ಎಲ್ಲ ತಂದೆಯರ ಭಾಗ್ಯದಲ್ಲಿ ಮಗಳು ಇರಲ್ಲ! ಏನು ಹಾಗಂದ್ರೆ? ಮಗಳ ಮಹತ್ವಕ್ಕೆ ಇಲ್ಲಿದೆ ಉದಾಹರಣೆ

| Updated By: ಸಾಧು ಶ್ರೀನಾಥ್​

Updated on: Oct 02, 2021 | 7:36 AM

ದಶರಥ ಮಹಾರಾಜ ತನ್ನ ನಾಲ್ಕು ಪುತ್ರರತ್ನರ ಜೊತೆ ಸಕುಟುಂಬ ಪರಿವಾರ ಸಮೇತ ಅದ್ದೂರಿ ಮದುವೆಯ ದಿಬ್ಬಣದ ಸಂಗಡ ಜನಕ ಮಹಾರಾಜನ ಅರಮನೆಯ ಹೆಬ್ಬಾಗಿಲಲ್ಲಿ ಬಂದು ನಿಲ್ಲುತ್ತಾನೆ. ಆಗ ಜನಕ ಮಹಾರಾಜನು ತನ್ನ ಪರಿವಾರದ ಜೊತೆ ಎದುರಿಗೆ ಬಂದು ರಘುರಾಮನ ಮದುವೆ ಮೆರವಣಿಗೆಗೆ ಸ್ವಾಗತ ಕೋರುತ್ತಾನೆ. ದಶರಥ ಮಹಾರಾಜ ತುಂಬಾ ವಿನಮ್ರದಿಂದ ಜನಕ ಮಹಾರಾಜನ ಹತ್ತಿರ ಹೋಗಿ ಆತನ ಪಾದಗಳಿಗೆ ನಮಸ್ಕಾರ ಮಾಡುತ್ತಾನೆ. ಗಲಿಬಿಲಿಗೊಂಡ ಜನಕನು ದಶರಥನನ್ನು ಎಬ್ಬಿಸಿ ಅಪ್ಪಿಕೊಂಡು ಆಶ್ಚರ್ಯದಿಂದ ಮಹಾರಾಜ ನೀವು ದೊಡ್ಡವರು. ಮೇಲಾಗಿ ವರನ […]

ಎಲ್ಲ ತಂದೆಯರ ಭಾಗ್ಯದಲ್ಲಿ ಮಗಳು ಇರಲ್ಲ! ಏನು ಹಾಗಂದ್ರೆ? ಮಗಳ ಮಹತ್ವಕ್ಕೆ ಇಲ್ಲಿದೆ ಉದಾಹರಣೆ
ಎಲ್ಲಾ ತಂದೆಯರ ಭಾಗ್ಯದಲ್ಲಿ ಮಗಳು ಇರಲ್ಲ! ಏನು ಹಾಗಂದ್ರೆ, ಪುತ್ರಿ ಪ್ರೇಮ ತಿಳಿಯಿರಿ
Follow us on

ದಶರಥ ಮಹಾರಾಜ ತನ್ನ ನಾಲ್ಕು ಪುತ್ರರತ್ನರ ಜೊತೆ ಸಕುಟುಂಬ ಪರಿವಾರ ಸಮೇತ ಅದ್ದೂರಿ ಮದುವೆಯ ದಿಬ್ಬಣದ ಸಂಗಡ ಜನಕ ಮಹಾರಾಜನ ಅರಮನೆಯ ಹೆಬ್ಬಾಗಿಲಲ್ಲಿ ಬಂದು ನಿಲ್ಲುತ್ತಾನೆ. ಆಗ ಜನಕ ಮಹಾರಾಜನು ತನ್ನ ಪರಿವಾರದ ಜೊತೆ ಎದುರಿಗೆ ಬಂದು ರಘುರಾಮನ ಮದುವೆ ಮೆರವಣಿಗೆಗೆ ಸ್ವಾಗತ ಕೋರುತ್ತಾನೆ. ದಶರಥ ಮಹಾರಾಜ ತುಂಬಾ ವಿನಮ್ರದಿಂದ ಜನಕ ಮಹಾರಾಜನ ಹತ್ತಿರ ಹೋಗಿ ಆತನ ಪಾದಗಳಿಗೆ ನಮಸ್ಕಾರ ಮಾಡುತ್ತಾನೆ.

