ದಕ್ಷಿಣ ಆಫ್ರಿಕಾದಲ್ಲಿ ಉದ್ಘಾಟನೆಗೊಂಡ ಅತಿ ದೊಡ್ಡ ಹಿಂದೂ ದೇವಾಲಯ
ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಭಾನುವಾರ ದಕ್ಷಿಣ ಗೋಳಾರ್ಧದ ಅತಿದೊಡ್ಡ ಹಿಂದೂ ದೇವಾಲಯ ಮತ್ತು ಸಾಂಸ್ಕೃತಿಕ ಸಂಕೀರ್ಣ ಉದ್ಘಾಟನೆಯಾಗಿದೆ. ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಬಿಎಪಿಎಸ್ ಸಂಸ್ಥೆಯ ಮಹಾಂತ ಸ್ವಾಮಿ ಮಹಾರಾಜ್ ಅವರು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನೆರವೇರಿಸಿದರು. ಈ ದೇವಾಲಯವು ದಕ್ಷಿಣ ಆಫ್ರಿಕಾದ ಹಿಂದೂ ಸಮುದಾಯಕ್ಕೆ ಪ್ರಮುಖ ಸ್ಥಳವಾಗಲಿದೆ. ಉದ್ಘಾಟನೆಗೆ ಮುನ್ನ ಭವ್ಯ ಮೆರವಣಿಗೆ ನಡೆಯಿತು.

ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಅತಿದೊಡ್ಡ ಹಿಂದೂ ದೇವಾಲಯ ಮತ್ತು ಸಾಂಸ್ಕೃತಿಕ ಸಂಕೀರ್ಣ ಭಾನುವಾರ ಉದ್ಘಾಟನೆಗೊಂಡಿದೆ. ಈ ಕಾರ್ಯಕ್ರಮದಲ್ಲಿ ನೂರಾರು ಹಿಂದೂ ಭಕ್ತರು ಭಾಗವಹಿಸಿದ್ದು, ಅನೇಕ ಭಕ್ತರನ್ನು ಆಕರ್ಷಿಸುವ ಈ ದೇವಾಲಯವು ದಕ್ಷಿಣ ಆಫ್ರಿಕಾದ ಹಿಂದೂ ಸಮುದಾಯಕ್ಕೆ ಒಂದು ಪ್ರಮುಖ ಮೈಲಿಗಲ್ಲಾಗಿದೆ. ದಕ್ಷಿಣ ಆಫ್ರಿಕಾದ ಜನಸಂಖ್ಯೆಯಲ್ಲಿ ಹಿಂದೂಗಳು ಕೇವಲ ಎರಡು ಪ್ರತಿಶತದಷ್ಟಿದ್ದರೂ, ಈ ಧರ್ಮವು ದೇಶದ ಭಾರತೀಯರಿಂದಾಗಿ ಹೆಚ್ಚಿನ ಮಹತ್ವವನ್ನು ಹೊಂದಿದೆ.
ಈ ಸಂದರ್ಭದಲ್ಲಿ, ದೇವಾಲಯದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಭಾರತದಿಂದ ಆಗಮಿಸಿದ್ದ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ (BAPS) ಪಂಗಡದ ಆಧ್ಯಾತ್ಮಿಕ ನಾಯಕ, 92 ವರ್ಷದ ಮಹಾಂತ ಸ್ವಾಮಿ ಮಹಾರಾಜ್ ನೇತೃತ್ವದಲ್ಲಿ ಪವಿತ್ರೀಕರಣ ಸಮಾರಂಭ ನಡೆಸಲಾಯಿತು. ಭಕ್ತರು ಬೆಳಗಿನ ಜಾವದಿಂದಲೇ ದೇವಸ್ಥಾನಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
📸 Deputy President Paul Mashatile addresses the Official Opening of the first phase of the Bochasanwasi Akshar Purushottam Swaminarayan Sanstha (BAPS) Hindu Mandir (Temple) and Cultural Complex, in Northriding, Johannesburg, Gauteng Province.#GovZAUpdates pic.twitter.com/UXJaUDXpaW
— South African Government (@GovernmentZA) January 30, 2025
ಇದನ್ನೂ ಓದಿ: ಈ ದಿನಾಂಕದಲ್ಲಿ ಹುಟ್ಟಿದವರು ಹನುಮಂತನ ಅಪಾರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ
ಈ ದೇವಾಲಯವನ್ನು BAPS “ದಕ್ಷಿಣ ಗೋಳಾರ್ಧದಲ್ಲಿ ಅತಿ ದೊಡ್ಡ ಹಿಂದೂ ಸಾಂಸ್ಕೃತಿಕ ಸಂಕೀರ್ಣ” ಎಂದು ಬಣ್ಣಿಸಿದೆ. ಇದು ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಉದ್ಘಾಟನೆಗೆ ಪೂರ್ವಸಿದ್ಧತಾ ಕಾರ್ಯವಾಗಿ, ಶನಿವಾರ ಜೋಹಾನ್ಸ್‌ಬರ್ಗ್‌ನಲ್ಲಿ ಭವ್ಯ ನಗರ ಯಾತ್ರೆ ಮೆರವಣಿಗೆ ನಡೆಯಿತು. ಇದು ಭಕ್ತಿಗೀತೆಗಳು, ಸಂಗೀತ, ಮೆರವಣಿಗೆ ಬ್ಯಾಂಡ್‌ಗಳು ಮತ್ತು ನೃತ್ಯಗಳನ್ನು ಒಳಗೊಂಡಿತ್ತು.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