Lord Shiva: ಶಿವನ ಕೃಪೆಗೆ ಸಹಕಾರಿಯಾಗುವ ಶಿವನ ಪ್ರಭಾವಶಾಲಿ ಮಂತ್ರಗಳು ಹಾಗೂ ಅದರ ಪ್ರಯೋಜನಗಳು

ಭೋಲೇನಾಥ ಎಂದೂ ಸಹ ಕರೆಯಲಾಗುತ್ತೆ. ಶಿವ ಪೂಜೆ, ಶಿವ ಮಂತ್ರಗಳ ಪಠಣೆ ರೋಗ, ಭಯ, ಸಂಕಷ್ಟ, ಸಮಸ್ಯೆಗಳು ಇತ್ಯಾದಿಗಳಿಂದ ನಮ್ಮನ್ನು ರಕ್ಷಿಸುತ್ತವೆ. ಈ ಮಂತ್ರಗಳ ಸರಿಯಾದ ಮತ್ತು ನಿಯಮಿತವಾದ ಪಠಣವು ವ್ಯಕ್ತಿಯ ಯಶಸ್ಸು ಮತ್ತು ಸಿದ್ಧಿಯನ್ನು ಪಡೆಯುವುದಕ್ಕೆ ಸಹಾಯ ಮಾಡುತ್ತವೆ.

Lord Shiva: ಶಿವನ ಕೃಪೆಗೆ ಸಹಕಾರಿಯಾಗುವ ಶಿವನ ಪ್ರಭಾವಶಾಲಿ ಮಂತ್ರಗಳು ಹಾಗೂ ಅದರ ಪ್ರಯೋಜನಗಳು
ಮಹಾದೇವ
Follow us
TV9 Web
| Updated By: ಆಯೇಷಾ ಬಾನು

Updated on: Nov 08, 2021 | 6:41 AM

ಶಿವನನ್ನು ವಿನಾಶದ ದೇವರು, ಕರುಣೆಯ ಪ್ರತೀಕ, ದೇವರ ದೇವ ಮಹಾದೇವ ಹೀಗೆ ನಾನಾ ರೀತಿಯಲ್ಲಿ ಕರೆಯಲಾಗುತ್ತೆ. ಪ್ರಪಂಚದಾದ್ಯಂತ ಜನರು ಭಗವಂತನನ್ನು ಮೆಚ್ಚಿಸಲು ವಿವಿಧ ರೀತಿಯಲ್ಲಿ ಪ್ರಾರ್ಥಿಸುತ್ತಾರೆ. ಆದರೆ ಅಭಿಷೇಕ ಪ್ರಿಯ ಶಿವನನ್ನು ಒಲಿಸಿಕೊಳ್ಳಲು ಸ್ವಚ್ಛ ಮನಸಿನ ನಿಷ್ಕಲ್ಮಶ ಭಕ್ತಿ ಇದ್ರೆ ಸಾಕು. ಹೀಗಾಗಿಯೇ ಶಿವನನ್ನು ಭೋಲೇನಾಥ ಎಂದೂ ಸಹ ಕರೆಯಲಾಗುತ್ತೆ. ಶಿವ ಪೂಜೆ, ಶಿವ ಮಂತ್ರಗಳ ಪಠಣೆ ರೋಗ, ಭಯ, ಸಂಕಷ್ಟ, ಸಮಸ್ಯೆಗಳು ಇತ್ಯಾದಿಗಳಿಂದ ನಮ್ಮನ್ನು ರಕ್ಷಿಸುತ್ತವೆ. ಈ ಮಂತ್ರಗಳ ಸರಿಯಾದ ಮತ್ತು ನಿಯಮಿತವಾದ ಪಠಣವು ವ್ಯಕ್ತಿಯ ಯಶಸ್ಸು ಮತ್ತು ಸಿದ್ಧಿಯನ್ನು ಪಡೆಯುವುದಕ್ಕೆ ಸಹಾಯ ಮಾಡುತ್ತವೆ. ಯಾವುದೇ ವಿಜೃಂಭಣೆ ಇಲ್ಲದೆ ಸರಳ ಪೂಜೆಯಿಂದಲೇ ತೃಪ್ತಿ ಪಡುವ ಶಿವನ ಶಕ್ತಿಶಾಲಿ ಮಂತ್ರಗಳು ಇಲ್ಲಿವೆ.

ಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯ ಅರ್ಥ: ನಾನು ಶಿವನಿಗೆ ಶಿರಬಾಗಿ ನಮಸ್ಕರಿಸುತ್ತೇನೆ ಎಂದರ್ಥ ಶಿವನನ್ನು ಆಂತರಿಕ ಆತ್ಮದ ರೂಪವೆಂದು ಪರಿಗಣಿಸಲಾಗುತ್ತೆ. ರಕ್ಷಣೆ ಮತ್ತು ಸುರಕ್ಷತೆಯ ಸಮಯದಲ್ಲಿ ಈ ಮಂತ್ರವನ್ನು ಪಠಿಸಲಾಗುತ್ತೆ. ಶಿವ ಪಂಚಾಕ್ಷರಿ ಮಂತ್ರವು ಆಂತರಿಕ ಸಾಮರ್ಥ್ಯವನ್ನು ಮತ್ತು ಆತ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀವನಕ್ಕೆ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಈ ಮಂತ್ರವನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ಪಠಿಸಬಹುದು. ಇದಕ್ಕೆ ಯಾವುದೇ ನಿರ್ಬಂಧನೆಗಳಿಲ್ಲ.

ಮಹಾ ಮೃತ್ಯುಂಜಯ ಮಂತ್ರ ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ| ಊರ್ವಾರುಕಮೇವ ಬಂಧನಾನ್ ಮೃತ್ಯೊರ್ಮುಕ್ಷೀಯ ಮಾಂಮೃತಾತ್|| ಅರ್ಥ:ನಾವು ಮೂರು ಕಣ್ಣುಳ್ಳವನನ್ನು ಆರಾಧಿಸುತ್ತೇವೆ. ಸಾವಿನಿಂದ, ಮಾರಣಾಂತಿಕ ರೋಗಗಳಿಂದ ವಿಮೋಚನೆಯನ್ನು ನೀಡುವವನು. ಸ್ಥಿರವಾದುದು, ಶಾಶ್ವತವಾದುದು, ಅನಂತವಾದುದರ ಕಡೆಗೆ ಹೋಗುವ ನನ್ನ ಯತ್ನದಿಂದ ನನ್ನನ್ನು ಬಿಡಿಸಬೇಡ. ನನ್ನನ್ನು ಸಾವಿನಿಂದ ಅಮರತ್ವವು ಬಿಡುಗಡೆಯಾಗಲಿ. ಮಹಾ ಮೃತ್ಯುಂಜಯ ಮಂತ್ರವು ಅತ್ಯಂತ ಶಕ್ತಿಶಾಲಿ ಮಂತ್ರವೆಂದು ಪರಿಗಣಿಸಲಾಗುತ್ತೆ. ಇದೇ ಮಂತ್ರದ ಸಹಾಯದಿಂದ ಭಗವಾನ್ ಚಂದ್ರನಿಗೆ ದಕ್ಷನ ಶಾಪದಿಂದ ಮುಕ್ತಿ ಸಿಕ್ಕಿತ್ತು. ಈ ಮಂತ್ರವನ್ನು ಪಠಿಸಲು ಅದರದ್ದೇ ಆದ ವಿಧಿ-ವಿಧಾನಗಳನ್ನು ಅನುಸರಿಸಬೇಕು. ಸಾವಿನ ಭಯದಿಂದ ದೂರಾಗಲು ಮತ್ತು ಇತರೆ ಭೌತಿಕ ಸಂಕಟಗಳಿಂದ ದೂರವಾಗಲು ಈ ಮಂತ್ರವನ್ನು ಪಠಿಸಬೇಕು.

ರುದ್ರ ಮಂತ್ರ ಓಂ ನಮೋ ಭಗವತೇ ರುದ್ರಾಯ ಈ ಮಂತ್ರವು ಶಿವನನ್ನು ತಲುಪಲು, ಶಿವನನ್ನು ಮೆಚ್ಚಿಸಲು ಪಠಿಸುವ ಅತ್ಯಂತ ಸರಳ ಮಂತ್ರವಾಗಿದೆ. ಶಿವನ ಆಶೀರ್ವಾದವನ್ನು ಪಡೆಯಲು ನಾವು ರುದ್ರ ಮಂತ್ರವನ್ನು ಪಠಿಸಬಹುದು. ರುದ್ರ ಮಂತ್ರವನ್ನು ಜಪಿಸುವುದರಿಂದ ಶಿವ ನಿಮ್ಮೆಲ್ಲಾ ಆಸೆಗಳನ್ನು ಪೂರೈಸುವನು ಎಂದು ಹೇಳಲಾಗುತ್ತೆ.

