ಕನ್ಯಾ ರಾಶಿಯ ಜೊತೆಗೆ ಈ 4 ರಾಶಿಯ ವ್ಯಕ್ತಿಗಳು ಮೂರ್ಖರ ಸ್ವರ್ಗದಲ್ಲಿ ಇರಲು ಬಯಸುವುದಿಲ್ಲ! ಯಾರವರು?
ಸ್ತುತ ಸಂದರ್ಭದಲ್ಲಿ ಕನ್ಯಾ ರಾಶಿಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಕನ್ಯಾ ರಾಶಿಯ ಜನರು ಆಗಸ್ 23 ರಿಂದ ಸೆಪ್ಟೆಂಬರ್ 22 ನಡುವಣ ಅವಧಿಯಲ್ಲಿ ಹುಟ್ಟಿದವರಾಗಿರುತ್ತಾರೆ. ಕನ್ಯಾ ರಾಶಿಯ ಜನ ಕಠಿಣ ಪರಿಶ್ರಮ ಜೀವಿಗಳಾಗಿರುತ್ತಾರೆ. ಮಹತ್ವಾಕಾಂಕ್ಷಿಗಳೂ ಮತ್ತು ಮಾನಸಿಕವಾಗಿ ಸದೃಢರೂ ಆಗಿರುತ್ತಾರೆ. ಭಯದಿಂದ ಕುಗ್ಗುವುದಿಲ್ಲ. ಬಲಾಢ್ಯವಾಗಿ ಮತ್ತು ಶೌರ್ಯದಿಂದ ಮುಂದಡಿಯಿಡುತ್ತಾರೆ.
ಇದು ಜ್ಯೋತಿಷ್ಯ ಶಾಸ್ತ್ರದ ಚಮತ್ಕಾರವೇ ಸರಿ. ಕನ್ಯಾ ರಾಶಿಯ ಜೊತೆಗೆ ಈ 4 ರಾಶಿಯ ಜನರಿಗೂ ಅದೃಷ್ಟ ತಳಕು ಹಾಕಿಕೊಂಡಿರುತ್ತದೆ. ಅದು ಹೇಗೆ? ಇಲ್ಲಿದೆ ಮಾಹಿತಿ. ಗ್ರಹ ಗತಿಗಳ ಫಲವಾಗಿ ಕನ್ಯಾ ರಾಶಿಯ ಜೊತೆಗೆ ಈ ನಾಲ್ಕು ರಾಶಿಯ ವ್ಯಕ್ತಿಗಳ ಜೀವನವೂ ಅನುಕೂಲಕರವಾಗಿ ತಳಕು ಹಾಕಿಕೊಂಡಿರುತ್ತದೆ. ನಿಮ್ಮ ವ್ಯಕ್ತಿತ್ವ ನಿಮ್ಮ ರಾಶಿಯ ಅನುಸಾರ ಇರುತ್ತದೆ. ಆಯಾ ರಾಶಿಗೆ ಅನುಗುಣವಾಗಿ ನಿಮ್ಮ ವ್ಯಕ್ತಿತ್ವವನ್ನುನಿಖರವಾಗಿ ಹೀಗೆಯೇ ಇರುತ್ತದೆ ಎಂದು ಹೇಳಬಹುದು. ಹಾಗಾಗಿ ನಿಮ್ಮ ರಾಶಿಯ ಬಗ್ಗೆ ನೀವು ಅವಶ್ಯವಾಗಿ ತಿಳಿದುಕೊಳ್ಳಿ.
