AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

janmashtami 2021: ಕೃಷ್ಣ ಜನ್ಮಾಷ್ಟಮಿ – ಶ್ರೀ ಕೃಷ್ಣನಿಗೆ ಕೊಳಲು ಮತ್ತು ನವಿಲುಗರಿ ಅಂದರೆ ಇಷ್ಟ, ಯಾಕೆ ಗೊತ್ತಾ?

ಜಗತ್​​ ಸೂತ್ರಧಾರಿ ಶ್ರೀ ಕೃಷ್ಣನ ಯಾವುದೇ ಲೀಲೆಯ ಹಿಂದೆ ಒಂದು ಸ್ಪಷ್ಟ, ನಿರ್ದಿಷ್ಟ ಉದ್ದೇಶ ಇರುತ್ತದೆ. ಹಾಗಾಗಿ ಪ್ರತಿಯೊಂದನ್ನೂ ಅರಿಯುವ ಪ್ರಯತ್ನ ಮಾಡಬೇಕು. ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣನಿಗೆ ಪ್ರಿಯವಾದ ವಸ್ತುಗಳು ಮತ್ತು ಅದರ ಹಿಂದಿನ ಮಹತ್ವವವನ್ನು ತಿಳಿದುಕೊಳ್ಳೋಣ ಬನ್ನೀ.

janmashtami 2021: ಕೃಷ್ಣ ಜನ್ಮಾಷ್ಟಮಿ - ಶ್ರೀ ಕೃಷ್ಣನಿಗೆ ಕೊಳಲು ಮತ್ತು ನವಿಲುಗರಿ ಅಂದರೆ ಇಷ್ಟ, ಯಾಕೆ ಗೊತ್ತಾ?
ಕೃಷ್ಣ ಜನ್ಮಾಷ್ಟಮಿ - ಶ್ರೀ ಕೃಷ್ಣನಿಗೆ ಕೊಳಲು ಮತ್ತು ನವಿಲುಗರಿ ಅಂದರೆ ಇಷ್ಟ, ಯಾಕೆ ಗೊತ್ತಾ?
TV9 Web
| Updated By: ಸಾಧು ಶ್ರೀನಾಥ್​|

Updated on: Aug 28, 2021 | 7:35 AM

Share

ಆಗಸ್ಟ್​ 30 ರಂದು ಸೋಮವಾರ ಕೃಷ್ಣ ಜನ್ಮಾಷ್ಟಮಿ. ಕೃಷ್ಣ ಪರಮಾತ್ಮನ ಕೃಪಾಶೀರ್ವಾದ ನಿಮ್ಮ ಮೇಲೆ ಇರಬೇಕು ಅಂದರೆ ಜನ್ಮಾಷ್ಟಮಿಯ ಸಂದರ್ಭದಲ್ಲಿ ಪೂಜೆ ಪುನಸ್ಕಾರ ಮಾಡಿ. ಜಗನ್ನಾಟಕಧಾರಿಯ ಬಗ್ಗೆ ಒಂದಷ್ಟು ವಿಷಯಗಳನ್ನು ತಿಳಿದುಕೊಳ್ಳೀ. ಶ್ರೀ ಕೃಷ್ಣನಿಗೆ ಕೊಳಲು (Flute) ಮತ್ತು ನವಿಲುಗರಿ (Peacock feather) ಅಂದರೆ ಇಷ್ಟ, ಯಾಕೆ ಎಂಬುದನ್ನು ತಿಳಿದುಕೊಳ್ಳೋಣ.