ಶಿವ ಗಾಯತ್ರಿ ಮಂತ್ರ ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್ ॥ ಅರ್ಥ: ನಾನು ದೇವತೆಗಳ ಅತ್ಯಂತ ಮಹತ್ವಪೂರ್ಣ ಆದರ್ಶ ಪುರುಷ ಮಹಾದೇವನನ್ನು ಪ್ರಾರ್ಥಿಸುತ್ತೇನೆ. ಜ್ಞಾನದಿಂದ ನನ್ನನ್ನು ಆಶೀರ್ವದಿಸು ಮತ್ತು ಜ್ಞಾನದಿಂದ ನನ್ನನ್ನು ಬೆಳಗುವಂತೆ ಮಾಡು. ಗಾಯತ್ರಿ ಮಂತ್ರವು ಅತ್ಯಂತ ಶಕ್ತಿಶಾಲಿ ಹಿಂದೂ ಮಂತ್ರಗಳಲ್ಲಿ ಒಂದು. ಪ್ರತೀ ದೇವರನ್ನು ಗಾಯತ್ರಿ ಮಂತ್ರದೊಂದಿಗೆ ಪೂಜಿಸಲಾಗುತ್ತದೆ. ಶಿವ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ನಮ್ಮಲ್ಲಿರುವ ಉದ್ವೇಗ, ಭಯ, ಜೀವನದ ಅಂತಿಮ ಸತ್ಯವನ್ನು ಅರಿತುಕೊಳ್ಳಲು ಮತ್ತು ಮನಸ್ಸನ್ನು ಜಾಗೃತಗೊಳಿಸಲು ಸಹಕಾರಿಯಾಗಿದೆ. ಮನಶಾಂತಿಯನ್ನು ಬಯಸುವವರು ಈ ಮಂತ್ರವನ್ನು ಪಠಿಸುತ್ತಾರೆ.

ಶಿವ ಧ್ಯಾನ ಮಂತ್ರ ಕರಚರಣ ಕೃತಂ ವಾ ಕಾಯಜಂ ಕರ್ಮಜಂ ವಾ ಶ್ರವಣನಯನಜಂ ವಾ ಮಾನಸಾಪರದಾಂ ವಾ ವಿಹಿತಂ ವಿಹಿತಂ ವಾ ಸರ್ವಮೇತತ್ ಕ್ಷಮಸ್ವ ಜಯ ಜಯ ಕರುಣಾಬ್ಚೇ ಶ್ರೀ ಮಹಾದೇವ ಶಂಭೋ ಅರ್ಥ: ಹೇ ಸರ್ವೋಚ್ಚ ಶಕ್ತಿಯೇ ನನ್ನ ದೇಹ, ಮನಸ್ಸು ಮತ್ತು ಆತ್ಮವನ್ನು ಒತ್ತಡ, ಭಯ, ಸೋಲು, ಚಿಂತೆ ಹಾಗೂ ಇನ್ನಿತರ ದುಷ್ಟ ಶಕ್ತಿಗಳಿಂದ ಮುಕ್ತಗೊಳಿಸು. ಈ ಮಂತ್ರವನ್ನು ಶ್ರದ್ಧೆಯಿಂದ ಪಠಿಸಿದರೆ ನಮ್ಮನ್ನು ಕಾಡುವ ಎಲ್ಲಾ ರೀತಿಯ ಋಣಾತ್ಮಕ ಅಂಶಗಳಿಂದ ನಾವು ಮುಕ್ತರಾಗಬಹುದು ಮತ್ತು ದುಷ್ಟ ಶಕ್ತಿಗಳಿಂದ ಪಾರಾಗಬಹುದು. ಅಲ್ಲದೇ ನಿರಂತರವಾಗಿ ಕಾಡುವ ಕಾಯಿಲೆ‌, ದುಃಖ, ಭಯಗಳಿಂದಲೂ ಮುಕ್ತರಾಗಬಹುದು. ಈ ಮಂತ್ರವನ್ನು ಜಪಿಸಿದರೆ ನಮ್ಮ ಹಿಂದಿನ ಜನ್ಮ ಅಥವಾ ಈಗಿನ ಜೀವಿತಾವಧಿಯಲ್ಲಿ ಮಾಡಿದ ತಪ್ಪಿಗೆ ಅಥವಾ ಪಾಪಕರ್ಮಗಳಿಗೆ ಕ್ಷಮೆಯನ್ನು ಪಡೆಯಬಹುದು.

