zodiac sign: ನಿಮ್ಮ ರಾಶಿಗೆ ಅನುಗುಣವಾಗಿ ಈ ಪ್ರಾಣಿಗಳನ್ನು ಸಾಕಿದರೆ ಅದೃಷ್ಟವೇ ಬದಲಾಗುತ್ತೆ!

ಕೆಲವರಿಗೆ ಪ್ರಾಣಿ, ಪಕ್ಷಿಗಳನ್ನು ಸರಿಯಾಗಿ ಸಾಕುವುದಕ್ಕೆ ಸಾಧ್ಯವಾಗುವುದಿಲ್ಲ. ಅಂದರೆ ಸಾಯುವುದು ಅಥವಾ ಪದೇ ಪದೇ ರೋಗಕ್ಕೆ ತುತ್ತಾಗುವುದು ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಅವರವರ ರಾಶಿಯಾನುಸಾರವಾಗಿ ಪ್ರಾಣಿ -ಪಕ್ಷಿಗಳನ್ನು ಸಾಕಿ ಸಲಹಿ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ ಜೊತೆಗೆ ಅದೃಷ್ಟವೇ ಬದಲಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾಗಿ ರಾಶಿಗಳಿಗೆ ಅನುಗುಣವಾಗಿ ಯಾವ ಪ್ರಾಣಿಗಳನ್ನು ಸಾಕಬಹುದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

zodiac sign: ನಿಮ್ಮ ರಾಶಿಗೆ ಅನುಗುಣವಾಗಿ ಈ ಪ್ರಾಣಿಗಳನ್ನು ಸಾಕಿದರೆ ಅದೃಷ್ಟವೇ ಬದಲಾಗುತ್ತೆ!
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 18, 2024 | 5:15 PM

ಮನೆಯಲ್ಲಿ ಪ್ರಾಣಿ -ಪಕ್ಷಿಗಳನ್ನು ಸಾಕುವುದೆಂದರೆ ಕೆಲವರಿಗೆ ಬಲು ಅಚ್ಚುಮೆಚ್ಚು. ತಮಗಿಷ್ಟವಾದ ಪ್ರಾಣಿ, ಪಕ್ಷಿಗಳನ್ನು ಸಾಕುತ್ತಾರೆ. ಇನ್ನು ಕೆಲವರು ಮೀನು, ಆಮೆ, ಕೋತಿ, ಮೀನು ಹೀಗೆ ಬೇರೆ ಬೇರೆ ಪ್ರಾಣಿಗಳನ್ನು ಮನೆಯಲ್ಲಿ ಪ್ರೀತಿಯಿಂದ ಇಟ್ಟುಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಪ್ರಾಣಿಗಳನ್ನು ಸಾಕುವುದರಿಂದ ಸಕಾರಾತ್ಮಕ ಶಕ್ತಿ ಜಾಸ್ತಿಯಾಗುತ್ತದೆ ಜೊತೆಗೆ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ಆದರೆ ಕೆಲವರಿಗೆ ಪ್ರಾಣಿ, ಪಕ್ಷಿಗಳನ್ನು ಸರಿಯಾಗಿ ಸಾಕುವುದಕ್ಕೆ ಸಾಧ್ಯವಾಗುವುದಿಲ್ಲ. ಅಂದರೆ ಸಾಯುವುದು ಅಥವಾ ಪದೇ ಪದೇ ರೋಗಕ್ಕೆ ತುತ್ತಾಗುವುದು ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಅವರವರ ರಾಶಿಯಾನುಸಾರವಾಗಿ ಪ್ರಾಣಿ -ಪಕ್ಷಿಗಳನ್ನು ಸಾಕಿ ಸಲಹಿ ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ ಜೊತೆಗೆ ಅದೃಷ್ಟವೇ ಬದಲಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾಗಿ ರಾಶಿಗಳಿಗೆ ಅನುಗುಣವಾಗಿ ಯಾವ ಪ್ರಾಣಿಗಳನ್ನು ಸಾಕಬಹುದು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇಷ (Aries) -ನಾಯಿ

ಈ ರಾಶಿಯವರು ತುಂಬಾ ಸ್ವಾಭಿಮಾನಿಗಳು ಮತ್ತು ಯಾರ ಹಂಗೂ ಬಯಸದವರು ಇವರಿಗೆ ಸಾಮಾನ್ಯವಾಗಿ ನಾಯಿಯನ್ನು ಸಾಕುವುದು ತುಂಬಾ ಒಳ್ಳೆಯದಾಗಿದೆ. ಈ ರಾಶಿಯ ಪ್ರಕಾರ, ನಾಯಿಗೆ ಆಹಾರ ನೀಡುವುದರ ಜೊತೆಗೆ ಮನೆಯಲ್ಲಿ ಕಪ್ಪು ನಾಯಿಯನ್ನು ಸಾಕಿದ್ರೆ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆ ಇದೆ.

ವೃಷಭ (Taurus) -ಬೆಕ್ಕು

ವೃಷಭ ರಾಶಿಯವರು ಸ್ಥಿರ ಮನಸ್ಥಿತಿಯನ್ನು ಹೊಂದಿರುವವರು, ಎಂದಿಗೂ ಯಾವುದೇ ಕೆಲಸಕ್ಕೂ ಕೂಡ ವಿಚಲಿತರಾಗುವುದಿಲ್ಲ ಇಂತಹ ಗುಣವಿರುವವರಿಗೆ ಬೆಕ್ಕು ಮತ್ತು ಮೊಲ ಸಾಕುವುದರಿಂದ ಶುಭ ಫಲ ದೊರೆಯುತ್ತದೆ.

ಮಿಥುನ (Gemini) -ಗಿಳಿ

ಮಿಥುನ ರಾಶಿಯಲ್ಲಿ ಜನಿಸಿದವರು ಒಳ್ಳೆಯ ಮಾತುಗಾರರಾಗಿರುತ್ತಾರೆ. ಹಾಗಾಗಿ ಇವರು ಸಾಕುವ ಪ್ರಾಣಿಗಳು ಇವರ ಜೊತೆಗೆ ಬೆರೆಯುವಂತದ್ದಾಗಿರಬೇಕು ಹಾಗಾಗಿ ಇವರು ರಾಶಿಯನುಸಾರ ಪಕ್ಷಿಗಳನ್ನು ಸಾಕಬಹುದಾಗಿದೆ. ಗಿಳಿಯನ್ನು (Parrot) ಸಾಕಿದರೆ ಇನ್ನೂ ಉತ್ತಮ ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಇವರಿಗೆ ಶುಭ ಫಲ ಪ್ರಾಪ್ತವಾಗುತ್ತದೆ ಜೊತೆಗೆ ಮನೆ, ಮನದಲ್ಲಿ ಶಾಂತಿ ನೆಲೆಸಿರುತ್ತದೆ.

ಕಟಕ (Cancer) -ಗೋವು ಅಥವಾ ಮೊಲ

ಈ ರಾಶಿಯಲ್ಲಿ ಜನಿಸಿದವರು ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಹಾಗಾಗಿ ಇವರು ಮೊಲ ಮತ್ತು ಗೋವನ್ನು ಸಾಕಬಹುದು. ಯಾರಿಗೆ ಆಗಲಿ ಗೋಮಾತೆಯನ್ನು ಪೂಜಿಸುವುದರಿಂದ, ಅದರ ಸೇವೆಯನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ.

ಸಿಂಹ (Leo) -ಕುದುರೆ ಅಥವಾ ಬೆಕ್ಕು

ಈ ರಾಶಿಯಲ್ಲಿ ಜನಿಸಿದವರು ಯಾವಾಗಲೂ ಆತ್ಮವಿಶ್ವಾಸದಿಂದ ಇರುತ್ತಾರೆ. ಇವರದ್ದು ಸಾಹಸಮಯ ಪ್ರವೃತ್ತಿಯೂ ಆಗಿರುವುದರಿಂದ ಈ ರಾಶಿಯಲ್ಲಿ ಜನಿಸಿದವರು ಕುದುರೆಯನ್ನು ಸಾಕಬಹುದು. ಜೊತೆಗೆ ಇವರು ಬೆಕ್ಕನ್ನು ಸಹ ಮನೆಯಲ್ಲಿ ಇಟ್ಟುಕೊಳ್ಳಬಹುದು. ಈ ಎರಡೂ ಪ್ರಾಣಿಗಳು ಕೂಡ ಸಿಂಹ ರಾಶಿಯವರಿಗೆ ಯಶಸ್ಸನ್ನು ತಂದುಕೊಡುತ್ತದೆ.

ಕನ್ಯಾ (Virgo) -ಮೀನು

ಕನ್ಯಾ ರಾಶಿಯವರು ಏಕಾಂಗಿಯಾಗಿ ಸಮಯ ಕಳೆಯಲು ಹೆಚ್ಚು ಇಷ್ಟಪಡುತ್ತಾರೆ ಹಾಗಾಗಿ ಮೀನುಗಳು ಇವರಿಗೆ ಉತ್ತಮ ಸಂಗಾತಿಯಾಗಬಹುದು. ಮನೆಯಲ್ಲಿ ಮೀನು ಸಾಕುವುದರಿಂದ ಶುಭ ಫಲವನ್ನು ತಂದುಕೊಡಲಿದೆ. ವಿವಿಧ ರೀತಿಯ ಅಕ್ವೇರಿಯಂ ಅನ್ನು ಸಹ ಬಳಸಿಕೊಳ್ಳಬಹುದು.

ತುಲಾ (Libra) -ಲವ್ ಬರ್ಡ್ಸ್

ತುಲಾ ರಾಶಿಯವರು ಪ್ರಕೃತಿ ಪ್ರಿಯರು. ಹಾಗಾಗಿ ಇವರಿಗೆ ಗಿಳಿ ಅಥವಾ ಲವ್ ಬರ್ಡ್ಸ್ ಸಾಕುವುದು ಶುಭ ಫಲವನ್ನು ತಂದುಕೊಡುತ್ತದೆ. ಮನೆಯಲ್ಲಿ ಯಾವುದೇ ರೀತಿಯ ಪಕ್ಷಿಗಳನ್ನು ಕೂಡ ಸಾಕಬಹುದು ಆದರೆ ಗಿಳಿಯನ್ನು ಸಾಕುವುದು ಅತ್ಯಂತ ಶುಭವಾಗಿದೆ.