ಜಗತ್​​ ಸೂತ್ರಧಾರಿ ಶ್ರೀ ಕೃಷ್ಣನ ಯಾವುದೇ ಲೀಲೆಯ ಹಿಂದೆ ಒಂದು ಸ್ಪಷ್ಟ, ನಿರ್ದಿಷ್ಟ ಉದ್ದೇಶ ಇರುತ್ತದೆ. ಹಾಗಾಗಿ ಪ್ರತಿಯೊಂದನ್ನೂ ಅರಿಯುವ ಪ್ರಯತ್ನ ಮಾಡಬೇಕು. ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣನಿಗೆ ಪ್ರಿಯವಾದ ವಸ್ತುಗಳು ಮತ್ತು ಅದರ ಹಿಂದಿನ ಮಹತ್ವವವನ್ನು ತಿಳಿದುಕೊಳ್ಳೋಣ ಬನ್ನೀ.

ಈ ವರ್ಷದ ಕೃಷ್ಣ ಜನ್ಮಾಷ್ಟಮಿಯಂದು ಆಗಸ್ಟ್ 29ರ ರಾತ್ರಿ 11.25ರಿಂದ ಆಗಸ್ಟ್ 30ರ ರಾತ್ರಿ 1.59ರವರೆಗೆ ಅಷ್ಟಮಿ ತಿಥಿ ಇರಲಿದೆ. ಆಗಸ್ಟ್ 30ರ ರಾತ್ರಿ 12.44 ರಿಂದ ಶುಭ ಮುಹೂರ್ತ ಪ್ರಾರಂಭಗೊಳ್ಳುತ್ತದೆ. 45 ನಿಮಿಷಗಳ ಕಾಲ ಶುಭ ಮುಹೂರ್ತ ಇರಲಿದೆ. ಶ್ರೀಕೃಷ್ಣನು ಈ ದಿನ ಮಥುರಾ ನಗರದಲ್ಲಿ ಜನಿಸಿದನು. ಮುಂದಿನ ಸೋಮವಾರವೇ ಕೃಷ್ಣ ಜನ್ಮೋತ್ಸವ. ದೇವಕಿ ಮತ್ತು ಯಶೋದಾ ಮಮತಾ ಮಾತೆಯರ ಸುಪುತ್ರ, ರಾಧಾರಾಣಿಯ ಪ್ರಿಯತಮ ಭಗವಂತ ಶ್ರೀಕೃಷ್ಣ.

ಪೌರಾಣಿಕವಾಗಿ ಶಾಸ್ತಗಳಲ್ಲಿ ಶ್ರೀಕೃಷ್ಣನ ರೂಪ ಅತ್ಯಂತ ಸುಂದರ ಎಂದು ವರ್ಣಿಸಲಾಗಿದೆ. ಮುದ್ದು ಕೃಷ್ಣನ ಕೈಯಲ್ಲಿ ಕೊಳಲು ಮತ್ತು ಮುಕುಟದಲ್ಲಿ ಕೊಳಲು ಧರಿಸಿರುವುದು ಆತನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು ಆತನ ಬಳಿ ಇರುವ ಗೋವು ಇನ್ನೂ ಆಕರ್ಷಕವಾಗಿರುತ್ತದೆ.

ಕೊಳಲು (Flute):