ಗಲಿಬಿಲಿಗೊಂಡ ಜನಕನು ದಶರಥನನ್ನು ಎಬ್ಬಿಸಿ ಅಪ್ಪಿಕೊಂಡು ಆಶ್ಚರ್ಯದಿಂದ ಮಹಾರಾಜ ನೀವು ದೊಡ್ಡವರು. ಮೇಲಾಗಿ ವರನ ಕಡೆಯವರು. ಹೀಗೆ ನನಗೆ ಪಾದಾಭಿವಂದನೆ ಮಾಡುವುದು ಸರಿಯಲ್ಲ. ಗಂಗೆಯು ಹಿಂದಕ್ಕೆ ಹರಿಯುತ್ತಿರುವವಳೇ? ಎಂಬ ಸಂಶಯ ಮೂಡುತ್ತಿದೆ! ಎಂದು ವಿನಮ್ರನಾಗಿ ಹೇಳುವನು.

ಅದಕ್ಕೆ ಮಹಾರಾಜ ದಶರಥ ಒಂದು ಅದ್ಭುತ, ಮಾರ್ಮಿಕವಾದ ಉತ್ತರ ಕೊಡುತ್ತಾನೆ. ಓ ಜನಕ ರಾಜನೇ! ನೀವು ದಾನ ನೀಡುವವವರು. ಇನ್ನೇನು ಸ್ವಲ್ಪ ಹೊತ್ತಿಗೆ ಕನ್ಯಾದಾನ ಮಾಡುತ್ತಿರುವವರು. ನಾನು ಯಾಚಕ. ನಿಮ್ಮಿಂದ ಮಗನಿಗಾಗಿ ಕನ್ಯೆಯನ್ನು ಪಡೆಯಲು ಬಂದಿರುವವನು. ಈಗ ನೀವೇ ಹೇಳಿ, ದಾನ ಮಾಡುವವ ದೊಡ್ಡವನೋ? ಇಲ್ಲಾ ಯಾಚಕನೋ!? ನಮ್ಮಿಬ್ಬರಲ್ಲಿ ಶ್ರೇಷ್ಠನಾರೋ, ನಿಮಗೆ ಗೊತ್ತು ಎಂದು ಕೋರಿಕೆಯ ದನಿಯಲ್ಲಿ ಹೇಳುವನು.

ಆಗ ದಶರಥ ಮಹಾರಾಜನ ಮಾತು ಕೇಳಿದ ಜನಕನಿಗೆ ಕಣ್ಣೀರು, ಆನಂದಭಾಷ್ಪ. ಉದ್ವೇಗದಿಂದ ತನ್ನಲ್ಲಿಯೇ ಅಂದುಕೊಳ್ಳುತ್ತಾನೆ.. ಹೌದು ಯಾರ ಮನೆಯಲ್ಲಿ ಮಗಳಿರುತ್ತಾಳೋ ಅವರೇ ಭಾಗ್ಯವಂತರು!

ಪ್ರತಿ ಮಗಳ ಭಾಗ್ಯದಲ್ಲಿ ಅಥವಾ ಅದೃಷ್ಟದಲ್ಲಿ ತಂದೆ ಇದ್ದೇ ಇರುತ್ತಾನೆ. ಆದರೆ ಪ್ರತಿ ತಂದೆಯ ಭಾಗ್ಯದಲ್ಲಿ ಮಗಳಿರಲ್ಲ! ಇದು ಮಗಳಿಗಿರುವ ಮಹತ್ವ. ಇದು ಭಾರತೀಯ ಸಂಸ್ಕೃತಿಯ ರೀತಿ. ಇದು ನಮ್ಮ ರಾಮಾಯಣದ ನೀತಿ.