ಶ್ರೀ ಕೃಷ್ಣನನ್ನು ಶ್ರೀ ಹರಿಯ ಎಂಟನೇ ಅವತಾರವೆಂದು ಹೇಳಲಾಗುತ್ತದೆ. ಶ್ರೀಕೃಷ್ಣ ನಾರಾಯಣನ ಸಂಪೂರ್ಣ ಅವತಾರ ಎಂದು ನಂಬಲಾಗಿದೆ. ಭೂಮಿಯ ಮೇಲೆ ಜನಿಸಿದ ನಂತರ, ಅವರು ಕೃಷ್ಣನ ಅವತಾರದಲ್ಲಿ ಅನೇಕ ಪವಾಡಗಳನ್ನು ಮಾಡಿದ್ದಾರೆ. ತಮ್ಮ ಬಾಲ್ಯದಿಂದ ಶ್ರೀ ಕೃಷ್ಣ ಪರಮಾತ್ಮನಾಗುವವರೆಗೆ, ಅವರು ಬಹಳ ಕಷ್ಟಕರವಾದ ಪ್ರಯಾಣವನ್ನು ಮಾಡಿದ್ದಾರೆ. ಶ್ರೀಕೃಷ್ಣನ ಜೀವನದ ಪ್ರತಿಯೊಂದು ಘಟನೆಯ ಹಿಂದೆ ಸಾರ್ವಜನಿಕ ಕಲ್ಯಾಣದ ಉದ್ದೇಶ ಮತ್ತು ಪ್ರಪಂಚಕ್ಕೆ ಬೇಕಾದ ಸಂದೇಶ ಅಡಗಿದೆ. ಕೃಷ್ಣನ ಲೀಲೆಗಳು ಅಪಾರ.
ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನವನ್ನು ಶ್ರೀ ಕೃಷ್ಣನ ಜನ್ಮದಿನವಾಗಿ ಆಚರಿಸಲಾಗುತ್ತದೆ. ಈ ಬಾರಿಯ ಜನ್ಮಾಷ್ಟಮಿ ಆಗಸ್ಟ್ 30 ರ ಸೋಮವಾರದಂದು ಬರುತ್ತಿದೆ. ಈ ಶುಭ ಸಂದರ್ಭದಲ್ಲಿ, ಶ್ರೀ ಕೃಷ್ಣನ ಜೀವನಕ್ಕೆ ಸಂಬಂಧಿಸಿದ ಕೆಲವು ಕುತೂಹಲಕರ ಸಂಗತಿಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
1. ಶ್ರೀ ಕೃಷ್ಣನು ಒಟ್ಟು 16,108 ಪತ್ನಿಯರನ್ನು ಹೊಂದಿದ್ದನೆಂದು ಹೇಳಲಾಗುತ್ತೆ. ಈ ಪೈಕಿ 8 ಹೆಂಡತಿಯರನ್ನು ಅಷ್ಟಭಾರಿಗಳು ಎಂದು ಕರೆಯಲಾಗುತ್ತೆ. ಅವರ ಹೆಸರುಗಳು ರುಕ್ಮಿಣಿ, ಜಾಂಬಾವಂತಿ, ಸತ್ಯಭಾಮ, ಕಾಳಿಂದಿ, ಮಿತ್ರಬಿಂಡ, ಸತ್ಯ, ಭದ್ರ ಮತ್ತು ಲಕ್ಷ್ಮಣ. ರುಕ್ಮಿಣಿ-ಕೃಷ್ಣ ಇಬ್ಬರು ಪ್ರೀತಿಸಿ ಓಡಿ ಹೋಗಿ ಮದುವೆಯಾಗುತ್ತಾರೆ. ಉಳಿದವರನ್ನು ಭೌಮಾಸುರನು ಅಪಹರಿಸಿದ್ದರಿಂದ ಅವನು ಎಲ್ಲರಿಗೂ ಹೆಂಡತಿಯ ಸ್ಥಾನಮಾನವನ್ನು ಕೊಡುತ್ತಾನೆ.
2. ಶ್ರೀ ಕೃಷ್ಣ 64 ಕಲೆಗಳಲ್ಲಿ ಪ್ರವೀಣನಾಗಿದ್ದ ಎಂದು ಹೇಳಲಾಗಿದೆ. ಅವರು 64 ದಿನಗಳಲ್ಲಿ ಗುರು ಸಾಂದೀಪನಿಯಿಂದ ಈ 64 ಕಲೆಗಳನ್ನು ಕಲಿತಿದ್ದಾರಂತೆ. ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಹಿಂದಿರುಗುತ್ತಿದ್ದಾಗ, ಗುರು ಸಾಂದೀಪನಿಗೆ ಗುರು ದಕ್ಷಿಣ ರೂಪದಲ್ಲಿ ಅವರ ಮೃತ ಮಗನನ್ನು ನೀಡಿದ್ದರಂತೆ.