ಶ್ರೀಕೃಷ್ಣನಿಗೆ ಕೊಳಲು ಅತ್ಯಂತ ಪ್ರೀತಿಪಾತ್ರವಾದುದು. ಶ್ರೀಕೃಷ್ಣ ಪ್ರೇಮಪೂರ್ವಕವಾಗಿ, ತಲ್ಲೀನನಾಗಿ ಮಧುರವಾಗಿ ಕೊಳಲು ಬಾರಿಸತೊಡಗಿದರೆ ಜನ ತಮ್ಮನ್ನು ತಾವೇ ಮರೆತು ಆಲಿಸುತ್ತಿದ್ದರು. ಆದರೆ ವಾಸ್ತವದಲ್ಲಿ ಶ್ರೀಕೃಷ್ಣ ಕೊಳಲು ನುಡಿಸುವುದಕ್ಕೆ ಬೇರೆಯದ್ದೇ ಉದ್ದೇಶ, ಕಾರಣವಿದೆ. ಹೇಳಬೇಕು ಅಂದರೆ ಕೊಳಲು ಖುಷಿ ಮತ್ತು ಆನಂದದ ಪ್ರತೀಕವಾಗಿದೆ. ಅಂದರೆ ಯಾವುದೇ ಸಂಕಷ್ಟದ ಕಾಲದಲ್ಲೂ ಕೊಳಲು ಕೇಳತೊಡಗಿದರೆ ನಾವೂ ಖುಷಿಯಾಗಿ ಇರಬಹುದು. ಮತ್ತು ಬೇರೆಯವರನ್ನೂ ಆನಂದ, ಉಲ್ಲಸಿತ ರಾಗಿಟ್ಟಿರಬಹುದು. ಇದೇ ಶ್ರೀಕೃಷ್ಣನ ಕೊಳಲಿನ ತತ್ತ್ವ. ಕೊಳಲು ನುಡಿಸುತ್ತಾ ಸ್ವತಃ ಆತನೂ ಆನಂದಮಯವಾಗಿರುತ್ತಾನೆ, ಅದನ್ನು ಕೇಳುವವರನ್ನೂ ಸಂತೋಷದಿಂದ ಇಟ್ಟಿರುತ್ತಾನೆ.

ಇದನ್ನು ಬಿಟ್ಟು ಕೊಳಲಿನ ಇನ್ನೂ ಮೂರು ಗುಣಗಳಿವೆ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಕೊಳಲಿನ ನಿನಾದ ಅಂದರೆ ಅದು ನಾವಾಡುವ ಮಾತಿನಂತೆ. ಕೊಳಲಿನಲ್ಲಿ ಗಂಟು (Knot) ಇರುವುದಿಲ್ಲ. ಅಂದರೆ ಇದನ್ನು ಕೇಳುತಿರುವಾಗ ಮನಸಿನಲ್ಲಿಯೂ ಯಾವುದೇ ಗಂಟು ಅಂದರೆ ಅಡ್ಡ/ ಬಾಧೆ ಮೂಡುವುದಿಲ್ಲ. ಅಂದರೆ ವೈರತ್ವ, ಜಿದ್ದು ಮೂಡುವ ಮನಸ್ಥಿತಿ ಉಂಟಾಗುವುದಿಲ್ಲ.

ಎರಡನೆಯದು, ಕೊಳಲನ್ನು ನೀವು ಬಾರಿಸಿದಾಗಲಷ್ಟೇ ಅದರಿಂದ ನಾದ ಹೊರಹೊಮ್ಮವುದು. ಇದರರ್ಥ ನಿಮ್ಮನ್ನು ಸಲಹೆ ಕೇಳಿದಾಗಲಷ್ಟೇ ಉದಾತ್ತ ಸಲಹೆ ನೀಡಬೇಕು. ಸುಖಾಸುಮ್ಮನೆ ಉಚಿತ ಸಲಹೆ ನೀಡಿ, ನಿಮ್ಮ ಶ್ರಮ ವ್ಯರ್ಥ ಮಾಡಿಕೊಳ್ಳಬೇಡಿ. 3 ನೆಯದು, ಕೊಳಲು ಯಾವಾಗಲೇ ನುಡಿಸಿದರೂ ಅದು ಸುಶ್ರಾವ್ಯವಾಗಿಯೇ ಇರುತ್ತೆ. ಇದರ ನೇರ ಅರ್ಥವೆಂದರೆ ನಾವು ಆಡುವ ಮಾತು ಸಿಹಿಯಾಗಿರಬೇಕು. ಜನ ಮನಮೋಹಕಗೊಳ್ಳಬೇಕು ಹಾಗಿರಬೇಕು ನಾವು ಆಡುವ ಮಾತು. ಅದಕ್ಕೆ ಕೊಳಲಿನ ನಿನಾದವನ್ನು ನಾವಾಡುವ ಮಾತಿಗೆ ಹೋಲಿಸಿರುವುದು.