ಏಕಾದಶ ರುದ್ರ ಮಂತ್ರ ಏಕಾದಶ ರುದ್ರ ಮಂತ್ರವು 11 ವಿವಿಧ ಬಗೆಯ ಮಂತ್ರಗಳ ಗುಂಪಾಗಿದೆ. ಕಪಾಲಿ-”ಓಂ ಹಮ್‌ ಹಮ್‌ ಶತ್ರುಸ್ಥಂಭನಾಯ ಹಮ್‌ ಹಮ್‌ ಒಂ ಫಟ್‌” ಪಿಂಗಳ-”ಓಂ ಶ್ರೀಂ ಹ್ರೀಂ ಶ್ರೀಂ ಸರ್ವ ಮಂಗಳಾಯ ಪಿಂಗಳಾಯ ಓಂ ನಮಃ” ಭೀಮ-” ಓಂ ಆಮ್‌ ಆಮ್‌ ಮನೊ ವಂಚಿತ ಸಿದ್ಧಾಉ ಆಮ್‌ ಆಮ್ ಓಂ” ವಿರೂಪಾಕ್ಷ-”ಓಂ ರುದ್ರಾಯ ರೋಗನಾಶನಾಯ ಅಗಾಚ ಚ ರಾಮ್‌ ಓಂ ನಮಃ” ವಿಲೋಹಿತಾ-”ಓಂ ಶ್ರೀಂ ಹ್ರೀಂ ಸಾಮ್‌ ಸಾಮ್‌ ಹ್ರೀಂ ಶ್ರೀಂ ಶಂಕರ್ಶಣಾಯ ಓಂ” ಶಷ್ಠ-“ಓಂ ಹ್ರೀಮ್ ಹ್ರೀಮ್ ಸಫಲಾಯಿ ಸಿದ್ಧಯೇ ಓಂ ನಮಃ” ಅಜಪದ-“ಓಂ ಶ್ರೀಮ್ ಬಾಮ್ ಸೋಗ್ ಬಲವರ್ಧನಾಯ ಬಲೇಶ್ವರಾಯ ರುದ್ರಾಯ ಫಟ್ ಓಂ” ಅಹಿರ್ಭುಧನ್ಯ-“ಓಂ ಹ್ರಾಮ್ ಹ್ರೀಮ್ ಹಮ್ ಸಮಸ್ತ ಗ್ರಹ ದೋಷ ವಿನಾಶಾಯ ಓಂ” ಸಂಭು-“ಓಂ ಗಮ್ ಹ್ಲುವಾಮ್ ಶೋರುಮ್ ಗ್ಲಮ್ ಗಮ್ ಓಂ ನಮಃ” ಚಂಡ-“ಓಂ ಚಮ್ ಚಂಡೀಶ್ವರಾಯ ತೇಜಸ್ಸಾಯ ಚಮ್ ಓಂ ಫಟ್” ಭಾವ-“ಓಂ ಭವೋದ್ ಭವ ಸಂಭವಾಯ ಇಷ್ಟ ದರ್ಶಣ ಓಂ ಸಾಮ್ ಈ ಶಿವ ಮಂತ್ರಗಳು ಶಿವನ 11 ವಿಧದ ರುದ್ರ ರೂಪವನ್ನು ಗೌರವಿಸಲು ಪಠಿಸುವ ಮಂತ್ರವಾಗಿದೆ. ಮಹಾ ಶಿವರಾತ್ರಿಯಂತಹ ಶಿವನ ಹಬ್ಬಗಳಲ್ಲಿ ಅಥವಾ ಮಹಾ ರುದ್ರ ಯಾಗ ನಡೆಯುವ ಸಮಯದಲ್ಲಿ ಶಿವ ಭಕ್ತರು ಸಾಮಾನ್ಯವಾಗಿ ಈ ಮಂತ್ರವನ್ನು ಪಠಿಸುತ್ತಾರೆ. ಶಿವ ರುದ್ರ ಮಂತ್ರವನ್ನು ಪಠಿಸುವುದರಿಂದ ಕುಂಡಲಿಯಲ್ಲಿನ ಅನೇಕ ದೋಷಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ.

ಇದನ್ನೂ ಓದಿ: ಕಲಿಯುಗದ ಬಗ್ಗೆ ಪಾಂಡವರಿಗೆ ಕೃಷ್ಣ ಪರಮಾತ್ಮ ಹೇಳಿದ ಕಟು ಸತ್ಯಗಳೇನು?

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