ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ ಈ ದೇವಸ್ಥಾನಕ್ಕೆ ಭೇಟಿ ನೀಡಿ ನಾಣ್ಯವನ್ನು ಅರ್ಪಿಸಿ!

ಉತ್ತರಾಖಂಡದ ಜಾಗೇಶ್ವರ ಧಾಮದಲ್ಲಿರುವ ಕುಬೇರ ದೇವಸ್ಥಾನವು ಸಂಪತ್ತಿನ ದೇವರ ಪೂಜಾ ಸ್ಥಳವಾಗಿದೆ. ಭಕ್ತರು ಇಲ್ಲಿ ನಾಣ್ಯಗಳನ್ನು ಅರ್ಪಿಸಿ ಆರ್ಥಿಕ ಸಮೃದ್ಧಿಗೆ ಪ್ರಾರ್ಥಿಸುತ್ತಾರೆ. ದೇವಸ್ಥಾನವು ಚಿನ್ನ ಅಥವಾ ಬೆಳ್ಳಿಯ ನಾಣ್ಯಗಳನ್ನು ಭಕ್ತರಿಗೆ ಪ್ರಸಾದವಾಗಿ ನೀಡುತ್ತದೆ. ಈ ದೇವಸ್ಥಾನವು 9ನೇ ಶತಮಾನದಿಂದಲೂ ಭಕ್ತಿಯ ಕೇಂದ್ರವಾಗಿದೆ ಮತ್ತು ಅದರ ವಾಸ್ತುಶಿಲ್ಪ ಮತ್ತು ಪವಾಡಗಳಿಗೆ ಹೆಸರುವಾಸಿಯಾಗಿದೆ.

ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ ಈ ದೇವಸ್ಥಾನಕ್ಕೆ ಭೇಟಿ ನೀಡಿ ನಾಣ್ಯವನ್ನು ಅರ್ಪಿಸಿ!
Kubera Temple In India
Follow us
ಅಕ್ಷತಾ ವರ್ಕಾಡಿ
|

Updated on: Jan 12, 2025 | 7:44 AM

ಭಾರತವನ್ನು ದೇವಾಲಯಗಳ ನಾಡು ಎಂದು ಕರೆಯಲಾಗುತ್ತದೆ. ದೇವಾಲಯಗಳ ರಹಸ್ಯಗಳು ಮತ್ತು ಪವಾಡಗಳ ಕಥೆಗಳು ಇಲ್ಲಿ ಜನಪ್ರಿಯವಾಗಿವೆ. ಕೆಲವು ದೇವಾಲಯ ತನ್ನ ವಾಸ್ತು ಶೈಲಿ ಹಾಗೂ ಪವಾಡಗಳಿಂದಲೇ ಪ್ರಪಂಚದಾದ್ಯಂತ ಜನಪ್ರಿಯವಾಗಿವೆ. ಇದೀಗ ಅಂತದ್ದೇ ಸಂಪತ್ತಿನ ದೇವರಾದ ಕುಬೇರನ ದೇವಾಲವೊಂದು ಭಾರತದಾದ್ಯಂತ ಜನಪ್ರಿಯವಾಗಿದೆ. ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ದಾರಿದ್ರ್ಯ ತೊಲಗುತ್ತದೆ ಎಂಬುದು ಜನರ ನಂಬಿಕೆ. ಇದಲ್ಲದೆ, ಕುಬೇರನಿಗೆ ನಾಣ್ಯಗಳನ್ನು ಅರ್ಪಿಸುವುದು ಮತ್ತು ಇತರ ವಿಭಿನ್ನ ಸಂಪ್ರದಾಯಗಳು ಇಲ್ಲಿ ಆಕರ್ಷಕವಾಗಿವೆ.

ಕುಬೇರ ದೇವಾಲಯ ಎಲ್ಲಿದೆ?

ಸಂಪತ್ತಿನ ದೇವರಾದ ಕುಬೇರನ ಈ ದೇವಾಲಯವು ಉತ್ತರಾಖಂಡದ ದೇವಭೂಮಿಯ ಅಲ್ಮೋರಾದಿಂದ 40 ಕಿಮೀ ದೂರದಲ್ಲಿದೆ. ಈ ದೇವಾಲಯವನ್ನು ಜಾಗೇಶ್ವರ ಧಾಮ ಎಂದು ಕರೆಯಲಾಗುತ್ತದೆ. ಹಣಕಾಸಿನ ಸಮಸ್ಯೆಯನ್ನು ಹೋಗಲಾಡಿಸುವ ಬಯಕೆಯಿಂದ ಪ್ರತಿದಿನ ಅಪಾರ ಸಂಖ್ಯೆಯ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಬಡತನದಿಂದ ಮುಕ್ತಿ:

