Shani Trayodashi 2022: ಪ್ರದೋಷ ವ್ರತ ಪಾಲಿಸಿದ ಬಡ ಬ್ರಾಹ್ಮಣ ಮಹಿಳೆಯ ಬಾಳು ಬೆಳಗಿಸಿದ ಭಗವಾನ್ ಶಿವ

| Updated By: ಆಯೇಷಾ ಬಾನು

Updated on: Jan 15, 2022 | 3:43 PM

Shani Pradosh Vrat: ಮಕ್ಕಳನ್ನು ಪಡೆಯಲು ಸಂತಾನ ಬಯಸುವ ದಂಪತಿ ಈ ದಿನದಂದು ವ್ರತವನ್ನು ಆಚರಿಸುತ್ತಾರೆ. ಈ ದಿನ ಉಪವಾಸ ಇಟ್ಟು ಶಿವ-ಪಾರ್ವತಿಯನ್ನು ಪೂಜಿಸಿದ್ರೆ ಭಕ್ತರ ಕಷ್ಟಗಳು ದೂರವಾಗುತ್ತವೆ. ದೇವರ ಅನುಗ್ರಹ ಸಿಗುತ್ತದೆ ಎನ್ನಲಾಗಿದೆ.

Shani Trayodashi 2022: ಪ್ರದೋಷ ವ್ರತ ಪಾಲಿಸಿದ ಬಡ ಬ್ರಾಹ್ಮಣ ಮಹಿಳೆಯ ಬಾಳು ಬೆಳಗಿಸಿದ ಭಗವಾನ್ ಶಿವ
ಶಿವ-ಪಾರ್ವತಿ
Follow us on

ತ್ರಯೋದಶಿ ತಿಥಿ (ಚಂದ್ರನ ಹದಿನೈದು ದಿನದ ಹದಿಮೂರನೇ ದಿನ)2022ರ ಜನವರಿ 15ರ ಶನಿವಾರ ಅಂದರೆ ಇಂದು ಶನಿ ಪ್ರದೋಷ ವ್ರತವನ್ನು ಆಚರಿಸಲಾಗುತ್ತೆ. ಶಿವನ ಭಕ್ತರು ಪ್ರದೋಷ ಉಪವಾಸವನ್ನು ಆಚರಿಸುತ್ತಾರೆ. ಮತ್ತು ಸೂರ್ಯಾಸ್ತದ ನಂತರ ಶಿವ ಪೂಜೆಯನ್ನು ಮಾಡುತ್ತಾರೆ. ಈ ವ್ರತವನ್ನು ತಿಂಗಳಿಗೆ ಎರಡು ಬಾರಿ ಮಾಡಲಾಗುತ್ತೆ. ಮಕ್ಕಳನ್ನು ಪಡೆಯಲು ಸಂತಾನ ಬಯಸುವ ದಂಪತಿ ಈ ದಿನದಂದು ವ್ರತವನ್ನು ಆಚರಿಸುತ್ತಾರೆ. ಈ ದಿನ ಉಪವಾಸ ಇಟ್ಟು ಶಿವ-ಪಾರ್ವತಿಯನ್ನು ಪೂಜಿಸಿದ್ರೆ ಭಕ್ತರ ಕಷ್ಟಗಳು ದೂರವಾಗುತ್ತವೆ. ದೇವರ ಅನುಗ್ರಹ ಸಿಗುತ್ತದೆ ಎನ್ನಲಾಗಿದೆ.

ಶನಿ ಪ್ರದೋಷ ವ್ರತ ಶುಭ ಮುಹೂರ್ತ
ತ್ರಯೋದಶಿ ತಿಥಿಯು ಜನವರಿ 14 ರಂದು 10.19 ನಿಮಿಷಕ್ಕೆ ಪ್ರಾರಂಭವಾಗಿ ಜನವರಿ 16 ರಂದು ಮಧ್ಯಾಹ್ನ 12.57 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಈ ಮುಹೂರ್ತದಲ್ಲಿ ಭಗವಾನ್ ಶಿವನ ಪೂಜೆಯನ್ನು ಮಾಡಲಾಗುತ್ತದೆ ಮತ್ತು ಆತನ ಮಂತ್ರಗಳನ್ನು ಪಠಿಸಲಾಗುತ್ತದೆ. ಜನವರಿ 15 ರ ಶನಿವಾರದಂದು ಸಂಜೆ 5:46 ರಿಂದ 8:28 ರವರೆಗೆ ತ್ರಯೋದಶಿ ಪೂಜೆಯನ್ನು ಮಾಡಲಾಗುತ್ತೆ. ಶನಿವಾರದಂದು, ರಾಹುಕಾಲವು ಬೆಳಿಗ್ಗೆ 9:00 ರಿಂದ 10:30 ರವರೆಗೆ ಇರುತ್ತದೆ. ಆದ್ದರಿಂದ, ಈ ಸಮಯದಲ್ಲಿ ಪೂಜೆ ಮಾಡಬಾರದು.

