ಪ್ರತಿ ವರ್ಷ, ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಶ್ರೀ ಕೃಷ್ಣ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ಶ್ರೀಕೃಷ್ಣನು ಈ ದಿನದಂದು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು. ಹಾಗಾಗಿ ಈ ದಿನವನ್ನು ಸಂತೋಷದಿಂದ ಆಚರಣೆ ಮಾಡಲಾಗುತ್ತದೆ.
ಈ ವರ್ಷ ರೋಹಿಣಿ ನಕ್ಷತ್ರ ಮತ್ತು ಅಷ್ಟಮಿ ತಿಥಿ ಜನ್ಮಾಷ್ಟಮಿಯಂದು ರಾತ್ರಿ ಬರುತ್ತದೆ. ಆದ್ದರಿಂದ ಕೃಷ್ಣ ಜನ್ಮಾಷ್ಟಮಿ ಸೆಪ್ಟೆಂಬರ್ 6 ರಂದು ಬರುತ್ತದೆಯೇ ಅಥವಾ ಸೆಪ್ಟೆಂಬರ್ 7 ರಂದು ಬರುತ್ತದೆಯೇ ಎಂದು ಭಕ್ತರು ಅನಿಶ್ಚಿತರಾಗಿದ್ದಾರೆ. ದೃಕ್ ಪಂಚಾಂಗದ ಪ್ರಕಾರ, ಕೃಷ್ಣ ಜನ್ಮಾಷ್ಟಮಿ ಸತತ ಎರಡು ದಿನಗಳಲ್ಲಿಯೂ ಆಚರಿಸಲಾಗುತ್ತದೆ. ಅಷ್ಟಮಿ ತಿಥಿ ಸೆಪ್ಟೆಂಬರ್ 06, 2023 ರಂದು ಸಂಜೆ 15:37 ಕ್ಕೆ ಆರಂಭವಾಗಿ ಮತ್ತು ಸೆಪ್ಟೆಂಬರ್ 07, ಸಂಜೆ 4:14 ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಈ ಹಬ್ಬವನ್ನು ಎರಡೂ ದಿನಗಳಲ್ಲಿ ಆಚರಿಸಲಾಗುತ್ತದೆ. ಇನ್ನು ರೋಹಿಣಿ ನಕ್ಷತ್ರವು ಸೆಪ್ಟೆಂಬರ್ 6 ರಂದು ಬೆಳಿಗ್ಗೆ 09:20 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 7 ರಂದು ಬೆಳಿಗ್ಗೆ 10:25 ರವರೆಗೆ ಇರುತ್ತದೆ. ಹೆಚ್ಚಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸೆಪ್ಟೆಂಬರ್ 6 ರಂದು ಆಚರಿಸಲಾಗುತ್ತದೆ. ಏಕೆಂದರೆ ರೋಹಿಣಿ ನಕ್ಷತ್ರ ಮತ್ತು ಅಷ್ಟಮಿ ತಿಥಿ ಕೃಷ್ಣ ಜನ್ಮೋತ್ಸವ ರಾತ್ರಿ ಒಟ್ಟಿಗೆ ಬಂದ ದಿನವನ್ನು ಹಬ್ಬವನ್ನಾಗಿ ಆಚರಣೆ ಮಾಡಲಾಗುತ್ತದೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಪೂಜೆಗೆ ಶುಭ ಸಮಯ ರಾತ್ರಿ 11:57 ಕ್ಕೆ ಪ್ರಾರಂಭವಾಗುತ್ತದೆ. ಗೋಪಾಲನ ಜನ್ಮ ವಾರ್ಷಿಕೋತ್ಸವ ಮತ್ತು ಪೂಜೆ ಮಧ್ಯರಾತ್ರಿ 12.42 ರವರೆಗೆ ಇರುತ್ತದೆ.
ಈ ವರ್ಷ ಕೃಷ್ಣ ಜನ್ಮಾಷ್ಟಮಿಯಂದು ಎರಡು ಶುಭ ಯೋಗದ ಬಂದಿದೆ. ಈ ದಿನ ರವಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗವನ್ನು ನಿರೂಪಿಸಲಾಗಿದೆ. ಜನ್ಮಾಷ್ಟಮಿಯಂದು ಇಡೀ ದಿನ ಇರುವ ಸರ್ವಾರ್ಥ ಸಿದ್ಧಿ ಯೋಗವು ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುವ ಶುಭ ದಿನವಾಗಿದೆ. ಈ ಯೋಗದಲ್ಲಿ ಮಾಡಿದ ಎಲ್ಲಾ ಕೆಲಸಗಳು ಭಕ್ತರಿಗೆ ಸಾಕಷ್ಟು ಒಳ್ಳೆಯ ಫಲಗಳನ್ನು ಕೊಡುತ್ತದೆ ಎಂದು ನಂಬಲಾಗಿದೆ. ರವಿ ಯೋಗವು ಬೆಳಿಗ್ಗೆ 06:01 ರಿಂದ ಪ್ರಾರಂಭವಾಗುತ್ತದೆ ಮತ್ತು ಮರುದಿನ ಬೆಳಿಗ್ಗೆ 09:20 ರವರೆಗೆ ಇರುತ್ತದೆ.
