ನಿಮ್ಮ ಮುಖದ ಮೇಲೆ ಇರುವ ಮಚ್ಚೆಯಿಂದ ತಿಳಿಯಿರಿ ನಿಮ್ಮ ಅದೃಷ್ಟವನ್ನು!

ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿರುವ ಸಾಮುದ್ರಿಕಾ ಶಾಸ್ತ್ರದಲ್ಲಿಯೂ ವ್ಯಕ್ತಿಯ ಭವಿಷ್ಯ ಮತ್ತು ವರ್ತಮಾನಗಳ ವಿಷಯಗಳನ್ನು ತಿಳಿಯಬಹುದು. ಹಾಗಾಗಿ ನಿಮ್ಮ ಮುಖದ ಮೇಲೆ ಇರುವ ಮಚ್ಚೆ ಏನನ್ನು ಸೂಚಿಸುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

ನಿಮ್ಮ ಮುಖದ ಮೇಲೆ ಇರುವ ಮಚ್ಚೆಯಿಂದ ತಿಳಿಯಿರಿ ನಿಮ್ಮ ಅದೃಷ್ಟವನ್ನು!
ಸಂಗ್ರಹ ಚಿತ್ರ
Updated By: shruti hegde

Updated on: Nov 12, 2021 | 9:04 AM

ಶರೀರದ ಮೇಲಿರುವ ಮಚ್ಚೆಯು ವ್ಯಕ್ತಿಯ ಬಗ್ಗೆ ಅನೇಕ ವಿಚಾರಗಳನ್ನು ತೆರೆದಿಡುತ್ತವೆ. ಮಚ್ಚೆ ಯಾವ ಭಾಗದಲ್ಲಿದೆ ಎಂಬುದರ ಮೇಲೆ ಶುಭ ಅಶುಭ ಎಂಬುದನ್ನು ತಿಳಿಯಬಹುದು. ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿರುವ ಸಾಮುದ್ರಿಕಾ ಶಾಸ್ತ್ರದಲ್ಲಿಯೂ ವ್ಯಕ್ತಿಯ ಭವಿಷ್ಯ ಮತ್ತು ವರ್ತಮಾನಗಳ ವಿಷಯಗಳನ್ನು ತಿಳಿಯಬಹುದು. ಹಾಗಾಗಿ ನಿಮ್ಮ ಮುಖದ ಮೇಲೆ ಇರುವ ಮಚ್ಚೆ ಏನನ್ನು ಸೂಚಿಸುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

1) ಸುಂದರ, ನಿರ್ಮಲ ಮತ್ತು ಸ್ಪಷ್ಟ ಕಾಂತಿಯುಳ್ಳ ಚಿಹ್ನೆ ತಲೆಯ ಮೇಲೆ ಇದ್ದರೆ ಧನ ಸಂಗ್ರಹವಾಗುತ್ತದೆ.
2) ಹಣೆಯ ಮೇಲೆ ಮಚ್ಚೆ ಕಂಡು ಬಂದರೆ ಶೀಘ್ರ ಸೌಭಾಗ್ಯ ಪ್ರಾಪ್ತಿಯಾಗುವುದು.
3) ಹಲ್ಲಿನ ಮೇಲೆ ಚಿಹ್ನೆ ಇದ್ದರೆ ದೌರ್ಭಾಗ್ಯ ಉಂಟಾಗುತ್ತದೆ.
4) ಹುಬ್ಬಿನ ಮಧ್ಯದಲ್ಲಿ ಚಿಹ್ನೆ ಇದ್ದರೆ ಶೀಘ್ರ ಬಂಧುಗಳ ಮಿಲನವಾಗುತ್ತದೆ. ಹಾಗೂ ದೀರ್ಘಾಯಸ್ಸನ್ನು ಪಡೆದಿರುತ್ತಾರೆ.
5) ಕಣ್ಣಿನ ರೆಪ್ಪೆಯ ಮೇಲೆ ಚಿಹ್ನೆ ಇದ್ದರೆ ಶೋಕ ಅಥವಾ ದುಃಖವುಂಟಾಗುತ್ತದೆ.
6) ಚಿಹ್ನೆ ಶಂಖ ಸ್ಥಾನದಲ್ಲಿ ಇದ್ದರೆ ಸನ್ಯಾಸ ಯೋಗವಿರುತ್ತದೆ.
7) ಮುಖದ ಬಲ ಭಾಗದಲ್ಲಿ ಕೆಂಪು ಅಥವಾ ಕಪ್ಪು ಮಚ್ಚೆ ಇದ್ದರೆ ಅಂಥಹ ವ್ಯಕ್ತಿಗಳ ಜೀವನದಲ್ಲಿ ಸಕಲ ಸುಖ ಪ್ರಾಪ್ತಿಯಾಗುವ ಯೋಗವಿದೆ.
8) ಎಡ ಭಾಗದ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅಂಥ ವ್ಯಕ್ತಿಗಳ ಗೃಹಸ್ಥ ಜೀವನ ಸುಖಮಯವಾಗಿರುತ್ತೆ.
9) ಬಲ ಕಿವಿಯ ಮೇಲೆ ಮಚ್ಚೆ ಇದ್ದರೆ ಆ ವ್ಯಕ್ತಿಗಳು ಕಡಿಮೆ ವಯಸ್ಸಿನಲ್ಲಿಯೇ ಹಣವಂತರಾಗುತ್ತಾರೆ.
10)ಗಲ್ಲದ ಮೇಲೆ ಇದ್ದದ್ದೆ ಆದರೆ ನಿಶ್ಚಿತವಾಗಿಯೂ ಪುತ್ರ ಲಾಭವಾಗುತ್ತದೆ.
11) ತುಟಿಯ ಮೇಲೆ ಎಡಭಾಗದಲ್ಲಿ ಮಚ್ಚೆ ಇದ್ದರೆ ಅಂಥವರು ಉದಾರಿಗಳಾಗಿರುತ್ತಾರೆ.
12) ಮೂಗಿನ ಎಡಭಾಗದಲ್ಲಿ ಮಚ್ಚೆ ಇದ್ದರೆ ಅವರು ಸತತ ಪರಿಶ್ರಮದಿಂದ ಜೀವನದಲ್ಲಿ ಸಫಲತೆಯನ್ನು ಕಾಣುತ್ತಾರೆ.

ವೈದಿಕ ಜ್ಯೋತಿಷಿ, ವಾಸ್ತುಶಾಸ್ತ್ರಜ್ಞ ಡಾ.ಬಸವರಾಜ್ ಗುರೂಜಿ

ಇದನ್ನೂ ಓದಿ: ನವರಾತ್ರಿ 2021 ಮೂರನೇ ದಿನ: ಚಂದ್ರಘಂಟಾ ದೇವಿಯ ಆರಾಧನೆ ಹೇಗೆ ಮಾಡಬೇಕು? ಇಲ್ಲಿದೆ ಪೂಜಾ ವಿಧಿ