ನವಿಲುಗರಿ (Peacock feather): ನವಿಲುಗರಿಯಲ್ಲಿ ನಾನಾ ಬಣ್ಣಗಳು ಇರುತ್ತವೆ. ಈ ಬಣ್ಣಗಳು ಜೀವನದ ಪರಿಸ್ಥಿತಿಯನ್ನು ವರ್ಣಿಸುತ್ತದೆ. ನವಿಲುಗರಿಯಲ್ಲಿ ಗಾಢ ಬಣ್ಣ ಜೀವನದಲ್ಲಿನ ಕಠಿಣ ಪರಿಸ್ಥಿತಿಗಳು ಮತ್ತು ದುಃಖಗಳನ್ನು ಸಾದರಪಡಿಸುತ್ತದೆ. ತಿಳಿ ಬಣ್ಣವು ತಿಳಿಯಾದ ಜೀವನದಂತೆ. ಸುಖ, ಶಾಂತಿ ನೆಮ್ಮದಿ, ಸಮೃದ್ಧಿಯ ಪ್ರತೀಕವಾಗಿರುತ್ತದೆ. ಅಂದರೆ ಜೀನವದಲ್ಲಿ ಮನುಷ್ಯ ಸುಖ ಮತ್ತು ದುಃಖ ಎರಡನ್ನೂ ಒಟ್ಟಿಗೇ ಕೊಂಡೊಯ್ಯಬೇಕಾಗುತ್ತದೆ. ಆದರೆ ಅವೆರಡೂ ಒಟ್ಟೊಟ್ಟಿಗೇ ಇರುತ್ತದೆ – ನವಿಲುಗರಿಯಲ್ಲಿ ಬಣ್ಣಗಳ ಹಾಗೆ. ಆದರೆ ಅವೆರಡೂ ಸ್ಥಿತಿಗಳನ್ನು ಸಮತೋಲನದಿಂದ ಸಂಭಾಳಿಸಿದಾಗ ಜೀವನದಲ್ಲಿ ಸಮಚಿತ್ತದಿಂದ, ಸಮಯ ಪ್ರಜ್ಞೆಯಿಂದ ಇರಬಹುದು. ಇದರ ಹೊರತಾಗಿ ನವಿಲು ಪರಿಶುದ್ಧ ಪ್ರೇಮದ ಸಂಕೇತ. ಹಾಗಾಗಿ ಶ್ರೀ ಕೃಷ್ಣನಿಗೆ ಇದು ಇಷ್ಟ.

ಇದನ್ನೂ ಓದಿ: ಅಸೆಂಬ್ಲಿ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿದ ತಪ್ಪಿಗೆ ಮಾಜಿ ಶಾಸಕನಿಗೆ ಜೈಲು ಶಿಕ್ಷೆ ವಿಧಿಸಿದ ಪ್ರಜಾ ಪ್ರತಿನಿಧಿ ಕೋರ್ಟ್​

(janmashtami 2021 why Flute and Peacock feather are favorite to lord krishna know the reason)

ಜನತೆಗೆ ಗುಡ್​ ನ್ಯೂಸ್ ಕೊಟ್ಟ ಕೇಂದ್ರ: ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ?
ಜನತೆಗೆ ಗುಡ್​ ನ್ಯೂಸ್ ಕೊಟ್ಟ ಕೇಂದ್ರ: ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ?
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ವಿಷ್ಣುವರ್ಧನ್​​ಗೆ ಕರ್ನಾಟಕ ರತ್ನ ನೀಡುವ ಬಗ್ಗೆ ಸಿಎಂ ಸಕಾರಾತ್ಮಕ ಸ್ಪಂದನೆ
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಅಪಾಯದ ಮಟ್ಟ ಮೀರಿದ ಜಮ್ಮು-ಕಾಶ್ಮೀರದ ಝೀಲಂ ನದಿ, ಪ್ರವಾಹದ ಎಚ್ಚರಿಕೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