ವೃಶ್ಚಿಕ ರಾಶಿ (Scorpio) -ಮೀನು ಅಥವಾ ನಾಯಿ

ವೃಶ್ಚಿಕ ರಾಶಿಯವರಿಗೆ ಚಂಚಲ ಸ್ವಭಾವದವರು ಆದರೆ ಸಾಮಾನ್ಯವಾಗಿ ಎಲ್ಲಾ ರೀತಿಯ ಸಾಕು ಪ್ರಾಣಿಗಳನ್ನು ಕೂಡ ಇಷ್ಟಪಡುತ್ತಾರೆ. ಜೊತೆಗೆ ಇವರು ಎಲ್ಲಾ ಭಾವನೆಗಳನ್ನು ಸಮನಾಗಿ ಅನುಭವಿಸುತ್ತಾರೆ. ಹಾಗಾಗಿ ಈ ರಾಶಿಯವರು ಶ್ವಾನವನ್ನು ಮತ್ತು ಮೀನನ್ನು ಸಾಕಬಹುದು. ಇದು ನಿಮಗೆ ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ.

ಇದನ್ನೂ ಓದಿ: ಜಾತಕದಲ್ಲಿ ಶನಿ ದೋಷವಿದೆಯೇ? ಪರಿಹಾರಕ್ಕಾಗಿ ಈ ಸಲಹೆ ಅನುಸರಿಸಿ

ಧನು (Sagittarius) -ಮೀನು, ಆಮೆ ಅಥವಾ ನಾಯಿ

ಧನು ರಾಶಿಯವರು ಸ್ವಾಭಿಮಾನಿಗುಣದವರು ಇವರು ಮೀನು, ಆಮೆ ಮತ್ತು ನಾಯಿಯನ್ನು ಸಾಕಬಹುದಾಗಿದೆ. ಇದು ಇವರಿಗೆ ಅದ್ರಷ್ಟದಂತೆ ಎಲ್ಲದರಲ್ಲಿಯೂ ಯಶಸ್ಸನ್ನು ತಂದುಕೊಡುತ್ತದೆ.

ಮಕರ (Capricorn) -ನಾಯಿ ಅಥವಾ ಗೋವು

ಮಕರ ರಾಶಿಯವರು ಶಿಸ್ತುಬದ್ಧ ಮತ್ತು ಸ್ವತಂತ್ರವಾಗಿ ಜೀವನ ನಡೆಸುವವರು ಹಾಗಾಗಿ ಈ ರಾಶಿಯವರು ನಾಯಿ ಇಲ್ಲವೇ ಗೋವನ್ನು ಸಾಕಬಹುದು. ಹೀಗೆ ಮಾಡುವುದರಿಂದ ಇವರು ಶುಭ ಫಲಗಳನ್ನು ಪಡೆಯುತ್ತಾರೆ.

ಕುಂಭ (Aquarius) – ಮೊಲ ಅಥವಾ ನಾಯಿ

ಕುಂಭ ರಾಶಿಯವರು ಹಾಸ್ಯ ಪ್ರೀಯರು, ಅಲ್ಲದೆ ಅವರು ಯಾವಾಗಲೂ ಸಂತೋಷವಾಗಿರಲು ಬಯಸುತ್ತಾರೆ ಹಾಗಾಗಿ ಅವರು ಮೊಲ ಅಥವಾ ಶ್ವಾನವನ್ನು ಸಾಕಬಹುದಾಗಿದೆ. ಇದರಿಂದ ಅವರ ಮನಸ್ಸಿಗೆ ನೆಮ್ಮದಿ, ಸಂತೋಷ ಎಲ್ಲವೂ ಸಿಗುತ್ತದೆ.

ಮೀನ (Pisces) -ಮೀನು ಅಥವಾ ಇಲಿ

ಮೀನ ರಾಶಿಯವರು ಇಲಿ ಸಾಕಬೇಕೆಂದು ಶಾಸ್ತ್ರ ಹೇಳುತ್ತದೆ. ಅದರಲ್ಲೂ ಬಿಳಿ ಇಲಿಯನ್ನು ಇವರು ಸಾಕಿದರೆ ತುಂಬಾ ಶುಭ ಸೂಚಕ ಎನ್ನಲಾಗುತ್ತದೆ. ಆದರೆ ಸಾಮಾನ್ಯವಾಗಿ ಇಲಿಯನ್ನು ಮನೆಯಲ್ಲಿ ಸಾಕುವುದು ತುಂಬಾ ಕಷ್ಟ ಹಾಗಾಗಿ ಮೀನನ್ನು ಸಾಕಬಹುದು. ಇದು ಕೂಡ ಈ ರಾಶಿಯವರಿಗೆ ಒಳ್ಳೆಯ ಫಲಗಳನ್ನು ಕೊಡುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್