್ಲಿ ಶನಿ ದೋಷ ನಿವಾರಣೆಗೆ ಈ ಕೆಲಸ ಮಾಡಿ
ಶನಿ ದೇವಾ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 19, 2024 | 9:53 AM

ಒಂಬತ್ತು ಗ್ರಹಗಳಲ್ಲಿ, ಶನಿಯ ವಕ್ರ ದೃಷ್ಟಿ ಬಿದ್ದಾಗ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಜಾತಕದಲ್ಲಿ ಶನಿ ದೋಷವಿದ್ದಾಗ ಅದನ್ನು ಕಡಿಮೆ ಮಾಡಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಇದನ್ನು ಅನುಸರಿಸುವುದರಿಂದ ಶನಿ ಮಹಾರಾಜ ಸಂತೋಷಪಡುತ್ತಾನೆ. ಹಾಗಾದರೆ ಶನಿ ದೋಷ ನಿವಾರಣೆಗೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ.

-ಶನಿ ದೇವನಿಗೆ ಕಪ್ಪು ಬಣ್ಣ ತುಂಬಾ ಇಷ್ಟ. ಹಾಗಾಗಿ ಅವನನ್ನು ಸಂತೋಷ ಪಡಿಸಲು ಜೊತೆಗೆ ದೇವರ ಆಶೀರ್ವಾದ ಪಡೆಯಲು, ಶನಿವಾರ ಕಪ್ಪು ಪ್ರಾಣಿಗಳಿಗೆ ಅಂದರೆ ಕಪ್ಪು ನಾಯಿ ಅಥವಾ ಕಾಗೆ ಮುಂತಾದ ಪಕ್ಷಿಗಳಿಗೆ ಆಹಾರ ನೀಡಿ. ಕಪ್ಪು ವಸ್ತುಗಳನ್ನು ದಾನ ಮಾಡಿ. ಈ ರೀತಿ ಮಾಡುವುದರಿಂದ ನೀವು ಶನಿ ದೇವರ ಆಶೀರ್ವಾದ ಪಡೆಯಬಹುದು.

-ಶನಿವಾರ ಅರಳಿ ಮರಕ್ಕೆ ಸಕ್ಕರೆ ಮತ್ತು ಕಪ್ಪು ಎಳ್ಳು ಬೆರೆಸಿದ ನೀರನ್ನು ಎಣ್ಣೆಯ ಜೊತೆಗೆ ಸೇರಿಸಿ ಬಳಿಕ ಅರ್ಪಿಸಿ. ಇದರ ನಂತರ, ಮರವನ್ನು 3 ಬಾರಿ ಪ್ರದಕ್ಷಿಣೆ ಹಾಕಿ. ಜಾತಕದಲ್ಲಿ ಶನಿ ದೋಷ ಇದ್ದಲ್ಲಿ ಪರಿಹಾರಗೊಳ್ಳುತ್ತದೆ.

-ಶನಿವಾರದ ದಿನ ಸಾಸಿವೆ ಎಣ್ಣೆಯಲ್ಲಿ ಬೇಯಿಸಿದ ರೊಟ್ಟಿಯನ್ನು ಕಪ್ಪು ನಾಯಿಗೆ ತಿನ್ನಿಸಿ. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಯಾವುದೇ ರೀತಿಯ ತೊಂದರೆಗಳಿದ್ದರೂ ಪರಿಹಾರವಾಗುತ್ತದೆ. ಜೊತೆಗೆ ಕಪ್ಪು ನಾಯಿಗೆ ಯಾವುದೇ ರೀತಿಯ ನೋವು ಮಾಡಬೇಡಿ.

ಇದನ್ನೂ ಓದಿ: ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದ ಇದ್ದರೆ ನಿಮ್ಮ ಭವಿಷ್ಯ ಹೇಗಿರುತ್ತೆ ನೋಡಿ

-ಶನಿವಾರದಂದು ಶನಿದೇವನ ಜೊತೆಗೆ ಹನುಮಂತನನ್ನು ಪೂಜಿಸಿ, ಇದರಿಂದ ಶನಿದೇವನ ಆಶೀರ್ವಾದ ಸಿಗುತ್ತದೆ. ಸಾಧ್ಯವಾದರೆ ಶನಿ ದೋಷ ನಿವಾರಣೆಗೆ ಸುಂದರಕಾಂಡ ಪಾರಾಯಣ ಮಾಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