3. ಕೃಷ್ಣನಿಗೆ 108 ಹೆಸರುಗಳಿವೆ, ಇದರಲ್ಲಿ ಮುಕುಂದ, ಮುರಾರಿ, ಗೋವಿಂದ, ಗೋಪಾಲ, ಘನಶ್ಯಾಮ, ಗಿರ್ಧಾರಿ, ಮೋಹನ, ಮಾಧವ, ಚಕ್ರಧರ, ದೇವಕಿನಂದನ ಪ್ರಮುಖ ಹೆಸರುಗಳು.
4. ದೇವಕಿಯ ಏಳನೇ ಮಗ ಬಲರಾಮ ಮತ್ತು ಎಂಟನೆಯ ಮಗ ಶ್ರೀ ಕೃಷ್ಣ. ಶ್ರೀ ಕೃಷ್ಣ ಕಂಸನನ್ನು ಕೊಂದ ನಂತರ, ತನ್ನ ತಾಯಿ-ತಂದೆಯನ್ನು ಸೆರೆವಾಸದಿಂದ ಮುಕ್ತಗೊಳಿಸುತ್ತಾನೆ.
5. ದ್ರೌಪದಿಯನ್ನು ಪಾರ್ವತಿ ದೇವಿಯ ಅವತಾರವೆಂದು ನಂಬಲಾಗಿದೆ. ಕೃಷ್ಣ ವಿಷ್ಣುವಿನ ಅವತಾರ ಎನ್ನಲಾಗುತ್ತೆ. ವಿಷ್ಣುವಿನ ಸಹೋದರಿ ಪಾರ್ವತಿ ದೇವಿ. ಹೀಗಾಗಿ ಶ್ರೀಕೃಷ್ಣ ಮತ್ತು ದ್ರೌಪದಿ ಒಡಹುಟ್ಟಿದವರು ಎಂದು ನಂಬಲಾಗಿದೆ.
6. ಕೇವಲ ಅರ್ಜುನನಲ್ಲದೆ, ಹನುಮಾನ್ ಮತ್ತು ಸಂಜಯ್ ಕೂಡ ಭಗವಾನ್ ಶ್ರೀ ಕೃಷ್ಣನಿಂದ ಭಗವದ್ಗೀತೆಯ ಉಪದೇಶಗಳನ್ನು ಕೇಳಿಸಿಕೊಂಡಿದ್ದರು.
7. ಶ್ರೀ ಕೃಷ್ಣ 125 ವರ್ಷಗಳ ಕಾಲ ಬದುಕಿದ್ದರು. ಅವರ ಅವತಾರವು ಬೇಡನ ಬಾಣದೊಂದಿಗೆ ಕೊನೆಗೊಂಡಿತು. ಕೃಷ್ಣನ ಸಾವಿಗೆ ಕಾರಣನಾದ ಬೇಡನು ತನ್ನ ಹಿಂದಿನ ಜನ್ಮದಲ್ಲಿ ವಾನರ ರಾಜ ವಾಲಿಯಾಗಿದ್ದನು. ಕೃಷ್ಣ ರಾಮನ ಅವತಾರದಲ್ಲಿದ್ದಾಗ ವಾಲಿಯನ್ನು ಮರಗಳ ಹಿಂದೆ ನಿಂತು ಯಾವ ನಿರ್ದಿಷ್ಟ ಕಾರಣವಿಲ್ಲದೆ ಕೊಂದಿದ್ದನು. ಆಗ ರಾಮನು ಮುಂದಿನ ಜೀವನದಲ್ಲಿ ನಾನು ನಿನ್ನ ಕೈಯಲ್ಲಿ ಸಾಯುತ್ತೇನೆ ಎಂದು ಹೇಳಿದ್ದನು. ಇದಾದ ನಂತರ, ನಾರಾಯಣ ದ್ವಾಪರಯುಗದಲ್ಲಿ ಕೃಷ್ಣನ ರೂಪದಲ್ಲಿ ಬಂದಾಗ, ಅವರು ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದಾಗ ಕೃಷ್ಣನ ಪಾದದಲ್ಲಿದ್ದ ಚಿಹ್ನೆಯನ್ನು ಹಕ್ಕಿಯೆಂದು ತಪ್ಪಾಗಿ ಗ್ರಹಿಸಿ ಬೇಡ ಬಾಣ ಬಿಡುತ್ತಾನೆ.