Rahu, Ketu Effect: ರಾಹು ಕೇತು ವಕ್ಕರಿಸಿದರೆ ಜೀವನವೆಲ್ಲಾ ನರಕವೇ, ಈ ವಕ್ರದೃಷ್ಟಿಯಿಂದ ಬಚಾವಾಗಲು ಇಲ್ಲಿದೆ ಉಪಾಯ

| Updated By: ಸಾಧು ಶ್ರೀನಾಥ್​

Updated on: Dec 10, 2021 | 6:36 AM

ಕೇತು ದೆಸೆಯಿಂದ ಬಹುವರ್ಣದ ನಾಯಿ ಅಥವಾ ಬಹುವರ್ಣದ ಹಸುವನ್ನು ಸಾಕಿಕೊಂಡಿದ್ದರೆ ಅದರಿಂದ ತುಂಬಾ ಒಳ್ಳೆಯದಾಗುತ್ತದೆ. ಅದು ನಿಮ್ಮಮನೆಯಲ್ಲಿ ಇಲ್ಲದಿದ್ದರೆ ಅಕ್ಕಪಕ್ಕದಲ್ಲಿ ಅಂತಹ ನಾಯಿ ಅಥವಾ ಹಸು ಗಳಿದ್ದರೆ ಅವುಗಳ ಲಾಲನೆ ಪಾಲನೆ ಮಾಡಿ.

Rahu, Ketu Effect: ರಾಹು ಕೇತು ವಕ್ಕರಿಸಿದರೆ ಜೀವನವೆಲ್ಲಾ ನರಕವೇ, ಈ ವಕ್ರದೃಷ್ಟಿಯಿಂದ ಬಚಾವಾಗಲು ಇಲ್ಲಿದೆ ಉಪಾಯ
Rahu, Ketu Effect: ರಾಹು ಕೇತು ವಕ್ಕರಿಸಿದರೆ ಜೀವನವೆಲ್ಲಾ ನರಕವೇ, ಈ ವಕ್ರದೃಷ್ಟಿಯಿಂದ ಬಚಾವಾಗಲು ಇಲ್ಲಿದೆ ಉಪಾಯಗಳು
Follow us on

ಹಿಂದೂ ಪುರಾಣಗಳ ಪ್ರಕಾರ, ರಾಹು ಎಂಬುದು ಸೂರ್ಯ ಅಥವಾ ಚಂದ್ರನನ್ನು ನುಂಗಿ ಗ್ರಹಣಗಳನ್ನು ಉಂಟುಮಾಡುವ ಒಂದು ಹಾವು. ವೇದ, ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಮತ್ತು ಕೇತು ನವಗ್ರಹಗಳಲ್ಲಿ(ಒಂಬತ್ತು ಗ್ರಹಗಳು) ಒಂದಾಗಿವೆ. ಈ ರಾಹು ಕೇತು ಗ್ರಹದೋಷ ಯಾರ ಮೇಲಾದರೂ ಇದೆಯೆಂದರೆ ಅವರ ಜೀವನ ಅಷ್ಟೇ.. ನರಕ ನರಕ. ಅವರು ಏನೇ ಮಾಡಿದರೂ ಅದಕ್ಕೆ ಅಡ್ಡಿಗಳು ಎಡತಾಕಿ ಅವು ಕೈಗೂಡುವುದೇ ಇಲ್ಲ. ಈ ರಾಹು ಕೇತು ಗ್ರಹಗಳ ಅಶುಭ ಪ್ರಭಾವವನ್ನು(Rahu, Ketu Effect) ಕಡಿಮೆ ಮಾಡಲು ಇಲ್ಲಿ ಅನೇಕ ಮಾರ್ಗೋಪಾಯಗಳನ್ನು ನೀಡಲಾಗಿದೆ. ಹಿಂದೂ ಧರ್ಮದ ಅನುಸಾರ ಮನುಷ್ಯರ ಜೀವನದಲ್ಲಿ ಗ್ರಹ, ನಕ್ಷತ್ರಗಳ ಸ್ಥಿತಿಗಳು ವಿಶೇಷ ಮಹತ್ವವನ್ನು ಬೀರುತ್ತವೆ. ಸಮಯ ಕಳೆದಂತೆ ಗ್ರಹ, ನಕ್ಷತ್ರಗಳ ಸ್ಥಿತಿಗತಿಗಳೂಬದಲಾಗುತ್ತಾ ಮನುಷ್ಯನ ಜೀವನದ ಮೇಲೆ ಅವು ಬೀರುವ ಪ್ರಭಾವಗಳೂ ಸಹ ಬದಲಾಗುತ್ತಾ ಇರುತ್ತವೆ. ಈ ರಾಹು ಕೇತು ಗ್ರಹಗಳ ಪ್ರಭಾವ ಮನುಷ್ಯ ಜಾತಕದಲ್ಲಿ ಯಾರ ಮೇಲಾದರೂ ಪ್ರಭಾವ ಬೀರಬಹುದು. ಅದರಿಂದ ಕಾಳ ಸರ್ಪ ದೋಷ ಕಾಣಿಸಿಕೊಳ್ಳಬಹುದು.