ಪ್ರಸ್ತುತ ಸಂದರ್ಭದಲ್ಲಿ ಕನ್ಯಾ ರಾಶಿಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಕನ್ಯಾ ರಾಶಿಯ ಜನರು ಆಗಸ್ 23 ರಿಂದ ಸೆಪ್ಟೆಂಬರ್ 22 ನಡುವಣ ಅವಧಿಯಲ್ಲಿ ಹುಟ್ಟಿದವರಾಗಿರುತ್ತಾರೆ. ಕನ್ಯಾ ರಾಶಿಯ ಜನ ಕಠಿಣ ಪರಿಶ್ರಮ ಜೀವಿಗಳಾಗಿರುತ್ತಾರೆ. ಮಹತ್ವಾಕಾಂಕ್ಷಿಗಳೂ ಮತ್ತು ಮಾನಸಿಕವಾಗಿ ಸದೃಢರೂ ಆಗಿರುತ್ತಾರೆ. ಭಯದಿಂದ ಕುಗ್ಗುವುದಿಲ್ಲ. ಬಲಾಢ್ಯವಾಗಿ ಮತ್ತು ಶೌರ್ಯದಿಂದ ಮುಂದಡಿಯಿಡುತ್ತಾರೆ. ಪೂರ್ಣಾವಧಿಗೆ ವೃತ್ತಿಪರರಾಗಿರುತ್ತಾರೆ. ಸರ್ವಶ್ರೇಷ್ಠತೆಯೇ ಇವರ ಮಂತ್ರವಾಗಿರುತ್ತದೆ. ಇನ್ನು ವೈಯಕ್ತಿಕ ಜೀವನದಲ್ಲಿ ಬದ್ಧತೆ ಹೊಂದಿರುತ್ತಾರೆ, ಪ್ರೀತಿ ಪ್ರೇಮ ಅಭಿಮಾನ ಆದರತೆ ಮತ್ತು ಅನ್ಯೋನ್ಯತೆಯೊಂದಿಗೆ ಇರುತ್ತಾರೆ.
ಇನ್ನು ಕನ್ಯಾ ರಾಶಿಯ (Virgo) ಜೊತೆ ಹೆಚ್ಚು ಅನುಕೂಲಕರವಾಗಿರುವ ರಾಶಿಗಳ ಬಗ್ಗೆ ಹೇಳುವುದಾದರೆ 4 ರಾಶಿಗಳು ಬರುತ್ತವೆ; ಅವು ಯಾವುವೆಂದರೆ ವೃಷಭ, ಕರ್ಕಾಟಕ, ವೃಶ್ಚಿಕ ಮತ್ತು ಮಕರ ರಾಶಿಗಳು. ಹಾಗಾದರೆ ಬನ್ನೀ ನೋಡೋಣ ಈ ನಾಲ್ಕೂ ರಾಶಿಯವರು ಕನ್ಯಾ ರಾಶಿಯ ಜೊತೆ ಹೆಚ್ಚು ಅನುಕೂಲಕರವಾಗಿ ಇರುತ್ತಾರೆ, ಯಾಕೆ ಎಂಬುದನ್ನು.
1. ವೃಷಭ ರಾಶಿ Taurus:
ವೃಷಭ ರಾಶಿಯವರಿಗೆ ಸರ್ವಶ್ರೇಷ್ಠತೆ ಬಿಟ್ಟರೆ ಅದಕ್ಕಿಂತ ಕಡಿಮೆಯದ್ದೇನೂ ಒಪ್ಪಿಕೊಳ್ಳುವುದಿಲ್ಲ. ಇವರು ಪರಿಪೂರ್ಣತೆಯನ್ನು ಬಯಸುತ್ತಾರೆ. ಅಡ್ಜಸ್ಟ್ಮೆಂಟ್ ಮಾಡಿಕೊಳ್ಳುವುದಕ್ಕೆ ಅವರು ಸುತರಾಂ ಒಪ್ಪುವುದಿಲ್ಲ. ವೃಷಭ ರಾಶಿ ಮತ್ತು ಕನ್ಯಾ ರಾಶಿಯವರು ಜೀವನದಲ್ಲಿ ಒಂದೇ ಹಳೆಯ ಆಚಾರ ವಿಚಾರದ ಶಾಲೆಯಿಂದ ಬಂದವರಾಗಿರುತ್ತಾರೆ. ಪರಸ್ಪರ ತುಂಬಾ ರೊಮ್ಯಾಂಟಿಕ್ ಸಹ ಆಗಿರುತ್ತಾರೆ.