ಜನ್ಮಾಷ್ಟಮಿ ಉಪವಾಸವನ್ನು ಸಾಮಾನ್ಯವಾಗಿ ಶ್ರೀ ಕೃಷ್ಣನ ಜನನದ ನಂತರ ಆಚರಿಸಲಾಗುತ್ತದೆ. ಈ ವರ್ಷ ಭಕ್ತರು ರಾತ್ರಿ 12:42 ರ ನಂತರ ಜನ್ಮಾಷ್ಟಮಿಯ ವ್ರತ ಆಚರಿಸಬಹುದು. ಅಥವಾ ಮರುದಿನ ಸೂರ್ಯೋದಯದ ನಂತರ ಜನ್ಮಾಷ್ಟಮಿಯನ್ನು ಆಚರಿಸುವುದಾದರೇ, ಭಕ್ತರು ಸಪ್ಟೆಂಬರ್ 7 ರಂದು ಬೆಳಿಗ್ಗೆ 06:02 ರಿಂದ ಆಚರಿಸಬಹುದು.
ಇದನ್ನೂ ಓದಿ: ಕೃಷ್ಣ ರಾಧೆಯ ಕಣ್ಮನ ಸೆಳೆಯುವ ದೃಶ್ಯ ಇಲ್ಲಿದೆ ನೋಡಿ
ಸನಾತನ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದ ಬಣ್ಣ ಹಳದಿ ಬಣ್ಣವಾಗಿದೆ. ಈ ಬಣ್ಣವು ಭಗವಾನ್ ವಿಷ್ಣುವನ್ನು ಮತ್ತು ಬೃಹಸ್ಪತಿ ದೇವರ ಸಂಕೇತವಾಗಿದೆ. ಜ್ಯೋತಿಷ್ಯದ ಪ್ರಕಾರ, ಈ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಗುರು ಗ್ರಹದ ಪ್ರಭಾವ ಹೆಚ್ಚಾಗುತ್ತದೆ ಎನ್ನಲಾಗಿದೆ.
ಹಾಗಾಗಿ ಹೆಚ್ಚಿನ ಜನರು ಮಂಗಳ ಕಾರ್ಯಗಳಲ್ಲಿ ಹಳದಿ ಬಣ್ಣವನ್ನು ಬಳಸುತ್ತಾರೆ.
-‘ಓಂ ದೇವಿಕಾನಂದನಾಯ ವಿಧ್ಮಹೇ
ವಾಸುದೇವಾಯ ಧೀಮಹಿ
ತನ್ನೋ ಕೃಷ್ಣಃ ಪ್ರಚೋದಯಾತ್’
– ‘ಶ್ರೀ ಕೃಷ್ಣ ಗೋವಿಂದ ಹರೇ ಮುರಾರೆ, ಹೇ ನಾಥ ನಾರಾಯಣ ವಾಸುದೇವಂ ಭಜೇ’
-‘ಓಂ ನಮೋ ಭಗವತೇ ತಸ್ಮೈ ಕೃಷ್ಣಾಯ ಕುಂಠಮೇಧಸೇ ।
ಸರ್ವವ್ಯಾಧಿ ವಿನಾಶಾಯ ಪ್ರಭೋ ಮಾಮೃತಂ ಕೃಧಿ ।।
-”ದೇವಕೀಸುತಂ ಗೋವಿಂದಂ ವಾಸುದೇವ ಜಗತ್ಪತೇ|
ದೇಹಿ ಮೇ ತನಯಂ ಕೃಷ್ಣ ತ್ವಾಮಹಂ ಶರಣಂ ಗತಃ||
-ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಹರೇ ಕೃಷ್ಣ ಹರೇ ಕೃಷ್ಣ , ಕೃಷ್ಣ ಕೃಷ್ಣ ಹರೇ ಹರೇ
-‘ಓಂ ನಮೋ ಭಗವತೇ ಶ್ರೀ ಗೋವಿಂದಾ’
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Fri, 1 September 23