AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸೆಂಬ್ಲಿ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿದ ತಪ್ಪಿಗೆ ಮಾಜಿ ಶಾಸಕನಿಗೆ ಜೈಲು ಶಿಕ್ಷೆ ವಿಧಿಸಿದ ಪ್ರಜಾ ಪ್ರತಿನಿಧಿ ಕೋರ್ಟ್​

ಬಿಎ ಪದವೀಧರನಾದ ಪಾಯಂ ವೆಂಕಟೇಶ್ವರುಲು (payam venkateswarlu) 2018ರ ಅಸೆಂಬ್ಲಿ ಚುನಾವಣೆ ವೇಳೆ ಮತದಾರರಿಗೆ ಹಣದ ಆಮಿಷವೊಡ್ಡಿ ಮತ ಗಳಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ತೆಲಂಗಾಣದ ಪ್ರಜಾ ಪ್ರತಿನಿಧಿ ಕೋರ್ಟ್ 6 ತಿಂಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ಜುಲ್ಮಾನೆ ವಿಧಿಸಿದೆ.

ಅಸೆಂಬ್ಲಿ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿದ ತಪ್ಪಿಗೆ ಮಾಜಿ ಶಾಸಕನಿಗೆ ಜೈಲು ಶಿಕ್ಷೆ ವಿಧಿಸಿದ ಪ್ರಜಾ ಪ್ರತಿನಿಧಿ ಕೋರ್ಟ್​
ಅಸೆಂಬ್ಲಿ ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿದ ತಪ್ಪಿಗೆ ಮಾಜಿ ಶಾಸಕನಿಗೆ ಜೈಲು ಶಿಕ್ಷೆ ವಿಧಿಸಿದ ಪ್ರಜಾ ಪ್ರತಿನಿಧಿ ಕೋರ್ಟ್​
TV9 Web
| Edited By: |

Updated on: Aug 13, 2021 | 9:14 AM

Share

ಚುನಾವಣೆ ಸಂದರ್ಭದಲ್ಲಿ ಮತ ಗಳಿಕೆಗಾಗಿ ಮತದಾರರಿಗೆ ಹಣ ಹಂಚಿಕೆ ಮಾಡಿದ ತಪ್ಪಿಗೆ ಮಾಜಿ ಶಾಸಕರೊಬ್ಬರಿಗೆ ಪ್ರಜಾ ಪ್ರತಿನಿಧಿ ಕೋರ್ಟ್ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ಇದ್ಯಾವುದೊ ಮಹಾ ಸುದ್ದಿ! ಇದೆಲ್ಲಾ ಮಾಮೂಲೇ ಆಗಿದೆಯಲ್ಲಾ? ಎಂದು ಪ್ರಶ್ನಿಸುವವರಿಗೆ ತೆಲಂಗಾಣದ ನ್ಯಾಯಾಲಯವು ನಿನ್ನೆ ಗುರುವಾರ ಮಾದರಿಯ ಆದೇಶ ನೀಡಿದೆ. ವೋಟಿಗಾಗಿ ನೋಟು ರಾಜಕೀಯ ಪಕ್ಷಗಳ ಮೂಲ ಹಕ್ಕು ಎಂಬಂತಾಗಿರುವಾಗಿ ತೆಲಂಗಾಣದ ನ್ಯಾಯಾಲಯ ಅದೂ ಪ್ರಜಾ ಪ್ರತಿನಿಧಿ ಕೋರ್ಟ್ ಇಂತಹ ತೀರ್ಪು ನೀಡಿರುವುದು ಪ್ರಜಾಪ್ರಭುತ್ವದ ನಾಡಿನಲ್ಲಿ ಆಶಾಕಿರಣ ಮೂಡಿದೆ.