ರಾಹುವಿನ ಅಶುಭ ಸ್ಥಿತಿಗತಿಯಿಂದ ಮುಕ್ತಿ ಪಡೆಯಲು ಹೀಗೆ ಮಾಡಿ:
1. ನಿಮ್ಮ ಜೀವನದಲ್ಲಿ ರಾಹುವಿನ ವಕ್ರ ದೃಷ್ಟಿ ಬಿದ್ದಿದೆಯೆಂದರೆ ನಿಯಮಿತವಾಗಿ ನೀವು ಶಿವಲಿಂಗಕ್ಕೆ ಜಲಾಭಿಷೇಕ ಮಾಡಬೇಕು. ಆ ವೇಳೆ ಓಂ ನಮಃಶಿವಾಯ ಮಂತ್ರವನ್ನು ಜಪಿಸಬೇಕು. ದಿನಾ ಶಿವಲಿಂಗದ ಬಳಿ ಕುಳಿತು ಶಿವ ಚಾಲೀಸವನ್ನು ಪಠಿಸಬೇಕು. ಶಿವವನ್ನು ಧೇನಿಸುವುದರಿಂದ ರಾಹುವಿನ ಪ್ರಭಾವ ಕಡಿಮೆಯಾಗುತ್ತದೆ.

2. ರಾಹುಗೆ ಸಂಬಂಧಿಸಿ ನಿಮ್ಮ ಜೀವನದಲ್ಲಿ ಅಶುಭ ಪ್ರಭಾವ ಬೀರಿದೆಯೆಂದರೆ ಜ್ಯೋತಿಷಿಗಳ ಸಲಹೆ ಪಡೆದು ಗೋಮೇಧಿಕ ಹರಳನ್ನು (ರತ್ನ) ಧಾರಣೆ ಮಾಡಬೇಕು. ಇದರಿಂದ ರಾಹುವಿನ ಪ್ರಭಾವ ಕ್ಷೀಣಿಸುತ್ತದೆ.

3. ರಾಹುವಿನ ಉಂಡಾಗುವ ತೊಂದರೆ, ತಾಪತ್ರಯಗಳಿಂದ ಬಚಾವಾಗಲು ಉದ್ದಿನ ಬೇಳೆ, ಬೆಚ್ಚಗಿನ ಉಡುಪು, ಸಾಸಿವೆ, ಕಪ್ಪು ಬಣ್ಣದ ಗಾಢ ಹೂವುಗಳನ್ನು ತೆಗೆದುಕೊಂಡು ಶನಿವಾರಗಳಂದು ನಿಮ್ಮ ಶಕ್ತಿ ಸಾಮರ್ಥ್ಯಕ್ಕೆ ಅನುಸಾರ ದಾನ ಮಾಡಬೇಕು. ಜೊತೆಗೆ ದಿನಾ ಬೆಳಗ್ಗೆ ತುಳಸಿ ಎಲೆಗಳಲ್ಲಿ ನೆನೆಸಿರುವ ನೀರನ್ನು ಸೇವಿಸಬೇಕು.

4. ರಾಹು ಶಾಂತಿಗೊಳಿಸಲು ಓಂ ಭ್ರಾಂ ಭ್ರೀಂ ಭ್ರೌ ಸಂ ರಾಹವೇ ನಮಃ ಬೀಜ ಮಂತ್ರವನ್ನು ಜಪ ಮಾಲೆಯೊಂದಿಗೆ ಪ್ರತಿ ದಿನ ಜಪಿಸಬೇಕು. ಇದರಿಂದ ಬಹಳಷ್ಟು ಸಮಾಧಾನ ದೊರಕುತ್ತದೆ.

ಕೇತುವಿನ ವಕ್ರ ದೃಷ್ಟಿಯಿಂದ ಬಚಾವಾಗಲು ಹೀಗೆ ಮಾಡಿ:

1. ಕೇತುವಿನಿಂದ ಒದಗುವ ಅಶುಭ ಪ್ರಭಾವವನ್ನು ದೂರ ಮಾಡಲು ಕೇತುವಿನ ಬೀಜ ಮಂತ್ರ ಓಂ ಸ್ರಾಂ ಸ್ರೀಂ ಸ್ರೌ ಸಃ ಕೇತವೇ ನಮಃ ಮಂತ್ರವನ್ನು ಜಪಿಸಬೇಕು.

2. ಕೇತು ದೆಸೆಯಿಂದ ಬಹುವರ್ಣದ ನಾಯಿ ಅಥವಾ ಬಹುವರ್ಣದ ಹಸುವನ್ನು ಸಾಕಿಕೊಂಡಿದ್ದರೆ ಅದರಿಂದ ತುಂಬಾ ಒಳ್ಳೆಯದಾಗುತ್ತದೆ. ಅದು ನಿಮ್ಮಮನೆಯಲ್ಲಿ ಇಲ್ಲದಿದ್ದರೆ ಅಕ್ಕಪಕ್ಕದಲ್ಲಿ ಅಂತಹ ನಾಯಿ ಅಥವಾ ಹಸು ಗಳಿದ್ದರೆ ಅವುಗಳ ಲಾಲನೆ ಪಾಲನೆ ಮಾಡಿ.

3. ಕೇತು ವಕ್ರ ದೆಸೆಯಿಂದ ಬಚಾವಾಗಲು ಏಳ್ಳು, ಬಾವುಟ, ಕಣ್ಣು ಕಪ್ಪು, ಬೆಚ್ಚಗಿನ ಬಟ್ಟೆ, ನವ ಧಾನ್ಯಗಳು, ಮೂಲಂಗಿ ಇವೇ ಮುಂತಾದುವನ್ನು ದಾನ ಮಾಡಿದರೆ ಶುಭಪ್ರದವಾಗುತ್ತದೆ. ಭಾನುವಾರದಂದು ನಿಮ್ಮ ಸಾಮರ್ಥ್ಯದಂತೆ ದಾನ ಮಾಡುವುದು ಕ್ಷೇಮಕರ.