2. ಕರ್ಕಾಟಕ ರಾಶಿ Cancer: ಕರ್ಕಾಟಕ ರಾಶಿಯ ಜಾತಕದವರು ಕನ್ಯಾ ರಾಶಿಯವರ ತರಹ ಶಾಂತ ಸ್ವಭಾವದವರು. ಸರಳ ಮತ್ತು ಸ್ನೇಹಶೀಲ ಜನರಾಗಿರುತ್ತಾರೆ. ಇವರು ಯಾವುದೇ ಸಂಗತಿಯನ್ನು ಸರಳವಾಗಿಡಲು ಬಯಸುತ್ತಾರೆ. ಯಾವುದನ್ನೂ ಸ್ಥಗಿತಗೊಳಿಸಲು ಬಯಸುವುದಿಲ್ಲ. ಈ ಎರಡೂ ರಾಶಿಯವರು ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ತಮ್ಮ ಪ್ರಿಯ ಜನರೊಂದಿಗೆ ನಿಷ್ಠಾವಂತರಾಗಿ, ಭರವಸೆಯುಳ್ಳವರಾಗಿ ಮತ್ತು ಸಮರ್ಪಣಾ ಭಾವದೊಂದಿಗೆ ಇರುತ್ತಾರೆ.
3. ವೃಶ್ಚಿಕ ರಾಶಿ Scorpio: ವೃಶ್ಚಿಕ ರಾಶಿಯವರು ಪ್ರತಿಯೊಂದು ವಿಷಯವನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಬಂದೂಕಿನೊಂದಿಗೆ ರಣರಂಗದೊಳಕ್ಕೆ ಧುಮುಕುವುದಕ್ಕೆ ಮೊದಲು ಜೀವನದಲ್ಲಿ ಎಲ್ಲವನ್ನೂ ವ್ಯವಸ್ಥಿತವಾಗಿ, ಒಪ್ಪಓರಣವಾಗಿ ಮಾಡಿಟ್ಟು ಕೊಂಡಿರುತ್ತಾರೆ. ಕನ್ಯಾ ರಾಶಿಯವರ ಮಾದರಿಯಲ್ಲಿ ಎಲ್ಲವನ್ನೂ ಸವಿಸ್ತಾರವಾಗಿ ನೋಡುವ ದೃಷ್ಟಿ ಹೊಂದಿರುತ್ತಾರೆ. ಬುದ್ಧಿವಂತರೂ ಮತ್ತು ಸಹಜ ವ್ಯಕ್ತಿತ್ವದವರೂ ಆಗಿರುತ್ತಾರೆ.
4. ಮಕರ ರಾಶಿ Capricorn: ಮಕರ ರಾಶಿಯವರು ಯಾವುದೇ ತೀರ್ಮಾನಗಳನ್ನು ಹೆಚ್ಚಾಗಿ ತಮ್ಮ ಹೃದಯದಿಂದ ತೆಗೆದುಕೊಂಡಿರುತ್ತಾರೆ. ಆದರೆ ಅವರು ವ್ಯಾವಹಾರಿಕವಾಗಿಯೂ ಮತ್ತು ಯಥಾರ್ಥವಾದಿಗಳೂ ಆಗಿರುತ್ತದೆ. ಅವರು ಮೂರ್ಖರ ಸ್ವರ್ಗದಲ್ಲಿ ಇರಲು ಬಯಸುವುದಿಲ್ಲ. ಸ್ವಲ್ಪಮಟ್ಟಿಗೆ ಜಾದೂ ಪ್ರಯೋಗಿಸಿದರೂ ತರ್ಕಬದ್ಧವಾಗಿ ವಿವೇಚನೆಯಿಂದ ವ್ಯವಹಾರ ನಡೆಸುತ್ತಾರೆ. ಕನ್ಯಾ ರಾಶಿಯವರ ಜೊತೆ ಚೆನ್ನಾಗಿ ಸೇರುತ್ತಾರೆ. ಏಕೆಂದರೆ ಅವರದೂ ಇವರ ಮಾದರಿಯ ಬುದ್ಧಿಯವರೇ ಆಗಿರುತ್ತಾರೆ. ಇವರಿಬ್ಬರದೂ ಮಹಾ ಸಂಗಮವಾಗಿರುತ್ತದೆ.
ಇದನ್ನೂ ಓದಿ:
ಮೈಸೂರು ವಿವಿಯಲ್ಲಿ ವಿದ್ಯಾರ್ಥಿನಿಯರ ಸಂಚಾರಕ್ಕೆ ನಿರ್ಬಂಧ; ಸುತ್ತೋಲೆ ವಾಪಸ್ ಪಡೆಯಲು ಸಚಿವ ಅಶ್ವತ್ಥನಾರಾಯಣ ಆದೇಶ
(people with these 4 zodiac signs are most compatible with virgo)