ಪ್ರಚಲಿತದಲ್ಲಿ ಚುನಾವಣೆಯೆಂದರೇನೆ ಹಣ, ಮದ್ಯಗಳ ಅಕ್ರಮಗಳು ಸರ್ವಾಂತರ್ಯಾಮಿ ಎಂಬುದು ಸರ್ವವಿಧಿತ. ಆದರೆ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಎಳ್ಳುನೀರು ಬಿಡುವ ಈ ಅಕ್ರಮಗಳನ್ನು ತೊಡೆದು ಹಾಕಲು ಸಾಧ್ಯವಿಲ್ಲ ಎಂಬಂತಾಗಿದೆ. ಆದರೆ ಕನಿಷ್ಠ ನಿಯಂತ್ರಿಸಬೇಕು ಎಂಬುದು ಎಲ್ಲರ ಹಕ್ಕೊತ್ತಾಯವಾಗಿದೆ. ಹೀಗಿರುವಾಗ ಸಾಕ್ಷಾತ್​ ಪ್ರಜಾ ಪ್ರತಿನಿಧಿ ಕೋರ್ಟ್ ಪ್ರಜಾಪ್ರಭುತ್ವದ ಆಶಯಕ್ಕೆ ಆಸರೆಯಾಗುವಂತಹ ತೀರ್ಪು ನೀಡಿದೆ.

ಚುನಾವಣೆ ವೇಳೆ ನೀರಿನಂತೆ ಹಣ ಖರ್ಚು ಮಾಡಿದ್ದ 48 ವರ್ಷ ವಯಸ್ಸಿನ, ಮಾಜಿ ಶಾಸಕರೊಬ್ಬರಿಗೆ ತೆಲಂಗಾಣದ ಪ್ರಜಾ ಪ್ರತಿನಿಧಿ ಕೋರ್ಟ್ ಶಿಕ್ಷೆ ವಿಧಿಸಿದೆ. ಪಾಯಂ ವೆಂಕಟೇಶ್ವರುಲು ಎಂಬಾತನೇ ಶಿಕ್ಷೆಗೆ ಗುರಿಯಾಗಿರುವ ಮಾಜಿ ಎಂಎಲ್​ಎ. ತೆಲಂಗಾಣ ವಿಧಾನಸಭೆಯ ವ್ಯಾಪ್ತಿಗೆ (Telangana Legislative Assembly) ಬರುವ ಖಮ್ಮಂ ಜಿಲ್ಲೆಯ (Khammam) ಎಸ್​ಟಿ (ST) ಮೀಸಲು ಕ್ಷೇತ್ರವಾದ ಪಿನಪಾಕ ಅಸೆಂಬ್ಲಿ ಕ್ಷೇತ್ರದಲ್ಲಿ (Pinapaka Assembly constituency) ಈ ಅಕ್ರಮ ನಡೆದಿತ್ತು.

ಬಿಎ ಪದವೀಧರನಾದ ಪಾಯಂ ವೆಂಕಟೇಶ್ವರುಲು (payam venkateswarlu) 2018ರ ಅಸೆಂಬ್ಲಿ ಚುನಾವಣೆ ವೇಳೆ ಮತದಾರರಿಗೆ ಹಣದ ಆಮಿಷವೊಡ್ಡಿ ಮತ ಗಳಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ ತೆಲಂಗಾಣದ ಪ್ರಜಾ ಪ್ರತಿನಿಧಿ ಕೋರ್ಟ್ 6 ತಿಂಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ಜುಲ್ಮಾನೆ ವಿಧಿಸಿದೆ. ಅಸೆಂಬ್ಲಿ ಚುನಾವಣೆ ವೇಳೆ ಮತದಾರರಿಗೆ ಹಣ ನೀಡಿದ್ದಾರೆ ಎಂಬ ಆರೋಪದ ಮೇಲೆ 2018ರಲ್ಲಿ ಅಶ್ವಾಪುರಂ ಪೊಲೀಸ್​ ಸ್ಟೇಷನ್​​ನಲ್ಲಿ ಪಾಯಂ ವೆಂಕಟೇಶ್ವರುಲು ವಿರುದ್ಧ ಕೇಸು ದಾಖಲಾಗಿತ್ತು. ಪ್ರಕರಣವನ್ನು ಆಲಿಸಿದ ಪ್ರಜಾ ಪ್ರತಿನಿಧಿ ಕೋರ್ಟ್ ಗುರುವಾರ ಶಿಕ್ಷೆ ವಿಧಿಸಿ, ಈ ಮಹತ್ವದ ತೀರ್ಪು ನೀಡಿದೆ.

ವಿಶ್ಲೇಷಣೆ | ಭ್ರಷ್ಟಾಚಾರ ವಿರೋಧಿ ಹೋರಾಟಗಳು ವಿಫಲವಾಗಲು ನಾವು ಹೇಗೆ ಕಾರಣ? (Pinapaka ex mla payam venkateswarlu jailed for distributing money during election)

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