ಕುಬೇರನ ಆಶೀರ್ವಾದ ಪಡೆದ ವ್ಯಕ್ತಿಯು ಕೀರ್ತಿ, ಸಂಪತ್ತು ಇತ್ಯಾದಿಗಳನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಪ್ರತಿದಿನ ಭಕ್ತರು ಈ ದೇವಾಲಯಕ್ಕೆ ವಿವಿಧ ಇಷ್ಟಾರ್ಥಗಳೊಂದಿಗೆ ಭೇಟಿ ನೀಡುತ್ತಾರೆ ಮತ್ತು ಭಗವಾನ್ ಕುಬೇರನನ್ನು ಪ್ರಾರ್ಥಿಸುತ್ತಾರೆ. ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ವ್ಯಕ್ತಿಯು ಆರ್ಥಿಕವಾಗಿ ಏಳಿಗೆ ಹೊಂದುತ್ತಾನೆ ಮತ್ತು ಜೀವನದಲ್ಲಿ ಸಮಸ್ಯೆಗಳಿಂದ ಮುಕ್ತನಾಗುತ್ತಾನೆ ಎಂದು ನಂಬಲಾಗಿದೆ.

ಚಿನ್ನ ಮತ್ತು ಬೆಳ್ಳಿಯ ನಾಣ್ಯ:

ಈ ದೇವಾಲಯದಲ್ಲಿ ಕುಬೇರನನ್ನು ಪೂಜಿಸುವುದು ಮಾತ್ರವಲ್ಲದೆ ಪೂಜೆ ಮಾಡಿದವರಿಗೆ ಚಿನ್ನ ಅಥವಾ ಬೆಳ್ಳಿ ನಾಣ್ಯಗಳನ್ನು ಅರ್ಪಿಸುತ್ತಾರೆ. ಆ ನಾಣ್ಯಗಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. ಈ ದೇವಾಲಯಕ್ಕೆ ಭೇಟಿ ನೀಡಿದರೆ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂಬುದು ಜನರ ನಂಬಿಕೆ. ಇಷ್ಟಾರ್ಥಗಳನ್ನು ಪೂರೈಸಿದ ನಂತರ, ಭಕ್ತರು ಮತ್ತೆ ದೇವಸ್ಥಾನಕ್ಕೆ ಹೋಗಿ ಕುಬೇರನಿಗೆ ಅಕ್ಕಿಯಿಂದ ಮಾಡಿದ ಪಾಯಸವನ್ನು ಅರ್ಪಿಸುತ್ತಾರೆ.

ಇದನ್ನೂ ಓದಿ: ಜ್ಯೋತಿಷ್ಯದ ಪ್ರಕಾರ ಈ ರಾಶಿಯವರು ಬೆಳ್ಳಿ ಧರಿಸಬಾರದು; ಜೀವನ ದುಃಖದಿಂದಲೇ ಸಾಗುತ್ತದೆ!

ದೇವಾಲಯದ ಇತಿಹಾಸ:

ಜಾಗೇಶ್ವರ್ ಧಾಮ್ ಸಂಕೀರ್ಣದಲ್ಲಿರುವ 125 ದೇವಾಲಯ ಗುಂಪುಗಳಲ್ಲಿ ಸಂಪತ್ತಿನ ಅಧಿಪತಿಯಾದ ಕುಬೇರನ ದೇವಾಲಯವಾಗಿದೆ. ಇದು ಭಾರತದ ಎಂಟನೇ ಕುಬೇರ ದೇವಾಲಯವಾಗಿದೆ. ಈ ದೇವಾಲಯವು 9 ನೇ ಶತಮಾನಕ್ಕೆ ಸೇರಿದೆ ಎಂದು ಹೇಳಲಾಗುತ್ತದೆ. ಈ ಪುರಾತನ ದೇವಾಲಯವು ಭಕ್ತರ ನಂಬಿಕೆಯ ಪ್ರಮುಖ ಕೇಂದ್ರವಾಗಿದೆ. ಕುಬೇರನು ಇಲ್ಲಿ ಏಕಮುಖ ಶಿವಲಿಂಗದಲ್ಲಿ ಶಕ್ತಿಯ ರೂಪದಲ್ಲಿರುತ್ತಾನೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