ಪ್ರದೋಷ ವ್ರತ ಕಥಾ
ಚಿಕ್ಕವಯಸ್ಸಿನಲ್ಲಿ ವಿಧವೆಯಾಗಿದ್ದ ಬಡ ಬ್ರಾಹ್ಮಣ ಮಹಿಳೆಯೊಬ್ಬಳು ತನ್ನನ್ನು ಮತ್ತು ತನ್ನ ಮಗನ ಜೀವನ ಸಾಗಿಸಲು ಭಿಕ್ಷೆಯನ್ನು ಬೇಡುತ್ತಿದ್ದಳು. ಒಮ್ಮೆ ಆಕೆ ತನ್ನ ಗುಡಿಸಲಿಗೆ ಹಿಂತಿರುಗುವಾಗ ದಾರಿ ಮಧ್ಯೆ ಗಾಯಗೊಂಡು ಬಿದ್ದಿದ್ದ ರಾಜಮನೆತನದ ಮಗುವನ್ನು ಕಂಡಳು. ಬಳಿಕ ಮಹಿಳೆ ಗಾಯಗೊಂಡ ರಾಜಕುಮಾರನನ್ನು ಮನೆಗೆ ಕರೆದುಕೊಂಡು ಹೋಗಿ ಉಪಚಾರ ಮಾಡಿದಳು. ರಾಜಕುಮಾರ ಸಹ ಇವರಲ್ಲೇ ಒಬ್ಬರಾದ. ವರ್ಷಗಳು ಕಳೆದವು, ಒಂದು ದಿನ, ಅಂಶುಮತಿ ಎಂಬ ಗಂಧರ್ವ ರಾಜಕುಮಾರಿಯು ರಾಜಕುಮಾರನನ್ನು ನೋಡಿ ಆಕರ್ಷಿತಳಾದಳು. ಅವಳು ತನ್ನ ಮೊದಲ ನೋಟದಲ್ಲೇ ರಾಜಕುಮಾರನೊಂದಿಗೆ ಪ್ರೇಮ ಚಿಗುರಿತ್ತು.

ಕೆಲವು ದಿನಗಳ ನಂತರ ಅಂಶುಮತಿಯು ಮದುವೆಯ ಪ್ರಸ್ತಾಪದೊಂದಿಗೆ ತನ್ನ ಹೆತ್ತವರೊಂದಿಗೆ ಬಡ ಬ್ರಾಹ್ಮಣನ ಮನೆಗೆ ಭೇಟಿ ನೀಡಿದಳು. ಈ ಹಿಂದೆಯೇ ಭಗವಾನ್ ಶಿವನು ಅಂಶುಮತಿಯ ತಂದೆತಾಯಿಗಳ ಕನಸಿನಲ್ಲಿ ಕಾಣಿಸಿಕೊಂಡು ಅವರ ಮಗಳನ್ನು ರಾಜಕುಮಾರನಿಗೆ ವಿವಾಹ ಮಾಡಿಕೊಡುವಂತೆ ಹೇಳಿದ್ದನು. ಆದ್ದರಿಂದ ಅಂಶುಮತಿಯ ಪೋಷಕರು ಶಿವನ ಆಜ್ಞೆಯನ್ನು ಆಶೀರ್ವಾದವಾಗಿ ತೆಗೆದುಕೊಂಡು ತಮ್ಮ ಮಗಳನ್ನು ರಾಜಕುಮಾರನಿಗೆ ಮದುವೆ ಮಾಡಿದರು. ಬಳಿಕ ರಾಜಕುಮಾರನು ತನ್ನ ಶತ್ರುವನ್ನು ಸೋಲಿಸಿ ಸೆರೆಯಲ್ಲಿದ್ದ ತನ್ನ ಹೆತ್ತವರನ್ನು ರಕ್ಷಿಸಿದನು. ಕಳೆದುಕೊಂಡ ರಾಜ್ಯವನ್ನು ಸಹ ಗೆದ್ದನು.

ನಂತರ, ಕೃತಜ್ಞತೆಯ ಸಂಕೇತವಾಗಿ, ರಾಜಕುಮಾರನು ಬ್ರಾಹ್ಮಣ ಮಹಿಳೆ ಮತ್ತು ಅವಳ ಮಗನನ್ನು ತನ್ನ ಅರಮನೆಗೆ ಕರೆದೊಯ್ದು ತನಗೆ ಬೇಕಾದಾಗ ತನ್ನೊಂದಿಗೆ ನಿಂತಿದ್ದ ಜನರಿಗೆ ಹೊಸ ಬಾಳು ನೀಡಿದನು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ- ಬಡ ಬ್ರಾಹ್ಮಣ ಮಹಿಳೆ ತನ್ನ ಕಡು ಬಡತನದಲ್ಲೂ ಪ್ರದೋಷದ ದಿನದಂದು ವ್ರತವನ್ನು ಆಚರಿಸುವುದನ್ನು ಮರೆಯುತ್ತಿರಲಿಲ್ಲ. ಆಕೆಯು ಭಗವಾನ್ ಶಿವನ ಪರಮ ಭಕ್ತೆಯಾಗಿದ್ದಳು. ಆದ್ದರಿಂದ ಪ್ರದೋಷದಂದು ವ್ರತವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸುವವರು ಶಿವನ ಆಶೀರ್ವಾದವನ್ನು ಪಡೆಯುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ: Lord Shiva: ಶಿವನ ಕೃಪೆಗೆ ಸಹಕಾರಿಯಾಗುವ ಶಿವನ ಪ್ರಭಾವಶಾಲಿ ಮಂತ್ರಗಳು ಹಾಗೂ ಅದರ ಪ್ರಯೋಜನಗಳು

Published On - 3:42 pm, Sat, 15 January 22